MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • Crime
  • Kolar: ವರದಕ್ಷಿಣೆ ಕಿರುಕುಳ; ಪತಿ ಮನೆ ಮುಂದೆಯೇ ನವವಿವಾಹಿತೆಯ ಅಂತ್ಯಕ್ರಿಯೆ ಮಾಡಿದ ಕುಟುಂಬ!

Kolar: ವರದಕ್ಷಿಣೆ ಕಿರುಕುಳ; ಪತಿ ಮನೆ ಮುಂದೆಯೇ ನವವಿವಾಹಿತೆಯ ಅಂತ್ಯಕ್ರಿಯೆ ಮಾಡಿದ ಕುಟುಂಬ!

ಕೋಲಾರದಲ್ಲಿ ಪತಿಯ ಮನೆಯವರ ವರದಕ್ಷಿಣೆ ಕಿರುಕುಳದಿಂದಾಗಿ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿದ್ದು, ಪತಿಯ ಮನೆಯ ಮುಂದೆ ಶವವನ್ನಿಟ್ಟು ಮಹಿಳೆಯರ ಪೋಷಕರು ಪ್ರತಿಭಟನೆ ನಡೆಸಿದ್ದಾರೆ. ಮಗಳ ಅಂತ್ಯ ಸಂಸ್ಕಾರವನ್ನು ಪತಿಯ ಮನೆಯ ಮುಂದೆಯೇ ಮಾಡಲು ಪೋಷಕರು ಪ್ರಯತ್ನಿಸಿದರು.

2 Min read
Author : Santosh Naik
Published : Aug 25 2024, 02:36 PM IST
Share this Photo Gallery
  • FB
  • TW
  • Linkdin
  • Whatsapp
111

ಪತಿಯ ಮನೆಯವರ ವರದಕ್ಷಿಣೆ ಕಿರುಕುಳದಿಂದಾಗಿ ಕೋಲಾರದಲ್ಲಿ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದರ ಬೆನ್ನಲ್ಲಿಯೇ ಪತಿಯ ಮನೆಯ ಮುಂದೆ ಶವವನ್ನಿಟ್ಟು ಮಹಿಳೆಯರ ಪೋಷಕರು ಪ್ರತಿಭಟನೆ ನಡೆಸಿದ್ದಾರೆ. 

211

ಕೋಲಾರ ತಾಲೂಕಿನ ತೂರಾಂಡಹಳ್ಳಿ ಗ್ರಾಮದಲ್ಲಿರುವ ಪತಿ ಉಲ್ಲಾಸ್ ಗೌಡ ಮನೆಯ ಎದುರು ಪತ್ನಿ ಮಾನಸ ಗೌಡ ಅವರ ಶವವನ್ನಿಟ್ಟು ಪ್ರತಿಭಟನೆ ಮಾಡಲಾಗಿದೆ. 

311

24 ವರ್ಷದ ಮಾನಸ ಗೌಡ ಹಾಗೂ ತೂರಾಂಡಹಳ್ಳಿ ಗ್ರಾಮದ ಉಲ್ಲಾಸ್ ಗೌಡ ನಡುವೆ ಕಳೆದ ವರ್ಷ ಅದ್ದೂರಿಯಾಗಿ ಮದುವೆ ನಡೆದಿದ್ದು, ಮದುವೆಯ ಆಕರ್ಷಕ ಫೋಟೋಶೂಟ್‌ ಕೂಡ ಮಾಡಿಸಲಾಗಿತ್ತು.

411

ಆದರೆ, ಮದುವೆಯಾಗಿ ವರ್ಷ ಕಳೆಯುವಷ್ಟರಲ್ಲಿಯೇ ಉಲ್ಲಾಸ್‌ ಗೌಡ ಕುಟುಂಬದಿಂದ ವರದಕ್ಷಿಣೆ ಕಿರುಕುಳ ಶುರುವಾಗಿತ್ತು. ಇದರಿಂದಾಗಿ ಮನನೊಂದಿದ್ದ ಮಾನಸ ತವರು ಮನೆಗೆ ಬಂದಿದ್ದಳು.

511

ಶನಿವಾರ ರಾತ್ರಿ ಡೆತ್‌ ನೋಟ್‌ ಬರೆದಿಟ್ಟು ಮಾನಸ ಗೌಡ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ವೇಳೆ ಪತಿ ಉಲ್ಲಾಸ್ ಗೌಡ ಮತ್ತು ಕುಟುಂಬಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ಮಾಡಲಾಗುತ್ತಿದೆ.

611

ಇನ್ನೊಂದೆಡೆ ಸಿಟ್ಟಿಗೆದ್ದಿದ್ದ ಮಾನಸ ಗೌಡ ಅವರ ಕುಟುಂಬ ಮಗಳ ಅಂತ್ಯ ಸಂಸ್ಕಾರವನ್ನು ಪತಿಯ ಮನೆಯ ಮುಂದೆಯೇ ಮಾಡಲು ಎಲ್ಲಾ ರೀತಿಯ ಸಿದ್ದತೆ ಮಾಡಿಕೊಂಡಿದ್ದರು.

