- Home
- Entertainment
- Cine World
- ನಟಿ ಸುಕನ್ಯಾಗೆ 10 ಲಕ್ಷ ರೂ ಪರಿಹಾರ ನೀಡಿ, ಖಾಸಗಿ ಟಿವಿ ಚಾನೆಲ್‌ಗೆ ಹೈಕೋರ್ಟ್ ಆದೇಶ ನೀಡಿದ್ದೇಕೆ?
ನಟಿ ಸುಕನ್ಯಾಗೆ 10 ಲಕ್ಷ ರೂ ಪರಿಹಾರ ನೀಡಿ, ಖಾಸಗಿ ಟಿವಿ ಚಾನೆಲ್‌ಗೆ ಹೈಕೋರ್ಟ್ ಆದೇಶ ನೀಡಿದ್ದೇಕೆ?
ನಟಿ ಸುಕನ್ಯ ಘನತೆಕೆ ಧಕ್ಕೆ ತಂದಿರುವ ಕಾರಣ ಖಾಸಗಿ ಚಾನೆಲ್ ಪರಿಹಾರ ರೂಪವಾಗಿ 10 ಲಕ್ಷ ರೂ ನೀಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಇದಕ್ಕೆ ಕಾರಣ ಕಾಡುಗಳ್ಳ ವೀರಪ್ಪನ್ ಸಂದರ್ಶನ, ಏನಿದು ಘಟನೆ?

ನಟಿ ಸುಕನ್ಯಾಗೆ 10 ಲಕ್ಷ ರೂ ಪರಿಹಾರ
ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಯಾಗಿ ಭಾರಿ ಜನಪ್ರಿಯತೆ ಪಡೆದಿದ್ದ ನಟಿ ಸುಕನ್ಯಾ ಪರವಾಗಿ ಇದೀಗ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಖಾಸಗಿ ಚಾನೆಲ್ ಪರಿಹಾರ ರೂಪವಾಗಿ 10 ಲಕ್ಷ ರೂಪಾಯಿ ನೀಡಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ. ಇದಕ್ಕೆ ಕಾರಣವಾಗಿದ್ದು ಖಾಸಗಿ ಟಿವಿ ಚಾನೆಲ್‌ನಲ್ಲಿ ಪ್ರಸಾರವಾದ ಕಾಡುಗಳ್ಳ ವೀರಪ್ಪನ್ ಸಂದರ್ಶನ.
ಏನಿದು ಘಟನೆ?
ನಟಿ ಸುಕನ್ಯ ಅತ್ಯಂತ ಜನಪ್ರಿಯ ನಟಿಯಾಗಿ ದಕ್ಷಿಣ ಭಾರತದಲ್ಲಿ ಮಿಂಚುತ್ತಿದ್ದ ವೇಳೆ ಕೋಲಾಹಲ ಸೃಷ್ಟಿಯಾಗಿತ್ತು. ಖಾಸಗಿ ಟಿವಿ ಚಾನೆಲ್ ಸನ್ ಟಿವಿ ಕಾಡುಗಳ್ಳ ವೀರಪ್ಪನ್ ಸಂದರ್ಶನ ಪ್ರಸಾರವಾಗಿತ್ತು. ನಕ್ಕೀರನ್ ಗೋಪಾಲನ್ ದಂತಚೋರ ವೀರಪ್ಪನ್ ಸಂದರ್ಶನ ಮಾಡಿದ್ದರು. ಈ ಸಂದರ್ಶನವನ್ನು ಸನ್ ಟಿವಿ ಪ್ರಸಾರ ಮಾಡಿತ್ತು. ಇದೇ ಸಂದರ್ಶನದಿಂದ ಕೋಲಾಹಲ ಸೃಷ್ಟಿಯಾಗಿತ್ತು. ನಟಿ ಸುಕನ್ಯಾ ಕೋರ್ಟ್ ಮೊರೆ ಹೋಗಿದ್ದರು.
ಕಾಡುಗಳ್ಳ ವೀರಪ್ಪನ್ ಸಂದರ್ಶನಕ್ಕೂ ನಟಿ ಸುಕನ್ಯಾ ಕೇಸ್‌ಗೂ ಏನು ಸಂಬಂಧ?
