Katrina Kaif Wedding ಮಾಜಿ ಗರ್ಲ್‌ಫ್ರೆಂಡ್ ಮದುವೆಗೆ ಸಲ್ಮಾನ್ ಬರಲ್ವಾ?
Salamn khan not attending Katrina Kaif wedding ? ಮಾಜಿ ಗರ್ಲ್‌ಫ್ರೆಂಡ್ ಮದುವೆಯನ್ನು ಮಿಸ್ ಮಾಡ್ಕೊಳ್ತಾರಾ ಸಲ್ಲು ? ನಟ ವಿದೇಶಕ್ಕೆ ತೆರಳಿದ್ದಾರಾ ?
ಬಾಲಿವುಡ್(Bollywood) ಸೆಲೆಬ್ರಿಟಿ ಜೋಡಿಯ ಮದುವೆ ನಡೆಯುತ್ತಿದೆ. ಕತ್ರೀನಾ ಕೈಫ್(Katrina Kaif) ಅವರನ್ನು ಬಾಲಿವುಡ್‌ಗೆ(Bollywood) ಪರಿಚಯಿಸಿ ಬಹಳಷ್ಟು ಸಮಯ ನಟಿಯ ಬಾಯ್‌ಫ್ರೆಂಡ್ ಆಗಿದ್ದ ಸಲ್ಮಾನ್ ಖಾನ್(Salman Khan) ಮಾಜಿ ಪ್ರೇಯಸಿಯ ಮದುವೆಗೆ ಬರುತ್ತಾರಾ ಎಂಬ ಕುತೂಹಲ ಮೊದಲಿನಿಂದಲೇ ಇತ್ತು. ವಿಕ್ಕಿ ಕೌಶಲ್ ಅವರನ್ನು ವರಿಸುತ್ತಿರುವ ಕತ್ರೀನಾ ಕೈಫ್ ಅವರ ಮದುವೆ ಕಾರ್ಯಕ್ರಮ ಡಿ.7ರಿಂದ ನಡೆಯಲಿವೆ. ರಾಜಸ್ಥಾನದಲ್ಲಿ ನಡೆಯುತ್ತಿರೋ ಮದುವೆ ಅದ್ಧೂರಿತನಕ್ಕೆ ಸಾಕ್ಷಿಯಾಗಲು ಈಗಾಗಲೇ ಅತಿಥಿಗಳೂ ತಲುಪಿದ್ದಾರೆ. ಆದರೆ ಸಲ್ಮಾನ್ ಖಾನ್ ಮಾತ್ರ ಹೋಗಿಲ್ಲ. ಹೋಗುತ್ತಾರೋ ಎಂಬ ಕುತೂಹಲ ಅಭಿಮಾನಿಗಳದ್ದು.
ವಿಕ್ಕಿ ಕೌಶಲ್(Vicky Kaushal) ಮತ್ತು ಕತ್ರಿನಾ ಕೈಫ್ ಇಂದು ರಾಜಸ್ಥಾನದಲ್ಲಿ(Rajasthan) ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಇತ್ತೀಚೆಗೆ, ಸಲ್ಮಾನ್ ಖಾನ್ ಮತ್ತು ಅವರ ಇಡೀ ಕುಟುಂಬ ಕತ್ರಿನಾ-ವಿಕ್ಕಿಯ ಮದುವೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಗಳು ಹರಿದಾಡುತ್ತಿತ್ತು. ಆದರೆ ಇದೀಗ ಸಲ್ಮಾನ್ ಖಾನ್ ಮದುವೆ ಮಿಸ್ ಮಾಡುವುದು ಕನ್ಫರ್ಮ್ ಆಗಿದೆ! ಇತ್ತೀಚೆಗೆ, ಸೂಪರ್‌ಸ್ಟಾರ್ ಅವರು ದಬಾಂಗ್ ಟೂರ್‌ನಲ್ಲಿ ಪ್ರದರ್ಶನ ನೀಡಲು ರಿಯಾದ್‌ಗೆ ತೆರಳಿದಾಗ ವಿಮಾನ ನಿಲ್ದಾಣದಲ್ಲಿ ಪಾಪ್ಪಾರಾಜಿಗೆ ಪೋಸ್ ಕೊಟ್ಟಿದ್ದರು. ಗುರುವಾರ ನಸುಕಿನಲ್ಲಿ ಖಾನ್ ಅವರು ಕಲಿನಾ ವಿಮಾನ ನಿಲ್ದಾಣಕ್ಕೆ ಬಂದರು. ಅವರು ರಿಯಾದ್‌ಗೆ ಹೊರಡುವ ಮೊದಲು ಶಟರ್‌ಬಗ್‌ಗಳಿಗೆ ಪೋಸ್ ನೀಡಿದ್ದಾರೆ. ಈ ಮೂಲಕ ನಟ ಮಾಜಿ ಗೆಳತಿ ಮದುಬೆ ಹೋಗಲ್ಲ ಎನ್ನುವುದು ಪಕ್ಕಾ ಆಗಿದೆ.
