ಖ್ಯಾತ ನಟಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿ, ಮದುವೆಯ ನಂತರ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರು.ನಂತರ ತಮ್ಮ ಹೆಸರನ್ನು ಬೇಗಂ ಆಯೇಷಾ ಸುಲ್ತಾನ ಎಂದು ಹೆಸರು ಬದಲಾಯಿಸಿಕೊಂಡರು.
Bollywood Actress: ಬಾಲಿವುಡ್ ಕಂಡ ಚೆಂದದ ನಟಿಯರಲ್ಲಿ ಇವರು ಸಹ ಒಬ್ಬರಾಗಿದ್ದಾರೆ. ಡಿಸೆಂಬರ್ 2ರಂದು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಈ ನಟಿ ಹಿಂದಿ ಮತ್ತು ಬೆಂಗಾಲಿ ಸೇರಿದಂತೆ ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮದುವೆ ಬಳಿಕ ಇಸ್ಲಾಂ ಸ್ವೀಕರಿಸಿ ಬೇಗಂ ಆಯೇಷಾ ಎಂದು ತಮ್ಮ ಹೆಸರು ಬದಲಿಸಿಕೊಂಡರು. 2013ರಲ್ಲಿ ಭಾರತದ ಮೂರನೇ ಅತ್ಯನ್ನುತ ಪ್ರಶಸ್ತಿ ಪದ್ಮಭೂಷಣ ನೀಡಿ ಭಾರತ ಸರ್ಕಾರ ಇವರನ್ನು ಗೌರವಿಸಿದೆ. 14ನೇ ವಯಸ್ಸಿನಲ್ಲಿ ನಟನೆ ಆರಂಭಿಸಿದ ನಟಿ, 1969 ಮತ್ತು 1973ರ ಕಾಲಘಟ್ಟದ ಬಾಕ್ಸ್ ಆಫಿಸ್ ಕ್ವೀನ್ ಆಗಿದ್ದರು. ನಿರ್ಮಾಪಕರು ಈ ನಟಿಯ ಮನೆ ಮುಂದೆ ಕ್ಯೂ ನಿಲ್ಲುತ್ತಿದ್ದರು. ನಟಿಯ ಮಗ ಸಹ ಇಂದು ಬಾಲಿವುಡ್‌ನ ಟಾಪ್ ನಟರಲ್ಲಿ ಒಬ್ಬರಾಗಿದ್ದಾರೆ. ಮಗನ ಜೊತೆಯಲ್ಲಿಯೂ ಈ ನಟಿ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ.
70ರ ದಶಕದಲ್ಲಿ ಶರ್ಮಿಳಾ ಟ್ಯಾಗೋರ್ ಬಾಲಿವುಡ್ ಅಂಗಳದ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದರು. ರಾಜೇಶ್ ಖನ್ನಾ, ಧರ್ಮೇಂದ್ರ, ಸಂಜೀವ್ ಕುಮಾರ್, ಉತ್ತಮ್ ಕುಮಾರ್, ಶಮ್ಮಿ ಕಪೂರ್ ಸೇರಿದಂತೆ ಹಲವು ಲೆಜೆಂಡ್ ಜೊತೆಯಲ್ಲಿ ಶರ್ಮಿಳಾ ಟ್ಯಾಗೋರ್ ಕೆಲಸ ಮಾಡಿದ್ದಾರೆ. ರಾಜೇಶ್ ಖನ್ನಾ ಮತ್ತು ಉತ್ತಮ್ ಕುಮಾರ್ ಜೊತೆಗಿನ ಶರ್ಮಿಳಾ ಟ್ಯಾಗೋರ್ ಅವರ ತೆರೆ ಮೇಲಿನ ಕೆಮಿಸ್ಟ್ರಿ ಮೋಡಿ ಮಾಡುತ್ತಿತ್ತು. ಈ ಕಾರಣದಿಂದಲೇ ಈ ಮೂವರ ಕಾಂಬಿನೇಷನ್‌ನಲ್ಲಿ ಹೆಚ್ಚು ಸಿನಿಮಾಗಳು ಬಂದವು.
ನಟ ರಾಜೇಶ್ ಖನ್ನಾ ಜೊತೆಗಿನ ಆರಾಧಾನ, ಚೋಟಿ ಬಹು, ಸಫರ್, ರಾಜಾ ರಾಣಿ, ದಾಗ್, ಅವಿಶಂಕರ್, ಮಾಲೀಕ್ ಸಿನಿಮಾಗಳು ಬಾಕ್ಸ್ ಆಫಿಸ್‌ನಲ್ಲಿ ದಾಖಲೆ ಬರೆದಿದ್ದವು. ಹಾಗೆ ಉತ್ತಮ್ ಕುಮಾರ್ ಜೊತೆಗೆ ನಟಿಸಿದ್ದ ಅಮಾಂಶು, ಆನಂದ್ ಆಶ್ರಮ್ ಮತ್ತು ದೂರಿಯಾಂ ಸಿನಿಮಾಗಳು ಸೂಪರ್ ಹಿಟ್ ಪಟ್ಟಿಗೆ ಸೇರಿದ್ದವು. ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಸಂದರ್ಭದಲ್ಲಿ ಪಟೌಡಿ ಕುಟುಂಬದ ನವಾಬ್, ಅಂದಿನ ಕ್ರಿಕೆಟ್ ಟೀಂ ಇಂಡಿಯಾದ ನಾಯಕ ಮನ್ಸೂರ್ ಅಲಿ ಖಾನ್ ಪಟೌಡಿ ಅವರೊಂದಿಗೆ ಪ್ರೇಮಾಂಕುರವಾಗುತ್ತದೆ. ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಬೇಗಂ ಆಯೇಶಾ ಸುಲ್ತಾನ ಎಂದು ಹೆಸರು ಬದಲಿಸಿಕೊಳ್ಳುತ್ತಾರೆ. ಆನಂತರ ಮನ್ಸೂರ್ ಅಲಿ ಖಾನ್ ಅವರನ್ನು ವಿವಾಗವಾಗುತ್ತಾರೆ.
