Hanu Man 2 : ಹನುಮಾನ್ ಸಿನಿಮಾವು ಬಾಕ್ಸ್ ಆಫೀಸ್ನಲ್ಲಿ ಭಾರೀ ಸದ್ದು ಮಾಡಿತ್ತು. ಇದೀಗ 'ಹನು-ಮಾನ್ 2' ಸಿನಿಮಾ ಬಿಡುಗಡೆಯಾಗಲು ಸಿದ್ಧವಾಗುತ್ತಿದೆ. ಈ ಚಿತ್ರದ ಮೊದಲ ಭಾಗದಲ್ಲಿ ತೇಜ ಸಜ್ಜಾ ನಾಯಕನಾಗಿ ನಟಿಸಿದ್ದರು. ಆದರೆ ಇದೀಗ ಸೀಕ್ವೆಲ್ ಸಿನಿಮಾದಿಂದ ತೇಜ ಸಜ್ಜಾ ಹೊರಬಿದ್ದಿದ್ದಾರೆ. ಹಾಗಿದ್ರೆ ಹೊಸದಾಗಿ ಎಂಟ್ರಿ ಕೊಟ್ಟ ನಾಯಕ ಯಾರು ಗೊತ್ತಾ?
'ಹನು-ಮಾನ್ 2' ಸಿನಿಮಾದಿಂದ ತೇಜ ಸಜ್ಜಾ ಔಟ್!
2024ರಲ್ಲಿ ತೇಜ ಸಜ್ಜಾ ಅಭಿನಯದ 'ಹನು-ಮಾನ್' ಸಿನಿಮಾ ಬಿಡುಗಡೆಯಾಗಿತ್ತು. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗಳಿಕೆ ಮಾಡಿತ್ತು. ದೇಶ ಮತ್ತು ವಿದೇಶಗಳಲ್ಲಿ ಒಟ್ಟಾರೆಯಾಗಿ 295 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇದೀಗ ಈ ಚಿತ್ರದ ಸೀಕ್ವೆಲ್ ಬರಲು ಸಿದ್ಧವಾಗಿದೆ. ನಿರ್ಮಾಪಕರು 'ಹನು-ಮಾನ್ 2' ಸಿನಿಮಾವನ್ನು ಘೋಷಿಸಿದ್ದಾರೆ. ಆದರೆ ಈ ಬಾರಿ ಚಿತ್ರದಿಂದ ತೇಜ ಸಜ್ಜಾ ಹೊರಗುಳಿದಿದ್ದಾರೆ. ಅವರ ಬದಲಿಗೆ ವೈಷ್ಣವ್ ತೇಜ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.
ನಿರ್ಮಾಪಕರು ಶನಿವಾರ ಚಿತ್ರದ ಸೀಕ್ವೆಲ್ನ ಅಧಿಕೃತ ಘೋಷಣೆ ಮಾಡುವ ಮೂಲಕ ಅಭಿಮಾನಿಗಳ ಕಾಯುವಿಕೆಗೆ ತೆರೆ ಎಳೆದಿದ್ದಾರೆ. ಚಿತ್ರಕ್ಕೆ 'ಹನು-ಮಾನ್ 2 – ದಿ ರೈಸ್ ಆಫ್ ವಾನರಾಸ್' ಎಂದು ಹೆಸರಿಡಲಾಗಿದೆ. ವಿಶೇಷವೆಂದರೆ, ಈ ಬಾರಿ ನಟ ವೈಷ್ಣವ್ ತೇಜ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರ್ಮಾಪಕರು ಚಿತ್ರದ ಮೊದಲ ಪೋಸ್ಟರ್ ಕೂಡ ಬಿಡುಗಡೆ ಮಾಡಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ.
