ಆ್ಯಂಕರ್ ಅನಸೂಯಾ ಭಾರದ್ವಾಜ್ ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಪೋಸ್ಟ್ ಹಾಕಿದರೂ ಅದು ಕ್ಷಣಾರ್ಧದಲ್ಲಿ ವೈರಲ್ ಆಗುತ್ತೆ. ಅವರು ಯಾರ ಭಯವೂ ಇಲ್ಲದೆ ನೇರವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ.

ಆ್ಯಂಕರ್ ಆಗಿ ವೃತ್ತಿ ಆರಂಭಿಸಿ, ಈಗ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಅನಸೂಯಾ ಭಾರದ್ವಾಜ್, ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಇದೀಗ ಅವರು ಮತ್ತೊಂದು ಸಂಚಲನಾತ್ಮಕ ಪೋಸ್ಟ್ ಹಾಕಿದ್ದು, ವಿಜಯ್ ದೇವರಕೊಂಡ ಜೊತೆಗಿನ ಹಳೆಯ ಸೋಶಿಯಲ್ ಮೀಡಿಯಾ ವಾರ್‌ಗೆ ಮತ್ತೆ ಚಾಲನೆ ನೀಡಿದ್ದಾರಾ ಎಂಬ ಚರ್ಚೆ ಶುರುವಾಗಿದೆ. ಆ್ಯಂಕರ್ ಅನಸೂಯಾ ಭಾರದ್ವಾಜ್ ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಪೋಸ್ಟ್ ಹಾಕಿದರೂ ಅದು ಕ್ಷಣಾರ್ಧದಲ್ಲಿ ವೈರಲ್ ಆಗುತ್ತೆ. ಅವರು ಯಾರ ಭಯವೂ ಇಲ್ಲದೆ ನೇರವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇತ್ತೀಚೆಗೆ, ಅನಸೂಯಾ ಅವರು ಮಹಿಳಾ ಡಾಕ್ಟರ್ ಒಬ್ಬರು ಮಾಡಿದ ಕ್ರಿಯೇಟಿವ್ ವಿಡಿಯೋವೊಂದನ್ನು ಶೇರ್ ಮಾಡಿ, "ನಮ್ಮ ಸಿನಿಮಾ ಹುಚ್ಚರಿಗೆ ಹೀಗೆ ಹೇಳಿದ್ರೇನೇ ಸರಿ ಇರಬೇಕು" ಅಂತ ಕಾಮೆಂಟ್ ಮಾಡಿದ್ದಾರೆ. ಈ ಮಾತು ಈಗ ಟಾಲಿವುಡ್‌ನಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಈ ಸಂಚಲನಕ್ಕೆ ಕಾರಣವಾಗಿದ್ದು ಫರ್ಟಿಲಿಟಿ ತಜ್ಞೆ ಡಾ. ನಿಹಾರಿಕಾ ಅಲ್ಲು ಅವರ ಒಂದು ಇಂಟರೆಸ್ಟಿಂಗ್ ವಿಡಿಯೋ. ಸಮಾಜದಲ್ಲಿ ಪುರುಷರ ಫಲವತ್ತತೆ (ಫರ್ಟಿಲಿಟಿ) ಮತ್ತು ಸ್ಪರ್ಮ್ ಕೌಂಟ್‌ನಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಅವರು ಹೊಸ ದಾರಿ ಹಿಡಿದಿದ್ದಾರೆ.

ಟಾಲಿವುಡ್‌ನ ಜನಪ್ರಿಯ ಸಿನಿಮಾಗಳ ಹೀರೋಗಳ ಜೀವನಶೈಲಿ ಮತ್ತು ಅವರ ಅಭ್ಯಾಸಗಳ ಆಧಾರದ ಮೇಲೆ ಅವರ ಫರ್ಟಿಲಿಟಿ ರೇಟಿಂಗ್ ಹೇಗಿರುತ್ತೆ ಅಂತ ಆ ವಿಡಿಯೋದಲ್ಲಿ ವಿಶ್ಲೇಷಿಸಿದ್ದಾರೆ. ಈ ವಿಶ್ಲೇಷಣೆಯಲ್ಲಿ 'ಅಪರಿಚಿತುಡು' ಚಿತ್ರದ ರಾಮಂ ಪಾತ್ರಕ್ಕೆ ಅತಿ ಹೆಚ್ಚು, ಅಂದರೆ 9/10 ಸ್ಕೋರ್ ಸಿಕ್ಕಿದೆ. ಆ ಪಾತ್ರ ಸಂಪೂರ್ಣ ಸಸ್ಯಾಹಾರಿಯಾಗಿದ್ದು, ದೈಹಿಕವಾಗಿ ಫಿಟ್ ಆಗಿರುವುದು ಮತ್ತು ಯಾವುದೇ ಕೆಟ್ಟ ಚಟಗಳಿಲ್ಲದಿರುವುದೇ ಇದಕ್ಕೆ ಕಾರಣ. ಹಾಗೆಯೇ 'ಧ್ರುವ' ಸಿನಿಮಾದಲ್ಲಿ ರಾಮ್ ಚರಣ್ ಅವರ ಐಪಿಎಸ್ ಪಾತ್ರಕ್ಕೆ 9/10 ಕೊಟ್ಟರೂ, ಒಂದು ವೇಳೆ ಆ ಸಿಕ್ಸ್ ಪ್ಯಾಕ್ ಬಾಡಿ ಸ್ಟೀರಾಯ್ಡ್ಸ್‌ನಿಂದ ಬಂದಿದ್ದರೆ ಸ್ಪರ್ಮ್ ಕೌಂಟ್ ಸೊನ್ನೆ ಆಗುತ್ತೆ ಅಂತ ಟ್ವಿಸ್ಟ್ ಕೊಟ್ಟಿದ್ದಾರೆ ಡಾಕ್ಟರ್.

