Salman Khan: ಸಲ್ಮಾನ್ ಖಾನ್‌ಗೆ ಹಾವು ಕಡಿತ ಫಾರ್ಮ್‌ ಹೌಸ್‌ನಲ್ಲಿದ್ದಾಗ ಸಲ್ಲುಗೆ ಕಚ್ಚಿದ ಹಾವು

ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಅವರಿಗೆ ಹಾವು ಕಚ್ಚಿದೆ. ಬಾಲಿವುಡ್ ಸ್ಟಾರ್ ನಟ, ಬಿಗ್‌ಬಾಸದ ಹೋಸ್ಟ್‌ಗೆ ಪಾನ್ವೆಲ್ ಫಾರ್ಮ್ ಹೌಸ್‌ನಲ್ಲಿ ಹಾವು ಕಚ್ಚಿದೆ. ಅದೃಷ್ಟವಶಾತ್ ನಟ ಅಪಾಯದಿಂದ ಪಾರಾಗಿದ್ದು ಗುಣಮುಖರಾಗಿದ್ದಾರೆ ಎಂದು ಹೇಳಿದ್ದಾರೆ. ನಟನಿಗೆ ಕಚ್ಚಿರುವ ಹಾವು ವಿಷಕಾರಿ ಅಲ್ಲ ಎಂದು ಹೇಳಲಾಗಿದೆ. ಎಬಿಪಿ ಈ ಸುದ್ದಿಯನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದೆ. ಭಾನುವಾರ ಮುಂಜಾನೆ ಈ ಘಟನೆ ನಡೆದಿದೆ. ನಟನನ್ನು ಚಿಕಿತ್ಸೆಗಾಗಿ ಕಾಮೋಥೆಯಲ್ಲಿರುವ ಎಂಜಿಎಂ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇಂದು ಬೆಳಗ್ಗೆ 9 ಗಂಟೆಗೆ ಅವರನ್ನು ಡಿಸ್ಚಾರ್ಜ್ ಮಾಡಲಾಯಿತು.

ಹಾವು ಸಲ್ಮಾನ್ ಖಾನ್ ಅವರ ಕೈಗೆ ಕಚ್ಚಿದೆ. ಆದರೆ ಅವರು ಈಗ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರಿಗೆ ವಿಷ ನಿವಾರಕ ಔಷಧವನ್ನು ನೀಡಲಾಯಿತು. ಕೆಲವು ಗಂಟೆಗಳ ವೀಕ್ಷಣೆಯ ನಂತರ ನಟನನ್ನು ಮನೆಗೆ ಹೋಗಲು ಅನುಮತಿಸಲಾಯಿತು ಎನ್ನಲಾಗಿದೆ.

ಸಲ್ಮಾನ್‌ಖಾನ್‌ ಪನ್ವೆಲ್ ಫಾರ್ಮ್‌ಹೌಸ್‌ ಜಿಮ್‌ನಲ್ಲಿ ಕಾಳಿಂಗ ಸರ್ಪ

ನಟ ತನ್ನ ಅದ್ದೂರಿ ಪನ್ವೇಲ್ ಫಾರ್ಮ್‌ಹೌಸ್‌ನಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದು ಒಂದು ರೀತಿಯ ಸಂಪ್ರದಾಯವಾಗಿದೆ. ಎಲ್ಲಾ ಸಂಭವನೀಯತೆಗಳಲ್ಲಿ ಸಲ್ಮಾನ್ ಇಂದು ರಾತ್ರಿ ನಿಕಟವಾದ ಪಾರ್ಟಿಯನ್ನು ಆಯೋಜಿಸಬಹುದು ಎನ್ನಲಾಗಿತ್ತು. ಕಳೆದ ವರ್ಷ ಲಾಕ್‌ಡೌನ್‌ನ ಹೆಚ್ಚಿನ ಸಮಯವನ್ನು, ಸಲ್ಮಾನ್ ಖಾನ್ ಅವರ ಸಹೋದರಿ ಅರ್ಪಿತಾ ಖಾನ್ ಶರ್ಮಾ ಅವರ ಹೆಸರಿನ ಪನ್ವೆಲ್ ಫಾರ್ಮ್‌ಹೌಸ್‌ನಲ್ಲಿ ಉಳಿದುಕೊಂಡಿದ್ದರು. ನಟ ಅವರು ಜಮೀನಿನಲ್ಲಿ ಕೆಲಸ ಮಾಡುವ ಮತ್ತು ಬೀಜಗಳನ್ನು ಬಿತ್ತುತ್ತಿರುವ ಹಲವಾರು ಚಿತ್ರಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ಸಲ್ಮಾನ್ ಖಾನ್ ಕಳೆದ ವರ್ಷ ಜಾಕ್ವೆಲಿನ್ ಫರ್ನಾಂಡಿಸ್ ಅವರ ಜೊತೆ ಫಾರ್ಮ್‌ಹೌಸ್‌ನಲ್ಲಿ ಹಾಡಿನ ಚಿತ್ರೀಕರಣ ನಡೆಸಿದ್ದರು.

ಫಾರ್ಮ್ ಹೌಸ್ ವಿಶೇಷತೆ:

ಸಲ್ಮಾನ್ ಖಾನ್ ಜೀವನ ಅನ್‌ಸ್ರ್ಕೀನ್‌ ಹಾಗೂ ಅಫ್‌ಸ್ರ್ಕೀನ್‌ ಎರಡೂ ಇಂಟರೆಸ್ಟಿಂಗ್‌. ಸಲ್ಲು ಬಾಯಿ ಲೈಫನ್ನು ಸಂಪೂರ್ಣವಾಗಿ ಬದುಕಲು ಇಷ್ಟಪಡುತ್ತಾರೆ. ಬಾಲಿವುಡ್‌ನ ಈ ಸೂಪರ್‌ ಸ್ಟಾರ್‌ ಕಳೆದ 40 ವರ್ಷಗಳಿಂದ ತನ್ನ ಕುಟುಂಬದೊಂದಿಗೆ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಒಂದು ಸಣ್ಣ ಕೋಣೆಯಲ್ಲಿ ವಾಸಿಸುತ್ತಿರುವುದು ಎಲ್ಲಿರಿಗೂ ತಿಳಿದಿದೆ. ಆದರೆ ಪನ್‌ವೆಲ್‌ನಲ್ಲಿ ಅವರು ಒಂದು ದೊಡ್ಡ ಫಾರ್ಮ್ ಹೌಸ್ ಹೊಂದಿರುವುದಿನ್ನೂ ಹಲವರಿಗೆ ತಿಳಿದಿಲ್ಲ, ಅಲ್ಲಿ ಹೆಚ್ಚಾಗಿ ದೊಡ್ಡ ಪಾರ್ಟಿ ಮತ್ತು ಫ್ಯಾಮಿಲಿಯೊಂದಿಗೆ ಫ್ರೀ ಟೈಮ್‌ ಕಳೆಯುತ್ತಾರೆ ಬಾಲಿವುಡ್‌ ಸುಲ್ತಾನ್‌

View post on Instagram

ಮುಂಬೈನ ಅತ್ಯಂತ ದುಬಾರಿ ಆಸ್ತಿಗಳಲ್ಲಿ ಒಂದಾದ ಸೂಪರ್‌ಸ್ಟಾರ್‌ ಸಲ್ಮಾನ್ ಖಾನ್ ಅವರ ಪನ್ವೆಲ್ ಫಾರ್ಮ್ ಹೌಸ್ ಐಷಾರಾಮಿುಗೆ ಮತ್ತೊಂದು ಹೆಸರು. 150 ಎಕರೆ ಪ್ರದೇಶದಲ್ಲಿ ಹರಡಿರುವ ಹಚ್ಚ ಹಸಿರಿನ ತೋಟದಮನೆ ಸಲ್ಲುಗೆ ಅಚ್ಚುಮೆಚ್ಚು. ಸುಂದರವಾದ ಫಾರ್ಮ್ ಹೌಸ್‌ನಲ್ಲಿ ಸ್ವೀಮಿಂಗ್‌ ಪೂಲ್‌ , ಜಿಮ್‌ ಮತ್ತು ಸಲ್ಮಾನ್ ಖಾನ್ ಅವರ ಪೆಟ್‌ಗಳಿಗೆ ಪ್ರತ್ಯೇಕ ಜಾಗವಿದೆ. ಸಲ್ಮಾನ್ ಖಾನ್ ತನ್ನ ತಂಗಿ ಅರ್ಪಿತಾ ಖಾನ್ ಎಂದರೆ ತುಂಬಾ ಪ್ರೀತಿ , ಪನ್ವೆಲ್ ಫಾರ್ಮ್ ಹೌಸ್ ಅನ್ನು ಅರ್ಪಿತಾ ಫಾರ್ಮ್ಸ್ ಎಂದೇ ಹೆಸರಿಸಿದ್ದಾರೆ. ಸಲ್ಮಾನ್ ಖಾನ್ ತಮ್ಮ 50ನೇ ಹುಟ್ಟುಹಬ್ಬವನ್ನು ಅವರ ಕುಟುಂಬ ಸದಸ್ಯರು ಮತ್ತು ಆಪ್ತರೊಂದಿಗೆ ತಮ್ಮ ಪನ್ವೆಲ್ ಫಾರ್ಮ್ ಹೌಸ್‌ನಲ್ಲಿ ಆಚರಿಸಿಕೊಂಡಿದ್ದರು.

ಪಾನ್ವೆಲ್ ಫಾರ್ಮ್‌ಹೌಸ್‌ನ ಹಸಿರು ಮಡಿಲಲ್ಲಿ ಸುತ್ತಾಡ್ತಿದ್ದಾರೆ ಸಲ್ಮಾನ್ ಖಾನ್..!

ನಟನ ತಾಯಿ ಹಿಂದೂ ಹಾಗೂ ತಂದೆ ಮುಸ್ಲಿಂ, ಅದಕ್ಕಾಗಿಯೇ ಸಲ್ಮಾನ್ ಎರಡೂ ಧರ್ಮಗಳನ್ನು ನಂಬುತ್ತಾರೆ. ಅವರ ಫಾರ್ಮ್ ಹೌಸ್‌ನಲ್ಲಿ ಗಣೇಶನ ಸುಂದರ ವಿಗ್ರಹವನ್ನೂ ಕಾಣಬಹುದು. ಫಾರ್ಮ್ ಹೌಸ್‌ನ ಹಚ್ಚ ಹಸಿರಿನ ತೋಟಗಳು, ಈಜುಕೊಳ, ಕುದುರೆ ಸವಾರಿಗಾಗಿ ಜಾಗ ಮತ್ತು ಬೈಕು ಸವಾರಿಗಾಗಿ ಟ್ರ್ಯಾಕ್ ಕೂಡ ಇರುವ ಸಲ್ಲುವಿನ ತೋಟದಮನೆ ಭೂಮಿಯ ಮೇಲಿನ ಸ್ವರ್ಗದಂತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.