ಸನ್ ಟಿವಿ ಈ ಸಂದರ್ಶನವನ್ನು ಪ್ರಸಾರ ಮಾಡಿತ್ತು. ಆದರೆ ಈ ಸಂದರ್ಶನದಲ್ಲಿ ವೀರಪ್ಪನ್ ಕೆಲ ಗಂಭೀರ ಆರೋಪಗಳನ್ನು ಮಾಡಿದ್ದರು. ಈ ಪೈಕಿ ನಟಿ ಸುಕನ್ಯಾಗೆ ಮಾಜಿ ಪ್ರಧಾನಿ ಪಿವಿ ನರಸಿಂಹರಾವ್ ಅವರ ಪುತ್ರನ ಜೊತೆ ಅಕ್ರಮ ಸಂಬಂಧವಿದೆ. ಇವರ ಕೆಲ ವಿಡಿಯೋಗಳನ್ನು ಮುಂದಿಟ್ಟುಕೊಂಡು 1996ರ ಲೋಕಸಭೆ ಚುನಾವಣೆಯಲ್ಲಿ ಕೆಲ ಡೀಲ್ ನಡೆದಿತ್ತು ಎಂದು ವೀರಪ್ಪನ್ ಆರೋಪಿಸಿದ್ದರು.
ಸಂದರ್ಶನ ಪ್ರಸಾರದ ಬೆನ್ನಲ್ಲೇ ಕೋಲಾಹಲ
ವೀರಪ್ಪನ್ ಸಂದರ್ಶನ ಪ್ರಸಾರದ ಬೆನ್ನಲ್ಲೇ ಕೋಲಾಹಲ ತೀವ್ರಗೊಂಡಿತ್ತು. ನಟಿ ಸುಕನ್ಯಾ ಜನಪ್ರಿಯತೆ, ಮಹಿಳೆಯ ಘನತೆಗೆ ಧಕ್ಕೆಯಾಗಿತ್ತು. ಹೀಗಾಗಿ ನಟಿ ಸುಕನ್ಯಾ ಮಡ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ವೀರಪ್ಪನ್ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ಇದು ಸತ್ಯಕ್ಕೆ ದೂರವಾಗಿದೆ ಎಂದು ಆರೋಪಿಸಿ ಅರ್ಜಿ ದಾಖಲಿಸಿದ್ದರು.
ಸುದೀರ್ಘ ವಿಚಾರಣೆ
ಕೋರ್ಟ್ ಈ ಪ್ರಕರಣದ ಕುರಿತು ಸುದೀರ್ಘ ವಿಚಾರಣೆ ನಡೆಸಿತ್ತು. ಬಳಿಕ ಜೂನ್ 5 ರಂದು ಜಸ್ಟೀಸ್ ಕೆ ಕುಮರೇಶ್ ಬಾಬು ನೇತೃತ್ವದ ಪೀಠ ಮಹತ್ವದ ತೀರ್ಪು ನೀಡಿತ್ತು. ನಟಿ ಸುಕನ್ಯಾ ಪರವಾಗಿ ತೀರ್ಪು ನೀಡಿತ್ತು. ನಟಿಯ ಘನಟೆಗೆ ಸನ್ ಟಿವಿ ಧಕ್ಕೆ ತಂದಿದೆ. ಹೀಗಾಗಿ 10 ಲಕ್ಷ ರೂಪಾಯಿ ಪರಿಹಾರ ನೀಡಲು ಸನ್ ಟಿವಿಗೆ ಆದೇಶಿಸಿದೆ.
ವೀರಪ್ಪನ್ ಹೇಳಿಕೆಯಿಂದ ಸನ್ ಟಿವಿಗೆ ದಂಡ ಯಾಕೆ?
ಆದೇಶದಲ್ಲಿ ಕೆಲ ಅಂಶಗಳನ್ನು ಉಲ್ಲೇಖಿಸಲಾಗಿದೆ. ವೀರಪ್ಪನ್ ಸಂದರ್ಶನ ಮೊದಲೇ ರೆಕಾರ್ಡ್ ಮಾಡಿ ಪ್ರಸಾರ ಮಾಡಲಾಗಿದೆ. ವೀರಪ್ಪನ್ ಗಂಭೀರ ಆರೋಪವನ್ನು ನಟಿ ಮೇಲೆ ಮಾಡಿದ್ದರು. ಈ ಆರೋಪಕ್ಕೆ ಸಾಕ್ಷ್ಯಗಳು ಇದೆಯಾ ಇಲ್ಲವೇ ಅನ್ನೋದು ಪರಿಶೀಲಿಸುವ, ಅಥವಾ ಈ ಹೇಳಿಕೆಯನ್ನು ಎಡಿಟ್ ಮಾಡುವ, ಕತ್ತರಿಸುವ ಸೇರಿದಂತೆ ಎಲ್ಲಾ ಅಕಾಶಗಳು ಸನ್ ಟಿವಿಗೆ ಇತ್ತು. ಆದರೆ ಸನ್ ಟಿವಿ ಯಾವ ಪ್ರಯತ್ನ ಮಾಡದೇ ಪ್ರಸಾರ ಮಾಡಿದೆ. ಹೀಗಾಗಿ ದುಬಾರಿ ದಂಡ ವಿಧಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

