MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ದಳಪತಿ ವಿಜಯ್‌ಗೆ ಸಿನಿಮಾದಿಂದ ನೂರಾರು ಕೋಟಿ ಸಂಭಾವನೆ; ಸಿಎಂ ಆದಮೇಲೆ ಸಿಗುವ ಸಂಬಳವೆಷ್ಟು? ಒಟ್ಟು ಆಸ್ತಿ ವಿವರ ನೋಡಿ!

ದಳಪತಿ ವಿಜಯ್‌ಗೆ ಸಿನಿಮಾದಿಂದ ನೂರಾರು ಕೋಟಿ ಸಂಭಾವನೆ; ಸಿಎಂ ಆದಮೇಲೆ ಸಿಗುವ ಸಂಬಳವೆಷ್ಟು? ಒಟ್ಟು ಆಸ್ತಿ ವಿವರ ನೋಡಿ!

ನಟ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದು, ಅವರ 624 ಕೋಟಿ ರೂಪಾಯಿ ಮೌಲ್ಯದ ಒಟ್ಟು ಆಸ್ತಿಯ ವಿವರಗಳು ಬಹಿರಂಗಗೊಂಡಿವೆ. ಮುಖ್ಯಮಂತ್ರಿಯಾಗಿ ಅವರಿಗೆ ಸಿಗುವ ಸಂಬಳ, ಸೌಲಭ್ಯಗಳು ಮತ್ತು ಅವರ ಆಸ್ತಿಪಾಸ್ತಿಯ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

2 Min read
Author : Sathish Kumar KH
Published : May 10 2026, 01:37 PM IST
Share this Photo Gallery
  • FB
  • TW
  • Linkdin
  • Whatsapp
18
ಸಿಎಂ ವಿಜಯ್ ಆಸ್ತಿ ಎಷ್ಟಿದೆ?
Image Credit : ChatGPT AI

ಸಿಎಂ ವಿಜಯ್ ಆಸ್ತಿ ಎಷ್ಟಿದೆ?

ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ಹಾಗೂ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಅಧ್ಯಕ್ಷ ಸಿ. ಜೋಸೆಫ್ ವಿಜಯ್ ಅವರು ಇಂದು ಬೆಳಗ್ಗೆ 10 ಗಂಟೆಗೆ ಚೆನ್ನೈನ ನೆಹರೂ ಸ್ಟೇಡಿಯಂನಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಐತಿಹಾಸಿಕ ಕ್ಷಣದ ಬೆನ್ನಲ್ಲೇ, ಸೋಷಿಯಲ್ ಮೀಡಿಯಾದಲ್ಲಿ ಈಗ ವಿಜಯ್ ಅವರಿಗೆ ಸಿಗುವ ಸಂಬಳ ಮತ್ತು ಅವರ ಒಟ್ಟು ಆಸ್ತಿಯ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಶುರುವಾಗಿದೆ.

Add Asianetnews Kannada as a Preferred SourcegooglePreferred
28
ಮುಖ್ಯಮಂತ್ರಿಯಾಗಿ ವಿಜಯ್‌ಗೆ ಸಿಗುವ ಸಂಬಳ ಮತ್ತು ಸೌಲಭ್ಯಗಳು
Image Credit : Asianet News

ಮುಖ್ಯಮಂತ್ರಿಯಾಗಿ ವಿಜಯ್‌ಗೆ ಸಿಗುವ ಸಂಬಳ ಮತ್ತು ಸೌಲಭ್ಯಗಳು

ವರದಿಗಳ ಪ್ರಕಾರ, ತಮಿಳುನಾಡು ಮುಖ್ಯಮಂತ್ರಿಗೆ ತಿಂಗಳಿಗೆ ಸುಮಾರು 2.85 ಲಕ್ಷ ರೂಪಾಯಿ ಸಂಬಳ ಸಿಗುತ್ತದೆ. ಇದರಲ್ಲಿ ಶಾಸಕರಾಗಿ ಸಿಗುವ ಸಂಬಳ ಮತ್ತು ಬೇರೆ ಬೇರೆ ಭತ್ಯೆಗಳೂ ಸೇರಿವೆ. ಈ ಲೆಕ್ಕಾಚಾರದ ಪ್ರಕಾರ, ಮುಖ್ಯಮಂತ್ರಿಯ ವಾರ್ಷಿಕ ಆದಾಯ ಸುಮಾರು 34 ಲಕ್ಷ ರೂಪಾಯಿ ಆಗಲಿದೆ.

