- Home
- Entertainment
- Cine World
- ಸುಳ್ಳು ಸುಳ್ಳು.. ಮಹಾಸುಳ್ಳು ಹೇಳಿ ಬಾಲಿವುಡ್ ಸ್ಟಾರ್ ಆಗಿದ್ರು ಈ ನಟಿ.. ಈಗಲೂ ಸಖತ್ ಹಾಟ್, ಎಲ್ಲಿದ್ದಾರೆ ಈಗ?!
ಸುಳ್ಳು ಸುಳ್ಳು.. ಮಹಾಸುಳ್ಳು ಹೇಳಿ ಬಾಲಿವುಡ್ ಸ್ಟಾರ್ ಆಗಿದ್ರು ಈ ನಟಿ.. ಈಗಲೂ ಸಖತ್ ಹಾಟ್, ಎಲ್ಲಿದ್ದಾರೆ ಈಗ?!
ಬಾಲಿವುಡ್‌ಗೆ ಬಂದ ಈ ನಟಿ ಬೋಲ್ಡ್ ನಟಿ ಎಂದೇ ಭಾರೀ ಹೆಸರನ್ನು ಕೂಡ ಪಡೆದರು. ಬಿಕಿನಿ ತೊಡಲು, ಕಿಸ್ಸಿಂಗ್ ಸೀನ್ ಮಾಡಲು, ತುಂಡುಬಟ್ಟೆ ಹಾಕಲು, ಹೀಗೆ ಎಲ್ಲದಕ್ಕೂ ರೆಡಿ ಎಂದರು. ಹಗಲು-ರಾತ್ರಿ ಎನ್ನದೇ ದಿನದ ಯಾವುದೇ ಸಮಯದಲ್ಲಿ ಶೂಟಿಂಗ್ ಎಂದರೂ ಅದಕ್ಕೂ ಓಕೆ ಎಂದರು. ಸ್ಟಾರ್ ಹೀರೋಯಿನ್ ಆದರು…

ಬಾಲಿವುಡ್ (Bollywood) ಎಂದರೆ ಭಾರತದ ಚಿತ್ರರಂಗದಲ್ಲಿ ಭಾರೀ ಹಿರಿಮೆ ಎಂಬಂತಹ ಕಾಲವೊಂದಿತ್ತು. ಅಲ್ಲಿ ಹೀರೋಯಿನ್ ಆಗಿ ಮಿಂಚಲು ಹದಿಹರೆಯದ ಹುಡುಗಿಯರು, ಯುವತಿಯರು ಭಾರೀ ಕಸರತ್ತು ಮಾಡುತ್ತಿದ್ದರು. ನಾಯಕಿಯಾಗಿ ಅವಕಾಶ ಸಿಕ್ಕರಂತೂ ಮುಗಿದೇಹೋಯ್ತು, ಸಾಕ್ಷಾತ್ ಸ್ವರ್ಗಸುಖವೇ ಸಿಕ್ಕಿಂತೆ ಆಡುತ್ತಿದ್ದರು ಅವರು..
ಆದರೆ, ಕೆಲವರಿಗೆ ನಾಯಕಿಯರಾಗಿ ಅವಕಾಶ ಸಿಗದಿದ್ದರೂ ಚಿಂತೆಯಿಲ್ಲ, ಒಂದು ಪಾತ್ರವೋ ಅಥವಾ 'ಐಟಂ ಸಾಂಗ್'ನಲ್ಲಿ ಕುಣಿಯಲು ಅವಕಾಶ ಸಿಕ್ಕರೂ ಸಾಕು, ಅದೂ ಕೂಡ ದೊಡ್ಡ ಚಾನ್ಸ್ ಅಂದುಕೊಳ್ಳುತ್ತಿದ್ದರು. ಅಂಥ ಸಾಲಿಗೆ ಸೇರಿದ ನಟಿಯೊಬ್ಬರ ಕಥೆಯಿದು..
