MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • 'ಗ್ರೀನ್ ರೂಮ್' ಬದಲು 'ಜನರೇಟರ್ ವ್ಯಾನ್‌'ನಲ್ಲಿ ಬಟ್ಟೆ ಬದಲಿಸಿದ ರವೀನಾ ಟಂಡನ್; ಆ ಸೀಕ್ರೆಟ್ ಬಿಚ್ಚಿಟ್ಟ ಈ ನಟ!

'ಗ್ರೀನ್ ರೂಮ್' ಬದಲು 'ಜನರೇಟರ್ ವ್ಯಾನ್‌'ನಲ್ಲಿ ಬಟ್ಟೆ ಬದಲಿಸಿದ ರವೀನಾ ಟಂಡನ್; ಆ ಸೀಕ್ರೆಟ್ ಬಿಚ್ಚಿಟ್ಟ ಈ ನಟ!

"ವರ್ಷಗಳು ಕಳೆದಂತೆ ರವೀನಾ ಅವರಲ್ಲಿ ಏನು ಬದಲಾಗಿದೆ?" ಎಂಬ ಪ್ರಶ್ನೆಗೆ ಉತ್ತರಿಸಿದ ಅಕ್ಷಯ್, "ರವೀನಾ ಅಂದು ಹೀರೋಯಿನ್ ಆಗಿದ್ದರು, ಆದರೆ ಇಂದು ಅವರು ಒಬ್ಬ ನಾಯಕಿಯ ತಾಯಿಯಾಗಿದ್ದಾರೆ!" ಎಂದು ತಮಾಷೆ ಮಾಡಿದರು.

2 Min read
Author : Shriram Bhat
Published : Jun 11 2026, 08:07 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : Asianet News

ಜನರೇಟರ್ ವ್ಯಾನ್‌ನಲ್ಲಿ ಬಟ್ಟೆ ಬದಲಿಸಿದ ರವೀನಾ ಟಂಡನ್! ಅಕ್ಷಯ್ ಕುಮಾರ್ ಬಿಚ್ಚಿಟ್ಟ ಸೆಟ್‌ನಲ್ಲಿನ ಆ 'ಬಿಸಿಬಿಸಿ' ರಹಸ್ಯ!

ಬಾಲಿವುಡ್‌ನ 'ಕಿಲಾಡಿ' ಅಕ್ಷಯ್ ಕುಮಾರ್ ಮತ್ತು 'ಮಸ್ತ್ ಮಸ್ತ್' ಗರ್ಲ್ ರವೀನಾ ಟಂಡನ್ (Raveena Tondon) ದಶಕಗಳ ನಂತರ ಮತ್ತೆ ಬೆಳ್ಳಿ ಪರದೆಯ ಮೇಲೆ ಒಂದಾಗುತ್ತಿದ್ದಾರೆ. ಜೂನ್ 11ರಂದು ಬಹುನಿರೀಕ್ಷಿತ 'ವೆಲ್‌ಕಮ್ ಟು ದಿ ಜಂಗಲ್' (Welcome To The Jungle) ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮ ಮುಂಬೈನಲ್ಲಿ ಅದ್ಧೂರಿಯಾಗಿ ನಡೆಯಿತು. ಈ ವೇದಿಕೆಯ ಮೇಲೆ ಅಕ್ಷಯ್ ಕುಮಾರ್ (Akshay Kumar) ಅವರು ತಮ್ಮ ಸಹನಟಿ ರವೀನಾ ಟಂಡನ್ ಅವರ ಬಗ್ಗೆ ಹಂಚಿಕೊಂಡ ಒಂದು ವಿಷಯ ಈಗ ಇಡೀ ಬಿ-ಟೌನ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
Image Credit : Instagram

ಜನರೇಟರ್ ವ್ಯಾನ್‌ನಲ್ಲಿ ನಡೆದಿದ್ದೇನು?

ಸಿನಿಮಾ ಸೆಟ್ ಎಂದರೆ ಅಲ್ಲಿ ಗ್ಲಾಮರ್ ಮಾತ್ರವಲ್ಲ, ಸವಾಲುಗಳೂ ಇರುತ್ತವೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಅಕ್ಷಯ್ ಕುಮಾರ್ ಅವರು ರವೀನಾ ಅವರ ವೃತ್ತಿಪರತೆಯನ್ನು ಕೊಂಡಾಡುತ್ತಾ ಒಂದು ಹಳೆಯ ಕಥೆಯನ್ನು ನೆನಪಿಸಿಕೊಂಡರು. ಚಿತ್ರೀಕರಣವೊಂದರ ಸಮಯದಲ್ಲಿ ಸೂರ್ಯಾಸ್ತದ (Sunset) ಒಂದು ದೃಶ್ಯವನ್ನು ಸೆರೆಹಿಡಿಯಬೇಕಿತ್ತು. ನಮ್ಮ ಕೈಯಲ್ಲಿದ್ದದ್ದು ಕೇವಲ 25 ರಿಂದ 30 ನಿಮಿಷಗಳು ಮಾತ್ರ! ಆದರೆ ರವೀನಾ ಅವರ 'ಗ್ರೀನ್ ರೂಮ್' ಸೆಟ್‌ನಿಂದ ತುಂಬಾ ದೂರವಿತ್ತು.

