- Home
- Entertainment
- Cine World
- ಕೆನಡಾದಲ್ಲಿ 2000 ಕೋಟಿ ರೂ. ಆಸ್ತಿ ಹೊಂದಿರೋ ರಂಭಾ ಮತ್ತೆ ಭಾರತಕ್ಕೆ ಬರಲು ರೆಡಿ.. ಯಾಕೆ, ಏನಾಗಿದೆ ಅಲ್ಲಿ?
ಕೆನಡಾದಲ್ಲಿ 2000 ಕೋಟಿ ರೂ. ಆಸ್ತಿ ಹೊಂದಿರೋ ರಂಭಾ ಮತ್ತೆ ಭಾರತಕ್ಕೆ ಬರಲು ರೆಡಿ.. ಯಾಕೆ, ಏನಾಗಿದೆ ಅಲ್ಲಿ?
ಸೌತ್ ಹಾಗೂ ಬಾಲಿವುಡ್ ಚಿತ್ರರಂಗದಲ್ಲಿ ಸಖತ್ ಮಿಂಚಿದ್ದ ನಟಿ ರಂಭಾ 2010ರಲ್ಲಿ ಮದುವೆಯಾಗಿ ವಿದೇಶದಲ್ಲಿ ಸೆಟಲ್ ಆಗಿಬಿಟ್ಟರು. ಅಲ್ಲಿಂದ ಮುಂದೆ ನಟಿ ರಂಭಾ ಅವರು ಸಿನಿಮಾರಂಗದಿಂದ ದೂರವೇ ಉಳಿದಿದ್ದಾರೆ. ಆದರೀಗ ಹೊಸ ಸಮಾಚಾರವೊಂದು ಬಂದಿದೆ. ಏನದು ನೋಡಿ..!

ಒಂದು ಕಾಲದಲ್ಲಿ ನಟಿ ರಂಭಾ ಹೆಸರು ಕೇಳಿದರೆ ಸಾಕು, ಹುಡುಗರ ಹಾರ್ಟಲ್ಲಿ ಹೈ ವೋಲ್ಟೇಜ್ ಮಿಂಚಿನ ಸಂಚಾರ ಪಕ್ಕಾ ಎನ್ನವಂತಿತ್ತು. ಅಷ್ಟು ಚೆಂದದ ನಟಿ ಆ ಕಾಲದಲ್ಲಿ ಅಪರೂಪ ಎಂಬಷ್ಟು ತಮ್ಮ ಸೌಂದರ್ಯದ ಮೂಲಕ ತೆರೆಯ ಮೇಲೆ ಮೆರದ ನಟಿ ರಂಭಾ.
ಸೌತ್ ಹಾಗೂ ಬಾಲಿವುಡ್ ಚಿತ್ರರಂಗದಲ್ಲಿ ಸಖತ್ ಮಿಂಚಿದ್ದ ನಟಿ ರಂಭಾ 2010ರಲ್ಲಿ ಮದುವೆಯಾಗಿ ವಿದೇಶದಲ್ಲಿ ಸೆಟಲ್ ಆಗಿಬಿಟ್ಟರು. ಅಲ್ಲಿಂದ ಮುಂದೆ ನಟಿ ರಂಭಾ ಅವರು ಸಿನಿಮಾರಂಗದಿಂದ ದೂರವೇ ಉಳಿದಿದ್ದಾರೆ. ಆದರೀಗ ಹೊಸ ಸಮಾಚಾರವೊಂದು ಬಂದಿದೆ.
ನಟಿ ರಂಭಾ ಅವರು ತಮ್ಮ ಕಾಲದಲ್ಲಿ ಅಂದರೆ 90ರ ದಶಕ ಹಾಗೂ ನಂತರದ 2010ರವರೆಗು ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಹೆಚ್ಚಾಗಿ ಗ್ಲಾಮರಸ್ ಪಾತ್ರಗಳಲ್ಲೆ ಕಾಣಿಸಿಕೊಂಡಿರುವ ನಟಿ ರಂಭಾ ಅವರು ಸಾಕಷ್ಟು ಗಟ್ಟಿಯಾದ, ಪ್ರತಿಭೆ ಪ್ರದರ್ಶನಕ್ಕೆ ಅವಕಾಶವಿರುವ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ.
ನಟರಾದ ಸೂಪರ್ ಸ್ಟಾರ್ ರಜನಿಕಾಂತ್, ವಿಜಯ್, ಸೂರ್ಯ, ಕಮಲ್ ಹಾಸನ್, ಚಿರಂಜೀವಿ, ಜಾಗಾರ್ಜುನ, ವೆಂಕಟೇಶ್, ಜಗಪತಿ ಬಾಬು ಸೇರಿದಂತೆ ಹಲವು ಸ್ಟಾರ್ ಜೊತೆ ನಟಿಸಿದ್ದಾರೆ ನಟಿ ರಂಭಾ. ಕನ್ನಡದಲ್ಲಿ ಶಿವರಾಜ್‌ಕುಮಾರ್ ಹಾಗೂ ರವಿಚಂದ್ರನ್ ಜೊತೆ ಕೂಡ ನಟಿಸಿ ಕನ್ನಡ ಸಿನಿಪ್ರೇಕ್ಷಕರಿಗೆ ಕೂಡ ಪರಿಚಿತ ಮುಖ ಆಗಿರುಬ ನಟಿ ರಂಭಾ.
