- Home
- Entertainment
- ವಿಜಯ ರಾಘವೇಂದ್ರ ಪುತ್ರ ಸಿನಿಮಾಕ್ಕೆ ಎಂಟ್ರಿ ಕೊಡ್ತಿದ್ದಾನಾ? ನಟನಿಂದ ಬಂತು ಹೀಗೊಂದು ಪ್ರತಿಕ್ರಿಯೆ
ವಿಜಯ ರಾಘವೇಂದ್ರ ಪುತ್ರ ಸಿನಿಮಾಕ್ಕೆ ಎಂಟ್ರಿ ಕೊಡ್ತಿದ್ದಾನಾ? ನಟನಿಂದ ಬಂತು ಹೀಗೊಂದು ಪ್ರತಿಕ್ರಿಯೆ
ನಟ ವಿಜಯ ರಾಘವೇಂದ್ರ ಅವರ ಪುತ್ರ ಶೌರ್ಯ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡ್ತಾ ಇದ್ದಾನಾ? ಈ ಕುರಿತು ನಟ ಹೇಳಿದ್ದೇನು?

ನಟನೆಗೆ ಬರ್ತಾನಾ ವಿಜಯ ರಾಘವೇಂದ್ರ ಪುತ್ರ?
ನಟ ವಿಜಯ ರಾಘವೇಂದ್ರ ಅವರು ಪತ್ನಿ ಸ್ಪಂದನಾ ಅವರನ್ನು ಅಗಲಿ, ಒಂದೂವರೆ ವರ್ಷಗಳಾಗಿವೆ. ಸದ್ಯ ವಿಜಯ ರಾಘವೇಂದ್ರ ಅವರು ಒಂಟಿಯಾಗಿ ಮಗನನ್ನು ಸಾಕುತ್ತಿದ್ದಾರೆ. ಸದ್ಯ ಮಗನ ಪಾಲಿಗೆ ಅಪ್ಪ- ಅಮ್ಮ ಎಲ್ಲವೂ ಅವರೇ. ಅಷ್ಟಕ್ಕೂ ಎಷ್ಟೇ ದೊಡ್ಡ ವ್ಯಕ್ತಿಗಳಾಗಿದ್ದರೂ, ಗಣ್ಯರು, ಸೆಲೆಬ್ರಿಟಿಗಳೇ ಆಗಿದ್ದರೂ ಮಕ್ಕಳ ಪಾಲಿಗೆ ಅವರು ಕೇವಲ ಅಪ್ಪ- ಅಮ್ಮ ಅಷ್ಟೇ. ಮನೆಯಲ್ಲಿ ಕಾಲಿಗೊಬ್ಬ, ಕೈಗೊಬ್ಬ ಆಳು-ಕಾಳುಗಳು ಇದ್ದರೂ ಬಹುತೇಕ ಗಣ್ಯರು ಕೂಡ ತಮ್ಮ ಮಕ್ಕಳಿಗಾಗಿ ವೈಕ್ತಿಗತ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಆ ಕ್ಷಣದಲ್ಲಿ ಅಪ್ಪ-ಅಮ್ಮನ ಪಾತ್ರ ನಿಭಾಯಿಸುತ್ತಾರೆ. ಅದೇ ರೀತಿ ವಿಜಯ ರಾಘವೇಂದ್ರ ಅವರು ತಮ್ಮ ಸಿನಿಮಾ ಲೈಫ್ ನಡುವೆಯೇ ಮಗನ ಓದಿನ ಬಗ್ಗೆ ಸಾಕಷ್ಟು ಸಮಯವನ್ನು ಮೀಸಲು ಇರಿಸುತ್ತಿದ್ದಾರೆ.
ನಟನೆಗೆ ಬರ್ತಾನಾ ವಿಜಯ ರಾಘವೇಂದ್ರ ಪುತ್ರ?
ಸಹಜವಾಗಿ ಅಪ್ಪ-ಅಮ್ಮ ಚಿತ್ರ ತಾರೆಯರು ಆಗಿದ್ದರೆ, ಅವರ ಮಕ್ಕಳು ಕೂಡ ಸಿನಿಮಾಕ್ಕೆ ಬರುತ್ತಾರೆ ಎಂದು ಅವರ ಮೇಲೆ ಕಣ್ಣು ಇದ್ದೇ ಇರುತ್ತದೆ. ವಿಜಯ ರಾಘವೇಂದ್ರ ಅವರ ಪುತ್ರ ಶೌರ್ಯ ಕೂಡ ಜಿಮ್ ಬಾಡಿ ಬೆಳೆಸಿಕೊಂಡಿದ್ದು, ಹೀರೋ ರೀತಿಯಲ್ಲಿ ಮಿಂಚುತ್ತಿದ್ದಾನೆ. ಅದಕ್ಕಾಗಿಯೇ ಶೌರ್ಯ ಕೂಡ ಸಿನಿಮಾದಲ್ಲಿ ನಟಿಸಬೇಕು ಎನ್ನುವುದು ವಿಜಯ ರಾಘವೇಂದ್ರ ಅವರ ಅಸಂಖ್ಯ ಅಭಿಮಾನಿಗಳ ಆಶಯ. ಇದೇ ಕಾರಣಕ್ಕೆ ಪದೇ ಪದೇ ಸಿನಿಮಾದ ಬಗ್ಗೆ ಪ್ರಶ್ನೆ ಕೇಳುತ್ತಲೇ ಇರಲಾಗುತ್ತದೆ.
ವಿಜಯ ರಾಘವೇಂದ್ರ ಸಂದರ್ಶನ
ಇದೀಗ ಬಾಸ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ, ವಿಜಯ ರಾಘವೇಂದ್ರ ಅವರು, ಈ ಬಗ್ಗೆ ಮಾತನಾಡಿದ್ದಾರೆ. ಅವನ ಅಮ್ಮ ಮೊದಲಿನಿಂದಲೂ ಹೇಳುತ್ತಲೇ ಇದ್ದರು. ಇವನಿಗೆ ಸಿನಿಮಾದ ಮೇಲೆ ಸಕತ್ ಇಂಟರೆಸ್ಟ್ ಇದೆ, ಸುಮ್ಮನೇ ಪೋಸ್ ಕೊಡುತ್ತಾನೆ ಎಂದು. ಅದೇ ರೀತಿ ಶೌರ್ಯನಿಗೂ ಸಿನಿಮಾ ಮೇಲೆ ಇಂಟರೆಸ್ಟ್ ಇದೆ ಎಂದಿದ್ದಾರೆ.
ಮಗನ ಸಿನಿಮಾ ಪ್ರೀತಿ
ಅವನು ಸುಮಾರು ಚಿತ್ರಗಳನ್ನು ನೋಡುತ್ತಲೇ ಇರುತ್ತಾನೆ. ತಾನೇ ಟಿಕೆಟ್ ಬುಕ್ ಮಾಡಿಕೊಂಡು ಹೋಗುತ್ತಿರುತ್ತಾನೆ. ಇದುವರೆಗೆ ಯಾವುದೇ ಚಿತ್ರ ಚೆನ್ನಾಗಿಲ್ಲ ಎಂದು ಅವನ ಬಾಯಲ್ಲಿ ಬರಲಿಲ್ಲ. ಚಿತ್ರ ಹಿಡಿಸದಿದ್ದರೂ ಓಕೆ ಚೆನ್ನಾಗಿ ಪ್ರಯತ್ನ ಮಾಡಿದ್ದಾರೆ ಎಂದು ಹೇಳುತ್ತಾನೆ ಎಂದು ಮಗನ ಬಗ್ಗೆ ವಿಜಯ್ ರಾಘವೇಂದ್ರ ಹೇಳಿದ್ದಾರೆ.
ಚಿತ್ರರಂಗಕ್ಕೆ ಮಗನ ಎಂಟ್ರಿ ಇಲ್ಲ...
ಆದರೆ, ಸದ್ಯ ಮಗ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಿಲ್ಲ. ಅವನು ಜಿಮ್ಗೆಲ್ಲಾ ಹೋಗುತ್ತಿದ್ದಾನೆ. ಇನ್ನೂ 11ನೇ ತರಗತಿ ಓದುತ್ತಿದ್ದಾರೆ. ಎಡಿಟಿಂಗ್, ಡಿಜಿಟಲ್ ಬಗ್ಗೆ ಎಲ್ಲವೂ ಚೆನ್ನಾಗಿ ಗೊತ್ತಿದೆ. ಆದರೆ ಸದ್ಯ ಅವನು ಸಿನಿಮಾಕ್ಕೆ ಎಂಟ್ರಿ ಕೊಡುವುದಿಲ್ಲ ಎಂದಿದ್ದಾರೆ. ಮುಂದಾದರೂ ಇನ್ನು ಸ್ವಲ್ಪ ದೊಡ್ಡವನಾದ ಮೇಲೆ ಮಗ ಸಿನಿಮಾದಲ್ಲಿ ಮಿಂಚಲಿ ಎನ್ನುವುದು ಅಭಿಮಾನಿಗಳ ಹಾರೈಕೆ.
2007ರಲ್ಲಿ ವಿವಾಹ
ಅಂದಹಾಗೆ ವಿಜಯ ರಾಘವೇಂದ್ರ ಮತ್ತು ಸ್ಪಂದನಾ 2007ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮಗ ಶೌರ್ಯನಿಗೆ ಪಾಲಕರಾಗಿದ್ದಾರೆ. ಅದರೆ ಸ್ಪಂದನಾ ಅವರು 2023ರಲ್ಲಿ ಎಲ್ಲರನ್ನೂ ಬಿಟ್ಟು ಅಗಲಿದರು. ಇದೀಗ ಮಗನಿಗಾಗಿ ಜೀವನವನ್ನು ಮುಡುಪಾಗಿಟ್ಟಿದ್ದಾರೆ ವಿಜಯ್ ಅವರು.
ಪರೀಕ್ಷೆ ಸಮಯದಲ್ಲಿ ಮಗನ ಜೊತೆ...
ಪರೀಕ್ಷೆಯ ಸಮಯದಲ್ಲಿ, ವಿಜಯ ರಾಘವೇಂದ್ರ ಅವರು ಮಗನ ಜೊತೆ ರಾತ್ರಿಯಿಡೀ ನಿದ್ದೆಗೆಟ್ಟು ಕುಳಿತು ಅದರ ವಿಡಿಯೋ ಶೇರ್ ಮಾಡಿದ್ದರು. ಕೊನೆಗೆ ಪರೀಕ್ಷೆಗೆ ಸಂಬಂಧಿಸಿದಂತೆ ಬಿಗ್ ಅಪ್ಡೇಟ್ ನೀಡಿದ್ದರು. ಸದ್ಯ ಮಗನ ಪರೀಕ್ಷೆ ಮುಗಿದಿರುವುದಾಗಿ ಹೇಳಿದ್ದಾರೆ. EXAM ಇವತ್ತು ಮುಗೀತು! ಅಮ್ಮನ ಬೆಳಕಿನಲ್ಲಿ ಬೆಳಗು ಕಂದ ಎಂದು ಅವರು ಶೀರ್ಷಿಕೆ ಕೊಟ್ಟಿದ್ದರು. ಹಿಂದೆ ಪತ್ನಿ ಸ್ಪಂದನಾ ಅವರ ಫೋಟೋ ಇದರಲ್ಲಿ ನೋಡಬಹುದಾಗಿದೆ.
ಮಗನ ಜೊತೆ ವಿಜಯ ರಾಘವೇಂದ್ರ
ಮಕ್ಕಳ ಪರೀಕ್ಷೆ ಮುಗಿದಾಗ ಅಪ್ಪ-ಅಮ್ಮಂದಿರಿಗೂ ಏನೋ ದೊಡ್ಡದೊಂದು ತಲೆಬಿಸಿ ಮುಗಿದ ಅನುಭವ. ಏನೋ ಭಾರ ಕಳೆದುಕೊಂಡಂತೆ ಭಾಸವಾಗುವುದು ಸಹಜ. ಅದೇ ರೀತಿ ವಿಜಯ ರಾಘವೇಂದ್ರ ಅವರಿಗೂ ಆಗಿದ್ದು, ಪರೀಕ್ಷೆ ಮುಗಿದಿರುವುದಾಗಿ ಹೇಳಿದ್ದರು.