Tithi Movie: ಕೂಲಿ ಕೆಲಸ ಮಾಡ್ತಿದ್ದಾರೆ ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾದ ನಾಯಕ ನಟ
ರಾಷ್ಟ್ರಪ್ರಶಸ್ತಿ ಬಳಿಕ ತಿಥಿ ಸಿನಿಮಾದ ಕಲಾವಿದರು ಮುನ್ನಲೆಗೆ ಬಂದಿದ್ದರು. ಇಂದಿಗೂ ಚಿತ್ರದ ಕೆಲವು ಡೈಲಾಗ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಚಿತ್ರದ ನಾಯಕ ನಟ ಅಭಿಷೇಕ್ ಅವಕಾಶಗಳು ಸಿಗದ ಹಿನ್ನೆಲೆ ಕೂಲಿ ಕೆಲಸ ಮಾಡುತ್ತಿದ್ದಾರೆ.

ತಿಥಿ ಸಿನಿಮಾ
2015ರಲ್ಲಿ ಬಿಡುಗಡೆಯಾದ ತಿಥಿ ಸಿನಿಮಾ ರಾಷ್ಟ್ರಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ರಾಷ್ಟ್ರಪ್ರಶಸ್ತಿ ಬಳಿಕ ತಿಥಿ ಸಿನಿಮಾದ ಕಲಾವಿದರು ಮುನ್ನಲೆಗೆ ಬಂದಿದ್ದರು. ಇಂದಿಗೂ ಚಿತ್ರದ ಕೆಲವು ಡೈಲಾಗ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಚಿತ್ರದ ನಾಯಕ ನಟ ಅಭಿಷೇಕ್ ಅವಕಾಶಗಳು ಸಿಗದ ಹಿನ್ನೆಲೆ ಕೂಲಿ ಕೆಲಸ ಮಾಡುತ್ತಿದ್ದಾರೆ.
ಮರ ಹೊರುವ ಕೆಲಸ
ಕೃಷಿ ಜಮೀನಿನಲ್ಲಿ ಮರ ಹೊರುವ ಕೆಲಸವನ್ನು ಅಭಿಷೇಕ್ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿರುವ ಕೆಂಪರಾಜ್ ಗೌಡ ಎಂಬವರು ಹಂಚಿಕೊಂಡಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಅಭಿ ಅವರನ್ನು ನೋಡಿ ನೆಟ್ಟಿಗರು ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.
ತಿಥಿ ಸಿನಿಮಾದ ಹೀರೋ ಅಭಿ
ಒಂದು ಕಾಲದ ಸ್ಟಾರ್, ತಿಥಿ ಸಿನಿಮಾದ ಹೀರೋ ಅಭಿ ಅವರು ಇಂದು ನಮ್ಮ ಗದ್ದೆ ಬಳಿ ಮರದ ದಿಮ್ಮಿಗಳನ್ನು ತುಂಬಲು ಬಂದಿರುವ ವಿಷಯವನ್ನು ಕೆಂಪರಾಜ್ ಶೇರ್ ಮಾಡಿಕೊಂಡಿದ್ದಾರೆ. ಯಾವುದೇ ಸಿನಿಮಾ ಆಫರ್ ಇಲ್ಲದ ಹಿನ್ನೆಲೆ ಕೃಷಿ ಕೆಲಸ ಮಾಡಿಕೊಂಡಿರೋದಾಗಿ ಅಭಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಗ್ರಾಮೀಣ ಸೊಗಡಿನ ಕಥೆ
2015ರಲ್ಲಿ ಬಿಡುಗಡೆಯಾಗಿದ್ದ ತಿಥಿ ಸಿನಿಮಾ ಗ್ರಾಮೀಣ ಸೊಗಡಿನ ಕಥೆಯನ್ನು ಹೊಂದಿತ್ತು. ಚಿತ್ರದಲ್ಲಿಯೂ ಗ್ರಾಮೀಣ ಪ್ರತಿಭೆಗಳು ನಟಿಸಿದ್ದರು. ಸೆಂಚೂರಿ ಗೌಡ, ಗಡ್ಡಪ್ಪ ಅವರ ಕುಟುಂಬದ ಕಥೆಗೆ ಪ್ರೇಕ್ಷಕರು ಸಹ ಫಿದಾ ಆಗಿದ್ದರು. ಇತ್ತೀಚೆಗಷ್ಟೆ ಗಡ್ಡಪ್ಪ ನಿಧನರಾಗಿದ್ದಾರೆ.
ಅಭಿಷೇಕ್
ಇದೇ ಚಿತ್ರದಲ್ಲಿ ಅಭಿಯಾಗಿ ಅಭಿಷೇಕ್ ನಟಿಸಿದ್ದರು. ಈ ಚಿತ್ರದ ಬಳಿಕ ಮತ್ತೆ ಎರಡು ಸಿನಿಮಾಗಳಲ್ಲಿ (ತರ್ಲೆ ವಿಲೇಜ್ ಮತ್ತು ಹಳ್ಳಿ ಪಂಚಾಯ್ತಿ) ಅಭಿಷೇಕ್ ನಟಿಸಿದ್ದರು. ಇದಾಗ ನಂತರ ಚಿತ್ರರಂಗದಿಂದ ದೂರವಾಗಿದ್ದಾರೆ. ಚಿತ್ರದ ನಾಯಕಿ ಪೂಜಾ ಅವರು ಮದುವೆಯಾಗಿ ಬಣ್ಣದ ಲೋಕದಿಂದ ದೂರವಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

