MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ದಾದಾಗಿರಿಗೆ ಆರಂಭದಲ್ಲೇ ಕೊಂಕು.. ಗಂಗೂಲಿಯಂತೆ ಕಾಣದಿದ್ದರೂ ಸಿನಿಮಾದಲ್ಲಿ ಇವರ ಸಿಕ್ಸರ್‍‌ಗಳು ಹೇಗಿವೆ?

ದಾದಾಗಿರಿಗೆ ಆರಂಭದಲ್ಲೇ ಕೊಂಕು.. ಗಂಗೂಲಿಯಂತೆ ಕಾಣದಿದ್ದರೂ ಸಿನಿಮಾದಲ್ಲಿ ಇವರ ಸಿಕ್ಸರ್‍‌ಗಳು ಹೇಗಿವೆ?

ಗಂಗೂಲಿ ಜಿವನಾಧಾರಿತ ಬಯೋಪಿಕ್‌ನ ಫಸ್ಟ್‌ ಲುಕ್ ರಿಲೀಸ್ ಆಗಿದ್ದು, ಅಭಿಮಾನಿಗಳು ಎಕ್ಸೈಟ್ ಆಗಿದ್ದಾರೆ. ಈ ಮಧ್ಯೆ ಗಂಗೂಲಿ ಪಾತ್ರಕ್ಕೆ ಬಣ್ಣ ಹಚ್ಚುತ್ತಿರುವ ರಾಜ್‌ಕುಮಾರ್ ರಾವ್ ಅವರ ಆಯ್ಕೆ ಬಗ್ಗೆ ಅನೇಕರು ಚಕಾರ ಎತ್ತಿದ್ದಾರೆ. ಏನಿದು ಹೊಸ ಚರ್ಚೆ? ಈ ಕುರಿತ ಕಂಪ್ಲೀಟ್ ಸ್ಟೋರಿ ಇಲ್ಲಿದೆ.

2 Min read
Author : Ganesh Mabla Gowda
Published : Jul 10 2026, 12:11 PM IST
Share this Photo Gallery
  • FB
  • TW
  • Linkdin
  • Whatsapp
16
ಅಭಿಮಾನಿಗಳ ಆತಂಕ ಏನು?
Image Credit : sourav ganguly instagram

ಅಭಿಮಾನಿಗಳ ಆತಂಕ ಏನು?

ಬಹುಶಃ ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ನಲ್ಲಿ ಅತಿ ಹೆಚ್ಚು ಬಯೋಪಿಕ್ (ಜೀವನಾಧಾರಿತ ಚಿತ್ರ)ಗಳಲ್ಲಿ ನಟಿಸಿದ ನಟ ಎಂಬ ಪ್ರತ್ಯೇಕ ವಿಭಾಗವೇನಾದರೂ ಇದ್ದರೆ ಅದರಲ್ಲಿ ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ( Rajkumar Rao) ಅವರ ಹೆಸರು ಖಂಡಿತವಾಗಿಯೂ ಮೊದಲ ಸಾಲಿನಲ್ಲಿ ಇರುತ್ತಿತ್ತು. ಇದೀಗ ಅವರ ಮುಂಬರುವ ಚಿತ್ರ ದಾದಾ (Dada) ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಪಾತ್ರದಲ್ಲಿ ರಾಜ್‌ಕುಮಾರ್ ಮಿಂಚಲಿದ್ದಾರೆ.

ಸೌರವ್ ಗಂಗೂಲಿ ಅವರಂತೆ ರಾಜ್‌ಕುಮಾರ್ ಕಾಣುತ್ತಿಲ್ಲ ಎಂಬ ಟೀಕೆಗಳು ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ. ಆದರೆ ಅವರೊಬ್ಬ ನಟನಾಗಿ ಸವಾಲಿನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ನಿಸ್ಸಿಮರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಇದು 8ನೇ ಬಯೋಪಿಕ್!
Image Credit : x.com

ಇದು 8ನೇ ಬಯೋಪಿಕ್!