ಡಾ. ನಿಹಾರಿಕಾ ಕೊಟ್ಟ ರೇಟಿಂಗ್ಸ್‌ನಲ್ಲಿ 'ಭರತ್ ಅನೆ ನೇನು' ಚಿತ್ರದಲ್ಲಿ ಮಹೇಶ್ ಬಾಬು ನಿರ್ವಹಿಸಿದ ಭರತ್ ಪಾತ್ರಕ್ಕೆ 7/10 ಸ್ಕೋರ್ ನೀಡಿದ್ದಾರೆ. ಮುಖ್ಯಮಂತ್ರಿಯಾಗಿರುವುದರಿಂದ ಇರುವ ವಿಪರೀತ ಕೆಲಸದ ಒತ್ತಡದಿಂದ (ಸ್ಟ್ರೆಸ್) ಫರ್ಟಿಲಿಟಿ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. 'ಸಲಾರ್' ಸಿನಿಮಾದ ದೇವ (ಪ್ರಭಾಸ್) ಪಾತ್ರವು ಯಾವಾಗಲೂ ಕಲ್ಲಿದ್ದಲು ಗಣಿಗಳ ಶಾಖ ಮತ್ತು ಮಾಲಿನ್ಯದಲ್ಲಿ ಇರುವುದರಿಂದ ಆ ಪಾತ್ರಕ್ಕೆ ಕೇವಲ 6/10 ಅಂಕ ಸಿಕ್ಕಿದೆ.

ಆದರೆ, ಅನಸೂಯಾ ಈ ವಿಡಿಯೋವನ್ನು ಶೇರ್ ಮಾಡಲು ಮುಖ್ಯ ಕಾರಣ 'ಅರ್ಜುನ್ ರೆಡ್ಡಿ' ಪಾತ್ರ ಅಂತ ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಹಿಂದೆ ವಿಜಯ್ ದೇವರಕೊಂಡ ಮತ್ತು ಅನಸೂಯಾ ನಡುವೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ವಾರ್ ನಡೆದಿತ್ತು. ಈ ವಿಡಿಯೋದಲ್ಲಿ, ಅರ್ಜುನ್ ರೆಡ್ಡಿ ಪಾತ್ರವು ವಿಪರೀತವಾಗಿ ಮದ್ಯಪಾನ, ಧೂಮಪಾನ, ಸ್ಟೀರಾಯ್ಡ್ಸ್ ಮತ್ತು ಗಾಂಜಾದಂತಹ ಚಟಗಳಿಗೆ ದಾಸನಾಗಿರುವುದರಿಂದ ಅವನ ಫರ್ಟಿಲಿಟಿ ರೇಟಿಂಗ್ 6/10ಕ್ಕಿಂತ ಕಡಿಮೆ ಇರುತ್ತೆ ಅಂತ ಡಾಕ್ಟರ್ ಹೇಳಿದ್ದಾರೆ. ಹಳೆಯ ವಿವಾದಗಳನ್ನು ನೆನಪಿಸುವಂತೆ ಅನಸೂಯಾ ಈ ವಿಡಿಯೋ ಹಂಚಿಕೊಂಡಿರುವುದು ದೊಡ್ಡ ಸಂಚಲನ ಸೃಷ್ಟಿಸಿದೆ.

ಇಂಡಸ್ಟ್ರಿಯಲ್ಲಿ ಹಾಟ್ ಟಾಪಿಕ್

ಇನ್ನು, ಎಲ್ಲರಿಗಿಂತ ಕಡಿಮೆಯಾಗಿ 'ಪುಷ್ಪ' ಚಿತ್ರದ ಪುಷ್ಪರಾಜ್ ಪಾತ್ರಕ್ಕೆ ಕೇವಲ 1/10 ಸ್ಕೋರ್ ಸಿಕ್ಕಿದೆ. ಆ ಪಾತ್ರ ದೈಹಿಕವಾಗಿ ಎಷ್ಟೇ ಬಲಿಷ್ಠವಾಗಿದ್ದರೂ, ನಿರಂತರವಾಗಿ ಗುಟ್ಕಾ ಜಗಿಯುವುದರಿಂದ ಅವನ ಸ್ಪರ್ಮ್ ಕೌಂಟ್ ತೀರಾ ಕಡಿಮೆಯಾಗುತ್ತೆ ಎಂದು ಡಾ. ನಿಹಾರಿಕಾ ಎಚ್ಚರಿಸಿದ್ದಾರೆ. ಒಟ್ಟಿನಲ್ಲಿ, ಸಿನಿಮಾಗಳನ್ನು ಕೇವಲ ಮನರಂಜನೆಯಾಗಿ ನೋಡದೆ, ಅವುಗಳ ಮೂಲಕ ಯುವಕರಿಗೆ ಬೇಕಾದ ಆರೋಗ್ಯ ಸಂದೇಶವನ್ನು ಸಹ ನೀಡಬಹುದು ಎಂಬುದನ್ನು ಈ ವಿಡಿಯೋ ಸಾಬೀತುಪಡಿಸಿದೆ. ಇದನ್ನು ಅನಸೂಯಾ ತಮ್ಮದೇ ಶೈಲಿಯಲ್ಲಿ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿ, ಸಿನಿಮಾ ಅಭಿಮಾನಿಗಳ ಅಭ್ಯಾಸಗಳ ಬಗ್ಗೆ ಸಂಚಲನಾತ್ಮಕ ಕಾಮೆಂಟ್ ಮಾಡಿರುವುದು ಈಗ ಇಂಡಸ್ಟ್ರಿಯಲ್ಲಿ ಹಾಟ್ ಟಾಪಿಕ್ ಆಗಿದೆ.