- Home
- Entertainment
- Cine World
- ಮದ್ವೆ ಖುಷಿಯಲ್ಲಿರೋ ರಶ್ಮಿಕಾ ಮಂದಣ್ಣ ಮತ್ತೆ ಕಿರಿಕ್: ಮದುಮಗಳಿಗೆ ಇದೆಲ್ಲಾ ಬೇಕಿತ್ತಾ? ಕನ್ನಡಿಗರು ಗರಂ ಗರಂ
ಮದ್ವೆ ಖುಷಿಯಲ್ಲಿರೋ ರಶ್ಮಿಕಾ ಮಂದಣ್ಣ ಮತ್ತೆ ಕಿರಿಕ್: ಮದುಮಗಳಿಗೆ ಇದೆಲ್ಲಾ ಬೇಕಿತ್ತಾ? ಕನ್ನಡಿಗರು ಗರಂ ಗರಂ
ಮದುವೆ ಸುದ್ದಿಯ ನಡುವೆ, ನಟಿ ರಶ್ಮಿಕಾ ಮಂದಣ್ಣ ಚಿತ್ರರಂಗದಲ್ಲಿ 9 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹಾಕಿದ ಪೋಸ್ಟ್‌ನಿಂದ ಹೊಸ ವಿವಾದ ಸೃಷ್ಟಿಸಿದ್ದಾರೆ. ಅಷ್ಟಕ್ಕೂ ಆ ಪೋಸ್ಟ್‌ನಲ್ಲಿ ಇರುವುದು ಏನು? ಕನ್ನಡಿಗರು ಗರಂ ಆಗಿದ್ಯಾಕೆ? ನಟಿ ಮಾಡಿಕೊಂಡ ಕಿರಿಕ್ ಏನು?

ಮದ್ವೆ ಖುಷಿಯಲ್ಲಿ?
ರಶ್ಮಿಕಾ ಮಂದಣ್ಣ (Rashmika Mandanna) ಇನ್ನು ಕೆಲವೇ ದಿನಗಳಲ್ಲಿ ನಟ ವಿಜಯ ದೇವರಕೊಂಡ ಜೊತೆ ಹಸೆಮಣೆ ಏರಲಿದ್ದಾರೆ ಎನ್ನುವ ಸುದ್ದು ಭಾರಿ ಸದ್ದು ಮಾಡುತ್ತಿದೆ. ಬರುವ ಫೆಬ್ರವರಿಯಲ್ಲಿ ರಾಜಸ್ಥಾನದಲ್ಲಿ ಇವರ ಮದುವೆ ಎಂದು ಹೇಳಲಾಗುತ್ತಿದೆ. (Vijay Deverakonda-Rashmika Mandanna marriage)
ಮತ್ತೆ ಕಿರಿಕ್
ಇದರ ನಡುವೆಯೇ, ರಶ್ಮಿಕಾ ಮಂದಣ್ಣ ಹೊಸ ವರ್ಷದ ಆರಂಭದಲ್ಲಿಯೇ ಮತ್ತೆ ಕಿರಿಕ್ ಮಾಡಿಕೊಂಡಿದ್ದಾರೆ. ಅದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಅಷ್ಟಕ್ಕೂ ಈ ಹಿಂದೆ ಕೂಡ ರಶ್ಮಿಕಾ ಕನ್ನಡಿಗರ ವಿರೋಧ ಕಟ್ಟಿಕೊಂಡಿದ್ದು ಇದೆ. ಈಗಲೂ ಅದೇ ಕೆಲಸವನ್ನು ಮಾಡಿದ್ದಾರೆ.
ಧನ್ಯವಾದದ ಪೋಸ್ಟ್
ಅಷ್ಟಕ್ಕೂ ಆಗಿದ್ದೇನೆಂದರೆ, ಸಿನಿಮಾಕ್ಕೆ ಬಂದು 9 ವರ್ಷ ಆಗಿದ್ದ ಹಿನ್ನೆಲೆಯಲ್ಲಿ ಇದರ ಬಗ್ಗೆ ವೀಕ್ಷಕರಿಗೆ, ಅಭಿಮಾನಿಗಳಿಗೆ, ಸಿನಿಮಾ ಅವಕಾಶ ನೀಡಿದವರಿಗಾಗಿ ಧನ್ಯವಾದ ಸಲ್ಲಿಸಿ ಒಂದು ಪೋಸ್ಟ್ ಹಾಕಿದ್ದಾರೆ. ಆದರೆ ಅದರಲ್ಲಿ ತಮ್ಮನ್ನು ಈ ಮಟ್ಟಕ್ಕೆ ಬೆಳೆಸಿದ, ಸಾಧನೆಯ ಎಣಿಯಾಗಿದ್ದ ಕನ್ನಡವನ್ನೇ ಮರೆತುಬಿಟ್ಟಿದ್ದಾರೆ ಎನ್ನುವುದು ಕೋಪಕ್ಕೆ ಗುರಿಯಾಗಿದೆ.
ಒಂದೂ ಲೈನ್ ಇಲ್ಲ
ಎಲ್ಲರಿಗೂ ತಿಳಿದಿರುವಂತೆ ಕಿರಿಕ್ ಪಾರ್ಟಿ ಮೂಲಕ ರಶ್ಮಿಕಾ ಮಂದಣ್ಣ ಸಿನಿ ಇಂಡಸ್ಟ್ರಿಯ ಗಮನ ಸೆಳೆದು, ರಾತ್ರೋರಾತ್ರಿ ನ್ಯಾಷನಲ್ ಕ್ರಷ್ (National Crush) ಆದವರು. ಆದರೆ ತಮ್ಮ ಪೋಸ್ಟ್‌ನಲ್ಲಿ ಈ ಬಗ್ಗೆ ಒಂದೇ ಒಂದು ಲೈನ್ ಕೂಡ ಹಾಕಲಿಲ್ಲ ನಟಿ!
ಹೈದರಾಬಾದ್ ಹುಡುಗಿ
ಒಟ್ಟಿನಲ್ಲಿ ತಮ್ಮನ್ನು ಬೆಳೆಸಿದ ಕನ್ನಡ, ಕರ್ನಾಟಕ ಎಲ್ಲವನ್ನೂ ನಟಿ ಮರೆತಂತೆ ಕಾಣಿಸುತ್ತಿದೆ. ಈ ಹಿಂದೆ ನಾನು ಹೈದರಾಬಾದಿನ ಹುಡುಗಿ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದರು. ಹೀಗೆ ಆಗಾಗ್ಗೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗ್ತಿರೋ ಬೆಡಗಿ ವಿರುದ್ಧ ಮತ್ತೆ ಕನ್ನಡಿಗರು ಗರಂ ಆಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