Related Articles

Related image1
ದಳಪತಿ ವಿಜಯ್ ಸಿನಿಮೀಯ ಸ್ಟೈಲ್‌ನಲ್ಲಿ ಪ್ರಮಾಣವಚನ ಸ್ವೀಕಾರ; ಆ ಒಂದು ಡೈಲಾಗ್‌ಗೆ ಚಪ್ಪಾಳೆ, ಶಿಳ್ಳೆ ಹೊಡೆದ ಜನ!
Related image2
Vijay: ಕೊನೆಗೂ ತಮಿಳುನಾಡು ಮುಖ್ಯಮಂತ್ರಿ ಗದ್ದುಗೆ ಏರಿದ ನಟ ವಿಜಯ್: ಪ್ರಮಾಣವಚನ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಮಿಂಚಿಂಗ್!
38
ಸರ್ಕಾರದಿಂದ ಸಿಗುವ ಇತರೆ ಸೌಲಭ್ಯಗಳು
Image Credit : Asianet News

ಸರ್ಕಾರದಿಂದ ಸಿಗುವ ಇತರೆ ಸೌಲಭ್ಯಗಳು

ಬರಿ ಸಂಬಳ ಮಾತ್ರವಲ್ಲದೆ, ಮುಖ್ಯಮಂತ್ರಿಯಾದವರಿಗೆ ಸರ್ಕಾರಿ ನಿವಾಸ, ಪ್ರತ್ಯೇಕ ಸಿಬ್ಬಂದಿ ವರ್ಗ, ಉನ್ನತ ಮಟ್ಟದ ಭದ್ರತಾ ವ್ಯವಸ್ಥೆ, ಅಧಿಕೃತ ಪ್ರಯಾಣದ ಸೌಲಭ್ಯ, ವೈದ್ಯಕೀಯ ಸೌಲಭ್ಯಗಳು ಮತ್ತು ಕಮ್ಯೂನಿಕೇಷನ್ ಸೌಲಭ್ಯಗಳೂ ಸಿಗುತ್ತವೆ. ವಿಶೇಷವೆಂದರೆ, ಹುದ್ದೆಯಿಂದ ನಿವೃತ್ತರಾದ ಮೇಲೂ ವಿಜಯ್‌ಗೆ ಕೆಲವು ಪ್ರಮುಖ ಸೌಲಭ್ಯಗಳು ಮುಂದುವರಿಯಲಿವೆ.

48
ದಳಪತಿ ಬಳಿ ಇದೆ 624 ಕೋಟಿ ರೂಪಾಯಿ ಆಸ್ತಿ!
Image Credit : X

ದಳಪತಿ ಬಳಿ ಇದೆ 624 ಕೋಟಿ ರೂಪಾಯಿ ಆಸ್ತಿ!

ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ, ಚುನಾವಣಾ ಆಯೋಗಕ್ಕೆ ಕೊಟ್ಟ 27 ಪುಟಗಳ ಅಫಿಡವಿಟ್‌ನಲ್ಲಿ ವಿಜಯ್ ತಮ್ಮ ಆಸ್ತಿ ವಿವರಗಳನ್ನು ಅಧಿಕೃತವಾಗಿ ಘೋಷಿಸಿದ್ದರು. ವರದಿಗಳ ಪ್ರಕಾರ, 'ದಳಪತಿ' ವಿಜಯ್ ಅವರ ಒಟ್ಟು ಆಸ್ತಿ 624 ಕೋಟಿ ರೂಪಾಯಿ. ಇದರೊಂದಿಗೆ ವಿಜಯ್ ದೇಶದ ಶ್ರೀಮಂತ ರಾಜಕಾರಣಿಗಳ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.