ಮುಂದಿನ ವರ್ಷ ಬಿಡುಗಡೆಯಾಗಲಿರುವ 'ದಾದಾ' ಸಿನಿಮಾ ರಾಜ್‌ಕುಮಾರ್ ರಾವ್ ಅವರ ವೃತ್ತಿಜೀವನದ 8ನೇ ಜೀವನಾಧಾರಿತ ಚಿತ್ರ. ಇದಕ್ಕೂ ಮುನ್ನ ಅಂದರೆ ಆಗಸ್ಟ್ 7, 2026 ರಂದು ಖ್ಯಾತ ವಕೀಲ ಉಜ್ವಲ್ ನಿಕಮ್ ಅವರ ಜೀವನ ಆಧಾರಿತ 'ಪ್ರಹಾರ್ - ದಿ ಉಜ್ವಲ್ ನಿಕಮ್ ಸ್ಟೋರಿ' (Prahaar – The Ujjwal Nikam Story) ತೆರೆಗೆ ಬರಲಿದೆ.

Related Articles

Related image1
Karavali Controversy: ಕರಾವಳಿ ವಿವಾದಕ್ಕೆ ನ್ಯೂ ಟ್ವಿಸ್ಟ್‌.. ಪ್ರಜ್ವಲ್ ಪರ ನಿಂತ ರಕ್ಷಿತಾ ಪ್ರೇಮ್, ಹೊಸ ಚರ್ಚೆ ಶುರು!
Related image2
ಸಂಜು ಸ್ಯಾಮ್ಸನ್ ಶಾಕಿಂಗ್ ನಿರ್ಧಾರ.. ಟಿ20 ಲೀಗ್‌ನಿಂದ ದಿಢೀರ್ ಹಿಂದೆ ಸರಿದು ಅಚ್ಚರಿ..!
36
ಬಯೋಪಿಕ್‌ಗಳ ಸಕ್ಸಸ್ ಜರ್ನಿ
Image Credit : sourav ganguly instagram

ಬಯೋಪಿಕ್‌ಗಳ ಸಕ್ಸಸ್ ಜರ್ನಿ

ಕಳೆದ 15 ವರ್ಷಗಳಲ್ಲಿ ರಾಜ್‌ಕುಮಾರ್ ರಾವ್ ನೈಜ ಘಟನೆಗಳನ್ನು ಮತ್ತು ವ್ಯಕ್ತಿಗಳ ಜೀವನವನ್ನು ಪರದೆಯ ಮೇಲೆ ತರುವಲ್ಲಿ ಸಿದ್ಧಹಸ್ತರೆನಿಸಿಕೊಂಡಿದ್ದಾರೆ. ಅವರ ಈ ಪಯಣ ಶುರುವಾಗಿದ್ದು ಹೀಗೆ..

  • ಚಿತ್ತಗಾಂಗ್ (2012): ಇದರಲ್ಲಿ ಲೋಕನಾಥ್ ಬಾಲ್ ಎಂಬ ಸ್ವಾತಂತ್ರ್ಯ ಹೋರಾಟಗಾರನ ಪಾತ್ರದಲ್ಲಿ ರಾಜ್‌ಕುಮಾರ್ ರಾವ್ ಮೊದಲ ಬಾರಿಗೆ ಗಮನ ಸೆಳೆದರು.
  • ಶಾಹಿದ್ (2012): ವಕೀಲ ಮತ್ತು ಮಾನವ ಹಕ್ಕುಗಳ ಹೋರಾಟಗಾರ ಶಾಹಿದ್ ಅಜ್ಮಿ ಪಾತ್ರಕ್ಕಾಗಿ ರಾಜ್‌ಕುಮಾರ್ ರಾವ್ ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಇಲ್ಲಿಯೂ ಅವರ ರೂಪ ಶಾಹಿದ್ ಅಜ್ಮಿಗೆ ಹೋಲಿಕೆಯಾಗದಿದ್ದರೂ, ನಟನೆಯ ಮೂಲಕ ಅವರು ಆ ಪಾತ್ರಕ್ಕೆ ಜೀವ ತುಂಬಿದ್ದರು.
  • ಅಲಿಗಢ್ (2015): ಪತ್ರಕರ್ತ ದೀಪು ಸೆಬಾಸ್ಟಿಯನ್ ಪಾತ್ರದಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡರು.
  • ಬೋಸ್: ಡೆಡ್/ಅಲೈವ್ (2017): ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪಾತ್ರಕ್ಕಾಗಿ ರಾಜ್‌ಕುಮಾರ್ ತಮ್ಮ ದೇಹದ ತೂಕವನ್ನು ಹೆಚ್ಚಿಸಿಕೊಂಡು, ಸಂಪೂರ್ಣವಾಗಿ ರೂಪಾಂತರಗೊಂಡು ಪ್ರೇಕ್ಷಕರನ್ನು ಚಕಿತಗೊಳಿಸಿದ್ದರು.
  • ಓಮರ್ಟಾ (2018): ಭಯೋತ್ಪಾದಕ ಅಹ್ಮದ್ ಒಮರ್ ಸಯೀದ್ ಶೇಖ್ ಎಂಬ ನಕಾರಾತ್ಮಕ ಛಾಯೆಯ ಬಯೋಪಿಕ್‌ನಲ್ಲಿ ನಟಿಸಿ ತಮ್ಮ ನಟನಾ ಸಾಮರ್ಥ್ಯ ಏನೆಂಬುದನ್ನು ತೋರಿಸಿಕೊಟ್ಟರು.
  • ಶ್ರೀಕಾಂತ್ (2024): ದೃಷ್ಟಿಹೀನ ಉದ್ಯಮಿ ಶ್ರೀಕಾಂತ್ ಬೋಲ್ಲಾ ಅವರ ಸ್ಫೂರ್ತಿದಾಯಕ ಕಥೆಯಲ್ಲಿ ರಾಜ್‌ಕುಮಾರ್ ನಟನೆಗೆ ವಿಮರ್ಶಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಯಿತು.
46
ರೂಪಕ್ಕಿಂತ ನಟನೆಗೆ ಆದ್ಯತೆ
Image Credit : sourav ganguly instagram

ರೂಪಕ್ಕಿಂತ ನಟನೆಗೆ ಆದ್ಯತೆ

ರಾಜ್‌ಕುಮಾರ್ ರಾವ್ ಅವರ ವಿಶೇಷತೆಯೆಂದರೆ ಅವರು ಕೇವಲ ಆ ವ್ಯಕ್ತಿಯಂತೆ ಕಾಣಲು ಪ್ರಯತ್ನಿಸುವುದಿಲ್ಲ. ಬದಲಾಗಿ ಆ ವ್ಯಕ್ತಿಯ ಗುಣಲಕ್ಷಣ, ಹಾವಭಾವ ಮತ್ತು ಆತ್ಮವನ್ನು ಅರ್ಥೈಸಿಕೊಂಡು ನಟಿಸುತ್ತಾರೆ. 'ದಾದಾ' ಚಿತ್ರದಲ್ಲೂ ಅವರು ಕ್ರಿಕೆಟ್ ಲೋಕದ ದಾದಾ ಸೌರವ್ ಗಂಗೂಲಿ ಅವರ ವ್ಯಕ್ತಿತ್ವವನ್ನು ಹೇಗೆ ಕಟ್ಟಿಕೊಡಲಿದ್ದಾರೆ ಎಂಬ ಕುತೂಹಲ ಮೂಡಿದೆ.

56
ಸಿಕ್ಸರ್ ಬಾರಿಸುವ ನಿರೀಕ್ಷೆಯಲ್ಲಿ ಅಭಿಮಾನಿಗಳು
Image Credit : sourav ganguly instagram

