- Home
- Entertainment
- Cine World
- SRK ಎಂದ್ರೆ ಶೇಖರ್ ರಾಧಾ ಕೃಷ್ಣ ಎಂದ ಶಾರುಖ್: ಮಾತು ಕೇಳಿ ಬೆಚ್ಚಿ ಬಿದ್ದ ಫ್ಯಾನ್ಸ್!
SRK ಎಂದ್ರೆ ಶೇಖರ್ ರಾಧಾ ಕೃಷ್ಣ ಎಂದ ಶಾರುಖ್: ಮಾತು ಕೇಳಿ ಬೆಚ್ಚಿ ಬಿದ್ದ ಫ್ಯಾನ್ಸ್!
ಶಾರುಖ್ ಖಾನ್ ಅವರು ಸಿನಿ ಇಂಡಸ್ಟ್ರಿಯಲ್ಲಿ SRK ಎಂದೇ ಫೇಮಸ್ ಆದವರು. ಆದರೆ ಅವರು ತಮ್ಮ ಹೆಸರು ಶೇಖರ್ ರಾಧಾ ಕೃಷ್ಣ ಎಂದು ಹೇಳಿರುವ ವಿಡಿಯೋ ವೈರಲ್ ಆಗ್ತಿದೆ. ಏನಿದು ವಿಷ್ಯ?

ಹೆಚ್ಚುತ್ತಿರುವ ನಟನ ಕ್ರೇಜ್
ವಯಸ್ಸು 60ರ ಸಮೀಪ ಬಂದರೂ ಬಾಲಿವುಡ್ ಬಾದ್ಶಾಹ್ ಶಾರುಖ್ ಖಾನ್ ಕ್ರೇಜ್ ಏನೂ ಕಡಿಮೆಯಾಗಿಲ್ಲ. ಹೊಸದಾಗಿ ಎಂಟ್ರಿ ಕೊಡುವ 18-20ರ ನಟಿಯರ ಜೊತೆಯೂ ರೊಮಾನ್ಸ್ ಮಾಡುತ್ತಿದ್ದಾರೆ ನಟ. ಮೊನ್ನೆಯಷ್ಟೇ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಇದರಲ್ಲಿ ಜವಾನ್ ಸಿನಿಮಾದಲ್ಲಿ ಅಭಿನಯಕ್ಕೆ ಬಾಲಿವುಡ್ ನಟ ಶಾರುಖ್ ಖಾನ್ ಅವರು 12th ಫೇಲ್ ಸಿನಿಮಾದ ವಿಕ್ರಾಂತ್ ಮೆಸ್ಸಿ ಜೊತೆ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅಷ್ಟಕ್ಕೂ 2023 ಶಾರುಖ್ ಅವರಿಗೆ ಬ್ಲಾಕ್ಬಸ್ಟರ್ ಚಿತ್ರಗಳನ್ನು ಕೊಟ್ಟ ವರ್ಷ. ಒಂದರ ಮೇಲೊಂದರಂತೆ ಸಿನಿಮಾಗಳು ಹಿಟ್ ಆದವು. ಫ್ಲಾಪ್ ಮೇಲೆ ಫ್ಲಾಪ್ ಚಿತ್ರ ಕೊಟ್ಟು ಸಿನಿಮಾ ಸಹವಾಸವೇ ಬೇಡ ಎಂದು ನಾಲ್ಕೈದು ವರ್ಷ ತೆರೆಮರೆಗೆ ಸರಿದು ಕೊನೆಗೆ ವಾಪಸ್ ಆದವರೇ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟರು.
ಬಾಲಿವುಡ್ಗೆ ಆಕ್ಸಿಜನ್ ಕೊಟ್ಟ ನಟ
ಪಠಾಣ್ ಚಿತ್ರದ ಭರ್ಜರಿ ಕಲೆಕ್ಷನ್ ಮೂಲಕ ಮಕಾಡೆ ಮಲಗಿದ್ದ ಬಾಲಿವುಡ್ಗೆ ಆಕ್ಸಿಜನ್ ನೀಡಿರೋ ಕಿಂಗ್ ಖಾನ್ ಈಗ ಜವಾನ್ ಚಿತ್ರದಿಂದಲೂ ಇಂಡಸ್ಟ್ರಿಯನ್ನು ಮತ್ತಷ್ಟು ಮೇಲಕ್ಕೆ ತಂದರು. ಚಿತ್ರನಟರಾದವರು, ಯಾವ ಧರ್ಮಕ್ಕೆ ಸೇರಿದವರೇ ಆದರೂ ನಟನೆಯ ವಿಷಯ ಬಂದಾಗ ಅವರು ಎಲ್ಲಾ ಪಾತ್ರಕ್ಕೂ ಸೈ ಇರಬೇಕು. ಇದೇ ರೀತಿ ಬಾಲಿವುಡ್ನ ಖಾನ್ತ್ರಯರು ಇದಾಗಲೇ ಹಲವಾರು ಹಿಂದೂ ದೇವತೆಗಳ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ, ಹಿಂದೂ ನಟರಾಗಿಯೂ ಪಾತ್ರ ನಿರ್ವಹಿಸಿದ್ದಾರೆ, ಅದೇ ರೀತಿ ಹಿಂದೂ ನಟರು ಕ್ರೈಸ್ತ, ಮುಸ್ಲಿಂ, ಪಾರ್ಸಿ ಎಲ್ಲವೂ ಆಗಿದ್ದಾರೆ. ಆದರೆ ದಿ ಕೇರಳ ಸ್ಟೋರಿಯ ಭಯಾನಕ ಸತ್ಯ ಘಟನೆಯ ನಂತರ ಮತ್ತೆ ಧರ್ಮದ ವಿಷಯ ಈಗ ಎಲ್ಲೆಡೆ ಹರಿದಾಡುತ್ತಿದೆ.
ಶಾರುಖ್ ಹಳೆಯ ವಿಡಿಯೋ ವೈರಲ್
ಇದರ ನಡುವೆಯೇ ನಟ ಶಾರುಖ್ ಖಾನ್ ಅವರ ಕಳೆದ ವರ್ಷದ ವಿಡಿಯೋ ಒಂದು ಸಕತ್ ಸದ್ದು ಮಾಡುತ್ತಿದೆ. ಎಲ್ಲರಿಗೂ ತಿಳಿದಿರುವಂತೆ ನಟ ಶಾರುಖ್ ಖಾನ್, SRK ಎಂದೇ ಖ್ಯಾತಿ ಪಡೆದವರು. ಹಲವು ಮಂದಿ ಅವರನ್ನು ಪ್ರೀತಿಯಿಂದ ಎಸ್ಆರ್ಕೆ ಎಂದೇ ಕರೆಯುತ್ತಾರೆ. ಆದರೆ SRK ಎಂದ್ರೆ ಶಾರುಖ್ ಖಾನ್ ಬದಲು ಶೇಖರ್ ರಾಧಾ ಕೃಷ್ಣ ಎಂದು ಈ ವಿಡಿಯೋದಲ್ಲಿ ಶಾರುಖ್ ಹೇಳಿದ್ದು, ಅದು ಥಹರೇವಾರಿ ಕಮೆಂಟ್ ಜೊತೆಗೆ ವೈರಲ್ ಆಗುತ್ತಿದೆ.
SRK ಎಂದರೆ ಶೇಖರ್ ರಾಧಾ ಕೃಷ್ಣ
ಹೌದು. ಇದು ಕಾರ್ಯಕ್ರಮವೊಂದರಲ್ಲಿ ಶಾರುಖ್ ಅವರ ಜೊತೆ ನಡೆದ ಪ್ರಶ್ನೋತ್ತರದ ವಿಡಿಯೋ. ಅದರಲ್ಲಿ ಒಬ್ಬರು ನೀವು ಒಂದು ವೇಳೆ ಶಾರುಖ್ ಖಾನ್ ಆಗಿರದೇ ಶೇಖರ್ ಕೃಷ್ಣ ಆಗಿದ್ದರೆ... ಎಂದು ಪ್ರಶ್ನೆ ಪೂರ್ಣಗೊಳಿಸುವ ಮೊದಲೇ ನಟ ಶಾರುಖ್ ಅಲ್ಲಲ್ಲಾ... ಅದು ಶೇಖರ್ ಕೃಷ್ಣ ಅಲ್ಲ... SRK ಎಂದರೆ ಶೇಖರ್ ರಾಧಾ ಕೃಷ್ಣ ಎಂದು ಹೇಳಿದಾಗ ಅಲ್ಲಿದ್ದವರೆಲ್ಲಾ ದೊಡ್ಡದಾಗಿ ನಕ್ಕರು. ನಂತರ ಪ್ರಶ್ನೆ ಮುಂದುವರಿಸಿದ ಪತ್ರಕರ್ತ, ಸರಿ ಒಂದು ವೇಳೆ ನೀವು ಶೇಖರ್ ರಾಧಾ ಕೃಷ್ಣ ಆಗಿದ್ದರೂ ನೀವು ಇಷ್ಟೇ ಫೇಮಸ್ ಆಗುತ್ತಿದ್ದೀರಾ ಅಥವಾ ನಿಮ್ಮ ಮೇಲೆ ಈಗ ಹರಿಸುತ್ತಿರುವ ಪ್ರೀತಿ ಅಥವಾ ಇನ್ನು ಕೆಲವರು ಮಾಡುತ್ತಿರುವ ದ್ವೇಷ ಎಲ್ಲವೂ ಹೀಗೆಯೇ ಇರುತ್ತಿತ್ತಾ ಎಂದು ನಿಮಗೆ ಅನ್ನಿಸುತ್ತಿದೆಯೇ ಎಂದು ಕೇಳಿದರು.
ಧರ್ಮದ ವಿಷ್ಯದಲ್ಲಿ ತಲೆ ಕೆಡಿಸಿಕೊಳ್ಳಲ್ಲ
ಅದಕ್ಕೆ ಅದೇ ನಗುವಿನಿಂದ ಉತ್ತರಿಸಿದ ಶಾರುಖ್, ನಾನು ಧರ್ಮ ಮತ್ತು ಇತರ ವಿಷಯಗಳ ಬಗ್ಗೆ ಎಂದು ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಇಂಥ ಅದ್ಭುತ ದೇಶದಲ್ಲಿ ಅವುಗಳಿಗೆ ಜಾಗವಿಲ್ಲವೆಂದೇ ನಾನು ನಂಬಿದವ. ನಾನು ರಾಧಾ ಕೃಷ್ಣ ಆಗಿದ್ದರೂ ಯಾವುದೇ ಬದಲಾವಣೆ ಆಗುತ್ತಿರಲಿಲ್ಲ. ಈ ದೇಶದಲ್ಲಿ ಅಂಥ ಕೆಟ್ಟ ವಿಚಾರಗಳು ಬರುವುದಿಲ್ಲ ಎಂದರು.
ಧರ್ಮದ ವಿಷ್ಯದಲ್ಲಿ ತಲೆ ಕೆಡಿಸಿಕೊಳ್ಳಲ್ಲ ಎಂದ ನಟ
ಕೆಲವು ನಟರಿಗೂ ಈ ಕೆಟ್ಟ ವಿಷಯಗಳು ತಲೆಗೆ ಹೋಗುತ್ತವೆ, ಜಾತಿ-ಧರ್ಮ ಇಲ್ಲಿಯೂ ಕೆಲವೊಮ್ಮೆ ಮಾತುಕತೆಯಾಗುತ್ತದೆ. ಆದರೆ ನನ್ನ ವೈಯಕ್ತಿಕ ವಿಷಯದಲ್ಲಿ ಹೇಳುವುದಾದರೆ ನನಗೆ ಇವುಗಳಲ್ಲಿ ನಂಬಿಕೆ ಇಲ್ಲ. ನನ್ನನ್ನು ಯಾವುದೇ ಹೆಸರಿನಿಂದ ಕರೆದರೂ ಖುಷಿಯಾಗುತ್ತದೆ ಎಂದು ಹೇಳಿದ ಶಾರುಖ್, ಭಾರತದ ಜಾತ್ಯತೀತತೆಯನ್ನು ಶ್ಲಾಘಿಸಿದರು.
ಹಳೆಯ ವಿಡಿಯೋ ವೈರಲ್
ಅದರ ವಿಡಿಯೋ ವೈರಲ್ ಆಗಿದೆ. ಶಾರುಖ್ ಖಾನ್ ಇದೀಗ ಭಾರತದಲ್ಲಿ ಅತ್ಯಂತ ಪ್ರೀತಿಪಾತ್ರರನ್ನಾಗಿ ಮಾಡಲಾಗಿದೆ.
ಹೆಚ್ಚಿದ್ದನ್ನು ನೀಡಿದ್ದಾನೆ ದೇವರು ಎಂದ ಶಾರುಖ್
ದೇವರು ನಾನು ಕನಸು ಕಂಡಿದ್ದಕ್ಕಿಂತ ಹೆಚ್ಚಿನದನ್ನು ನೀಡಿದ್ದಾನೆ ಮತ್ತು ಅವನು ಪಡೆದ ಪ್ರೀತಿಗೆ ಯಾವಾಗಲೂ ಕೃತಜ್ಞನಾಗಿದ್ದಾನೆ ಎಂದು ಶಾರುಖ್ ಈ ಹಿಂದೆಯೂ ಹೇಳಿದ್ದರು. ಅಂದಹಾಗೆ ಶಾರುಖ್ ಹಿಂದೂ ಯುವತಿ ಗೌರಿ (Gouri) ಅವರನ್ನು ಮದುವೆಯಾಗಿದ್ದು, ಗೌರಿ ಈಗ ಗೌರಿ ಖಾನ್ ಆಗಿದ್ದಾರೆ.