- Home
- Entertainment
- Cine World
- Thalapathy Vijay: ತಪ್ಪಾದ ಮುಹೂರ್ತದಲ್ಲಿ ದಳಪತಿ ವಿಜಯ್ ಸಿಎಂ; 5 ವರ್ಷ ಕಂಪ್ಲೀಟ್ ಮಾಡಲ್ವಾ? ಜ್ಯೋತಿಷಿ ಏನಂದ್ರು?
Thalapathy Vijay: ತಪ್ಪಾದ ಮುಹೂರ್ತದಲ್ಲಿ ದಳಪತಿ ವಿಜಯ್ ಸಿಎಂ; 5 ವರ್ಷ ಕಂಪ್ಲೀಟ್ ಮಾಡಲ್ವಾ? ಜ್ಯೋತಿಷಿ ಏನಂದ್ರು?
Thalapathy Vijay News: ಚೆನ್ನೈನ ನೆಹರು ಸ್ಟೇಡಿಯಂನಲ್ಲಿ ದಳಪತಿ ವಿಜಯ್ ಅವರು ಮೇ 10ರಂದು ಬೆಳಿಗ್ಗೆ 10 ಗಂಟೆಗೆ ತಮಿಳುನಾಡಿನ ಹೊಸ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ನಿಜಕ್ಕೂ ಈ ಸಮಯ ಹೇಗಿದೆ? ಐದು ವರ್ಷಗಳ ಕಾಲ ಇವರು ಅಧಿಕಾರ ನಡೆಸುತ್ತಾರಾ? ಎಂಬ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಅಧಿಕಾರದಲ್ಲಿ ಸಮಸ್ಯೆ ಬರುತ್ತದೆ!
“ಆರರಿಂದ ಒಂದು ವರ್ಷದೊಳಗಡೆ ತಮಿಳುನಾಡಿನಲ್ಲಿ ಮತ್ತೆ ಚುನಾವಣೆ ಆಗುವುದು. ದಳಪತಿ ವಿಜಯ್ ಅವರಿಗೆ ಅಧಿಕಾರದಲ್ಲಿ ನಿಶ್ಚಿತತೆ ಇರೋದಿಲ್ಲ, ಒಂದಿಷ್ಟು ಸಂಕಷ್ಟಗಳನ್ನು ಎದುರಿಸುತ್ತಾರೆ.

ಒಳ್ಳೆಯ ಸಮಯ!
ಮೇ 10 ಮಧ್ಯಾಹ್ನ ಪ್ರಮಾಣವಚನ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ಜ್ಯೋತಿಷಿ ಹೇಳಿದ್ದಕ್ಕೆ, ಬೆಳಿಗ್ಗೆ 10 ಗಂಟೆಗೆ ಪ್ರಮಾಣ ವಚನ ಕಾರ್ಯಕ್ರಮ ಮಾಡಲಾಗಿದೆ. ಬೆಳಿಗ್ಗೆ 10.45 ವರೆಗೆ ಒಳ್ಳೆಯ ಸಮಯ ಎನ್ನಲಾಗಿದೆ.
ಪ್ರಕಾಶ್ ಅಮ್ಮಣ್ಣಾಯ ಏನಂದ್ರು?
ಲಗ್ನಾಧಿ ಪತಿ ಅಸ್ತ. ಸಾಲದ್ದಕ್ಕೆ ರಾಜ ಪೀಠದಲ್ಲಿ( ಏಕಾದಶ). ಏಕಾದಶಕ್ಕೆ ಗುರು ದೃಷ್ಟಿಯೂ ಇಲ್ಲ. ಬಾಧಕಾಧಿಪತಿ ಗುರು ಲಗ್ನದಲ್ಲೆ ಇರೋದು. ಇದೂ ಸಾಲದ್ದಕ್ಕೆ ಷಷ್ಠಾಧಿಪತಿ ( ಋಣ,ರೋಗ) ಕುಜನ ವೀಕ್ಷಣೆ ಬಾಧಕಾಧಿಪತಿಗೆ. ಇಂತಹ ಲಗ್ನದಲ್ಲಿ ತಮಿಳರರಸನ ಪೀಠಾರೋಹಣ. ಏನಾಗುತ್ತೋ ನೋಡಬೇಕಿದೆ. ಯಾವುದೇ ಮಹಾ ಯೋಗಗಳಿಲ್ಲ ಇದರಲ್ಲಿ. ದೋಷ ಪೂರಿತವೇ ಆಗಿದೆ. ಅವರಿಗೆಲ್ಲ ಚರ್ಚ್ ಫಾದರ್ ತೀರ್ಥ ಹಾಕಿ ವೈನ್ ಕುಡಿಸಿದರೆ ಮುಗಿಯಿತು ಬಿಡಿ. ಹೆಚ್ಚು ಕಡಿಮೆಯಾದರೆ RSS, BJP ಯನ್ನು ಹಳಿದರೆ ಮುಗಿಯಿತು ಬಿಡಿ ಎಂದು ಪ್ರಕಾಶ್ ಅಮ್ಮಣ್ಣಾಯ ಹೇಳಿದ್ದಾರೆ.
ಮೈತ್ರಿ ಮೇಲೆ ಸಿಎಂ
ಮೈತ್ರಿ ಮೇಲೆ ವಿಜಯ್ ಸಿಎಂ ಆಗಿದ್ದಾರೆ. ಬಹುಮತ ಸಿಕ್ಕರೂ ಕೂಡ, ಸರ್ಕಾರ ರಚಿಸುವಷ್ಟು ಸೀಟ್ ಇರಲಿಲ್ಲ. ಹೀಗಾಗಿ ಬೇರೆ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