58
ಇಲ್ಲಿದೆ ಆಸ್ತಿ ವಿವರ
Image Credit : AI

ಇಲ್ಲಿದೆ ಆಸ್ತಿ ವಿವರ

ವಿಜಯ್ ಅವರ ಆಸ್ತಿಯಲ್ಲಿ ಬ್ಯಾಂಕ್ ಡೆಪಾಸಿಟ್‌ಗಳಿಂದ ಹಿಡಿದು ಐಷಾರಾಮಿ ಕಾರುಗಳವರೆಗೆ ಎಲ್ಲವೂ ಅಡಕವಾಗಿದೆ:

ಬ್ಯಾಂಕ್ ಬ್ಯಾಲೆನ್ಸ್: ಚೆನ್ನೈನ ಐಒಬಿ ಶಾಲಿಗ್ರಾಮಂ ಬ್ರಾಂಚ್‌ನ ಒಂದು ಸೇವಿಂಗ್ಸ್ ಅಕೌಂಟ್‌ನಲ್ಲೇ ಬರೋಬ್ಬರಿ 213.36 ಕೋಟಿ ರೂಪಾಯಿ ಬ್ಯಾಲೆನ್ಸ್ ಇದೆ.

ಫಿಕ್ಸೆಡ್ ಡೆಪಾಸಿಟ್: ಬೇರೆ ನಾಲ್ಕು ಬ್ಯಾಂಕ್‌ಗಳಲ್ಲಿ ಒಟ್ಟು 100 ಕೋಟಿ ರೂಪಾಯಿ ಫಿಕ್ಸೆಡ್ ಡೆಪಾಸಿಟ್ ಇದೆ.

ಸ್ಥಿರ ಆಸ್ತಿ: ಸುಮಾರು 220 ಕೋಟಿ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಗಳು ಅವರ ಹೆಸರಿನಲ್ಲಿವೆ.

68
ಐಷಾರಾಮಿ ಕಾರುಗಳ ಕಲೆಕ್ಷನ್
Image Credit : ANI

ಐಷಾರಾಮಿ ಕಾರುಗಳ ಕಲೆಕ್ಷನ್

ಐಷಾರಾಮಿ ಕಾರುಗಳು: ಸುಮಾರು 13.52 ಕೋಟಿ ರೂಪಾಯಿ ಮೌಲ್ಯದ ಕಾರುಗಳ ಕಲೆಕ್ಷನ್ ವಿಜಯ್ ಬಳಿಯಿದೆ.

ಚಿನ್ನ ಮತ್ತು ವಜ್ರ: ವಿಜಯ್ ಹೆಸರಲ್ಲಿ 1.20 ಕೋಟಿ ರೂಪಾಯಿ ಬೆಲೆಬಾಳುವ 883 ಗ್ರಾಂ ಚಿನ್ನವಿದ್ದರೆ, ಅವರ ಪತ್ನಿ ಸಂಗೀತಾ ಹೆಸರಲ್ಲಿ 4.07 ಕೋಟಿ ರೂಪಾಯಿ ಮೌಲ್ಯದ ಚಿನ್ನ ಹಾಗೂ ಒಂದು ಕೋಟಿ ರೂಪಾಯಿ ಮೌಲ್ಯದ ವಜ್ರಗಳಿವೆ.

ಸಾಲದ ವಿವರ: ವಿವಿಧ ವ್ಯಕ್ತಿಗಳು ಮತ್ತು ಟ್ರಸ್ಟ್‌ಗಳಿಗೆ ವಿಜಯ್ ಅವರು 75.5 ಕೋಟಿ ರೂಪಾಯಿ ಸಾಲ ನೀಡಿದ್ದಾರೆ.

78
ಹೂಡಿಕೆಯಲ್ಲಿ ರಿಸ್ಕ್ ಇಲ್ಲ!
Image Credit : X

ಹೂಡಿಕೆಯಲ್ಲಿ ರಿಸ್ಕ್ ಇಲ್ಲ!

