Shehnaaz Gill ಅವರ ಸ್ಟನ್ನಿಂಗ್ ಫೋಟೋಶೂಟ್‌ನ ಕಿಲ್ಲರ್ ಲುಕ್ ವೈರಲ್
ಪಂಜಾಬ್‌ನ ಕತ್ರಿನಾ ಕೈಫ್ ಎಂದೇ ಪ್ರಸಿದ್ಧವಾಗಿರುವ ಶೆಹನಾಜ್ ಗಿಲ್ (Shehnaaz Gill) ಅವರ ಇತ್ತೀಚಿನ ಫೋಟೋಶೂಟ್ ಸಖತ್ ವೈರಲ್ ಆಗಿದೆ. ಇದನ್ನು ನೋಡಿ ಅವರ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಹಾಟ್-ಸೆಕ್ಸಿ ಮತ್ತು ಸುಂದರ ಎಂದು ಅಭಿಮಾನಿಗಳು ಹೊಗಳುತ್ತಿದ್ದಾರೆ. ಸೆಲೆಬ್ರಿಟಿ ಫೋಟೋಗ್ರಾಫರ್ ದಬ್ಬೂ ರತ್ನಾನಿಗಾಗಿ ಶಹನಾಜ್ ಫೋಟೋಶೂಟ್‌ಗೆ ಪೋಸ್ ನೀಡಿದ್ದಾರೆ.

ವೈರಲ್ ಆಗಿರುವ ಫೋಟೋಗಳಲ್ಲಿ, ಶಹನಾಜ್ ಗಿಲ್ ಪೂಲ್‌ಸೈಡ್‌ನಲ್ಲಿ ವಿಭಿನ್ನ ಭಂಗಿಗಳಲ್ಲಿ ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಈ ಸಮಯದಲ್ಲಿ, ಅವರು ಬೋಲ್ಡ್ ಬಿಳಿ ಉಡುಗೆಯನ್ನು ಧರಿಸಿದ್ದರು.
ಮುಖಕ್ಕೆ ನ್ಯೂಡ್ ಮೇಕಪ್ ಮಾಡಿಕೊಂಡಿರುವ ಶಹನಾಜ್ ತನ್ನ ಸೌಂದರ್ಯಕ್ಕೆ ಮತ್ತಷ್ಟು ಮೆರಗು ನೀಡುತ್ತಿದ್ದಾರೆ. ಅವರ ಇತ್ತೀಚಿನ ಫೋಟೋಶೂಟ್ ಸಖತ್ ವೈರಲ್ ಆಗಿದೆ.
ಶೆಹನಾಜ್ ಗಿಲ್ ಅವರ ಕಿಲ್ಲರ್ ಲುಕ್ ಬಗ್ಗೆ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.ಛಾಯಾಗ್ರಾಹಕ ದಬ್ಬೂ ರತ್ನಾನಿ ಅವರು ತಮ್ಮ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಶಹನಾಜ್ ಗಿಲ್ ಅವರ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ,
ಅವರ ಫೋಟೋಗಳಿಗೆ ಅಭಿಮಾನಿಗಳು ಕಾಮೆಂಟ್ಸ್ ಮತ್ತು ಮೆಚ್ಚುಗೆ ಮಳೆ ಸುರಿಸಿದ್ದಾರೆ.'ಬ್ಯೂಟಿ ಕ್ವೀನ್ ಶಹನಾಜ್' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ 'ಸನಾ ಎಷ್ಟು ಸುಂದರವಾಗಿದ್ದೀರಿ' ಎಂದು ಇನ್ನೊಬ್ಬರು ಬರೆದಿದ್ದಾರೆ.
ಬೋಲ್ಡ್ ಅಂಡ್ ಹಾಟ್,ಸೂಪರ್ ಹಾಟ್, ಹೃದಯದ ರಾಣಿ, ಬ್ಯೂಟಿಫುಲ್ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದರೆ. ಅದೇ ಸಮಯದಲ್ಲಿ, ಹೆಚ್ಚಿನ ಅಭಿಮಾನಿಗಳು ಹೃದಯ ಮತ್ತು ಬೆಂಕಿಯ ಎಮೋಜಿಯನ್ನು ಹಂಚಿಕೊಳ್ಳುವ ಮೂಲಕ ಕಾಮೆಂಟ್ ಮಾಡಿದ್ದಾರೆ.
ಶಹನಾಜ್ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ . ಬಿಗ್ ಬಾಸ್ 13 ರ ಸ್ಪರ್ಧಿ ಶೆಹನಾಜ್ ಗಿಲ್ ಅವರ ಲುಕ್‌ನಲ್ಲಿ ಸಾಕಷ್ಟು ಬದಲಾವಣೆಯಾಗಿದೆ.
ಶೆಹನಾಜ್ ಗಿಲ್ ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಅವರು ತಮ್ಮ ಲುಕ್‌ಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಈಗ ತುಂಬಾ ಗ್ಲಾಮರಸ್ ಆಗಿ ಕಾಣಿಸುತ್ತಿದ್ದಾರೆ.
ಶೆಹನಾಜ್ ಕೆಲವು ಮ್ಯೂಸಿಕ್ ವೀಡಿಯೋಗಳಲ್ಲಿ ಕೆಲಸ ಮಾಡಿದ್ದಾರೆ ಮತ್ತು ಈಗ ಅವರು ಬಾಲಿವುಡ್‌ಗೆ ಕಾಲಿಡಲಿದ್ದಾರೆ. ಅವರು ಸಲ್ಮಾನ್ ಖಾನ್ ಅವರ ಮುಂಬರುವ ಚಿತ್ರ ಕಭಿ ಈದ್ ಕಭಿ ದೀವಾಲಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸದ್ಯ ಚಿತ್ರದ ಶೂಟಿಂಗ್ ಹೈದರಾಬಾದ್ ನಲ್ಲಿ ನಡೆಯುತ್ತಿದೆ. ಇತ್ತೀಚೆಗೆ ಶೂಟಿಂಗ್ ಸೆಟ್‌ನಲ್ಲಿರುವ ಶೆಹನಾಜ್‌ನ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.