ಪಾಕಿಸ್ತಾನದ ಸಿನಿಮಾ ಬಾಲಿವುಡ್‌ನಲ್ಲಿ ರಿಮೇಕ್ ಆಗಿ 2 ವರ್ಷ ವಿಳಂಬವಾಗಿ ಬಿಡುಗಡೆಯಾಯಿತು. ಈ ಸಿನಿಮಾ ಕನ್ನಡಕ್ಕೂ ಬಂತು. ಫ್ಲಾಪ್ ನಟನೊಬ್ಬ ಸೂಪರ್ ಹೀರೋ ಆದ ಕಥೆ ಇದು.ಕನ್ನಡಕ್ಕೆ ರಿಮೇಕ್ ಆದ ಸಿನಿಮಾದಲ್ಲಿ ವಿಷ್ಣುವರ್ಧನ್ ನಟಿಸಿದ್ದರು.
ಮುಂಬೈ: ಬಾಲಿವುಡ್ ಅಂಗಳದಲ್ಲಿ ಒಂದು ಬಾರಿ ಐರನ್ ಲೆಗ್ ಅಥವಾ ಫ್ಲಾಪ್ ಎಂಬ ಹಣೆಪಟ್ಟಿ ಬಿದ್ದರೆ ಅದು ಅವರ ವೃತ್ತಿಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಓರ್ವ ಕಲಾವಿದನ ಸಿನಿಮಾಗಳು ತೋಪೆದ್ದು ಹೋದಗ್ರೆ ಮುಂದಿನ ಚಿತ್ರಗಳ ವಿತರಣೆಗೆ ವಿತರಕರು ಮುಂದಾಗಲ್ಲ. ಹಾಗಾಗಿ ಸಿನಿಮಾಗಳನ್ನು ಮಾಡಿದರೂ ಥಿಯೇಟರ್ ಸಿಗದೇ ಪರದಾಡಬೇಕಾಗುತ್ತದೆ. ಚಿತ್ರದ ಕಥೆಯ ಉತ್ತಮವಾಗಿದ್ರೂ ಬಿಡುಗಡೆ ದಿನಾಂಕ ಮುಂದೂಡಿಕೆಯಾಗುತ್ತಲೇ ಇರುತ್ತದೆ. ನಂತರ ಯಾರೋ ಒಬ್ಬರು ಧೈರ್ಯ ಮಾಡಿ ಸಿನಿಮಾ ವಿತರಣೆ ಮಾಡಿ ಯಶಸ್ವಿಯಾದಾಗ ಇನ್ನುಳಿದವರು ಕೈ ಕೈ ಹಿಸುಕಿಕೊಳ್ಳುತ್ತಾರೆ. ಇಂತಹವುದೇ ಒಂದು ಘಟನೆ ಬಾಲಿವುಡ್‌ನಲ್ಲಿ ನಡೆದಿದೆ.
ಪಾಕಿಸ್ತಾನದ ಸಿನಿಮಾವೊಂದು ಬಾಲಿವುಡ್‌ಗೆ ರಿಮೇಕ್ ಆಗಿತ್ತು. ಪಾಕಿಸ್ತಾನದಲ್ಲಿ ಉತ್ತಮ ಪ್ರದರ್ಶನ ಕಂಡಿದ್ರೂ, ಇಲ್ಲಿ ನಟಿಸಿದ ನಟನ ಹೆಸರಿನೊಂದಿಗೆ ಫ್ಲಾಪ್ ಎಂಬ ಪದ ಸೇರಿದ್ದರಿಂದ ಸಿನಿಮಾ ಬಿಡುಗಡೆಗೆ ವಿತರಕರು ಮುಂದಾಗಿರಲಿಲ್ಲ. ಹೀಗೆ ಚಿತ್ರದ ಬಿಡುಗಡೆ ದಿನಾಂಕ ಬರೋಬ್ಬರಿ ಎರಡು ವರ್ಷದವರೆಗೆ ಮುಂದೂಡಿಕೆಯಾಗಿತ್ತು. ಕೊನೆಗೆ ಎರಡು ವರ್ಷದ ಬಳಿಕ ಸಿನಿಮಾ ಬಿಡುಗಡೆಯಾದಾಗ ಫ್ಲಾಪ್ ನಟ ಸೂಪರ್ ಹೀರೋ ಆಗಿ ಬದಲಾದರು. ಈ ಸಿನಿಮಾ ತಿರಸ್ಕರಿಸಿದವರು ಚಿತ್ರ ಯಶಸ್ಸು ಕಂಡು ಆಶ್ಚರ್ಯಚಕಿತರಾಗಿದ್ದರು. ಪಾಕಿಸ್ತಾನದ ಈ ಚಿತ್ರವು ಭಾರಿ ಲಾಭ ಗಳಿಸಿದ್ದಲ್ಲದೆ, ಚಿತ್ರದ ನಾಯಕನ ಅದೃಷ್ಟವನ್ನೂ ಬದಲಾಯಿಸಿತು.
