ಮಹೇಶ್ ಬಾಬು ಅವರನ್ನು ಮದುವೆಯಾಗಬೇಕೆಂಬ ಆಸೆ ಇತ್ತು ಎಂದು ನಟಿ ಚಾರ್ಮಿ ಕೌರ್ ಹೇಳಿದ ಹಳೆಯ ಕಾಮೆಂಟ್ ಮತ್ತೆ ವೈರಲ್ ಆಗಿದೆ. ನಮ್ರತಾ ಬಗ್ಗೆ ಹೇಳಿದ ತಮಾಷೆಯ ಮಾತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಸೂಪರ್‌ಸ್ಟಾರ್ ಮಹೇಶ್ ಬಾಬು ಅವರನ್ನು ಮದುವೆಯಾಗುವ ಆಸೆ ನನಗಿದೆ, ಆದರೆ ನಮ್ರತಾ ಅವರನ್ನು ನೋಡಿದರೆ ಭಯವಾಗುತ್ತೆ ಅಂದಿದ್ದರು ಖ್ಯಾತ ನಟಿಯೊಬ್ಬರು. ಏನಾದ್ರೂ ಹೆಚ್ಚುಕಡಿಮೆಯಾದ್ರೆ ನಮ್ರತಾ ತನಗೆ ಸಮಾಧಿ ಕಟ್ಟುತ್ತಾರೆ ಎಂದು ಹೆದರಿದ್ದ ಆ ನಟಿ ಯಾರು ಗೊತ್ತಾ? ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. 50 ವರ್ಷವಾದರೂ ಅವರ ಗ್ಲಾಮರ್ ಸ್ವಲ್ಪವೂ ಕಡಿಮೆಯಾಗಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಾಲಿವುಡ್ ನಟಿಯರು ಸಹ ಟಾಲಿವುಡ್‌ನಲ್ಲಿ ನಿಮ್ಮ ನೆಚ್ಚಿನ ನಟ ಯಾರು ಎಂದು ಕೇಳಿದರೆ ತಕ್ಷಣ ಮಹೇಶ್ ಬಾಬು ಹೆಸರನ್ನೇ ಹೇಳುತ್ತಾರೆ. ಆದರೆ ಆ ಅದೃಷ್ಟದ ಅವಕಾಶ ಸಿಕ್ಕಿದ್ದು ನಮ್ರತಾಗೆ. ಮಹೇಶ್ ಬಾಬು ಜೊತೆ ಒಂದೇ ಸಿನಿಮಾ ಮಾಡಿದ್ದ ನಮ್ರತಾ, ಅವರನ್ನು ಮದುವೆಯಾಗಿ ಸುಖಿ ಜೀವನ ನಡೆಸುತ್ತಿದ್ದಾರೆ. ಈ ಜೋಡಿ ಭಾರತದಲ್ಲೇ ನಂಬರ್ ಒನ್ ಕಪಲ್ ಎನಿಸಿಕೊಂಡಿದೆ. ಮಹೇಶ್ ಬಾಬು ಅವರನ್ನು ಮದುವೆಯಾಗಬೇಕೆಂಬ ಆಸೆ ನನಗಿತ್ತು, ಆದರೆ ನಮ್ರತಾಗೆ ಹೆದರಿಕೆ ಎಂದು ಹೇಳಿಕೊಂಡಿದ್ದು ನಟಿ ಚಾರ್ಮಿ ಕೌರ್.

ಹಿಂದೊಮ್ಮೆ ನಡೆದ ಕಾರ್ಯಕ್ರಮವೊಂದರಲ್ಲಿ ಚಾರ್ಮಿಗೆ ಈ ಪ್ರಶ್ನೆ ಎದುರಾಗಿತ್ತು. ಮಹೇಶ್ ಬಾಬು ಅವರನ್ನು ಸೂಪರ್‌ಸ್ಟಾರ್ ಮಾಡಿದವರಲ್ಲಿ ನಿರ್ದೇಶಕ ಪುರಿ ಜಗನ್ನಾಥ್ ಪಾತ್ರವೂ ದೊಡ್ಡದಿದೆ. ಅವರ 'ಪೋಕಿರಿ' ಸಿನಿಮಾ ಇಂಡಸ್ಟ್ರಿ ಹಿಟ್ ಆಗುವ ಮೂಲಕ ಮಹೇಶ್ ಬಾಬು ಮಾಸ್ ಹೀರೋ ಆದರು. ನಂತರ 'ಬಿಝಿನೆಸ್‌ಮನ್' ಚಿತ್ರದ ಮೂಲಕ ಮಹೇಶ್ ಇಮೇಜ್ ಅನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದರು ಪುರಿ. ಈ 'ಬಿಝಿನೆಸ್‌ಮನ್' ಸಿನಿಮಾದ ಕಾರ್ಯಕ್ರಮದಲ್ಲಿ ಸೂಪರ್‌ಸ್ಟಾರ್ ಮಹೇಶ್, ಅವರ ಪತ್ನಿ ನಮ್ರತಾ, ನಿರ್ದೇಶಕ ಪುರಿ ಜಗನ್ನಾಥ್ ಜೊತೆ ಚಾರ್ಮಿ ಕೌರ್ ಕೂಡ ಭಾಗವಹಿಸಿದ್ದರು.

ಆಗ ಪುರಿ ಜಗನ್ನಾಥ್ ತಮಾಷೆಗಾಗಿ ಚಾರ್ಮಿಗೆ, 'ಈಗಲೇ ಮಹೇಶ್ ಬಾಬು ಅವರನ್ನು ಮದುವೆಯಾಗುವ ಅವಕಾಶ ಸಿಕ್ಕರೆ ಏನು ಮಾಡುತ್ತೀಯಾ?' ಎಂದು ಕೇಳಿದರು. ಪುರಿ ಪ್ರಶ್ನೆಗೆ ಚಾರ್ಮಿ ನಗುತ್ತಲೇ, 'ಮಹೇಶ್ ಬಾಬು ಅವರನ್ನು ಮದುವೆಯಾಗಲು ಯಾರಿಗೆ ತಾನೇ ಇಷ್ಟವಿರಲ್ಲ? ಆದರೆ ಆ ಯೋಚನೆ ನನ್ನ ಮನಸ್ಸಲ್ಲಿದೆ ಎಂದು ಗೊತ್ತಾದರೆ ಸಾಕು, ನಮ್ರತಾ ನನ್ನನ್ನು ಕೊಂದು ಸಮಾಧಿ ಮಾಡುತ್ತಾರೆ.

ಪ್ರಯತ್ನ ಬಿಟ್ಟಿಲ್ಲ

ಆಗ ನೀವು ಕೇಳಬೇಕಾದ ಪ್ರಶ್ನೆ ಏನೆಂದರೆ, ನನ್ನ ಸಮಾಧಿಯನ್ನು ನಮ್ರತಾ ಹೈದರಾಬಾದ್‌ನಲ್ಲಿ ಕಟ್ಟಿಸುತ್ತಾರಾ ಅಥವಾ ಮುಂಬೈನಲ್ಲಿ ಕಟ್ಟಿಸುತ್ತಾರಾ ಎಂದು' ಉತ್ತರಿಸಿದರು. ಚಾರ್ಮಿ ಕಾಮೆಂಟ್‌ಗೆ ಅಲ್ಲಿದ್ದವರೆಲ್ಲಾ ನಕ್ಕರು. ನಾಯಕಿಯಾಗಿ ಕೆರಿಯರ್ ಮುಗಿದ ನಂತರ ಚಾರ್ಮಿ ಕೌರ್ ನಿರ್ಮಾಪಕಿಯಾದರು. ನಿರ್ದೇಶಕ ಪುರಿ ಜಗನ್ನಾಥ್ ಜೊತೆ ಸೇರಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಇವರ ಕಾಂಬಿನೇಷನ್‌ನಲ್ಲಿ ಬಂದ 'ಲೈಗರ್' ಸಿನಿಮಾ ದೊಡ್ಡ ಡಿಸಾಸ್ಟರ್ ಆಗಿತ್ತು. ಆದರೂ ಚಾರ್ಮಿ ಪ್ರಯತ್ನ ಬಿಟ್ಟಿಲ್ಲ. ಸದ್ಯ ಪುರಿ ಜೊತೆ ಸೇರಿ ತಮಿಳು ನಟ ವಿಜಯ್ ಸೇತುಪತಿ ಜೊತೆ ಸಿನಿಮಾ ಮಾಡುತ್ತಿದ್ದಾರೆ.