- Home
- Entertainment
- TV Talk
- ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು? ಬೆಸ್ಟ್ ಪತಿಯಾಗಲು ಮಾಳುಗೆ Bigg Boss ರಕ್ಷಿತಾ ಶೆಟ್ಟಿ ಏನೆಲ್ಲಾ ಟಿಪ್ಸ್ ಕೊಟ್ರು ನೋಡಿ!
ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು? ಬೆಸ್ಟ್ ಪತಿಯಾಗಲು ಮಾಳುಗೆ Bigg Boss ರಕ್ಷಿತಾ ಶೆಟ್ಟಿ ಏನೆಲ್ಲಾ ಟಿಪ್ಸ್ ಕೊಟ್ರು ನೋಡಿ!
ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿ ಮಾಳು ನಿಪನಾಳ ಅವರಿಗೆ ರಕ್ಷಿತಾ ಶೆಟ್ಟಿ ತಲೆ ಮಸಾಜ್ ಮಾಡಿಸಿಕೊಂಡಿದ್ದಾರೆ. ಈ ವೇಳೆ, ಹೆಂಡತಿಯನ್ನು ಹೇಗೆ ಖುಷಿಯಾಗಿಡಬೇಕು ಎಂಬುದರ ಬಗ್ಗೆ ಮಾಳುಗೆ ಕೆಲವು ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ.

ರಕ್ಷಿತಾ ಶೆಟ್ಟಿ ಹವಾ
ಬಿಗ್‌ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ತಮ್ಮ ಅರೆಬರೆ ಕನ್ನಡದಿಂದಲೇ ಎಲ್ಲರ ಮನಸ್ಸನ್ನು ಗೆಲ್ಲುತ್ತಿದ್ದಾರೆ. ಅದೇ ರೀತಿ Bigg Boss ವೀಕ್ಷಕರ ಮನಸ್ಸನ್ನೂ ಕದಿಯುತ್ತಿದ್ದಾರೆ.
ಕೋಪ-ಪ್ರೀತಿ
ಬಿಗ್ಬಾಸ್ನಲ್ಲಿ ಸಹಜವಾಗಿ ಸ್ಪರ್ಧಿಗಳ ನಡುವೆ ಟಾಸ್ಕ್ ಎಂದು ಬಂದಾಗ ಜಗಳ, ಕೋಪ ತಾಪ ಎಲ್ಲವೂ ಇದ್ದೇ ಇರುತ್ತದೆ. ಆದರೆ ಅದೇ ವೇಳೆ ಅವರ ನಡುವೆ ಪ್ರೀತಿಯೂ ಇರುತ್ತದೆ.
ತಲೆ ಮಸಾಜ್
ಇದೀಗ ಮಾಳು ನಿಪನಾಳ (Bigg Boss Malu Nipanala) ಅವರು ರಕ್ಷಿತಾ ಶೆಟ್ಟಿಗೆ ತಲೆ ಮಸಾಜ್ ಮಾಡುತ್ತಿದ್ದಾರೆ. ಅಷ್ಟಕ್ಕೂ ರಕ್ಷಿತಾಗೆ ಇದೀಗ 25 ವರ್ಷ ವಯಸ್ಸಾದರೂ, ಆಕೆ ಚಿಕ್ಕ ಮಗುವಿನಂತೆಯೇ ಎಲ್ಲರೂ ನೋಡುವುದು ಇದೆ. ಇದೇ ಕಾರಣಕ್ಕೆ ಪುಟ್ಟ ಮಗುವಿನಂತೆಯೇ ಬಿಗ್‌ಬಾಸ್ ಮನೆಯಲ್ಲಿಯೂ ಕೆಲವು ಸ್ಪರ್ಧಿಗಳು ನೋಡುತ್ತಾರೆ.
ರಕ್ಷಿತಾ ಮೇಲೆ ಪ್ರೀತಿ
ಅಡುಗೆ ಮಾಡುವುದರಲ್ಲಿ ಎತ್ತಿದ ಕೈ ರಕ್ಷಿತಾರದ್ದು. ಯಾರು ಯಾವಾಗ ಕೇಳಿದ್ರೂ ಅಡುಗೆ ಮಾಡಿ ಕೊಡ್ತಾರೆ ಎಂದು ಬಿಗ್‌ಬಾಸ್ ಸ್ಪರ್ಧಿಗಳಿಗೂ ಆಕೆಯ ಮೇಲೆ ಪ್ರೀತಿ.
ಚಿಕ್ಕ ಚಿಕ್ಕದ್ದು ಕೊಡಿ
ಇದೀಗ ರಕ್ಷಿತಾ ಶೆಟ್ಟಿ ಹೆಂಡ್ತಿಯನ್ನು ಹೇಗೆ ಸುಖವಾಗಿ ಇಡಬೇಕು ಎನ್ನುವ ಬಗ್ಗೆ ಮಾಳುಗೆ ಪಾಠ ಮಾಡಿದ್ದಾರೆ. ಹೆಂಡ್ತಿ ದೊಡ್ಡ ದೊಡ್ಡದ್ದು ಏನೂ ಕೇಳಲ್ಲ, ಅವರಿಗೆ ಚಿಕ್ಕ ಚಿಕ್ಕದ್ದನ್ನು ಕೊಡಿ, ಅದರಲ್ಲಿಯೇ ಅವರಿಗೆ ಖುಷಿಯಾಗುತ್ತದೆ ಎಂದಿದ್ದಾರೆ.
ಹೆಂಡ್ತಿಗೆ ಸಹಾಯ
ನೀವು ಹೆಂಡ್ತಿಗೆ ದೊಡ್ಡ ದೊಡ್ಡ ಸಹಾಯ ಮಾಡಬೇಕೆಂದೇನೂ ಇಲ್ಲ, ಚಿಕ್ಕ ಚಿಕ್ಕ ಸಹಾಯ ಮಾಡಿ ಆಯ್ತಾ ಎಂದು ರಕ್ಷಿತಾ ಶೆಟ್ಟಿ ಕೇಳಿದ್ದಾರೆ. ನೀವು ಹೆಂಡ್ತಿಗೆ ಕೆಲಸ ಮಾಡಿ ಕೊಡಬೇಕು ಅಂತೇನೂ ಇಲ್ಲ. ಅಡುಗೆ ಮಾಡುವಾಗ ತರಕಾರಿ ಕಟ್ ಮಾಡಿ ಕೊಡ್ಲಾ ಅಂತ ಕೇಳಿ. ಅದೇ ಖುಷಿಯಾಗುತ್ತದೆ ಎಂದು ಟಿಪ್ಸ್ ಕೊಟ್ಟಿದ್ದಾರೆ.
ನೆಟ್ಟಿಗರ ಕಮೆಂಟ್ಸ್
ಇಷ್ಟು ಚಿಕ್ಕ ವಯಸ್ಸಿಗೆ ಇಷ್ಟೆಲ್ಲಾ ತಿಳಿದುಕೊಂಡಿದ್ಯಲ್ಲಮ್ಮಾ ಟಗರು ಪುಟ್ಟೀ ಎಂದು ನೆಟ್ಟಿಗರು ರಕ್ಷಿತಾ ಅವರನ್ನು ಹಾಡಿ ಹೊಗಳುತ್ತಿದ್ದಾರೆ. ಅಣ್ಣ- ತಂಗಿ ಸಂಬಂಧ ಎಂದ್ರೆ ಹೀಗಿರಬೇಕು ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. ಅಂದಹಾಗೆ ಮಾಳು ಅವರಿಗೆ ಮೇಘಾ ಎನ್ನುವವರ ಜೊತೆ ಮದುವೆಯಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