ನಾವು ಹೇಳುತ್ತಿರುವ ಚಿತ್ರದ ಹೆಸರು ಪ್ಯಾರ್ ಜುಕ್ತಾ ನಹಿ. ಈ ಸಿನಿಮಾದಲ್ಲಿ ಮಿಥುನ್ ಚಕ್ರವರ್ತಿ ಮತ್ತು ಪದ್ಮಿನಿ ಕೊಲ್ಹಾಪುರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ರೊಮ್ಯಾಂಟಿಕ್ ಕಥಾಹಂದರವುಳ್ಳ ಈ ಸಿನಿಮಾ, ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುವಲ್ಲಿ ಸಕ್ಸಸ್ ಆಗಿತ್ತು. ಬಡ ಯುವಕ ಮತ್ತು ಶ್ರೀಮಂತ ಯುವತಿ ನಡುವಿನ ಪ್ರೇಮವೇ ಚಿತ್ರದ ಕಥೆಯಾಗಿತ್ತು. ಈ ಸಿನಿಮಾ ಎಷ್ಟು ಫೇಮಸ್ ಆಯ್ತು ಅಂದ್ರೆ ಸೌಥ್ ಭಾಷೆಗಳಲ್ಲಿಯೂ ಇದು ರಿಮೇಕ್ ಆಯ್ತು. ತಮಿಳಿನಲ್ಲಿ ನಾನ್ ಅದಾಮಿ ಇಲೈ ಮತ್ತು ತೆಲುಗಿನಲ್ಲಿ ಪಚನಿ ಕಾಪುರಂ ಹೆಸರಿನಲ್ಲಿ ಈ ಸಿನಿಮಾ ರಿಮೇಕ್ ಮಾಡಲಾಯ್ತು.
ಇದನ್ನೂ ಓದಿ: ಒಂದಲ್ಲ, ಎರಡಲ್ಲ ಬರೋಬ್ಬರಿ 180 ಫ್ಲಾಪ್ ಸಿನಿಮಾ ಕೊಟ್ಟ ನಟ; ಇವರ ಹೆಸರಿನಲ್ಲಿದೆ ಸಿನಿ ಅಂಗಳದ ಕೆಟ್ಟ ದಾಖಲೆ
ಕನ್ನಡಕ್ಕೆ 'ನೀ ಬರೆದ ಕಾದಂಬರಿ' ಹೆಸರಿನಲ್ಲಿ ಈ ಸಿನಿಮಾವನ್ನು ದ್ವಾರಕೀಶ್ ನಿರ್ದೇಶನ ಮಾಡಿದರು. ಸಾಹಸಸಿಂಹ ವಿಷ್ಣುವರ್ಧನ್, ಭವ್ಯಾ, ಹೇಮಾ ಚೌಧರಿ ಮತ್ತು ಸಿ.ಆರ್.ಸಿಂಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ವಿಜಯ್ ಆನಂದ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ ಹಾಡುಗಳು ಇಂದಿಗೂ ಟ್ರೆಂಡಿಂಗ್‌ನಲ್ಲಿರುತ್ತವೆ. ಹಿಂದಿಯ ಪ್ಯಾರ್ ಜುಕ್ತಾ ನಹಿ ಸಿನಿಮಾ 50 ಲಕ್ಷದಲ್ಲಿ ನಿರ್ಮಾಣವಾಗಿ 4.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.
ಪ್ಯಾರ್ ಜುಕ್ತಾ ನಹಿ ಚಿತ್ರ ಬಿಡುಗಡೆಯಾಗುವ ಮೊದಲು ಮಿಥುನ್ ಚಕ್ರವರ್ತಿಯವರ ವೃತ್ತಿಜೀವನ ಅಸ್ಥಿರ ಸ್ಥಿತಿಯಲ್ಲಿತ್ತು. ಈ ಚಿತ್ರಕ್ಕೂ ಮುಂಚೆ ಫ್ಲಾಪ್ ಸ್ಟಾರ್ ಎಂಬ ಹಣೆಪಟ್ಟಿಯನ್ನು ಹೊತ್ತುಕೊಂಡಿದ್ದರು. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಆ ಚಿತ್ರ ಎಷ್ಟು ಹಿಟ್ ಆಯಿತೆಂದರೆ, ಅದು ಬಹಳಷ್ಟು ಹಣವನ್ನು ಗಳಿಸಲು ಪ್ರಾರಂಭಿಸಿತು. ಈ ಚಿತ್ರವು 1985 ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮೂರನೇ ಚಿತ್ರವಾಯಿತು. ಮತ್ತು, ಮಿಥುನ್ ಸೂಪರ್ ಫ್ಲಾಪ್ ತಾರೆಯಿಂದ ಹಿಟ್ ತಾರೆಯಾದರು.
ಇದನ್ನೂ ಓದಿ: ಚಿರಂಜೀವಿ ಜೊತೆ ಸಿನಿಮಾ ಅಂದ್ರೆ ಪಕ್ಕಾ ಫ್ಲಾಫ್.. ಭಯಪಟ್ಟು ಇಂಡಸ್ಟ್ರಿ ಹಿಟ್ ರಿಜೆಕ್ಟ್ ಮಾಡಿದ ಡೈರೆಕ್ಟರ್!