711

ಆದರೆ,  ಮನೆ ಮುಂದೆ ಅಂತ್ಯಸಂಸ್ಕಾರ ಮಾಡಲು ಪೊಲೀಸರು ಅಡ್ಡಿ ಮಾಡಿದ್ದಾರೆ.ಈ ವೇಳೆ ಪೋಷಕರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. 

811

 ಮಗಳ ಸಾವಿಗೆ ನ್ಯಾಯ ಒದಗಿಸುವಂತೆ ಪೋಷಕರು ಒತ್ತಾಯ ಮಾಡಿದ್ದಾರೆ. ವರದಕ್ಷಿಣೆ ಕಿರುಕುಳ ನೀಡಿ ಮಗಳ ಸಾವಿಗೆ ಉಲ್ಲಾಸ್‌ ಗೌಡ ಕುಟುಂಬ ಕಾರಣವಾಗಿದೆ ಎಂದು ದೂರಿದ್ದಾರೆ. ಇನ್ನು ಉಲ್ಲಾಸ್ ಗೌಡ ಅವರ ಕುಟುಂಬ ಸದ್ಯ ಬೆಂಗಳೂರಿನಲ್ಲಿ ವಾಸವಾಗಿದೆ.

911


ವರನ ಮನೆಯ ಬಾಗಿಲಲ್ಲೇ ಅಂತ್ಯಸಂಸ್ಕಾರ ಮಾಡಲು ಮುಂದಾಗಿದ್ದ ಮೃತ ಮಾನಸ ಪೋಷಕರಿಗೆ ಸಮಾಧಾನ ಮಾಡುವಲ್ಲಿ ಪೊಲೀಸರು ಕೊನೆಗೆ ಯಶ ಕಂಡಿದ್ಬದಾರೆ. ಬಳಿಕ ಮನೆಯ ಕೈತೋಟದಲ್ಲಿಯೇ ಅಂತ್ಯ ಸಂಸ್ಕಾರ ನೆರವೇರಿದೆ.
 

1011

ಪೊಲೀಸರ ಸಮ್ಮುಖದಲ್ಲೇ ಮನೆಯ ಕೈತೋಟದಲ್ಲಿ ಗುಂಡಿ ತೋಡಿದ ಪ್ರತಿಭಟನಾಕಾರರು ಅಲ್ಲಿಯೇ ಮಾನಸ ಮೃತದೇಹವನ್ನು ಸಮಾಧಿ ಮಾಡಿದ್ದಾರೆ.
 

1111

ನಿನ್ನೆ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದ ಮಾನಸ. ಇಂದು ಮುಂಜಾನೆಯಿಂದ ಉಲ್ಲಾಸಗೌಡ ಮನೆ ಎದುರು  ಶವವಿಟ್ಟು ಮನೆ ಎದುರು ಅಂತ್ಯಸಂಸ್ಕಾರಕ್ಕೆ ಮಾನಸ ಪೋಷಕರು ಮುಂದಾಗಿದ್ದರು.

ಇದನ್ನೂ ಓದಿ: 'ಮಗನೇ.. ನೀನ್ಯಾಕೆ ಹೀಗೆ ಮಾಡಿದೆ..' ಕೋಲ್ಕತ್ತಾ ರೇಪ್‌ ಆರೋಪಿಯ ತಾಯಿ ಅಳಲು!

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಕೋಲಾರ
ಮಹಿಳೆಯರು
ಆತ್ಮಹತ್ಯೆ

Latest Videos
Recommended Stories
Recommended image1
Telangana Crime: ಮಗು ಅಳ್ತಿದೆ ಅಂತಾ ಬಾಯಿಗೆ ಬಟ್ಟೆ ತುರುಕಿ, ಉರಿವ ಬೆಂಕಿಯಲ್ಲಿ ಜೀವಂತ ಸುಟ್ಟ ತಾಯಿ!
Recommended image2
Mallikarjuna Mutya: ಅಪ್ರಾಪ್ತ ಬಾಲಕಿಯ ಅಪ್ಪಿಕೊಂಡು ಮುದ್ದಾಟ, ಯಾದಗಿರಿಯ ಮಲ್ಲಿಕಾರ್ಜುನ ಮುತ್ಯಾ ಮೇಲೆ ಬಿತ್ತು ಕೇಸ್‌!
Recommended image3
ನಿರ್ಭಯಾ ಕೇಸ್​ನಿಂದ ಶಿವಮೊಗ್ಗದ ಸಂಕೇತ್​ ಕೊ*ಲೆಯವರೆಗೆ ಅದೇ ಅಪ್ರಾಪ್ತರು! ಸತ್ಯ ಮಾತ್ರ ಘನಘೋರ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved