- Home
- Entertainment
- Cine World
- ಸದಾ ಬ್ಯಾಗ್ ನಲ್ಲಿ ಕಪ್ಪು ಉಪ್ಪು ಕ್ಯಾರಿ ಮಾಡ್ತಾರೆ ನಟಿ ಕಾಜೋಲ್ ! Black Salt ಲಾಭ ಅಷ್ಟಿಷ್ಟಲ್ಲ
ಸದಾ ಬ್ಯಾಗ್ ನಲ್ಲಿ ಕಪ್ಪು ಉಪ್ಪು ಕ್ಯಾರಿ ಮಾಡ್ತಾರೆ ನಟಿ ಕಾಜೋಲ್ ! Black Salt ಲಾಭ ಅಷ್ಟಿಷ್ಟಲ್ಲ
Kajol Black Salt : ಬಾಲಿವುಡ್ ನಟಿ ಕಾಜೋಲ್ ಎಲ್ಲೇ ಹೋದ್ರೂ ಕಪ್ಪು ಉಪ್ಪನ್ನು ಬ್ಯಾಗ್ ನಲ್ಲಿ ಇಟ್ಟುಕೊಂಡಿರ್ತಾರೆ. ಅದಕ್ಕೆ ಕಾರಣ ಏನು ಎಂಬುದನ್ನು ಕಾಜೋಲ್ ಇಂಟರ್ವ್ಯೂ ಒಂದರಲ್ಲಿ ಹೇಳಿದ್ದಾರೆ. ಕಾರಣ ಏನು ಗೊತ್ತಾ?

ಪ್ರವಾಸದ ಬ್ಯಾಗ್
ಪ್ರವಾಸಕ್ಕೆ ಹೊರಟ್ರೆ ನಮ್ಮ ಬಗಲಿಗೊಂದು ಚೀಲ ಇರುತ್ತೆ. ಬ್ಯಾಗ್ ನಲ್ಲಿ ನಮ್ಮಿಷ್ಟದ ತಿಂಡಿ ಇಲ್ಲ ವಸ್ತುವನ್ನು ಇಟ್ಕೊಂಡು ಹೋಗ್ತೇವೆ. ಕೆಲವರು ತಿಂಡಿ, ಹಣ್ಣನ್ನು ಇಟ್ಕೊಂಡ್ರೆ ಮತ್ತೆ ಕೆಲವರು ಕೋಲ್ಡ್ ಡ್ರಿಂಕ್ಸ್, ಚಾಕೋಲೇಟ್, ಮಾತ್ರೆಗಳನ್ನು ಇಟ್ಕೊಂಡಿರ್ತಾರೆ. ಬಾಲಿವುಡ್ ನಟಿ ಜಾಹ್ನವಿ ಕಪೂರ್ ಕೈನಲ್ಲಿ ದಿಂಬಿರುತ್ತೆ. ಆದ್ರೆ ನಟಿ ಕಾಜೋಲ್ (Kajol) ಇದಕ್ಕಿಂತ ಸ್ವಲ್ಪ ಭಿನ್ನ.
ಕಾಜೋಲ್ ಬ್ಯಾಗ್ ನಲ್ಲಿ ಕಪ್ಪು ಉಪ್ಪು (black salt)
ಬಾಲಿವುಡ್ ನಟಿ ಕಾಜೋಲ್ ಯಾವಾಗಲೂ ತಮ್ಮ ಬ್ಯಾಗ್ ನಲ್ಲಿ ಬ್ಲಾಕ್ ಸಾಲ್ಟ್ ಇಟ್ಕೊಂಡಿರ್ತಾರೆ. ಇಂಟರ್ವ್ಯೂ ಒಂದರಲ್ಲಿ ಕಾಜೋಲ್ ಈ ವಿಷ್ಯವನ್ನು ಹೇಳಿದ್ದಾರೆ. ತಮ್ಮ ಬ್ಯಾಗ್ ನಲ್ಲಿ ಸದಾ ಕಪ್ಪು ಉಪ್ಪಿರುತ್ತೆ ಎನ್ನುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ.