Related Articles

Related image1
Shocking Secret: ಚಂದನ್ ಶೆಟ್ಟಿ ಶಾಕಿಂಗ್ ಸೀಕ್ರೆಟ್ ಬಹಿರಂಗ.. ಈ ಆಲ್‌ರೌಂಡರ್ ಮುಂಗೈನಲ್ಲಿ ಏನಿದೆ ಗೊತ್ತಾ?!
Related image2
ಚಿಕನ್-ಮಟನ್ ತಿಂದು ಸಾಕಾಗಿದ್ಯಾ? ಹಾಗಾದ್ರೆ 'ಒನ್ಸ್‌ ಮೋರ್' ಅನ್ನಿಸೋ ಈ ಬೊಂಬಾಟ್ ಮೈಸೂರು ಡಿಶ್ ಸವಿಯಿರಿ!
36
Image Credit : instagram

ಒಂದು ವೇಳೆ ರವೀನಾ ಅಲ್ಲಿಗೆ ಹೋಗಿ ಬಟ್ಟೆ ಬದಲಿಸಿ ಬರುವಷ್ಟರಲ್ಲಿ ಸೂರ್ಯ ಮುಳುಗಿ ಹೋಗಿರುತ್ತಿದ್ದ. ಆಗ ರವೀನಾ ಅವರು ಮಾಡಿದ ಕೆಲಸ ಕಂಡು ಚಿತ್ರತಂಡವೇ ದಂಗಾಗಿತ್ತು! ಸಮಯ ಉಳಿಸಲು ರವೀನಾ ಯಾವುದೇ ಮುಜುಗರವಿಲ್ಲದೆ ಸೆಟ್ ಪಕ್ಕದಲ್ಲೇ ಇದ್ದ 'ಜನರೇಟರ್ ವ್ಯಾನ್' ಒಳಗೆ ಹೋಗಿ ಕ್ಷಣಾರ್ಧದಲ್ಲಿ ಬಟ್ಟೆ ಬದಲಿಸಿಕೊಂಡು ಬಂದು ಶೂಟಿಂಗ್‌ನಲ್ಲಿ ಪಾಲ್ಗೊಂಡರಂತೆ. "ರವೀನಾ ಅವರ ಈ ಸಮರ್ಪಣಾ ಮನೋಭಾವದಿಂದಾಗಿ ಅಂದು ಆ ಸೀನ್ ಸರಿಯಾದ ಸಮಯಕ್ಕೆ ಪೂರ್ಣಗೊಂಡಿತು" ಎಂದು ಅಕ್ಷಯ್ ಹಳೆಯ ನೆನಪನ್ನು ಬಿಚ್ಚಿಟ್ಟರು.

46
Image Credit : Social Media

"ನಾಯಕಿಯಿಂದ ನಾಯಕಿಯ ತಾಯಿಯವರೆಗೆ!": ಅಕ್ಷಯ್ ಹಾಸ್ಯದ ಚಾಟಿ!

ಇದೇ ವೇಳೆ ಅಕ್ಷಯ್ ಕುಮಾರ್ ಅವರು ರವೀನಾ ಅವರ ಕಾಲೆಳೆಯಲು ಮರೆಯಲಿಲ್ಲ. "ವರ್ಷಗಳು ಕಳೆದಂತೆ ರವೀನಾ ಅವರಲ್ಲಿ ಏನು ಬದಲಾಗಿದೆ?" ಎಂಬ ಪ್ರಶ್ನೆಗೆ ಉತ್ತರಿಸಿದ ಅಕ್ಷಯ್, "ರವೀನಾ ಅಂದು ಹೀರೋಯಿನ್ ಆಗಿದ್ದರು, ಆದರೆ ಇಂದು ಅವರು ಒಬ್ಬ ನಾಯಕಿಯ (ರಾಶಾ ತಡಾನಿ) ತಾಯಿಯಾಗಿದ್ದಾರೆ!" ಎಂದು ತಮಾಷೆ ಮಾಡಿದರು. ಈ ಮಾತನ್ನು ಕೇಳಿ ರವೀನಾ ಸೇರಿದಂತೆ ಇಡೀ ವೇದಿಕೆ ನಗೆಗಡಲಲ್ಲಿ ತೇಲಿತು.

