- Home
- Entertainment
- Sandalwood
- Rishab Shetty Birthday: ಗ್ರಾಂಡ್ ಆಗಿ ಹುಟ್ಟುಹಬ್ಬ ಆಚರಿಸಿಕೊಂಡ ಕನ್ನಡದ ಪ್ಯಾನ್ ಇಂಡಿಯಾ ಸ್ಟಾರ್ ರಿಷಬ್ ಶೆಟ್ಟಿ
Rishab Shetty Birthday: ಗ್ರಾಂಡ್ ಆಗಿ ಹುಟ್ಟುಹಬ್ಬ ಆಚರಿಸಿಕೊಂಡ ಕನ್ನಡದ ಪ್ಯಾನ್ ಇಂಡಿಯಾ ಸ್ಟಾರ್ ರಿಷಬ್ ಶೆಟ್ಟಿ
ನಟ-ನಿರ್ದೇಶಕ ರಿಷಬ್ ಶೆಟ್ಟಿಯವರ ತಮ್ಮ ಹುಟ್ಟುಹಬ್ಬವನ್ನು ನಿನ್ನೆ ರಾತ್ರಿ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ನಿನ್ನೆ ಬೆಂಗಳೂರಿನ 'ಕಿಂಗ್ಸ್ ಕ್ಲಬ್'ನಲ್ಲಿ ತಮ್ಮ ಕುಟುಂಬ, ಮಾಧ್ಯಮ ಮಿತ್ರರು, ಆಪ್ತ ಸ್ನೇಹಿತಬಳಗದೊಂದಿಗೆ ಕೇಕ್ ಕಟ್ ಮಾಡಿ ತಮ್ಮ ಹುಟ್ಟುಹಬ್ಬದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದ ನಟ-ನಿರ್ದೇಶಕ ರಿಷಬ್ ಶೆಟ್ಟಿಯವರ ಹುಟ್ಟುಹಬ್ಬವನ್ನು (Rishab Shetty Birthday) ನಿನ್ನೆ ರಾತ್ರಿ ಅದ್ದೂರಿಯಾಗಿ ಆಚರಿಸಲಾಗಿದೆ. 43ನೇ ವಯಸ್ಸಿಗೆ ಕಾಲಿಟ್ಟ ನಟ ರಿಷಬ್ ಶೆಟ್ಟಿಯವರು ನಿನ್ನೆ ಬೆಂಗಳೂರಿನ 'ಕಿಂಗ್ಸ್ ಕ್ಲಬ್'ನಲ್ಲಿ ತಮ್ಮ ಕುಟುಂಬ, ಮಾಧ್ಯಮ ಮಿತ್ರರು, ಆಪ್ತ ಸ್ನೇಹಿತರು ಹಾಗೂ ಬಂಧುಬಳಗದವರೊಂದಿಗೆ ಕೇಕ್ ಕಟ್ ಮಾಡಿ ತಮ್ಮ ಹುಟ್ಟುಹಬ್ಬದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.
ಕಿಂಗ್ಸ್ ಕ್ಲಬ್ ಜಗಮಗಿಸುವ ಬೆಳಕು ಹಾಗೂ ಹೂಗಳಿಂದ ಅಲಂಕೃತವಾದ ಭವ್ಯವಾದ ವೇದಿಕೆಯಲ್ಲಿ ಪತ್ನಿ ಪ್ರಗತಿ ಶೆಟ್ಟಿ, ಮಕ್ಕಳು ಹಾಗೂ ಆಪ್ತರ ಜೊತೆಯಲ್ಲಿ ನಟ ರಿಷಬ್ ಶೆಟ್ಟಿಯವರು ತಮ್ಮ ಬರ್ತ್‌ಡೇ ಸೆಲೆಬ್ರೇಶನ್ ಮಾಡಿಕೊಂಡಿದ್ದಾರೆ. ಸದ್ಯ ಸಿನಿಮಾ ಶೂಟಿಂಗ್ ಮಧ್ಯೆ ಬಿಡುವು ಮಾಡಿಕೊಂಡಿರುವ ರಿಷಬ್ ಶೆಟ್ಟಿಯವರು ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿಕೊಳ್ಳುವ ಮೂಲಕ ಲೈಫ್ ಖುಷಿಯನ್ನು ಸ್ವತಃ ಹೆಚ್ಚಿಸಿಕೊಂಡಿದ್ದಲ್ಲದೇ ಫ್ಯಾನ್ಸ್ ಹಾಗೂ ಪ್ರಪಂಚದೊಂದಿಗೆ ಹಂಚಿಕೊಂಡಿದ್ದಾರೆ.
ಪ್ರಸ್ತುತ ರಿಷಬ್ ಶೆಟ್ಟಿಯವರು 'ಜೈ ಹನುಮಾನ್' ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದು, ಜೊತೆಗೆ ‘ಛತ್ರಪತಿ ಶಿವಾಜಿ ಮಹಾರಾಜ್’ ಚಿತ್ರಕ್ಕೂ ಸಿದ್ಧವಾಗುತ್ತಿದ್ದಾರೆ. ಈ ಮೂಲಕ ಕನ್ನಡ ಸಿನಿಮಾದ ಜೊತೆಗೆ ಮರಾಠಿ ಹಾಗೂ ಪ್ಯಾನ್ ಇಂಡಿಯಾ ಸಿನಿಮಾದಲ್ಲೂ ಮಿಂಚುತ್ತಿದ್ದಾರೆ.
ಸದ್ಯಕ್ಕೆ ತಮ್ಮದೇ ನಿರ್ದೇಶನದ ‘ಕಾಂತಾರ ಚಾಪ್ಟರ್ 2’ ರೂಪಿಸುವ ಕಾರ್ಯದಲ್ಲಿದ್ದಾರೆ. ಜೊತೆಗೆ ಮಲಯಾಳಂನ ಖ್ಯಾತ ಬರಹಗಾರ ಎಂ.ಟಿ. ವಾಸುದೇವ ನಾಯರ್ ಅವರ ‘ರಂಡಮೂಳಂ’ ಕೃತಿಯನ್ನು ಸಿನಿಮಾವಾಗಿಸುವ ಮಹೋನ್ನತ ಯೋಜನೆಯ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ‘ರಂಡಮೂಳಂ’ ಅವರ ಮ್ಯಾಗ್ನಂ ಓಪಸ್ ಸಿನಿಮಾ ಆಗಲಿದ್ದು, ಅವರ ತಂಡ ಸಂಶೋಧನಾ ಕೆಲಸದಲ್ಲಿ ನಿರತವಾಗಿದೆ. ಮುಂದೆ ಆದಷ್ಟು ಬೇಗ ಸಿನಿಮಾ ಬರಹದ ಮೂಲಕ ತೆರೆಯ ಮೇಲೆ ಬರುವ ಸಿದ್ಧತೆಯಲ್ಲಿದೆ.
ಬಹುತೇಕರಿಗೆ ಗೊತ್ತಿರುವಂತೆ, ರಿಷಬ್ ಶೆಟ್ಟಿ ಸುಮ್ಮನೇ ಸಮಯ ವ್ಯರ್ಥ ಮಾಡುವವರಲ್ಲ. ಜೈ ಹನುಮಾನ್ ಚಿತ್ರದಲ್ಲಿ ಅವರು ನಟನೆ ಮಾತ್ರ ಮಾಡುತ್ತಿರುವುದರಿಂದ ಉಳಿದ ಸಮಯದಲ್ಲಿ ಬೇರೆ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಉತ್ತಮ ಕಂಟೆಂಟ್ ಇರುವ ಸಿನಿಮಾ ನಿರ್ಮಾಣ ಮಾಡುವ ಯೋಜನೆಯನ್ನು ಕೂಡ ಅವರು ಪ್ಲಾನ್ ಮಾಡುತ್ತಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.
ಸಿನಿಮಾ ಹೊರತಾಗಿಯೂ ಕಲೆ, ಸಂಸ್ಕೃತಿಗೆ ಗೌರವ ಕೊಡುವ ರಿಷಬ್ ಶೆಟ್ಟುಯವರು ಇತ್ತೀಚೆಗೆ ಊರಿನಲ್ಲಿ ಯಕ್ಷಗಾನ, ಭಜನಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಅದರಲ್ಲಿ ಅವರ ಮಗ ರಣ್ವಿತ್ ಶೆಟ್ಟಿ ಯಕ್ಷಗಾನದಲ್ಲಿ ಪಾತ್ರ ಮಾಡುವ ಮೂಲಕ ಮೊಟ್ಟಮೊದಲ ಬಾರಿಗೆ ಬಣ್ಣ ಹಚ್ಚಿ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ.
ರಿಷಬ್ ಶೆಟ್ಟಿಯವರು ದತ್ತು ಪಡೆದಿರುವ ಸರ್ಕಾರಿ ಶಾಲೆಯ ಉನ್ನತಿ ಕಡೆಗೂ ಅವರು ಗಮನ ಹರಿಸಿದ್ದಾರೆ. ಅವರು ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತರಾಗಿಲ್ಲ. ಅವರ ಸೀಮಾವಲಯ ವಿಸ್ತಾರವಾಗಿದೆ. ಹಾಗೆ ವಿಸ್ತಾರಗೊಂಡ ವ್ಯಕ್ತಿಗಳು ಬೇರಿನ ಕುರಿತು ಆಲೋಚಿಸುವುದು ಬಹಳ ಅಪರೂಪ. ರಿಷಬ್ ಮಾತ್ರ ಕನ್ನಡತನವನ್ನು ಉಸಿರಾಡುತ್ತಿರುವುದು, ಸಂಸ್ಕೃತಿಗೆ ನಿಷ್ಠರಾಗಿರುವುದು ಅವರ ಹೆಗ್ಗಳಿಕೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