ಕಪ್ಪು ಉಪ್ಪ್ಯಾಕೆ?
ಕಾಜೋಲ್ ಕಪ್ಪು ಉಪ್ಪನ್ನು ಯಾಕೆ ಇಟ್ಕೊಳ್ತೇನೆ ಎನ್ನುವ ಪ್ರಶ್ನೆಗೂ ಉತ್ತರ ನೀಡಿದ್ದಾರೆ. ಕಾಜೋಲ್ ಪ್ರಕಾರ, ಎಲ್ಲ ಕಡೆ ಆಹಾರಕ್ಕೆ ಒಂದೇ ರೀತಿ ಉಪ್ಪನ್ನು ಹಾಕೋದಿಲ್ಲ. ಆಹಾರಕ್ಕೆ ಉಪ್ಪು ಕಡಿಮೆಯಾಗಿದೆ ಅನ್ನಿಸಿದಾಗ ಕಾಜೋಲ್ ಬ್ಯಾಗ್ ನಲ್ಲಿರುವ ಕಪ್ಪು ಉಪ್ಪನ್ನು ಬಳಸ್ತಾರೆ. ಈ ಕಪ್ಪು ಉಪ್ಪು ಬರೀ ಊಟಕ್ಕೆ ಮಾತ್ರವಲ್ಲ ಹಣ್ಣು, ಚಿಪ್ಸ್, ತರಕಾರಿ ರುಚಿಯನ್ನು ಹೆಚ್ಚಿಸುತ್ತೆ ಎನ್ನುತ್ತಾರೆ ಕಾಜೋಲ್.
ಕಪ್ಪು ಉಪ್ಪು ಏಕೆ ಪ್ರಯೋಜನಕಾರಿ?
ಬಹಳ ಹಿಂದಿನಿಂದಲೂ ಕಪ್ಪು ಉಪ್ಪನ್ನು ಜೀರ್ಣಕಾರಿ ಸಮಸ್ಯೆಗೆ ಔಷಧಿಯಾಗಿ ಬಳಸ್ತಾರೆ. ಪ್ರಯಾಣದ ಸಮಯದಲ್ಲಿ ವಾಕರಿಕೆ, ಗ್ಯಾಸ್, ಆಮ್ಲೀಯತೆ ಮತ್ತು ವಾಂತಿ ಸಾಮಾನ್ಯವಾಗಿದೆ. ಕಪ್ಪು ಉಪ್ಪು ಇದಕ್ಕೆ ಪರಿಹಾರ ನೀಡುತ್ತದೆ. ಕಪ್ಪು ಉಪ್ಪಿನ ಹುಳಿ-ಉಪ್ಪಿನ ರುಚಿ, ಮೋಷನ್ ಸಿಕ್ನೆಸ್ ಕಾಯಿಲೆಯನ್ನು ನಿಯಂತ್ರಿಸುತ್ತದೆ. ಹಸಿವನ್ನು ಕಡಿಮೆ ಮಾಡುವಲ್ಲಿಯೂ ಪರಿಣಾಮಕಾರಿಯಾಗಿದೆ. ಕಪ್ಪು ಉಪ್ಪನ್ನು ನೀರು ಅಥವಾ ನಿಂಬೆಯೊಂದಿಗೆ ಸೇವಿಸಿದ್ರೆ ದೇಹವನ್ನು ಹೈಡ್ರೀಕರಿಸಲು ಸಹಾಯ ಮಾಡುತ್ತದೆ.
