ಜಿಮ್‌ನಿಂದ ಮರಳುತ್ತಿದ್ದಾಗ ಬಿಗ್ ಬಾಸ್ ಮಾಜಿ ಸ್ಪರ್ಧಿ ಕಾರು ಭೀಕರ ಅಪಘಾತ, ವೇಗವಾಗಿ ಬರುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರು ನಜ್ಜು ಗುಜ್ಜಾಗಿದೆ.
ಮುಂಬೈ (ಡಿ.09) ಬಿಗ್ ಬಾಸ್ ಒಟಿಟಿ ಮಾಜಿ ಸ್ಪರ್ಧಿ, ಜನಪ್ರಿಯ ಟಿವಿ ನಟ ಜೀಶನ್ ಖಾನ್ ಕಾರು ಅಪಘಾತಗೊಂಡಿದೆ. ಜಿಮ್‌ಗೆ ವ್ಯಾಯಾಮ ಪೂರೈಸಿ ಮರಳಿ ಕಾರಿನ ಮೂಲಕ ಮನೆಗೆ ಬರುತ್ತಿದ್ದಾಗ ಮಂಬೈನ ವರ್ಸೋವಾ ಬಳಿ ಕಾರು ಅಪಘಾತಕ್ಕೀಡಾಗಿದೆ. 8 ಗಂಟೆಗೆ ಸುಮಾರಿಗೆ ಕಾರು ಅಪಘಾತವಾಗಿದೆ. ಜೀಶನ್ ಖಾನ್ ಕಾರು ವೇಗವಾಗಿ ಸಾಗುತ್ತಿದ್ದ ವೇಳೆ ಎದುರಿನಿಂದ ಬಂದ ಹಿರಿಯ ದಂಪತಿಗಳ ಕಾರಿಗೆ ಡಿಕ್ಕಿಯಾಗಿದೆ. ಅದೃಷ್ಠವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎರಡೂ ಕಾರುಗಳು ನಜ್ಜು ಗುಜ್ಜಾಗಿದೆ. ಆದರೆ ಸಣ್ಣ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಅಪಘಾತ ಕುರಿತು ಪ್ರಕರಣ ದಾಖಲು
ಜೀಮ್ ಅಭ್ಯಾಸ ಮುಗಿಸಿ ಮನೆಗೆ ವೇಗವಾಗಿ ಸಾಗುತ್ತಿದ್ದ ಜೀಶನ್ ಖಾನ್ ಕಾರು ಎದುರಿಗೆ ಹಿರಿಯ ದಂಪತಿಗಳ ಕಾರು ಆಗಮಿಸಿದೆ. ಕಾರು ವೇಗವಾಗಿ ಡಿಕ್ಕಿಯಾಗಿದೆ. ಘಟನೆ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಕಲೆ ಹಾಕುತ್ತಿದ್ದಾರೆ. ಇತ್ತ ಅಪಘಾತ ಮಾಹಿತಿ ತಿಳಿಯುತ್ತಿದ್ದಂತೆ ಜೀಶನ್ ಖಾನ್ ಅಭಿಮಾನಿಗಳು ಆತಂಕಗೊಂಡಿದ್ದರು. ಆದರೆ ಜೀಶನ್ ಖಾನ್ ಸುರಕ್ಷಿತವಾಗಿದ್ದಾರೆ ಅನ್ನೋ ಸಂದೇಶ ಹೊರಬೀಳುತ್ತಿದ್ದಂತೆ ಅಭಿಮಾನಿಗಳು ನಿರಾಳರಾಗಿದ್ದಾರೆ.
ಬಿಗ್ ಬಾಸ್ ಒಟಿಟಿಯಲ್ಲಿ ವಿವಾದ
ಜೀಶನ್ ಖಾನ್ ಹಿಂದಿ ಬಿಗ್ ಬಾಸ್ ಒಟಿಟಿ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಬಿಗ್ ಬಾಸ್ ಒಟಿಟಿ ವೇದಿಕೆಯಲ್ಲಿ ಪ್ರಬಲ ಸ್ಪರ್ಧಿಯಾಗಿ ಮನೆ ಪ್ರವೇಶಿಸಿದ್ದ ಜೀಶನ್ ಖಾನ್ ಅಷ್ಟೇ ಬೇಗನೆ ಮನೆಯಿಂದ ಹೊರಬಿದ್ದಿದ್ದರು. ಮನೆಯ ಒಳಗೆ ಇತರ ಸ್ಪರ್ಧಿಗಳ ಜೊತೆ ಜಟಾಪಟಿ ನಡೆಸಿ ಮನೆಯ ನಿಯಮ ಉಲ್ಲಂಘಿಸಿದ್ದರು. ಇದರೊಂದಿಗೆ ಮನೆಯಿಂದ ಹೊರಬಿದ್ದಿದ್ದರು. ಸಹ ಸ್ಪರ್ಧಿ ಪ್ರತೀಕ್ ಸಹಜ್‌ಪಾಲ್ ವಿರುದ್ದ ಕೈಕೈಮಿಲಾಯಿಸಿದ್ದರು. ಹೀಗಾಗಿ ಜೀಶನ್ ಖಾನ್ ಬಹುಬೇಗನೆ ಮನೆಯಿಂದ ಹೊರಬಿದ್ದಿದ್ದರು. ಈ ಬಿಗ್ ಬಾಸ್ ಒಟಿಟಿ ಆವೃತ್ತಿಯಲ್ಲಿ ದಿವ್ಯಾ ಅಗರ್ವಾಲ್ ಟ್ರೋಫಿ ಗೆದ್ದರೆ, ನಿಶಾಂತ್ ಭಟ್ ರನ್ನರ್ ಅಪ್ ಆಗಿದ್ದರು.
ಹಲವು ಹಿಂದಿ ದಾರವಾಹಿಗಳ ಮೂಲಕ ಜೀಶನ್ ಖಾನ್ ಜಪ್ರಿಯರಾಗಿದ್ದಾರೆ. ಇದೇ ವೇಳೆ ಹಲವು ರಿಯಾಲಿಟಿ ಶೋ ವೇದಿಕೆಗಳಲ್ಲೂ ಕಾಣಿಸಿಕೊಂಡಿದ್ದಾರೆ.


