- Home
- Entertainment
- Cine World
- Baahubali Movie: ಬಾಹುಬಲಿ ನನಗೆ ಸಿನಿಮಾ ಆಗಿರಲಿಲ್ಲ; ಯುದ್ಧ ಆಗಿತ್ತು: ನಟ ಪ್ರಭಾಸ್!
Baahubali Movie: ಬಾಹುಬಲಿ ನನಗೆ ಸಿನಿಮಾ ಆಗಿರಲಿಲ್ಲ; ಯುದ್ಧ ಆಗಿತ್ತು: ನಟ ಪ್ರಭಾಸ್!
Prabhas Baahubali Movie: ಭಾರತೀಯ ಚಿತ್ರರಂಗದ ಇತಿಹಾಸವನ್ನೇ ಬದಲಾಯಿಸಿದ 'ಬಾಹುಬಲಿ' ಸಿನಿಮಾ ಸೃಷ್ಟಿಸಿದ ಅಲೆ ಹಾಗೂ ಅದರ ಹಿಂದಿನ ಕಠಿಣ ಪರಿಶ್ರಮ ಯಾರೂ ಮರೆಯಲು ಸಾಧ್ಯವಿಲ್ಲ. ಇದೀಗ '#BaahubaliTheTorchbearer' ಕಾರ್ಯಕ್ರಮದಲ್ಲಿ ಪ್ರಭಾಸ್ ಬಗ್ಗೆ ಅತ್ಯಂತ ಭಾವುಕರಾಗಿ ಮಾತನಾಡಿದ್ದಾರೆ.

ಅದೊಂದು ಭೀಕರ ಯುದ್ಧ
ಬಾಹುಬಲಿ ಸಿನಿಮಾದ ದಿನಗಳನ್ನು ಮೆಲುಕು ಹಾಕಿದ ಅವರು, ಆ ಇಡೀ ಪ್ರಯಾಣ ತಮಗೆ ಒಂದು ಭೀಕರ ಯುದ್ಧದಂತೆ ಭಾಸವಾಗಿತ್ತು ಎಂದು ನೆನಪಿಸಿಕೊಂಡಿದ್ದಾರೆ.
ಚಿತ್ರ ಬಿಡುಗಡೆಯಾದ ಮೊದಲ ದಿನ ಎದುರಾದ ನಕಾರಾತ್ಮಕ ಪ್ರತಿಕ್ರಿಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ ಪ್ರಭಾಸ್, ಅಂದು ಚಿತ್ರದ ನಿರ್ಮಾಪಕರು ತಮ್ಮ ಇಡೀ ಜೀವನವನ್ನೇ ಪಣಕ್ಕಿಟ್ಟಿದ್ದರು ಎಂದು ಹೇಳಿದ್ದಾರೆ. "ಒಂದೊಮ್ಮೆ ಅಂದು ಏನಾದರೂ ಹೆಚ್ಚುಕಮ್ಮಿ ಆಗಿ ಸಿನಿಮಾ ಸೋತಿದ್ದರೆ, ನಿರ್ಮಾಪಕರಾದ ಶೋಬು ಯರ್ಲಗಡ್ಡ, ಪ್ರಸಾದ್ ದೇವಿನೇನಿ ಮತ್ತು ನಿರ್ದೇಶಕ ರಾಜಮೌಳಿ ಬೀದಿಗೆ ಬರಬೇಕಾಗುತ್ತಿತ್ತು. ಅವರ ಇಡೀ ಜೀವನವೇ ತಲೆಕೆಳಗಾಗುತ್ತಿತ್ತು" ಎಂದು ಹೇಳಿದ್ದಾರೆ.
ಜಪಾನ್ ನಮಗೆ ಎರಡನೇ ಮನೆ
ಇದೇ ಸಂದರ್ಭದಲ್ಲಿ ಜಪಾನ್ ದೇಶದ ಪ್ರೇಕ್ಷಕರು ತಮ್ಮ ಮೇಲೆ ತೋರಿಸಿದ ಅತಿ ಮೀರಿದ ಪ್ರೀತಿಯನ್ನು ಪ್ರಭಾಸ್ ಕೊಂಡಾಡಿದ್ದಾರೆ. ಜಪಾನ್ ಪ್ರೇಕ್ಷಕರು ಅತ್ಯಂತ ಸಿಹಿಯಾದವರು ಮತ್ತು ಹೃದಯವಂತರು ಎಂದು ಬಣ್ಣಿಸಿದ ಅವರು, ಅಲ್ಲಿನ ಪ್ರೇಕ್ಷಕರು ಬಾಹುಬಲಿ ಚಿತ್ರವನ್ನು ಬರಮಾಡಿಕೊಂಡ ರೀತಿ ಮತ್ತು ತಮಗೆ ನೀಡಿದ ಅದ್ಭುತ ಗೌರವದಿಂದಾಗಿ, ಜಪಾನ್ ದೇಶವು ಈಗ ತಮಗೆ ತಮ್ಮ ಎರಡನೇ ಮನೆಯಂತೆ ಭಾಸವಾಗುತ್ತದೆ ಎಂದು ಪ್ರೀತಿ ವ್ಯಕ್ತಪಡಿಸಿದ್ದಾರೆ.
ಬಾಹುಬಲಿ ಮುಗಿದ್ಮೇಲೆ ಬೇಜಾರಾಯ್ತು
ಕೊನೆಯದಾಗಿ, ಬಾಹುಬಲಿ ಚಿತ್ರದ ಜಾಗತಿಕ ಮಟ್ಟದ ಬೃಹತ್ ಯಶಸ್ಸಿನ ನಂತರ ತಾವು ಅನುಭವಿಸಿದ ಮಾನಸಿಕ ಒತ್ತಡದ ಬಗ್ಗೆಯೂ ಪ್ರಭಾಸ್ ಮನಬಿಚ್ಚಿ ಮಾತನಾಡಿದ್ದಾರೆ. ಅಂತಹ ಹಿಮಾಲಯದಂಥ ಯಶಸ್ಸಿನ ಬಳಿಕ ಮುಂದೇನು ಮಾಡಬೇಕು, ಯಾವ ರೀತಿಯ ಕಥೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲ ಮೂಡಿತ್ತು ಎಂದು ಒಪ್ಪಿಕೊಂಡಿದ್ದಾರೆ. ಬಾಹುಬಲಿ ಮುಗಿದ ನಂತರದ ದಿನಗಳು ತಮಗೆ ವಿಪರೀತ ಒತ್ತಡ ಮತ್ತು ಅನಿಶ್ಚಿತತೆಯಿಂದ ಕೂಡಿದ್ದವು ಎಂದು ಪ್ರಭಾಸ್ ತಮ್ಮ ಹಳೆಯ ದಿನಗಳ ಮಾನಸಿಕ ಸ್ಥಿತಿಯನ್ನು ಹಂಚಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