ಇದನ್ನೂ ಓದಿ: ಛಾವಾ ಬೆನ್ನಲ್ಲೇ ರಶ್ಮಿಕಾ ಮಂದಣ್ಣ ಮುಡಿಗೆ ಮತ್ತೊಂದು ಕಿರೀಟ
ಮನ್ಸೂರ್ ಅಲಿ ಖಾನ್ ಮತ್ತು ಶರ್ಮಿಳಾ ಟ್ಯಾಗೋರ್ ದಂಪತಿಗೆ ಸೈಫ್ ಅಲಿ ಖಾನ್, ಸಬಾ ಅಲಿ ಖಾನ್ ಮತ್ತು ಸೋಹಾ ಅಲಿ ಖಾನ್ ಎಂಬ ಮೂರು ಮಕ್ಕಳಿದ್ದಾರೆ. ಮಗ ಸೈಫ್ ಅಲಿ ಖಾನ್ ಸಹ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸೈಫ್ ಅಲಿ ಖಾನ್ ಸಹ ಎರಡು ಮದುವೆಯಾಗಿದ್ದು, ನಾಲ್ಕು ಮಕ್ಕಳ ತಂದೆಯಾಗಿದ್ದಾರೆ.
ಶರ್ಮಿಳಾ ಟ್ಯಾಗೋರ್ 1960-1970ರ ಕಾಲಘಟ್ಟದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದರು. ಮೌಸಮ್ ಸಿನಿಮಾದ ನಟನೆಗಾಗಿ ನ್ಯಾಷನಲ್ ಫಿಲಂ ಅವಾರ್ಡ್, ಆರಾಧಾನ ಚಿತ್ರಕ್ಕೆ ಫಿಲಂಫೇರ್ ಅವಾರ್ಡ್ ಪಡೆದುಕೊಂಡಿದ್ದರು. ಆಶಿಕ್ ಅವಾರ, ಮನ್, ವಿರುದ್ಧ್ , ಏಕಲವ್ಯ, ಬ್ರೇಕ್ ಕೇ ಬಾದ್ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಶರ್ಮಿಳಾ ಟ್ಯಾಗೋರ್ ನೀಡಿದ್ದಾರೆ. 70ರ ದಶಕದಲ್ಲಿಯೇ ಸ್ವಿಮ್ ಸೂಟ್ ಧರಿಸುವ ಮೂಲಕ ಸಿನಿಮಾ ಅಂಗಳದಲ್ಲಿ ಸಂಚಲನ ಸೃಷ್ಟಿಸಿದ್ದರು. ಮದುವೆ ಬಳಿಕ ಬ್ರೇಕ್ ತೆಗೆದುಕೊಂಡಿದ್ದ ಶರ್ಮಿಳಾ ಟ್ಯಾಗೋರ್ 2023ರಲ್ಲಿ ಬಿಡುಗಡೆಯಾದ ಗುಲ್ ಮೊಹರ್ ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡಿದ್ದರು. ಸದ್ಯ ಸಿನಿಮಾಗಳಿಂದ ದೂರವಿರೋ ಶರ್ಮಿಳಾ ಟ್ಯಾಗೋರ್, ಆಗಾಗ ರಿಯಾಲಿಟಿ ಶೋಗಳಿಗೆ ಅತಿಥಿಯಾಗಿ ಆಗಮಿಸುತ್ತಿರುತ್ತಾರೆ. ಬೇಗಂ ಆಯೇಶಾ ಸುಲ್ತಾನ ಎಂದು ಹೆಸರು ಬದಲಿಸಿಕೊಂಡರು ಭಾರತ ಮಾತ್ರ ಇವರನ್ನು ಶರ್ಮಿಳಾ ಟ್ಯಾಗೋರ್ ಅಂತಾನೇ ಗುರುತಿಸುತ್ತದೆ.
ಇದನ್ನೂ ಓದಿ: 450 ಕೋಟಿ ಸುರಿದ್ರೂ ವೇಸ್ಟ್ ಆಯ್ತು; ಹಾಡಿಗಾಗಿಯೇ 75 ಕೋಟಿ ಹಣ ಖರ್ಚು; ಇದುವೇ 2025ರ ಫಸ್ಟ್ ಫ್ಲಾಪ್ ಸಿನಿಮಾ