'ಹನು-ಮಾನ್ 2' ಪೋಸ್ಟರ್ ರಿಲೀಸ್
ಚಿತ್ರದ ನಿರ್ಮಾಣ ಸಂಸ್ಥೆ ಪ್ರೈಮ್ಶೋ ಎಂಟರ್ಟೈನ್ಮೆಂಟ್ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ 'ಹನು-ಮಾನ್ 2 – ದಿ ರೈಸ್ ಆಫ್ ವಾನರಾಸ್' ಚಿತ್ರದ ಪೋಸ್ಟರ್ ಹಂಚಿಕೊಂಡಿದೆ. ಪೋಸ್ಟರ್ನಲ್ಲಿ ಭವ್ಯವಾದ ಮತ್ತು ನಿಗೂಢ ಜಗತ್ತಿನ ಒಂದು ನೋಟ ಕಾಣಿಸುತ್ತದೆ. ಮೋಡಗಳ ನಡುವೆ ಹನುಮಂತನ ಬಾಲವು ಒಬ್ಬರನ್ನು ಮೇಲಕ್ಕೆ ಏರುತ್ತಿರುವ ಪ್ರಭಾವಶಾಲಿ ದೃಶ್ಯವನ್ನು ತೋರಿಸಲಾಗಿದೆ. ಹನುಮಂತನ ಇರುವಿಕೆಯನ್ನು ಸಹ ನೀವು ಕಾಣಬಹುದು. ಪೋಸ್ಟರ್ನ ದೃಶ್ಯಗಳನ್ನು ಗಮನಿಸಿದರೆ, ಈ ಬಾರಿ ನಿರ್ಮಾಪಕರು ಪ್ರೇಕ್ಷಕರನ್ನು ಮೊದಲಿಗಿಂತಲೂ ದೊಡ್ಡ ಫ್ಯಾಂಟಸಿ ಜಗತ್ತಿಗೆ ಕರೆದೊಯ್ಯುವ ಸಿದ್ಧತೆಯಲ್ಲಿದ್ದಾರೆ ಎಂಬುದು ತಿಳಿಯುತ್ತದೆ.
ಪೋಸ್ಟರ್ ಜೊತೆಗೆ ನಿರ್ಮಾಪಕರು, 'ಒಂದು ಕನಸಿನೊಂದಿಗೆ ಆರಂಭವಾದ ಪ್ರಯಾಣ ಇದೀಗ ಇನ್ನಷ್ಟು ದೊಡ್ಡ ಆಲೋಚನೆಯೊಂದಿಗೆ ಮುಂದುವರಿಯುತ್ತಿದೆ. ನಮ್ಮ ಮುಂದಿನ ಮಹತ್ವಾಕಾಂಕ್ಷೆಯ ಯೋಜನೆಯ ಮೂಲಕ ಹನು-ಮಾನ್ ಚಿತ್ರದ ಪರಂಪರೆಯನ್ನು ಮುಂದುವರಿಸುತ್ತಿರುವುದಕ್ಕೆ ನಮಗೆ ಹೆಮ್ಮೆಯಿದೆ. ಇಲ್ಲಿದೆ 'ಹನು-ಮಾನ್ 2 – ದಿ ರೈಸ್ ಆಫ್ ವಾನರಾಸ್'. ಚಿತ್ರದಲ್ಲಿ ವೈಷ್ಣವ್ ತೇಜ್ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರದ ಕುರಿತಾದ ಹೊಸ ಮಾಹಿತಿಯನ್ನು ಶೀಘ್ರದಲ್ಲೇ ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ' ಎಂದು ಬರೆದುಕೊಂಡಿದ್ದಾರೆ.
ತೇಜ ಸಜ್ಜಾ ಬದಲಿಗೆ ವೈಷ್ಣವ್ ತೇಜ್ಗೆ ಅವಕಾಶ
ಈ ಸಿನಿಮಾದಲ್ಲಿ ನಟ ವೈಷ್ಣವ್ ತೇಜ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಅವರ ಪಾತ್ರ ಮತ್ತು ಚಿತ್ರದ ಕಥೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ನಿರ್ಮಾಪಕರು ಇನ್ನೂ ಹಂಚಿಕೊಂಡಿಲ್ಲ.
