ಅತ್ಯಂತ ಖಾಸಗಿ ಸಮಾರಂಭ
ಇತ್ತೀಚೆಗೆ, ದಂಪತಿಗಳಿಗೆ ಆಪ್ತವಾದ ಮೂಲವೊಂದು ಎಲ್ಲಾ ಪೂರ್ವ ವಿವಾಹ ಮತ್ತು ವಿವಾಹ ಸಮಾರಂಭಗಳು ಖಾಸಗಿ ಮತ್ತು ನಿಕಟ ವ್ಯವಹಾರಗಳಾಗಿವೆ ಎಂದು ಹೇಳಿದ್ದರು. ದಂಪತಿಗಳನ್ನು ತಿಳಿದಿರುವ ಅವರ ಹತ್ತಿರದ ಕುಟುಂಬ ಮತ್ತು ಸ್ನೇಹಿತರ ಒಳಗಿನ ವಲಯ ಮಾತ್ರ ಹಾಜರಿರುತ್ತಾರೆ. ಇದೀಗ ಕೋವಿಡ್ ಪರಿಸ್ಥಿತಿಯನ್ನು ಗಮನಿಸಿದರೆ, ದಂಪತಿಗಳು ಭಾಗವಹಿಸುವ ಪ್ರತಿಯೊಬ್ಬರ ಸುರಕ್ಷತೆಗಾಗಿ ಅತಿಥಿಗಳನ್ನು ಮಿತಿಗೊಳಿಸಲು ಬಯಸುತ್ತಾರೆ ಎಂದು ಮೂಲವು ಮತ್ತಷ್ಟು ಹೇಳುತ್ತದೆ ಎನ್ನಲಾಗಿದೆ.
ಬಾಲಿವುಡ್ ಮಂದಿಗಾಗಿ ವಿಶೇಷ ರಿಸೆಪ್ಶನ್
ದಂಪತಿಗಳು ತಮ್ಮ ಉದ್ಯಮದ ಸ್ನೇಹಿತರೊಂದಿಗೆ ಮದುವೆ ಸಂಭ್ರಮವನ್ನು ಮುಂದಿನ ದಿನಗಳಲ್ಲಿ ಆಚರಿಸಲು ಯೋಜಿಸಿಕೊಂಡಿದ್ದಾರೆ. ಅವರು ಶೀಘ್ರದಲ್ಲೇ ಬಾಲಿವುಡ್ ಮಂದಿಗಾಗಿ ಆರತಕ್ಷತೆಯನ್ನು ಆಯೋಜಿಸಲಿದ್ದಾರೆ ಎಂದು ಮೂಲವು ಸೇರಿಸಿದೆ. ಕೆಲಸದ ವಿಚಾರದಲ್ಲಿ ಸಲ್ಮಾನ್ ಕೊನೆಯದಾಗಿ ಮಹೇಶ್ ಮಂಜ್ರೇಕರ್ ಅವರ 'ಆಂಟಿಮ್: ದಿ ಫೈನಲ್ ಟ್ರುತ್' ನಲ್ಲಿ ಕಾಣಿಸಿಕೊಂಡರು. ಚಿತ್ರದಲ್ಲಿ ಆಯುಷ್ ಶರ್ಮಾ ಮತ್ತು ಮಹಿಮಾ ಮಕ್ವಾನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕೆಲವು ದಿನಗಳ ಹಿಂದೆ ಅವರು ಕತ್ರಿನಾ ಜೊತೆ 'ಟೈಗರ್ 3' ಚಿತ್ರೀಕರಣದಲ್ಲಿ ತೊಡಗಿದ್ದರು. ನಟಿ ತನ್ನ ಮದುವೆಗಾಗಿ ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ.
Katrina Vicky Kaushal wedding: ಅದ್ಧೂರಿ ಮದುವೆಗೆ ಬಂದ ಅತಿಥಿಗಳಿವರು
ಅರ್ಪಿತಾ ಖಾನ್‌ಗಿಲ್ಲ ಆಮಂತ್ರಣ
ಬಾಲಿವುಡ್ ನಟ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಹಾಗೂ ಕತ್ರೀನಾ ಕೈಫ್ ಗೆಳತಿಯರು. ಇವರ ನಡುವೆ ಚಂದದ ಸಂಬಂಧ ಇದೆ. ಆದರೆ ಅರ್ಪಿತಾ ಅವರನ್ನು ಕತ್ರೀನಾ ಮದುವೆಗೆ ಕರೆದಿಲ್ಲ. ಜೊತೆಯಾಗಿ ಕ್ಲೋಸ್ ಇದ್ದರೂ ಇದೇ ರೀತಿ ಬಹಳಷ್ಟು ಜನರನ್ನು ಮದುವೆಗೆ ಆಹ್ವಾನಿಸಿಲ್ಲ.
ಲಸಿಕೆ ಹಾಕಿಸ್ಕೊಂಡಿರೋದು ಮುಖ್ಯ:
ಕೋವಿಡ್ ಪ್ರೋಟೋಕಾಲ್‌ಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ ಅಧಿಕಾರಿಗಳಿಗೆ ವಿಶೇಷ ಸೂಚನೆಗಳನ್ನು ನೀಡಲಾಗಿದೆ. ಕತ್ರಿನಾ-ವಿಕ್ಕಿ ಅವರ ರಾಜಸ್ಥಾನ ವಿವಾಹದ ಕುರಿತು ಹೆಚ್ಚಿನ ವಿವರಗಳು ಇಲ್ಲಿವೆ. ಅತಿಥಿಗಳು COVID-19 ಪ್ರೋಟೋಕಾಲ್‌ಗಳನ್ನು ಅನುಸರಿಸಬೇಕು ಮತ್ತು ಎರಡು ಬಾರಿ ಲಸಿಕೆ ಹಾಕಿದ ಅತಿಥಿಗಳು ಮಾತ್ರ ಸೆಲೆಬ್ರಿಟಿಗಳ ಮದುವೆಯಲ್ಲಿ ಭಾಗವಹಿಸಲಿದ್ದಾರೆ. ಈ ಮಾಹಿತಿಯನ್ನು ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ ಜಿಲ್ಲಾಧಿಕಾರಿ (ಡಿಸಿ) ರಾಜೇಂದ್ರ ಕಿಶನ್ ಅವರು ಹಂಚಿಕೊಂಡಿದ್ದಾರೆ, ಅಲ್ಲಿ ಮದುವೆಯ ಸ್ಥಳ ಫೋರ್ಟ್ ಬರ್ವಾರಾ ಇದೆ. ಆಯೋಜಕರು ನೀಡಿದ ಮಾಹಿತಿಯಂತೆ 120 ಅತಿಥಿಗಳನ್ನು ಮದುವೆಗೆ ಆಹ್ವಾನಿಸಲಾಗಿದ್ದು, ಡಿಸೆಂಬರ್ 7 ರಿಂದ ಡಿಸೆಂಬರ್ 10 ರ ನಡುವೆ ಕಾರ್ಯಕ್ರಮಗಳು ನಡೆಯಲಿವೆ ಎಂದು ಡಿಸಿ ತಿಳಿಸಿದ್ದಾರೆ.