ಹೌದು, ಈ ನಟಿ ನಾಯಕಿಯಾಗಿ, ಐಟಂ ಗರ್ಲ್ ಆಗಿ, ಗ್ಲಾಮರಸ್ ರೋಲ್ ನಿಭಾಯಿಸುವ ಹಾಟ್ ಫೆವರೆಟ್ ಆಗಿ ಬಾಲಿವುಡ್ ಸಿನಿಜಗತ್ತಿನಲ್ಲಿ ಮಿಂಚಿ ಮರೆಯಾದ ನಟಿ ಇವರು. ಮರೆಯಾಗಿದ್ದಾರೆ ಎಂದರೂ ಇಂದಿಗೂ ಅವರನ್ನೂ, ಅವರ ಹೆಸರನ್ನೂ ಯಾರೂ ಮರೆತಿಲ್ಲ ಎನ್ನಬಹುದು. ಆ ನಟಿ ಬೇರಾರೂ ಅಲ್ಲ, ಮಲ್ಲಿಕಾ ಶೆರಾವತ್ (Mallika Sherawat).
ಎರಡು ದಶಕಗಳ ಹಿಂದೆ ನಟಿ ಮಲ್ಲಿಕಾ ಶೆರಾವತ್ ಅವರು ಬಾಲಿವುಡ್‌ನಲ್ಲಿ ಸಖತ್ ಮಿಂಚಿದವರು. ಅವರನ್ನು ಸಿನಿಮಾದಲ್ಲಿ ನೋಡಲು ಪ್ರೇಕ್ಷಕರು ಮುಗಿಬೀಳುತ್ತಿದ್ದರು. ಇಡೀ ಭಾರತ ಸೇರಿದಂತೆ ವಿದೇಶಗಲಲ್ಲಿ ಕೂಡ ಅವರಿಗೆ ಬಹಳಷ್ಟು ಅಭಿಮಾನಿಗಳು ಸೃಷ್ಟಿಯಾಗಿದ್ದರು. ಆದರೆ, ಆ ನಟಿ ಮಹಾಸುಳ್ಳೊಂದನ್ನು ಹೇಳಿಯೇ ಸಿನಿಮಾಗೆ ಬಂದಿದ್ದು.. ಅದೇನು ಅಂತ ನೋಡಿ..
ಬಾಲಿವುಡ್‌ಗೆ ಬಂದ ಬಳಿಕ ಮಲ್ಲಿಕಾ ಶೆರಾವತ್ ಸ್ಟಾರ್ ಹೀರೋಯಿನ್ ಆದರು. ಚಿತ್ರರಂಗದಲ್ಲಿ ಬೋಲ್ಡ್ ನಟಿ ಎಂದೇ ಭಾರೀ ಹೆಸರನ್ನು ಕೂಡ ಪಡೆದರು. ಬಿಕಿನಿ ತೊಡಲು, ಕಿಸ್ಸಿಂಗ್ ಸೀನ್ ಮಾಡಲು, ತುಂಡುಬಟ್ಟೆ ಹಾಕಲು, ಹೀಗೆ ಎಲ್ಲದಕ್ಕೂ ರೆಡಿ ಎಂದರು.
ಹಗಲು-ರಾತ್ರಿ ಎನ್ನದೇ ದಿನದ ಯಾವುದೇ ಸಮಯದಲ್ಲಿ ಶೂಟಿಂಗ್ ಎಂದರೂ ಅದಕ್ಕೂ ಓಕೆ ಎಂದರು. ಕಾರಣ, ಅವರಿಗೆ ಆಗ ಅವಕಾಶ ಸಿಕ್ಕರೆ ಸಾಕಿತ್ತು. ಹಾಗೆ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು ಬಾಲಿವುಡ್‌ನಲ್ಲಿ ಬ್ಯುಸಿ ಸ್ಟಾರ್ ಆಗಿ ಬೆಳೆದುನಿಂತರು ನಟಿ ಮಲ್ಲಿಕಾ ಶೆರಾವತ್.
ಸಿನಿರಂಗಕ್ಕೆ, ಅದರಲ್ಲೂ ಮುಖ್ಯವಾಗಿ ಬಾಲಿವುಡ್ ಜಗತ್ತಿಗೆ ಕಾಲಿಡಲು ನಟನಟಿಯರು ಸಾಕಷ್ಟು ಸುಳ್ಳು ಹೇಳುತ್ತಿದ್ದ ಕಾಲ. ಹಾಗೆಯೇ ಮಲ್ಲಿಕಾ ಶೆರಾವತ್ ಕೂಡಾ ಸಿನಿಮಾಗಳಲ್ಲಿ ಅವಕಾಶ ಪಡೆಯಲು 'ಮಹಾ ಸುಳ್ಳು' ಹೇಳಿದ್ದರು.
ತಾನು ಮದುವೆ ಆಗಿರುವುದನ್ನೇ ಮುಚ್ಚಿಟ್ಟಿದ್ದರು. ಹಾಟ್ ಹಾಟ್ ನಟಿ ಮಲ್ಲಿಕಾ ಶೆರಾವತ್ ಚಿತ್ರರಂಗಕ್ಕೆ ಬರುವ ಮೊದಲು ಏರ್ ಹೋಸ್ಟೆಸ್ ಆಗಿ ಕೆಲಸ ಮಾಡುತ್ತಿದ್ದರು. ಆಗಲೇ ಅವರಿಗೆ ಮದುವೆ ಕೂಡ ಆಗಿತ್ತು.
ಆದರೆ ಆಗ ಅವರಿಗೆ ಚಲನಚಿತ್ರಗಳಲ್ಲಿ ನಟಿಸಲು ಆಫರ್‌ಗಳು ಬರುತ್ತಿದ್ದವು. ಮದುವೆ ಆದಂತೆ ಕಾಣುತ್ತಿಲ್ಲ ಎಂದ ಹಲವು ಆಪ್ತರ ಮಾತನ್ನು ಸತ್ಯವಾಗಿಸಲೋ ಎಂಬಂತೆ, ಮಲ್ಲಿಕಾ ಶೆರಾವತ್ ಅವರು 'ತಾವು ಮದುವೆ ಆಗಿದ್ದನ್ನೇ' ಮುಚ್ಚಿಟ್ಟರು.
ಏರ್ ಹೋಸ್ಟೆಸ್ ಆಗಿ ವೃತ್ತಿ ಜೀವನ ಆರಂಭಿಸಿದ ಮಲ್ಲಿಕಾ ಶೆರಾವತ್ ಪೈಲಟ್ ಕರಣ್ ಸಿಂಗ್ ಗಿಲ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ, ನಾಲ್ಕು ವರ್ಷಗಳ ನಂತರ ವಿಚ್ಛೇದನ ಪಡೆದರು. ಬಳಿಕ ಅವರು ನಟಿಯಾಗಿ ಸಾಕಷ್ಟು ಹೆಸರು ಮಾಡಿದರು.
ಮದುವೆಯಾಗಿ ವಿಚ್ಛೇದನ ಪಡೆದಿದ್ದೇನೆ ಎಂದು ತಿಳಿದರೆ ಸಿನಿಮಾ ರಂಗದಲ್ಲಿ ಅವಕಾಶ ಸಿಗಲ್ಲ ಎಂದು ತಮ್ಮ ಮದುವೆ-ಡಿವೋರ್ಸ್ ವಿಷಯವನ್ನೇ ಮುಚ್ಚಿಟ್ಟಿದ್ದರು. ಒಂದು ಕಾಲದಲ್ಲಿ ತನ್ನ ಹಾಟ್ ಅವತಾರಗಳಿಂದ ಇಡೀ ಬಾಲಿವುಡ್ ಇಂಡಸ್ಟ್ರಿಯನ್ನೇ ಆಳಿದ್ದ ಮಲ್ಲಿಕಾ ಈಗ ಸಿನಿಮಾರಂಗದಿಂದ ದೂರವೇ ಇದ್ದಾರೆ.
ನಿಜ ಜೀವನದಲ್ಲಿ ಒಂಟಿಯಾಗಿ ಲೈಫ್ ಲೀಡ್ ಮಾಡುತ್ತಿದ್ದಾರೆ. ಆಗಾಗ ತಮ್ಮ ಅಭಿಮಾನಿಗಳ ಖುಷಿಗೆ ಕೆಲವು ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಅಪ್ಲೋಡ್ ಮಾಡುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

