Happy Birthday Sidharth Malhotra: ಹುಡುಗೀರಲ್ಲಿ ನಟ ಮೊದಲು ಗುರುತಿಸೋದು ಇದನ್ನೇ
ಬಾಲಿವುಡ್ನ ಹ್ಯಾಂಡ್ಸಮ್ ಹಂಕ್ ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಇಂದು ತಮ್ಮ 37 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮಾಡೆಲಿಂಗ್ ಮೂಲಕ ವೃತ್ತಿ ಜೀವನ ಆರಂಭಿಸಿದ ಸಿದ್ಧಾರ್ಥ್ ಇಂದು ಬಾಲಿವುಡ್ ನಲ್ಲಿ ವಿಭಿನ್ನವಾದ ಗುರುತನ್ನು ಸ್ಥಾಪಿಸಿಕೊಂಡಿದ್ದಾರೆ. ಅವರು 18 ನೇ ವಯಸ್ಸಿನಲ್ಲಿ ಮಾಡೆಲಿಂಗ್ಗೆ ಕಾಲಿಟ್ಟ ಅವರು ಮಾಡೆಲಿಂಗ್ನಲ್ಲಿ ಉತ್ತಮ ಯಶಸ್ಸನ್ನು ಗಳಿಸಿದರು. ಹೊರ ದೇಶಗಳಲ್ಲೂ ಹೆಸರು ಮಾಡಿದರು. ಆದರೆ ನಂತರ ಈ ಕ್ಷೇತ್ರಕ್ಕೆ ಗುಡ್ ಬೈ ಹೇಳಿ ಬಾಲಿವುಡ್ ಗೆ ಕಾಲಿಟ್ಟರು. ಸಿದ್ಧಾರ್ಥ್ ಮಲ್ಹೋತ್ರಾ ಅವರ ಜನ್ಮದಿನದಂದು ಅವರಿಗೆ ಸಂಬಂಧಿಸಿದ ಕೆಲವು ವಿಶೇಷ ಸಂಗತಿಗಳು ಇಲ್ಲಿವೆ
ಸಿದ್ಧಾರ್ಥ್ ಮಲ್ಹೋತ್ರಾ ಮೊದಲು ಕರಣ್ ಜೋಹರ್ ಅವರೊಂದಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು.'ಮೈ ನೇಮ್ ಈಸ್ ಖಾನ್’ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಈ ಸಮಯದಲ್ಲಿ ಅವರು ನಟನೆಯ ಸೂಕ್ಷ್ಗಗಳನ್ನು ಕಲಿತರು. ಅರ್ಥಮಾಡಿಕೊಂಡರು.
ಕರಣ್ ಜೋಹರ್ ಅವರ 'ಸ್ಟೂಡೆಂಟ್ ಆಫ್ ದಿ ಇಯರ್ 2' ಚಿತ್ರದ ಮೂಲಕ ಅವರು ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು. ಇದಾದ ನಂತರ ಅನೇಕ ಚಿತ್ರಗಳಲ್ಲಿ ತಮ್ಮ ನಟನೆ ಮತ್ತು ಲುಕ್ನಿಂದ ಸಾಕಷ್ಟು ಫ್ಯಾನ್ ಫಾಲೋಯಿಂಗ್ ಗಳಿಸಿದ್ದಾರೆ.
‘ಹಸೀ ತೋ ಫಾಸೀ’,‘ಏಕ್ ವಿಲನ್’, ‘ಕಪೂರ್ ಆ್ಯಂಡ್ ಸನ್ಸ್’, ‘ಬಾರ್ ಬಾರ್ ದೇಖೋ’, ‘ಎ ಜಂಟಲ್ ಮ್ಯಾನ್, ಇತ್ತೆಫಾಕ್’, ‘ಆಯಾರಿ’, ‘ಜಬರಿಯಾ ಜೋಡಿ’ ಮತ್ತು ‘ಮಾರ್ಜಾವಾನ್’ ಚಿತ್ರಗಳಲ್ಲಿ ಅವರು ಕೆಲಸ ಮಾಡಿದ್ದಾರೆ. ಅವರ ಅದ್ಭುತ ನಟನೆಗಾಗಿ. 2021ರಲ್ಲಿ ಬಂದ 'ಶೇರ್ ಶಾ' ಎಲ್ಲರ ಮನಗೆದ್ದಿತು. ಇದರ ನಂತರ ಅವರಿಗೆ ಹಲವು ಚಿತ್ರಗಳಿಂದ ಆಫರ್ಗಳು ಬರುತ್ತಿವೆ.
16 ಜನವರಿ 1985 ರಂದು ದೆಹಲಿಯಲ್ಲಿ ಜನಿಸಿದ ಸಿದ್ಧಾರ್ಥ್ ಮಲ್ಹೋತ್ರಾ ತಮ್ಮದೇ ಆದ ಶೈಲಿಯಲ್ಲಿ ಜೀವನವನ್ನು ನಡೆಸುತ್ತಾರೆ. ಆದರೆ ಅವರು ತನ್ನ ಕುಟುಂಬಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಸಂದರ್ಶನವೊಂದರಲ್ಲಿ, ರಜೆಯ ಮೇಲೆ ಕುಟುಂಬದೊಂದಿಗೆ ಅಥವಾ ಒಂಟಿಯಾಗಿ ಹೋಗಲು ಬಯಸುತ್ತೀರಾ ಎಂದು ಕೇಳಿದಾಗ.ಕುಟುಂಬ ಸಮೇತ ಹೋಗುವುದಾಗಿ ತಿಳಿಸಿದರು.
ಸಂದರ್ಶನವೊಂದರಲ್ಲಿ ಅವರು ಹುಡುಗಿಯಲ್ಲಿ ಮೊದಲ ಬಾರಿಗೆ ಏನು ಗಮನಿಸುತ್ತಾರೆ ಎಂದು ಕೇಳಿದಾಗ, ಹುಡುಗಿಯರ ಕೂದಲನ್ನು ಹಿಂದಿನಿಂದ ಮತ್ತು ಹುಡುಗಿಯರ ಕಣ್ಣುಗಳನ್ನು ಮುಂಭಾಗದಿಂದ ನೋಡುತ್ತೇನೆ. ಅವರು ಈ ಎರಡು ವಿಷಯಗಳನ್ನು ಮೊದಲ ಬಾರಿಗೆ ಹುಡುಗಿಯರಲ್ಲಿ ಗಮನಿಸುತ್ತಾರೆ ಎಂದು ಹೇಳಿದರು.
ಇನ್ನೂ ಸಿದ್ಧಾರ್ಥ್ ಮಲ್ಹೋತ್ರಾ ಅವರ ಪ್ರೇಮ ಜೀವನದ ಬಗ್ಗೆ ಹೇಳುವುದಾರೆ , ಅವರ ಮತ್ತು ಕಿಯಾರಾ ಅಡ್ವಾಣಿ ರಿಲೆಷನ್ಶಿಪ್ ಬಗ್ಗೆ ಬಹಳ ದಿನಗಳಿಂದ ಚರ್ಚೆ ನಡೆಯುತ್ತಿದೆ. ಇಬ್ಬರೂ ಹಲವಾರು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
'ಶೇರ್ ಶಾ' ಚಿತ್ರದ ಶೂಟಿಂಗ್ ವೇಳೆ ಸಿದ್ಧಾರ್ಥ್ ಮತ್ತು ಕಿಯಾರಾ ಪರಸ್ಪರ ಹತ್ತಿರವಾಗಿದ್ದರು. ಇವರಿಬ್ಬರೂ ಜೊತೆಯಾಗಿ ಕಾಣಿಸಿಕೊಂಡ ಮೊದಲ ಸಿನಿಮಾ ಇದಾಗಿತ್ತು. ಆದರೆ, ಅವರಿಬ್ಬರು ತಮ್ಮ ಸಂಬಂಧದ ಬಗ್ಗೆ ಇನ್ನೂ ಏನನ್ನೂ ಬಹಿರಂಗವಾಗಿ ಹೇಳಿಲ್ಲ.