ಸಿನಿಮಾ ಮತ್ತು ರಾಜಕೀಯದಲ್ಲಿ ದೊಡ್ಡ ರಿಸ್ಕ್ ತೆಗೆದುಕೊಂಡರೂ, ಶೇರು ಮಾರುಕಟ್ಟೆಯಲ್ಲಿ ವಿಜಯ್ ದೊಡ್ಡ ಮಟ್ಟದ ಹೂಡಿಕೆ ಮಾಡಿಲ್ಲ ಎಂಬುದು ಕುತೂಹಲಕಾರಿ ಸಂಗತಿ. ಕೇವಲ 19.37 ಲಕ್ಷ ರೂಪಾಯಿ ಮಾತ್ರ ಶೇರುಗಳಲ್ಲಿದೆ. ಮ್ಯೂಚುವಲ್ ಫಂಡ್ ಅಥವಾ ಬಾಂಡ್‌ಗಳಲ್ಲಿ ಅವರು ಯಾವುದೇ ಹೂಡಿಕೆ ಮಾಡಿಲ್ಲ. 2024-25ರ ಆರ್ಥಿಕ ವರ್ಷವೊಂದರಲ್ಲೇ ವಿಜಯ್ ಅವರ ಆದಾಯ 184.53 ಕೋಟಿ ರೂಪಾಯಿ ಆಗಿದೆ.

88
ವರ್ಷಕ್ಕೆ 180 ಕೋಟಿ ರೂಪಾಯಿ
Image Credit : Asianet News

ವರ್ಷಕ್ಕೆ 180 ಕೋಟಿ ರೂಪಾಯಿ

ಸಿನಿಮಾಗಳಲ್ಲಿ ನಟಿಸಿ ವರ್ಷಕ್ಕೆ 180 ಕೋಟಿ ರೂಪಾಯಿಗಿಂತ ಹೆಚ್ಚು ಸಂಪಾದಿಸುತ್ತಿದ್ದ ವಿಜಯ್‌ಗೆ, ಮುಖ್ಯಮಂತ್ರಿಯಾದ ಮೇಲೆ ಸಿಗುವುದು ವರ್ಷಕ್ಕೆ ಕೇವಲ 34 ಲಕ್ಷ ರೂಪಾಯಿ ಮಾತ್ರ. ಆದರೆ, ಹಣಕಾಸಿನ ಆದಾಯಕ್ಕಿಂತ ರಾಜ್ಯದ ಹಿತದೃಷ್ಟಿಯಿಂದ ದೊಡ್ಡ ಜವಾಬ್ದಾರಿ ಈಗ ಅವರ ಮುಂದಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ದಳಪತಿ ವಿಜಯ್
ತಮಿಳುನಾಡು
ನಿವ್ವಳ ಮೌಲ್ಯ

Latest Videos
Recommended Stories
Recommended image1
ದಳಪತಿ ವಿಜಯ್ ಸಿನಿಮೀಯ ಸ್ಟೈಲ್‌ನಲ್ಲಿ ಪ್ರಮಾಣವಚನ ಸ್ವೀಕಾರ; ಆ ಒಂದು ಡೈಲಾಗ್‌ಗೆ ಚಪ್ಪಾಳೆ, ಶಿಳ್ಳೆ ಹೊಡೆದ ಜನ!
Recommended image2
Vijay: ಕೊನೆಗೂ ತಮಿಳುನಾಡು ಮುಖ್ಯಮಂತ್ರಿ ಗದ್ದುಗೆ ಏರಿದ ನಟ ವಿಜಯ್: ಪ್ರಮಾಣವಚನ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಮಿಂಚಿಂಗ್!
Recommended image3
TamilNadu New CM: ಪ್ರಮಾಣವಚನ ಸ್ವೀಕರಿಸಿ ಎರಡು ಪ್ರಮುಖ ಘೋಷಣೆ ಮಾಡಿದ ಸಿಎಂ ವಿಜಯ್
Related Stories
Recommended image1
ದಳಪತಿ ವಿಜಯ್ ಸಿನಿಮೀಯ ಸ್ಟೈಲ್‌ನಲ್ಲಿ ಪ್ರಮಾಣವಚನ ಸ್ವೀಕಾರ; ಆ ಒಂದು ಡೈಲಾಗ್‌ಗೆ ಚಪ್ಪಾಳೆ, ಶಿಳ್ಳೆ ಹೊಡೆದ ಜನ!
Recommended image2
Vijay: ಕೊನೆಗೂ ತಮಿಳುನಾಡು ಮುಖ್ಯಮಂತ್ರಿ ಗದ್ದುಗೆ ಏರಿದ ನಟ ವಿಜಯ್: ಪ್ರಮಾಣವಚನ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಮಿಂಚಿಂಗ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved