Salman Khan birthday: ಬಾಲಿವುಡ್ ಬ್ಯಾಡ್ ಬಾಯ್ ಆಸ್ತಿ ಮತ್ತು ಲೈಫ್ ಸ್ಟೈಲ್!
ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್(Salman Khan) ಅವರಿಗೆ 56 ವರ್ಷಗಳ ಸಂಭ್ರಮ. ಡಿಸೆಂಬರ್ 27, 1965 ರಂದು ಇಂದೋರ್‌ನಲ್ಲಿ ಜನಿಸಿದ ಸಲ್ಮಾನ್ 30 ವರ್ಷಗಳಿಗೂ ಹೆಚ್ಚು ಕಾಲ ತನ್ನ ವೃತ್ತಿ ಜೀವನದಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಪ್ರಸಿದ್ಧ ಚಲನಚಿತ್ರ ಬರಹಗಾರ ಸಲೀಂ ಖಾನ್ (Salim Khan) ಅವರ ಮಗ ಸಲ್ಮಾನ್ ಖಾನ್ ಅವರ ಪೂರ್ಣ ಹೆಸರು ಅಬ್ದುಲ್ ರಶೀದ್ ಸಲೀಂ ಖಾನ್. ಕೋಟಿಗಟ್ಟಲೆ ಆಸ್ತಿಯ ಒಡೆಯ ಸಲ್ಮಾನ್ ತಮ್ಮ ಮೊದಲ ಗಳಿಕೆ ಕೇವಲ 75 ರೂಪಾಯಿ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ವರದಿಗಳ ಪ್ರಕಾರ, ಅವರ ಹೆಸರಿನಲ್ಲಿ ಅನೇಕ ನಗರಗಳಲ್ಲಿ ಆಸ್ತಿಗಳಿವೆ. ಅವರು ಬೀಯಿಂಗ್ ಹ್ಯೂಮನ್ (Being Human) ಎಂಬ ತಮ್ಮದೇ ಆದ ಬಟ್ಟೆ ಬ್ರಾಂಡ್ ಅನ್ನು ಹೊಂದಿದ್ದಾರೆ. ಸುದ್ದಿ ಪ್ರಕಾರ ಸಲ್ಮಾನ್ ಸುಮಾರು 2300 ಕೋಟಿ ರೂ. ಆಸ್ತಿಯ ಒಡೆಯ. ಸಲ್ಮಾನ್ ಖಾನ್ ಅವರ ಆಸ್ತಿ ಮತ್ತು ಲೈಫ್ ಸ್ಟೈಲ್ ವಿವರ ಇಲ್ಲಿದೆ
ಬಿವಿ ಹೋ ತೋ ಐಸಿ (Biwi Ho to Yesi) ಚಿತ್ರದ ಮೂಲಕ ತಮ್ಮ ವೃತ್ತಿ ಜೀವನದ ಸಲ್ಮಾನ್ ಖಾನ್, ಈ ಸಿನಿಮಾದಲ್ಲಿ ಪೋಷಕ ನಟನ ಪಾತ್ರವನ್ನು ನಿರ್ವಹಿಸಿದ್ದಾರೆ. ನಾಯಕ ನಟನಾಗಿ ಅವರ ಮೊದಲ ಚಿತ್ರ ಸೂರಜ್ ಬರ್ಜಾತ್ಯಾ ಅವರ ಮೈನೆ ಪ್ಯಾರ್ ಕಿಯಾ (Maine Pyar Kiya).
ಸಲ್ಮಾನ್ ಖಾನ್ ಅವರ ಮೈನೆ ಪ್ಯಾರ್ ಕಿಯಾ ಸಿನಿಮಾ ಆ ಸಮಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳಲ್ಲಿ ಒಂದಾಗಿದೆ ಹಾಗೂ ಸಲ್ಮಾನ್ ಈ ಫಿಲ್‌ಮ್‌ಗೆ ಅತ್ಯುತ್ತಮ ನಟ ಫಿಲ್ಮ್‌ಫೇರ್ ಪ್ರಶಸ್ತಿಯನ್ನೂ ಪಡೆದರು. ಆದರೆ ಚಿತ್ರ ಹಿಟ್ ಆದ ನಂತರವೂ ಹಲವು ತಿಂಗಳು ಕೆಲಸ ಸಿಗಲಿಲ್ಲ ಎಂದು ಸಲ್ಮಾನ್ ಖಾನ್ ತಮ್ಮ ಸಂದರ್ಶನಗಳಲ್ಲಿ ಹಲವು ಬಾರಿ ಹೇಳಿದ್ದರು.
ಸಲ್ಮಾನ್ ಖಾನ್ ಅವರು ಐಷಾರಾಮಿ ಮನೆ, ಕಾರುಗಳು, ಬೈಕ್‌ಗಳು ಮಾತ್ರವಲ್ಲದೆ ಅವರ ಸ್ವಂತ ಖಾಸಗಿ ವಿಹಾರ ನೌಕೆ ಹೊಂದಿದ್ದಾರೆ, ಇದರ ಬೆಲೆ 3 ಕೋಟಿ ರೂಪಾಯಿ. ಸಲ್ಮಾನ್ ಸೈಕ್ಲಿಂಗ್ ಎಂದರೆ ತುಂಬಾ ಇಷ್ಟ. ಅವರು ಕೆಲವೊಮ್ಮೆ ಮುಂಬೈನ ಬೀದಿಗಳಲ್ಲಿ ಸೈಕ್ಲಿಂಗ್ ಮಾಡುವುದನ್ನು ಕಾಣಬಹುದು. ಅವರ ಬಳಿ 9 ಕಾರುಗಳಿವೆ.
ಮುಂಬೈನ ಬಾಂದ್ರಾದ ಬ್ಯಾಂಡ್‌ಸ್ಟ್ಯಾಂಡ್ ರಸ್ತೆಯಲ್ಲಿರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಸಲ್ಮಾನ್ ಖಾನ್ ಅವರಿಂದಲೇ ಫೇಮಸ್ ಆಗಿದೆ. ಸಲ್ಮಾನ್ ಮೊದಲಿನಿಂದಲೂ ತನ್ನ ತಂದೆ ಸಲೀಂ ಖಾನ್ ಮತ್ತು ತಾಯಿ ಸಲ್ಮಾ ಖಾನ್ ಅವರೊಂದಿಗೆ ಇಲ್ಲಿ ವಾಸಿಸುತ್ತಿದ್ದಾರೆ.
Galaxy Apartments 8 ಅಂತಸ್ತಿನ ಕಟ್ಟಡ. ಈ ಅಪಾರ್ಟ್ಮೆಂಟ್‌ನಲ್ಲಿ ಹಲವಾರು ಕುಟುಂಬಗಳು ವಾಸಿಸುತ್ತವೆ. ಸಲ್ಮಾನ್ ಎರಡು ಮಹಡಿಗಳನ್ನು ಹೊಂದಿದ್ದು, ಅದರ ನೆಲ ಮಹಡಿಯಲ್ಲಿ ಸಲ್ಮಾನ್ ವಾಸಿಸುತ್ತಿದ್ದಾರೆ ಮತ್ತು ಅವರ ಪೋಷಕರು ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದಾರೆ.
ಸಲ್ಮಾನ್ ಖಾನ್ ಅವರ ಪನ್ವೆಲ್ ಫಾರ್ಮ್‌ಹೌಸ್ ಬೆಲೆ 80 ಕೋಟಿ ಬೆಲೆ ಬಾಳುತ್ತದೆ ಎನ್ನಲಾಗಿದೆ. ಆದರೆ ಸಲ್ಮಾನ್ ಈ ಫಾರ್ಮ್‌ಹೌಸ್ ಅನ್ನು ತನ್ನ ಸಹೋದರಿ ಅರ್ಪಿತಾ ಖಾನ್ ಶರ್ಮಾ ಫಾರ್ಮ್ ಹೌಸ್ ಎಂದೂ ಕರೆಯುತ್ತಾರೆ. ಈ ಫಾರ್ಮ್ ಹೌಸ್ 150 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ.
ವರದಿಗಳ ಪ್ರಕಾರ ಸಲ್ಮಾನ್ ಖಾನ್ ರೆಸಿಂಡೆನ್ಷಿಯಲ್ ಕಾಂಪ್ಲೆಕ್ಸ್‌ನ 11ನೇ ಮಹಡಿಯಲ್ಲಿ ಟ್ರಿಪ್ಲೆಕ್ಸ್ ಫ್ಲಾಟ್ ಖರೀದಿಸಿದ್ದಾರೆ. ಈ ಫ್ಲ್ಯಾಟ್‌ನ ಬೆಲೆ 30 ಕೋಟಿ ರೂ. ಇದೀಗ ಈ ಫ್ಲಾಟ್‌ನಲ್ಲಿ ಕೆಲಸ ನಡೆಯುತ್ತಿದೆ. ಫ್ಲಾಟ್ ಕೆಲಸ ಮುಗಿದ ತಕ್ಷಣ ಸಲ್ಮಾನ್ ಕುಟುಂಬ ಸಮೇತ ಅಲ್ಲಿಗೆ ಶಿಫ್ಟ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸಲ್ಮಾನ್ ಖಾನ್ ತಮ್ಮ 51 ನೇ ಹುಟ್ಟುಹಬ್ಬದಂದು ಐಷಾರಾಮಿ ಫಾರ್ಮ್ ಹೌಸ್ ಖರೀದಿಸಿದ್ದಾರೆ. ಅವರ ಗೊರೈ ಫಾರ್ಮ್‌ಹೌಸ್ 100 ಎಕರೆಗಳಷ್ಟು ವಿಸ್ತಾರವಾಗಿದೆ. ಈ ಫಾರ್ಮ್‌ಹೌಸ್‌ನಲ್ಲಿ ಎಲ್ಲಾ ಸೌಲಭ್ಯಗಳು ಲಭ್ಯವಿದೆ. ಇದಲ್ಲದೆ ಅವರು ದುಬೈನಲ್ಲಿ ಐಷಾರಾಮಿ ಬಂಗಲೆಯನ್ನೂ ಖರೀದಿಸಿದ್ದಾರೆ. ಅವರ ಬಂಗಲೆ ಬುರ್ಜ್ ಪೆಸಿಫಿಕ್ ಅಪಾರ್ಟ್‌ಮೆಂಟ್‌ನಲ್ಲಿದೆ.
'ನಾನು ಮದುವೆಯಾದರೂ ಅಥವಾ ಆಗದೆ ಇದ್ದರೂ, ನಾನು ಹೋದ ನಂತರ, ನನ್ನ ಅರ್ಧದಷ್ಟು ಆಸ್ತಿಯನ್ನು ಟ್ರಸ್ಟ್‌ಗೆ ದಾನ ಮಾಡಲಾಗುವುದು. ನಾನು ಮದುವೆಯಾಗದಿದ್ದರೆ ನನ್ನ ಸಂಪೂರ್ಣ ಆಸ್ತಿ ಟ್ರಸ್ಟ್ ಹೆಸರಿನಲ್ಲಿದೆ' ಎಂದು ಸಲ್ಮಾನ್ ಖಾನ್ ಸಂದರ್ಶನವೊಂದರಲ್ಲಿ ಹೇಳಿದ್ದರು.
ಸಲ್ಮಾನ್ ಖಾನ್ ಉದಾರತೆಗೆ ಫೇಮಸ್ ಮತ್ತು ಅವರು ತಮ್ಮ ಸ್ನೇಹಕ್ಕಾಗಿ ಹಾಗೂ ಜನರ ಕಷ್ಟದ ಸಮಯದಲ್ಲಿ ಸಹಾಯ ಮಾಡುವುದಕ್ಕೆ ಜನಪ್ರಿಯರಾಗಿದ್ದಾರೆ. ಕೊರೋನಾ ಎರಡನೇ ಅಲೆಯ ನಂತರ, ಮಹಾರಾಷ್ಟ್ರದಲ್ಲಿ ಲಾಕ್‌ಡೌನ್ ಕಾರಣದಿಂದಾಗಿ ಚಿತ್ರರಂಗದ ಸಾವಿರಾರು ದಿನಗೂಲಿ ಕಾರ್ಮಿಕರು ಜೀವನ ನೆಡೆಸಲು ಕಷ್ಟ ಪಡಬೇಕಾಯಿತು. ಸಲ್ಮಾನ್ ಅವರ ಸಹಾಯಕ್ಕೆ ಮುಂದಾದರು. FWICE ನ 25 ಸಾವಿರ ಸದಸ್ಯರಿಗೆ ಆರ್ಥಿಕವಾಗಿ ಸಹಾಯ ಮಾಡಿದರು ಮತ್ತು ಒಂದೂವರೆ ಸಾವಿರ ರೂಪಾಯಿಗಳನ್ನು ನೇರವಾಗಿ ಅವರ ಖಾತೆಗೆ ಟ್ರಾನ್ಸ್‌ಫರ್ ಮಾಡಿದ್ದರು.