ಹಣ್ಣಿನ ರುಚಿ ಡಬಲ್
ನಟಿ ಕಾಜೋಲ್ ಕಪ್ಪು ಉಪ್ಪಿನ ಬಳಕೆ ಹಾಗೂ ಕೊಂಡೊಯ್ಯುವ ಸ್ವಭಾವ ಕೇವಲ ಅಭ್ಯಾಸಕ್ಕೆ ಸೀಮಿತವಾಗಿಲ್ಲ. ಕಪ್ಪು ಉಪ್ಪಿನ ವಿಶಿಷ್ಟವಾದ ಸಲ್ಫರ್ ತರಹದ ಸುವಾಸನೆ ಹಣ್ಣುಗಳು, ಸಲಾಡ್ಗಳು, ಮೊಸರು, ಮಜ್ಜಿಗೆ, ಚಾಟ್ ಮತ್ತು ತಿಂಡಿಗಳ ರುಚಿ ಹೆಚ್ಚಿಸುತ್ತದೆ. ಅದಕ್ಕಾಗಿಯೇ ಇದು ಸಸ್ಯಾಹಾರಿ ಭಕ್ಷ್ಯಗಳಲ್ಲಿಯೂ ಜನಪ್ರಿಯವಾಗಿದೆ. ಇದು ಮೊಟ್ಟೆಯಂತಹ ಪರಿಮಳವನ್ನು ನೀಡುತ್ತದೆ.
ಕಪ್ಪು ಉಪ್ಪಿನ ಬಳಕೆ ಹೇಗೆ?
ತಜ್ಞರ ಪ್ರಕಾರ, ಕಪ್ಪು ಉಪ್ಪನ್ನು ಸೀಮಿತ ಪ್ರಮಾಣದಲ್ಲಿ ಬಳಸಲು ಶಿಫಾರಸು ಮಾಡಲಾಗುತ್ತದೆ. ಅದರ ಸುವಾಸನೆ ಕಾಪಾಡಿಕೊಳ್ಳಲು ಅಡುಗೆ ಮಾಡಿದ ನಂತರ ಅಥವಾ ಬಡಿಸುವ ಮೊದಲು ಅದನ್ನು ಸೇರಿಸಿ. ಗಾಳಿಯಾಡದ ಪಾತ್ರೆಯಲ್ಲಿ ಇದನ್ನು ಸಂಗ್ರಹಿಸುವುದು ಸಹ ಮುಖ್ಯ.
ಅತಿಯಾದ ಸೇವನೆ ಅನಾರೋಗ್ಯಕ್ಕೆ ಕಾರಣ
ಕಪ್ಪು ಉಪ್ಪನ್ನು ಅತಿಯಾಗಿ ಸೇವನೆ ಮಾಡಿದ್ರೆ ಅದು ಗಂಭೀರ ಅನಾರೋಗ್ಯಕ್ಕೆ ಕಾರಣವಾಗುತ್ತದೆ.ಇದನ್ನು ಅತಿಯಾಗಿ ಸೇವನೆ ಮಾಡೋದ್ರಿಂದ ನಿರ್ಜಲೀಕರಣ, ಎಲೆಕ್ಟ್ರೋಲೈಟ್ ಅಸಮತೋಲನ ಅಥವಾ ಜೀರ್ಣಕಾರಿ ಸಮಸ್ಯೆ ಹೆಚ್ಚಾಗಬಹುದು. ಊತ, ಅಧಿಕ ರಕ್ತದೊತ್ತಡ ಅಥವಾ ಆಮ್ಲೀಯತೆಗೆ ಕಾರಣವಾಗಬಹುದು.
ರುಚಿ ಮತ್ತು ಸಮತೋಲನ ಎರಡೂ ಅತ್ಯಗತ್ಯ
ಉಪ್ಪು, ಆಹಾರದ ರುಚಿಯನ್ನು ಹೆಚ್ಚಿಸುತ್ತದೆ ಅಂತ ಕಾಲೋಜ್ ನಂಬ್ತಾರೆ. ಆದ್ರೆ ತಜ್ಞರು ಸಮತೋಲನದ ಬಗ್ಗೆ ಸಲಹೆ ನೀಡಿದ್ದಾರೆ. ಸರಿಯಾದ ಪ್ರಮಾಣದಲ್ಲಿ ಬಳಸಿದಾಗ, ಕಪ್ಪು ಉಪ್ಪು ರುಚಿಯನ್ನು ಹೆಚ್ಚಿಸುವುದಲ್ಲದೆ ಹೊಟ್ಟೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

