Big Budget Cinema: 2025ರಲ್ಲಿ ಬಿಡುಗಡೆಯಾದ ಬಿಗ್ ಬಜೆಟ್ ಸಿನಿಮಾ ಫ್ಲಾಪ್ ಆಗಿದೆ. ಈ ಸಿನಿಮಾಗಾಗಿ ನಿರ್ಮಾಪಕರು 450 ಕೋಟಿ ರೂಪಾಯಿ ಖರ್ಚು ಮಾಡಿದ್ದರು, ಆದರೆ ನಿರೀಕ್ಷಿತ ಮಟ್ಟದಲ್ಲಿ ಗಳಿಕೆ ಮಾಡಿಲ್ಲ.

First flop movie of 2025: ಇಂದು ಸಿನಿಮಾಗಳಿಗಾಗಿ ನೂರಾರು ಕೋಟಿ ಹಣ ಹಾಕುತ್ತಾರೆ. ಕೆಲವೊಮ್ಮೆ ಹಾಕಿದ ಹಣವೂ ಬರದೇ ನಿರ್ಮಾಪಕರು ಸಾಲದ ಸುಳಿಗೆ ಸಿಲುಕುತ್ತಾರೆ. ಸ್ಟಾರ್ ಕಲಾವಿದರು ಹೊಂದಿದ್ರೂ ಬಾಕ್ಸ್ ಆಫಿಸ್‌ನಲ್ಲಿ ಸದ್ದು ಮಾಡಲು ಸಿನಿಮಾಗಳು ವಿಫಲವಾಗುತ್ತವೆ. 2025ರಲ್ಲಿ ಬಿಡುಗಡೆಗೊಂಡ ಬಿಗ್ ಬಜೆಟ್ ಸಿನಿಮಾವೊಂದು ಈ ವರ್ಷದ ಮೊದಲ ಫ್ಲಾಪ್ ಚಿತ್ರ ಎಂಬ ಕಳಪೆ ಪಟ್ಟಿಯನ್ನು ಹೊತ್ತುಕೊಂಡಿದೆ. ಬಹುನಿರೀಕ್ಷಿತ ಸಿನಿಮಾ ಇದಾಗಿದ್ರೂ ಬಿಡುಗಡೆಯಾದ ಎರಡ್ಮೂರು ದಿನದಲ್ಲಿಯೇ ಥಿಯೇಟರ್‌ಗೆ ಬರುವ ವೀಕ್ಷಕರ ಸಂಖ್ಯೆ ಕುಸಿತವಾಗಲು ಆರಂಭಿಸಿತ್ತು. ಈ ಸಿನಿಮಾಗಾಗಿ ನಿರ್ಮಾಪಕರು ಬರೋಬ್ಬರಿ 450 ಕೋಟಿ ರೂಪಾಯಿ ಹಣ ಸುರಿದಿದ್ದರು. ಚಿತ್ರ ಹಾಡಿಗಾಗಿ 75 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು. 

ನಿರ್ದೇಶಕ ಶಂಕರ್ ಈ ಸಿನಿಮಾ ಮೂಲಕ ಟಾಲಿವುಡ್‌ಗೆ ಬಂದಿದ್ದರು. ಚಿತ್ರಕ್ಕೆ ಗೇಮ್‌ ಚೇಂಜರ್ ಎಂದು ಹೆಸರಿಟ್ಟ ಬಳಿಕ ಸಿನಿಮಾ ಗೇಮ್ ಚೇಂಜ್ ಮಾಡಬಹುದು ಎಂದು ಲೆಕ್ಕಾಚಾರ ಹಾಕಿಕೊಂಡಿದ್ದರು. ಟಾಲಿವುಡ್‌ಗೆ ಬಂದ ಶಂಕರ್ ಮೊದಲ ಹೆಜ್ಜೆಯಲ್ಲಿ ಎಡವಿದರು. ದಿಲ್ ರಾಜು ನಿರ್ಮಾಣದ ಗೇಮ್ ಚೇಂಜರ್ ಸಿನಿಮಾದಲ್ಲಿ ರಾಮ್ ಚರಣ್ ಮತ್ತು ಕಿಯಾರಾ ಅಡ್ವಾಣಿ ಸೇರಿದಂತೆ ದೊಡ್ಡ ಸ್ಟಾರ್ ಕಲಾವಿದರು ನಟಿಸಿದ್ದರು. ಆರ್‌ಆರ್‌ಆರ್‌ ಸಿನಿಮಾ ಬಳಿಕ ರಾಮ್ ಚರಣ್ ಮೊದಲ ಬಾರಿಗೆ ಗೇಮ್ ಚೇಂಜರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆದ್ರೆ ಪ್ರೇಕ್ಷಕರನ್ನು ರಂಜಿಸುವಲ್ಲಿ ಗೇಮ್ ಚೇಂಜರ್ ಸೋತಿತು. ನೂರಾರು ಕೋಟಿ ಹಣ ಸುರಿದ ದಿಲ್ ರಾಜು ಸಿನಿಮಾವನ್ನು ತೆರೆ ಮೇಲೆ ಅದ್ಧೂರಿಯಾಗಿ ತೋರಿಸಿದ್ದರು. ಆದರೂ ಬಾಕ್ಸ್ ಆಫಿಸ್‌ನಲ್ಲಿ ಧೂಳೆಬ್ಬಿಸಲು ವಿಫಲವಾಗಿದೆ.