ಈ ನಟಿಯ ಆಸ್ತಿ ಬರೋಬ್ಬರಿ 2000 ಕೋಟಿ ಎಂಬುದು ಇದೀಗ ದೊಡ್ಡ ಸುದ್ದಿಯಾಗಿದೆ. ಇತ್ತೀಚೆಗೆ ಚಲನಚಿತ್ರೋತ್ಸವ ಒಂದರಲ್ಲಿ ಕಲೈಪುರಿ ಥಾನು ಅವರು- 'ರಂಭಾ 2000 ಕೋಟಿ ಆಸ್ತಿ ಒಡತಿ ಎಂದಿದ್ದಾರೆ. ಜೊತೆಗೆ, ರಂಭಾ ಪತಿ 5 ಕಂಪನಿ ನಡೆಸುತ್ತಿದ್ದಾರೆ. ಅದರಲ್ಲಿ ಒಂದಕ್ಕೆ ರಂಭಾ ಹೆಸರನ್ನೂ ಇಟ್ಟಿದ್ದಾರೆ. ಕೆಲವು ಕಂಪನಿಗಳು ಚೆನ್ನೈನಲ್ಲಿಯೂ ಕಾರ್ಯ ನಿರ್ವಹಿಸುತ್ತಿವೆ ಎಂಬ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.
90ರ ದಶಕದಲ್ಲಿ ಬಹಳಷ್ಟು ಮಿಂಚಿದ್ದ ಈ ನಟಿ 2010ರಲ್ಲಿ ಕೆನಡಾದಲ್ಲಿ ಸೆಟ್ಲ್ ಆಗಿರೋ ಇಂದ್ರಕುಮಾರ್ ಪದ್ಮನಾಥನ್ ಜೊತೆ ವಿವಾಹವಾದರು. ಅವರಿಗೆ ಈಗ 3 ಮಕ್ಕಳು. ಮಕ್ಕಳೆಲ್ಲರೂ ಬೆಳೆದು ಈಗ ದೊಡ್ಡವರಾಗಿದ್ದಾರೆ. ಹೀಗಾಗಿ ಮತ್ತೆ ನಟಿಸಲು ಮನಸ್ಸು ಮಾಡಿದ್ದಾರೆ ನಟಿ ರಂಭಾ. ಈ ಸಂಗತಿಯೇನೂ ಗಾಸಿಪ್ ಅಥವಾ ಊಹೆಯಲ್ಲ.. ಬದಲಿಗೆ, ಸ್ವತಃ ರಂಭಾ ಅವರೇ ಈ ಸಂಗತಿಯನ್ನು ಹೇಳಿದ್ದಾರೆ.
ಚಲನಚಿತ್ರೋತ್ಸವಕ್ಕೆ ಬಂದಿದ್ದ ರಂಭಾ ಅವರು, 'ನನಗೀಗ ಮಕ್ಕಳು ದೊಡ್ಡವರಾಗಿದ್ದಾರೆ. ನನ್ನ ಅನಿವಾರ್ಯ ಜವಾಬ್ದಾರಿಗಳನ್ನು ಮುಗಿಸಿದ್ದೇನೆ. ಈಗ ನಾನು ಮತ್ತೆ ಸಿನಿಮಾಗಳಲ್ಲಿ ನಟಿಸಲು ಸಾಧ್ಯ.
ನನಗೆ ಸೂಕ್ತ ಅವಕಾಶ ಸಿಕ್ಕರೆ ನಾನು ಮತ್ತೆ ನಟನೆಗೆ ಮರಳುತ್ತೇನೆ ಎಂದಿದ್ದಾರೆ. ಈಗ, ಚೆಂಡು ಸಿನಿಮಾಉದ್ಯಮದ ಅಂಗಳಕ್ಕೆ ಬಂದು ಬಿದ್ದಿದೆ. ರಂಭಾ ಅವರಿಗೆ ಸೂಕ್ತ ಚಾನ್ಸ್ ಕೊಟ್ಟರೆ ಅವರಂತೂ ಬರಲು ರೆಡಿ..
ಒಟ್ಟಿನಲ್ಲಿ, 2010ರ ಬಳಿಕ, 15 ವರ್ಷಗಳ ನಂತರ ರಂಭಾ ಅಭಿಮಾನಿಗಳಿಗೆ ಮತ್ತೆ ತೆರೆಯ ಮೇಲೆ ಅವರ ದರ್ಶನ ಆಗಬಹುದು. ರಂಭಾಗೆ ಈಗ ಹೊಂದಿಕೆಯಾಗುವ ಪಾತ್ರವನ್ನು ನಿರ್ದೇಶಕರು ಸೃಷ್ಟಿಸಿದರೆ, ಅವರಿಗೆ ಅದು ಓಕೆ ಆದರೆ, ಮತ್ತೆ ನಟಿ ರಂಭಾರನ್ನು ಫ್ಯಾನ್ಸ್ ಮತ್ತೆ ತೆರೆಯ ಮೇಲೆ ನೋಡಬಹುದು.
ಇದು ಅಂದಕಾಲತ್ತಿಲ್ ಸುಂದರಿ ನಟಿ ರಂಭಾ ಸದ್ಯದ ಸ್ಟೋರಿ.. ಮುಂದೆ ಅವರ ಸಿನಿಮಾಗಳೋ, ಸಿರಿಯಲ್‌ಗಳೋ ಬಂದರೆ ನೀವು ಮತ್ತೆ ಅವರ ದರ್ಶನ ಪಡೆಯಬಹುದು. ಸದ್ಯಕ್ಕೆ ಈ ಗ್ಯಾಲರಿಯಲ್ಲಿ ಫೋಟೋ ನೋಡಿ ಖುಷಿ ಪಡಿ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

