ಆಸ್ಪತ್ರೆಯಿಂದ ಮನೆಗೆ ಹಿಂತಿರುಗಿದ Dharmendra ಕಾರಣ ಬಿಚ್ಚಿಟ್ಟ ನಟ
86 ವರ್ಷದ ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ (Dharmendra) ಕಳೆದ 4 ದಿನಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ರಾತ್ರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಭಾನುವಾರ ರಾತ್ರಿ ಧರ್ಮೇಂದ್ರ ಆಸ್ಪತ್ರೆಗೆ ದಾಖಲಾದ ಸುದ್ದಿ ತಿಳಿದ ತಕ್ಷಣ ಎಲ್ಲರೂ ಬೆಚ್ಚಿಬಿದ್ದರು. ಅವರು ಶೀಘ್ರ ಗುಣಮುಖರಾಗಲೆಂದು ಅಭಿಮಾನಿಗಳು ಪ್ರಾರ್ಥಿಸಲು ಆರಂಭಿಸಿದ್ದಾರೆ. ಆದರೆ, ಈಗ ಅವರು ಚೇತರಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಲು ಕಾರಣವೇನು ಎಂಬುದನ್ನು ಸ್ವತಃ ಅವರೇ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ್ದಾರೆ.

ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಧರ್ಮೇಂದ್ರ ಅವರನ್ನು ಐಸಿಯುಗೆ ದಾಖಲಿಸಲಾಗಿತ್ತು. ಈಗ ಅವರ ಆರೋಗ್ಯ ಚೆನ್ನಾಗಿದ್ದು, ಐಸಿಯುನಿಂದ ಹೊರಬಂದಿದ್ದಾರೆ ಎಂಬ ಸುದ್ದಿ ಭಾನುವಾರವಿತ್ತು. ಚಿತ್ರೀಕರಣದ ವೇಳೆ ಧರ್ಮೇಂದ್ರ ಅವರಿಗೆ ಬೆನ್ನುನೋವು ಕಾಣಿಸಿಕೊಂಡಿದ್ದು, ನಂತರ ಅವರು ದಾಖಲಾಗಿದ್ದು, ಈಗ ಡಿಸ್ಚಾರ್ಜ್ ಆಗಿದ್ದಾರೆ ಎಂದು ಆಸ್ಪತ್ರೆಯ ಹೇಳಿಕೆ ತಿಳಿಸಿದೆ.
Dharmendra
ಸುದ್ದಿ ಪ್ರಕಾರ, ಅವರ ಮಗ ಸನ್ನಿ ಡಿಯೋಲ್ ಅವರನ್ನು ಭೇಟಿ ಮಾಡಲು ಆಸ್ಪತ್ರೆಗೆ ಬಂದಿದ್ದಾರೆ. ಸನ್ನಿ ಕೂಡ ತನ್ನ ತಂದೆಯೊಂದಿಗೆ ಸ್ವಲ್ಪ ಸಮಯ ಕಳೆದರು. ಧರ್ಮೇಂದ್ರ ಅವರನ್ನು ಇನ್ನೂ ಸ್ವಲ್ಪ ಸಮಯದವರೆಗೆ ವೈದ್ಯರ ಮೇಲ್ವಿಚಾರಣೆಯಲ್ಲಿ ಇಡಲಾಗುವುದು ಎಂದು ಮೊದಲು ವರದಿ ಮಾಡಲಾಗಿತ್ತು. ಆದರೆ ನಂತರ ಅವರನ್ನು ಡಿಸಾರ್ಜ್ ಮಾಡಲಾಯಿತು.
ಆಸ್ಪತ್ರೆಯಿಂದ ಮನೆಗೆ ಹಿಂದಿರುಗಿದ ನಂತರ, ಧರ್ಮೇಂದ್ರ ಅವರು ಇನ್ಸ್ಟಾಗ್ರಾಮ್ ಮತ್ತು ಟ್ವಿಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅದರ ಮೂಲಕ ಅವರು ತಮ್ಮ ಆರೋಗ್ಯ ಈಗ ಹೇಗಿದೆ ಮತ್ತು ಏಕೆ ಆಸ್ಪತ್ರೆಗೆ ಸೇರಿಸಲಾಯಿತು ಎಂದು ಹೇಳಿದ್ದಾರೆ.
'ಸ್ನೇಹಿತರೇ, ಯಾವುದನ್ನು ಅತಿಯಾಗಿ ಮಾಡಬಾರದು, ನಾನು ಮಾಡಿದ್ದೇನೆ ಮತ್ತು ನಾನು ನರಳಬೇಕಾಯಿತು. ನನ್ನ ಸೊಂಟದ ಒಂದು ಪಕ್ಕೆಲುಬು ನೋವಾಗಿತ್ತು ಮತ್ತು ಈ ಕಾರಣಕ್ಕಾಗಿ ನನ್ನನ್ನು ಆಸ್ಪತ್ರೆಗೆ ಸೇರಿಸಬೇಕಾಯಿತು. 2-4 ದಿನಗಳಿಂದ ನೋವಾಯಿತು ಆದರೆ ಈಗ ನಾನು ಚೆನ್ನಾಗಿದ್ದೇನೆ. ನಿಮ್ಮ ಎಲ್ಲಾ ಪ್ರಾರ್ಥನೆಗಳು ಪರಿಣಾಮ ಬೀರುತ್ತವೆ.ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ' ಎಂದು ವೀಡಿಯೊದ ಮೂಲಕ, ಅವರು ಹೇಳಿದರು.
ಅಂದಹಾಗೆ, ಈ ವಯಸ್ಸಿನಲ್ಲೂ ಧರ್ಮೇಂದ್ರ ಅವರು ಫಿಟ್ ಆಗಿದ್ದಾರೆ. ಅವರು ತಮ್ಮ ಫಾರ್ಮ್‌ಹೌಸ್‌ನಲ್ಲಿ ಆಗಾಗ್ಗೆ ಈಜುವುದು ಮತ್ತು ವ್ಯಾಯಾಮ ಮಾಡುವುದು ಕಂಡುಬರುತ್ತದೆ. ಧರ್ಮೇಂದ್ರ ಈಗ ಚಲನಚಿತ್ರಗಳಲ್ಲಿ ಬಹಳ ವಿರಳವಾಗಿ ಕಾಣಿಸಿಕೊಳ್ಳುತ್ತಾರೆ.ಆದರೆ ಅವರು ವರ್ಷಕ್ಕೆ ಒಂದೇ ಸಿನಿಮಾ ಮಾಡುತ್ತಾರೆ.
ಪ್ರಸ್ತುತ, ಅವರು ಧರ್ಮ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ರಾಕಿ ಔರ್ ರಾಣಿ ಕಿ ಪ್ರೇಮ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಅವರು ಈ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಅವರಲ್ಲದೆ, ಆಲಿಯಾ ಭಟ್, ರಣವೀರ್ ಸಿಂಗ್, ಜಯಾ ಬಚ್ಚನ್ ಮತ್ತು ಶಬಾನಾ ಅಜ್ಮಿ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ವರದಿಗಳ ಪ್ರಕಾರ, ಈ ಚಿತ್ರವು ಫೆಬ್ರವರಿ 2023 ರಲ್ಲಿ ಬಿಡುಗಡೆಯಾಗಲಿದೆ.