ಇದನ್ನೂ ಓದಿ: 4 ಕೋಟಿ ಸಿನಿಮಾ ಗಳಿಸಿದ್ದು 524 ಕೋಟಿ; ಇಂದಿಗೂ ಲವರ್ಸ್ ನೋಡಲು ಇಷ್ಟಪಡೋ 1995ರ ರೊಮ್ಯಾಂಟಿಕ್ ಮೂವಿ 

ಗೇಮ್ ಚೇಂಜರ್ ಬಿಡುಗಡೆಯಾದ ಮೊದಲ ದಿನ ಹೌಸ್‌ಫುಲ್ ಪ್ರದರ್ಶನ ಕಂಡಿತ್ತು. ಎಲ್ಲಾ ಭಾಷೆಯಲ್ಲಿಯೂ ಬಿಡುಗಡೆಯಾಗಿದ್ದರಿಂದ ಸಿನಿಮಾ ಮೊದಲ ದಿನ 51 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಈ ಕಲೆಕ್ಷನ್ ನೋಡಿದ ರಾಮ್‌ ಚರಣ್ ಅಭಿಮಾನಿಗಳು 1000 ಕೋಟಿಗ ಅಧಿಕ ಹಣ ಸಂಪಾದನೆ ಮಾಡಬಹುದು ಎಂದು ಅಂದಾಜಿಸಿದ್ದರು. ಎರಡನೇ ದಿನ 21 ಕೋಟಿ, ಮೂರನೇ ದಿನ ಭಾನುವಾರ ಆಗಿದ್ರೂ ಕಲೆಕ್ಷನ್ 16 ಕೋಟಿಗೆ ಕುಸಿಯಿತು. ಇದುವರೆಗೂ ಗೇಮ್ ಚೇಂಜರ್ ಭಾರತದಲ್ಲಿ 131 ಕೋಟಿ ರೂಪಾಇಯಿ ಕಲೆಕ್ಷನ್ ಮಾಡಿದೆ. ಇದರಲ್ಲಿ ತೆಲಗು ವರ್ಷನ್ ಸಿನಿಮಾ 89 ಕೋಟಿ ರೂ. ಆಗಿದೆ. ಡಬ್ಬಿಂಗ್ ಸಿನಿಮಾದಿಂದ 32 ಕೋಟಿ ಸಂಗ್ರಹ ಮಾಡಿದೆ. 

Scroll to load tweet…

ಚಿತ್ರದಲ್ಲಿ ರಾಮ್‌ ಚರಣ್ ಐಎಎಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಾನೆ ಇದುವೇ ಗೇಮ್ ಚೇಂಜರ್ ಸಿನಿಮಾದ ಒನ್ ಲೈನ್ ಕಥೆ. ಕಳೆದ ಕೆಲ ವರ್ಷಗಳಿಂದ ಉತ್ತರ ಭಾರತೀಯರಿಗೆ ಸೌತ್ ಸಿನಿಮಾಗಳನ್ನು ಇಷ್ಟಪಡುತ್ತಿದ್ದರು. ಪುಷ್ಪಾ-2, ಆರ್‌ಆರ್‌ಆರ್, ಕಾಂತಾರ, ಕೆಜಿಎಫ್, ಮಂಜುಮಲ್ ಬಾಯ್ಸ್ ಸೇರಿದಂತೆ ಹಲವು ಸಿನಿಮಾಗಳು ಭಾರತದ ಉತ್ತರ ರಾಜ್ಯಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಂಡಿವೆ. ಇದೇ ಬೆನ್ನಲ್ಲೇ ಗೇಮ್ ಚೇಂಜರ್ ಸಹ ಸಕ್ಸಸ್ ಕಾಣುತ್ತೆ ಎಂದು ಟಾಲಿವುಡ್ ಲೆಕ್ಕಾಚಾರ ಹಾಕಿತ್ತು. 

ಇದನ್ನೂ ಓದಿ: 1800 ಕೋಟಿ ಆಸ್ತಿಯುಳ್ಳ ನಟನ ಮಕ್ಕಳಾದ್ರೂ ಆಟೋದಲ್ಲಿ ಓಡಾಡ್ತಾರೆ; ಇಬ್ಬರ ಸಿಂಪ್ಲಿಸಿಟಿಗೆ ಫ್ಯಾನ್ಸ್ ಫಿದಾ

YouTube video player