56
Image Credit : Instagram

ಬಾಲಿವುಡ್‌ನ ಬೃಹತ್ ತಾರಾಗಣದ 'ಜಂಗಲ್'

'ವೆಲ್‌ಕಮ್ ಟು ದಿ ಜಂಗಲ್' ಬಾಲಿವುಡ್ ಇತಿಹಾಸದಲ್ಲೇ ಅತಿ ದೊಡ್ಡ ತಾರಾಗಣ ಹೊಂದಿರುವ ಚಿತ್ರಗಳಲ್ಲಿ ಒಂದು. ಇದರಲ್ಲಿ ಅಕ್ಷಯ್ ಮತ್ತು ರವೀನಾ ಮಾತ್ರವಲ್ಲದೆ ಸುನೀಲ್ ಶೆಟ್ಟಿ, ದಿಶಾ ಪಟಾನಿ, ಜಾಕ್ವೆಲಿನ್ ಫರ್ನಾಂಡಿಸ್, ಅರ್ಷದ್ ವಾರ್ಸಿ, ಸಂಜಯ್ ದತ್, ಜಾನಿ ಲಿವರ್ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ದಿಗ್ಗಜ ಕಲಾವಿದರಿದ್ದಾರೆ. ಫಿರೋಜ್ ನಾಡಿಯಾಡ್ವಾಲಾ ನಿರ್ಮಾಣದ ಈ ಚಿತ್ರವನ್ನು ಅಹಮದ್ ಖಾನ್ ನಿರ್ದೇಶಿಸಿದ್ದಾರೆ.

66
Image Credit : Instagram

ಕಥೆ ಏನು? ಬಿಡುಗಡೆ ಯಾವಾಗ?

ಈ ಚಿತ್ರವು ಜೂನ್ 24ಕ್ಕೆ ವಿಶ್ವಾದ್ಯಂತ ತೆರೆಕಾಣಲಿದೆ. ಚಿತ್ರದ ಕಥೆಯ ಪ್ರಕಾರ, ಹಳ್ಳಿಯ ಜನ ಶೂಟಿಂಗ್ ಕ್ರೂ ಅನ್ನು ನಿಜವಾದ ಸೈನಿಕರು ಎಂದು ತಪ್ಪಾಗಿ ತಿಳಿದುಕೊಳ್ಳುತ್ತಾರೆ. ಅಲ್ಲಿಂದ ಶುರುವಾಗುವ ಗೊಂದಲ ಮತ್ತು ಕಾಮಿಡಿ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುವುದು ಗ್ಯಾರಂಟಿ. ಒಟ್ಟಿನಲ್ಲಿ, ಅಕ್ಷಯ್ ಮತ್ತು ರವೀನಾ ಜೋಡಿಯನ್ನು ಮತ್ತೆ ಪರದೆಯ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಅಕ್ಷಯ್ ಕುಮಾರ್
ಬಾಲಿವುಡ್
ಮಹಿಳೆಯರು
ಜೀವನಶೈಲಿ
Latest Videos
Recommended Stories
Recommended image1
'ರಘುವರನ್‌ಗೆ ನಾನು ನಟಿಸುವುದು ಇಷ್ಟವಿರಲಿಲ್ಲ': 7 ವರ್ಷ ಸಿನಿಮಾ ಬಿಟ್ಟಿದ್ದ ಕಾರಣ ಬಿಚ್ಚಿಟ್ಟ ನಟಿ ರೋಹಿಣಿ!
Recommended image2
370 ರೂ. ಬಿರಿಯಾನಿ ಕಥೆ: ಕಾಮಿಡಿ ಶೋನ ಅಸಲಿ 'ಜೋಕ್'ಗೆ ಪೂನಂ ಪಾಂಡೆ ಖಡಕ್ ಉತ್ತರ ಹೀಗಿತ್ತು!
Recommended image3
ಆಲಿಯಾ ಭಟ್ 'ಆಲ್ಫಾ' ಫ್ರೆಂಚ್ ಸಿನಿಮಾ ಕಾಪಿನಾ? ನೆಟ್ಟಿಗರು ಹುಡುಕಿದ ಶಾಕಿಂಗ್ ಹೋಲಿಕೆಯೇನು?
Related Stories
Recommended image1
Shocking Secret: ಚಂದನ್ ಶೆಟ್ಟಿ ಶಾಕಿಂಗ್ ಸೀಕ್ರೆಟ್ ಬಹಿರಂಗ.. ಈ ಆಲ್‌ರೌಂಡರ್ ಮುಂಗೈನಲ್ಲಿ ಏನಿದೆ ಗೊತ್ತಾ?!
Recommended image2
ಚಿಕನ್-ಮಟನ್ ತಿಂದು ಸಾಕಾಗಿದ್ಯಾ? ಹಾಗಾದ್ರೆ 'ಒನ್ಸ್‌ ಮೋರ್' ಅನ್ನಿಸೋ ಈ ಬೊಂಬಾಟ್ ಮೈಸೂರು ಡಿಶ್ ಸವಿಯಿರಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved