ಒಂದೇ ಟೈಮಲ್ಲಿ ಪಯಣಿಸಿದ ರಶ್ಮಿಕಾ, ದೇವರಕೊಂಡ ರೊಮ್ಯಾಂಟಿಕ್ ಲೈಫ್ ಬಗ್ಗೆ ಮತ್ತೆ ಗುಸು ಗುಸು
ಈ ದಿನಗಳಲ್ಲಿ ನಟಿ ರಶ್ಮಿಕಾ ಮಂದಣ್ಣ (RAshmika Mandanna) ಅವರು ತಮ್ಮ ಕೆರಿಯರ್‌ನ ಟಾಪ್‌ನಲ್ಲಿದ್ದಾರೆ. ಅವರ ಮೊದಲ ಬಾಲಿವುಡ್ ಸಿನಿಮಾ ಅಕ್ಟೋಬರ್ 7 ರಂದು ಬಿಡುಗಡೆಯಾಗಿದೆ. ಅದೇ ಸಮಯದಲ್ಲಿ ಅವರ ಪರ್ಸನಲ್ ಲೈಫ್ ಸಹ ಎಲ್ಲರ ಗಮನ ಸೆಳೆದಿದೆ. ಅವರ ಮತ್ತು ವಿಜಯ್ ದೇವರಕೊಂಡ (Vijay Devarakonda) ನಡುವಿನ ರಿಲೆಷನ್‌ಶಿಪ್ ಮತ್ತೊಮ್ಮೆ ಚರ್ಚೆಯಾಗುತ್ತಿದೆ. ಇದಕ್ಕೆ ಕಾರಣ ಇಬ್ಬರೂ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದು, ಮಾಲ್ಡೀವ್ಸ್‌ಗೆ ಪ್ರಯಾಣ ಬೆಳೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಹಾಗಾದರೆ ವಿಜಯ್ ಮತ್ತು ರಶ್ಮಿಕಾ ಡೇಟಿಂಗ್ ಮಾಡುತ್ತಿರುವುದು ನಿಜ ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ.
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಅಕ್ಟೋಬರ್ 7 ರಂದು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ವಿಮಾನ ನಿಲ್ದಾಣದ ಮೂಲಗಳ ಪ್ರಕಾರ, ಇಬ್ಬರೂ ಮಾಲ್ಡೀವ್ಸ್‌ಗೆ ಪ್ರಯಾಣಿಸುತ್ತಿದ್ದಾರೆ.
ಮುಂಬೈ ವಿಮಾನ ನಿಲ್ದಾಣದಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಕಾಣಿಸಿಕೊಂಡರು. ಇದು ಮತ್ತೊಮ್ಮೆ ಈ ಜೋಡಿಯ ಡೇಟಿಂಗ್ ಜೀವನದ ಬಗ್ಗೆ ವದಂತಿಗಳನ್ನು ಹುಟ್ಟು ಹಾಕಿದೆ.
ವಿಜಯ್ ಮತ್ತು ರಶ್ಮಿಕಾ ತಮ್ಮ ಕ್ಯಾಶುಯಲ್ ಉಡುಪುಗಳಲ್ಲಿ ಅದ್ಭುತವಾಗಿ ಕಾಣುತ್ತಿದ್ದರು. ವಿಜಯ್ ಬ್ಯಾಗಿ ಪ್ಯಾಂಟ್ ಮತ್ತು ಶರ್ಟ್ ಧರಿಸಿದ್ದರೆ, ನಟಿ ಸಡಿಲವಾದ ಸ್ಲಾಕ್ಸ್ ಮತ್ತು ಬ್ಲೌಸ್ ಧರಿಸಿದ್ದರು.
ಗೀತಾ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್ ಚಿತ್ರಗಳಲ್ಲಿ ನಟಿಸಿದ ನಂತರ, ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಕೆಮಿಸ್ಟ್ರಿ ಯಾವಾಗಲೂ ಸದ್ದು ಮಾಡುತ್ತಿದೆ.
ಕೇವಲ ಸ್ನೇಹಿತರು ಎಂದು ಅವರು ಹೇಳಿದರೂ, ರಶ್ಮಿಕಾ ಮತ್ತು ದೇವರಕೊಂಡ ಅವರ ಒಡನಾಟ ಮತ್ತು ಭೇಟಿಗಳು ಅವರ ಸಂಬಂಧದ ವದಂತಿಗಳಿಗೆ ಇನ್ನಷ್ಟು ಪುಪ್ಠಿ ನೀಡಿವೆ.
ಕಾಫಿ ವಿತ್ ಕರಣ್ 7 ನಲ್ಲಿ ವಿಜಯ್ ದೇವರಕೊಂಡ ಅವರು ರಶ್ಮಿಕಾ ಮಂದಣ್ಣ ಜೊತೆಗಿನ ಸಂಪರ್ಕದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ವಿಜಯ್ ದೇವರಕೊಂಡ ರಶ್ಮಿಕಾ ಮಂದಣ್ಣ ಅವರೊಂದಿಗಿನ ಸಂಬಂಧವನ್ನು ಬಹಿರಂಗಪಡಿಸಿದರು. ರಶ್ಮಿಕಾರನ್ನು ಡಾರ್ಲಿಂಗ್ ಎಂದು ಉಲ್ಲೇಖಿಸಿದ್ದಾರೆ
'ಅವಳು ಮುದ್ದಾಗಿದ್ದಾಳೆ ಮತ್ತು ನಾವು ಎರಡು ಯೋಜನೆಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ಅವಳು ನಾನು ಆರಾಧಿಸುವ ವ್ಯಕ್ತಿ. ನನ್ನ ಆತ್ಮೀಯ ಸ್ನೇಹಿತೆ, ಮತ್ತು ಚಲನಚಿತ್ರಗಳ ಮೂಲಕ, ನಾವು ಅನೇಕ ಏರಿಳಿತಗಳನ್ನು ಹಂಚಿಕೊಂಡಿದ್ದೇವೆ. ಒಂದು ಸಂಪರ್ಕ ಉಂಟಾಗಿದೆ. ಚಲನಚಿತ್ರಗಳಲ್ಲಿ ಸಂಬಂಧವು ಹೆಚ್ಚು ವೇಗವಾಗಿ ರೂಪುಗೊಳ್ಳುತ್ತದೆ. ಏಕೆಂದರೆ ನೀವು ಶೀಘ್ರವಾಗಿ ನಿಕಟ ಸಂಪರ್ಕಕ್ಕೆ ತಳ್ಳಲ್ಪಡುತ್ತೀರಿ' ಎಂದಿದ್ದಾರೆ ವಿಜಯ್ ದೇವರಕೊಂಡ.
ರಶ್ಮಿಕಾ ಇತ್ತೀಚೆಗೆ Mashable India ಜೊತೆಗೆ ಮಾತನಾಡಿದ್ದಾರೆ. 'ವಿಜಯ್ ಮತ್ತು ನಾನು ನಮ್ಮ ವೃತ್ತಿಜೀವನದ (Career) ಆರಂಭದಲ್ಲಿ ಅನೇಕ ಯೋಜನೆಗಳಲ್ಲಿ ಸಹಕರಿಸಿದ್ದೇವೆ. ಈ ಕ್ಷೇತ್ರ ಹೇಗಿದೆ ಎಂದು ತಿಳಿದಿಲ್ಲದಿದ್ದಾಗ ಮತ್ತು ನಮ್ಮ ಆಸಕ್ತಿಗಳನ್ನು ಹಂಚಿಕೊಳ್ಳುವ ವ್ಯಕ್ತಿಗಳೊಂದಿಗೆ ಕೆಲಸ ಮಾಡುವಾಗ, ನಾವು ಸ್ನೇಹಿತರನ್ನು ಮಾಡಿಕೊಳ್ಳುತ್ತೇವೆ ಮತ್ತು ನಾವು ಬಹಳಷ್ಟು ಕಾಮನ್ ಸ್ನೇಹಿತರನ್ನು ಹೊಂದಿದ್ದೇವೆ. ಇದು ಹಾಗೆಯೇ' ಎಂದು ವಿಜಯ್ ದೇವರಕೊಂಡ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದೀರಿ ಎಂಬ ವದಂತಿಗಳನ್ನು ಉದ್ದೇಶಿಸಿ ಹೇಳಿದ್ದಾರೆ.