ಸಿದ್ಧಾರ್ಥ್ ಶುಕ್ಲಾ ನಿಧನದಿಂದ ಶಾಕಲ್ಲಿದ್ದ Shehnaaz Gill ಹಾಟ್ ಲುಕ್ಕಲ್ಲಿ ಪ್ರತ್ಯಕ್ಷ
ಪಂಜಾಬಿ ನಟಿ ಶೆಹನಾಜ್ ಗಿಲ್ (Shehnaaz Gill) ಈಗ ಬಾಲಿವುಡ್ ಪ್ರವೇಶಿಸಲು ಸಿದ್ಧರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಮ್ಮ ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಹರಿಸಿದ್ದು, ಸ್ಲಿಮ್ ಆಂಡ್ ಟ್ರಿಮ್ ಆಗಿದ್ದಾರೆ ಮತ್ತು ಸುಂದರಿ ಈಗ ಹಾಟ್ ಹುಡುಗಿಯಾಗಿ ಬದಲಾಗಿದ್ದಾರೆ. ಅವರ ಇತ್ತೀಚಿನ ಫೋಟೋಗಳು ಅವರ ಹಾಟ್ನೆಸ್ನ ಕಥೆಯನ್ನು ಹೇಳುತ್ತಿದೆ. ತನ್ನ ಹಾಟ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಶಹನಾಜ್ ಬಿಸಿ ಹೆಚ್ಚಿಸಿದ್ದಾರೆ.
ಶಹನಾಜ್ ಗಿಲ್ ಶುಕ್ರವಾರ ಅಂದರೆ ಜೂನ್ 10ರಂದು ಇನ್ಸ್ಟಾಗ್ರಾಮ್ನಲ್ಲಿ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಹಾಟ್ ಮತ್ತು ಸಿಜ್ಲಿಂಗ್ ಆಗಿ ಕಾಣುತ್ತಿದ್ದಾರೆ.
ಜಂಪ್ಸೂಟ್ನಲ್ಲಿ ಅವರ ಪರ್ಫೇಕ್ಟ್ ಫಿಗರ್ ಗೋಚರಿಸುತ್ತಿದೆ. ಫೋಟೋಗಳನ್ನು ನೋಡಿದ ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ. ಈ ಫೋಟೋದಲ್ಲಿ ಶಹನಾಜ್ ಗಿಲ್ ಆಫ್ ಶೋಲ್ಡರ್ ಓನ್ ಪೀಸ್ ಸೂಟ್ ಧರಿಸಿದ್ದಾರೆ.
ತಿಳಿ ಕಂದು ಬಣ್ಣದ ಉಡುಪಿನಲ್ಲಿ ಅವರು ಸುಂದರವಾಗಿ ಕಾಣುತ್ತಿದ್ದಾರೆ. ಔಟ್ಫಿಟ್ ಜೊತೆ ಕತ್ತಿಗೆ ಚಿನ್ನದ ಬಣ್ಣದ ಚೋಕರ್ ಹಾಕಿಕೊಂಡಿದ್ದಾರೆ. ವಿಭಿನ್ನ ಶೈಲಿಯಲ್ಲಿ ಕೂದಲನ್ನು ಕಟ್ಟಿಕೊಂಡಿದ್ದಾರೆ.
ಶಹನಾಜ್ ತಮ್ಮ ಸೌಂದರ್ಯವನ್ನು ಹೆಚ್ಚಿಸಲು ಲೈಟ್ ಮೇಕಪ್ ಮಾಡಿ ಕೊಂಡಿದ್ದಾರೆ. ಕಣ್ಣುಗಳನ್ನು ಹೈಲೈಟ್ ಮಾಡಲು ಸ್ಮೋಕಿ ಮೇಕಪ್ ಮಾಡಲಾಗಿದೆ. ನಟಿಯ ಫೋಟೋಗಳನ್ನು ನೋಡಲು ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ.
ಅಭಿಮಾನಿಯೊಬ್ಬರು 'OMG ಸೂಪರ್ ಡ್ಯೂಪರ್ ಗಾರ್ಜಿಯಸ್' ಎಂದು ಬರೆದಿದ್ದಾರೆ. 'ಶೆಹನಾಜ್ ತುಂಬಾ ಹಾಟ್ ಆಗಿದ್ದಾರೆ' ಎಂದು ಮತ್ತೊಬ್ಬರು ಬರೆದಿದ್ದಾರೆ. ನಟಿಯ ಪೋಸ್ಟ್ನಲ್ಲಿ ಸ್ಟನಿಂಗ್, ಹಾಟ್ ಎಂಬಂತಹ ಕಾಮೆಂಟ್ಗಳ ಸುರಿಮಳೆಯಾಗಿದೆ.
ಸಲ್ಮಾನ್ ಖಾನ್ ಅಭಿನಯದ ಕಭಿ ಈದ್ ಕಭಿ ದೀವಾಲಿ ಚಿತ್ರದಲ್ಲಿ ಶಹನಾಜ್ ಗಿಲ್ ಕಾಣಿಸಿಕೊಳ್ಳಲಿದ್ದಾರೆ. ನಟಿ ಭಾಯಿ ಜಾನ್ಗೆ ತುಂಬಾ ಹತ್ತಿರವಾಗಿದ್ದಾರೆ ಮತ್ತು ಅವರು ಸಲ್ಮಾನ್ ಖಾನ್ ಅನ್ನು ತುಂಬಾ ಗೌರವಿಸುತ್ತಾರೆ.
ಬಿಗ್ ಬಾಸ್ 13 ರ ಸಮಯದಲ್ಲಿ, ಶಹನಾಜ್ ಸಿದ್ಧಾರ್ಥ್ ಶುಕ್ಲಾ ಅವರೊಂದಿಗೆ ಸಂಬಂಧ ಹೊಂದಿದ್ದರು. ಆದರೆ ನಟನ ಅಕಾಲಿಕ ನಿಧನದಿಂದ ಶಹನಾಜ್ ಶಾಕ್ ಆಗಿದ್ದರುರು. ಹಲವಾರು ತಿಂಗಳುಗಳಿಂದ ಜನರಿಂದ ದೂರವಿದ್ದ ಅವರು ಮತ್ತೆ ಈಗ ವೃತ್ತಿ ಜೀವನಕ್ಕೆ ಮರಳಿದ್ದಾರೆ. ಮತ್ತು ಅವರನ್ನು ದೊಡ್ಡ ಪರದೆಯ ಮೇಲೆನೋಡಲು ಫ್ಯಾನ್ಸ್ ಉತ್ಸುಕರಾಗಿದ್ದಾರೆ.