ಸಿಕ್ಸರ್ ಬಾರಿಸುವ ನಿರೀಕ್ಷೆಯಲ್ಲಿ ಅಭಿಮಾನಿಗಳು

ಬಾಲಿವುಡ್‌ನ ಬಹುತೇಕ ಸ್ಟಾರ್ ನಟರು ಕಮರ್ಷಿಯಲ್ ಚಿತ್ರಗಳ ಹಿಂದೆ ಬಿದ್ದರೆ, ರಾಜ್‌ಕುಮಾರ್ ರಾವ್ ಮಾತ್ರ ಮಣ್ಣಿನ ಮಕ್ಕಳ ಮತ್ತು ಇತಿಹಾಸದ ವ್ಯಕ್ತಿಗಳ ಕಥೆಗಳನ್ನು ಹೇಳಲು ಹೊರಟಿದ್ದಾರೆ. ಸೌರವ್ ಗಂಗೂಲಿ ಬಯೋಪಿಕ್ ಅವರ ವೃತ್ತಿಜೀವನದ ಅತಿ ದೊಡ್ಡ ಪರೀಕ್ಷೆಯಾಗಲಿದ್ದು, ಸಿಕ್ಸರ್ ಬಾರಿಸುವ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು.

66
ಅಪ್ರತಿಮ ನಟನೆ
Image Credit : x.com

ಅಪ್ರತಿಮ ನಟನೆ

ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ಅತಿ ಹೆಚ್ಚು ಬಯೋಪಿಕ್‌ಗಳಲ್ಲಿ (ಜೀವನಾಧಾರಿತ ಚಿತ್ರ) ನಟಿಸಿದ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಿದ್ದಾರೆ. ಸೌರವ್ ಗಂಗೂಲಿ ಅವರ ಜೀವನ ಆಧಾರಿತ 'ದಾದಾ' ಇವರ 8ನೇ ಬಯೋಪಿಕ್ ಚಿತ್ರವಾಗಿದ್ದು, ಇದಕ್ಕೂ ಮುನ್ನ ಶಾಹಿದ್, ಬೋಸ್, ಶ್ರೀಕಾಂತ್ ಅಂತಹ ನೈಜ ಪಾತ್ರಗಳ ಮೂಲಕ ಇವರು ಅಪ್ರತಿಮ ನಟನೆ ತೋರಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

GM
Ganesh Mabla Gowda
ಬಾಲಿವುಡ್
ಮನರಂಜನಾ ಸುದ್ದಿ
ಸುದ್ದಿ
ನ್ಯೂಸ್‌ ರೌಂಡ್‌ಅಪ್

Latest Videos
Recommended Stories
Recommended image1
'ಕರಾವಳಿ' ಸಿನಿಮಾ ಗಲಾಟೆಗೆ ಟ್ವಿಸ್ಟ್‌: ಮೂವರ ವಿರುದ್ಧ FIR, ಪ್ರಜ್ವಲ್ ವಿರುದ್ಧ ಗಂಭೀರ ಆರೋಪ
Recommended image2
ಪುಷ್ಪರಾಜ್‌ಗೆ 1/10, ಅರ್ಜುನ್ ರೆಡ್ಡಿಗೆ ಎಷ್ಟು?: ಪುಷ್ಪ ನಟಿ ಅನಸೂಯಾ ಪೋಸ್ಟ್‌ನಿಂದ ಭಾರೀ ವಿವಾದ!
Recommended image3
'ನೋಡಲು ಸುಂದರ ಹುಡುಗ ಸಿಕ್ಕಿದ್ರೆ ಸಾಕು ಮದುವೆಯಾಗ್ತೇನೆ, ಗುಣ-ಮನಸ್ಸಿನ ಬಗ್ಗೆ...' ನಟಿ ಸ್ವಾಸಿಕಾ!
Related Stories
Recommended image1
Karavali Controversy: ಕರಾವಳಿ ವಿವಾದಕ್ಕೆ ನ್ಯೂ ಟ್ವಿಸ್ಟ್‌.. ಪ್ರಜ್ವಲ್ ಪರ ನಿಂತ ರಕ್ಷಿತಾ ಪ್ರೇಮ್, ಹೊಸ ಚರ್ಚೆ ಶುರು!
Recommended image2
ಸಂಜು ಸ್ಯಾಮ್ಸನ್ ಶಾಕಿಂಗ್ ನಿರ್ಧಾರ.. ಟಿ20 ಲೀಗ್‌ನಿಂದ ದಿಢೀರ್ ಹಿಂದೆ ಸರಿದು ಅಚ್ಚರಿ..!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved