Rashmika Mandanna: ಬಾಲಿವುಡ್ ಸಿನಿಮಾ ಮಿಷನ್ ಮಜ್ನು ಮೇ 13ಕ್ಕೆ ಬಿಡುಗಡೆ
ಕಿರಿಕ್ ಚೆಲುವೆಯ ಮೊದಲ ಬಾಲಿವುಡ್(Bollywood) ಸಿನಿಮಾ ರಶ್ಮಿಕಾ ಮಂದಣ್ಣ(Rashmika mandanna) ಬಾಲಿವುಡ್ ಸಿನಿಮಾ ಮಿಷನ್ ಮಜ್ನು(Mission Majnu) ಮೇ 13ಕ್ಕೆ ಬಿಡುಗಡೆ

ಕೊಡಗಿನ(Kodagu) ಬೆಡಗಿ ರಶ್ಮಿಕಾ ಮಂದಣ್ಣ(Rashmika Mandanna) ನಟನೆಯ ಮೊದಲ ಬಾಲಿವುಡ್ ಚಿತ್ರ ‘ಮಿಷನ್ ಮಜ್ನು’(Mission Majnu) ಮುಂದಿನ ವರ್ಷ ಮೇ 13ಕ್ಕೆ ಬಿಡುಗಡೆ ಆಗಲಿದೆ.
ಸಿದ್ಧಾರ್ಥ ಮಲ್ಹೋತ್ರಾ(Sidharth Malhotra) ಜೊತೆಗೆ ರಶ್ಮಿಕಾ ಈ ಸಿನಿಮಾದಲ್ಲಿ ನಟಿಸಿದ್ದು, ಇದೀಗ ಸಿನಿಮಾ ಬಿಡುಗಡೆಯ ಅಧಿಕೃತ ಪೋಸ್ಟರ್(Poster) ಹೊರಬಿದ್ದಿದೆ.
‘ಪಾಕಿಸ್ತಾನದ(Pakistan) ಅಕ್ರಮ ಪರಮಾಣು ಕಾರ್ಯಾಚರಣೆ ಕುತಂತ್ರವನ್ನು ಹಳಿ ತಪ್ಪಿಸಿದ ಭಾರತದ ಮಹಾನ್ ರಹಸ್ಯ ಕಾರ್ಯಾಚರಣೆಯ ಭಾಗವಾಗಲು ಸಿದ್ಧರಾಗಿ.
ಇದು ನೈಜ ಘಟನೆ ಆಧರಿತ ಚಿತ್ರ. 2022ರ ಮೇ 13ರಂದು ತೆರೆಗೆ ಬರಲಿದೆ’ ಎಂದು ನಾಯಕ ನಟ ಸಿದ್ಧಾರ್ಥ ಮಲ್ಹೋತ್ರ ಟ್ವೀಟ್ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ಅವರಿಗೂ ಟ್ಯಾಗ್ ಮಾಡಿದ್ದಾರೆ.
ಕಿರಿಕ್ ಚೆಲುವೆ ಬಾಲಿವುಡ್ ಸಿನಿಮಾ ಶೂಟ್‌ನ ಮೊದಲ ದಿನವೇ ನಟನಿಂದ ಹೊಗಳಿಸಿಕೊಂಡಿದ್ದರು. ರಶ್ಮಿಕಾ ಅವರೂ ಮೊದಲ ದಿನದ ಫೋಟೋ ಶೇರ್ ಮಾಡಿಕೊಂಡಿದ್ದರು
ಮಿಷನ್ ಮಜ್ನುವಿನ ಇಡೀ ಟೀಮ್ ರಶ್ಮಿಕಾ ಪ್ರಾಮಾಣಿಕತೆ, ಕಠಿಣ ಪರಿಶ್ರಮ ಮತ್ತು ಡೇಡಿಕೇಷನ್ ನೋಡಿ ಆಶ್ಚರ್ಯಚಕಿತರಾಗಿದ್ದಾರೆ. ರಶ್ಮಿಕಾ ಅಮಿತಾಬ್ ಬಚ್ಚನ್ ಅವರೊಂದಿಗೆ ಗುಡ್‌ಬೈ ಮತ್ತು ಅಲ್ಲು ಅರ್ಜುನ್ ಜೊತೆಗೆ ಪ್ಯಾನ್-ಇಂಡಿಯಾ ಚಿತ್ರ ಪುಷ್ಪಾ ಸಹ ಕಾಣಿಸಿಕೊಳ್ಳಲಿದ್ದಾರೆ.
ನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗವನ್ನು ಅನ್ವೇಷಿಸಿ. ಚಲನಚಿತ್ರ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿಗಳಲ್ಲಿ ನಾಟಕ ಮತ್ತು ಮನರಂಜನಾ ಜಗತ್ತಿನಲ್ಲಿ ಟ್ರೆಂಡ್ಸ್ಪಾಟಿಂಗ್ನೊಂದಿಗೆ ನವೀಕೃತವಾಗಿರಿ. ತೆರೆಮರೆಯ ಕಥೆಗಳು, OTT ಬಿಡುಗಡೆಗಳು ಮತ್ತು ರೆಡ್ ಕಾರ್ಪೆಟ್ ಕ್ಷಣಗಳನ್ನು ಅನ್ವೇಷಿಸಿ. ಗ್ಲಿಟ್ಜ್, ಗ್ಲಾಮರ್ ಮತ್ತು ಮನರಂಜನೆಗೆ ಇದು ನಿಮ್ಮ ಒಂದು-ನಿಲುಗಡೆ ತಾಣವಾಗಿದೆ.