ವಿಜಯ್ ದೇವರಕೊಂಡ ಜೊತೆ ಲಿಪ್‌ಲಾಕ್ ಮಾಡಿ ಟ್ರೋಲ್ ಆದಾಗ ತುಂಬಾ ಅತ್ತಿದ್ದೆ; ರಶ್ಮಿಕಾ ಮಂದಣ್ಣ
ಡಿಯರ್ ಕಾಮ್ರೇಡ್ ಸಿನಿಮಾದಲ್ಲಿ ರಶ್ಮಿಕಾ ಸಹ ನಟ ವಿಜಯ್ ದೇವರಕೊಂಡ ಜೊತೆ ಲಿಪ್‌ಲಾಕ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು. ಆ ದೃಶ್ಯದ ಬಗ್ಗೆ ರಶ್ಮಿಕಾ ಈಗ ಮಾತನಾಡಿದ್ದಾರೆ.
ದಕ್ಷಿಣ ಭಾರತದ ನಟಿ ರಶ್ಮಿಕಾ ಮಂದಣ್ಣ ಸದ್ಯ ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಿಂದಿಯ ಮೊದಲ ಸಿನಿಮಾ ಬಿಡುಗಡೆಯ ಕಾತರದಲ್ಲಿದ್ದಾರೆ ರಶ್ಮಿಕಾ. ಅಮಿತಾಭ್ ಬಚ್ಚನ್, ನೀನಾ ಗುಪ್ತಾ ಸೇರಿದಂತೆ ಅನೇಕ ದೊಡ್ಡ ಕಲಾವಿದರ ಜೊತೆ ತೆರೆಹಂಚಿಕೊಂಡಿರುವ ರಶ್ಮಿಕಾ ನಟನೆಯ ಗುಡ್‌ಬೈ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಸದ್ಯ ರಶ್ಮಿಕಾ ಈ ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ರಶ್ಮಿಕಾ ಟ್ರೋಲ್‌ಗಳ ಬಗ್ಗೆ ಮಾತನಾಡಿದ್ದಾರೆ. ಒಂದು ಸಮಯದಲ್ಲಿ ರಶ್ಮಿಕಾ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ರಶ್ಮಿಕಾ ಏನೆ ಮಾಡಿದ್ರು ಟ್ರೋಲಿಗರಿಗೆ ಆಹಾರವಾಗುತ್ತಿದ್ದರು. ಕಿರಿಕ್ ಪಾರ್ಟಿ ಸಕ್ಸಸ್ ಬಳಿಕ ತೆಲುಗು ಸಿನಿಮಾರಂಗಕ್ಕೆ ಹಾರಿದ ರಶ್ಮಿಕಾ ವಿಜಯ್ ದೇವರಕೊಂಡ ಜೊತೆ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡಿದರು. ಗೀತ ಗೋವಿಂದಂ ಮತ್ತು ಡಿಯರ್ ಕಾಮ್ರೆಡ್ ಸಿನಿಮಾಗಳಲ್ಲಿ ರಶ್ಮಿಕಾ ಮತ್ತು ವಿಜಯ್ ಒಟ್ಟಿಗೆ ನಟಿಸಿದರು.
ಡಿಯರ್ ಕಾಮ್ರೇಡ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಸಹ ನಟ ವಿಜಯ್ ದೇವರಕೊಂಡ ಜೊತೆ ಲಿಪ್‌ಲಾಕ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು. ರಶ್ಮಿಕಾ ಮತ್ತು ವಿಜಯ್ ಲಿಪ್‌ಲಾಕ್ ದೃಶ್ಯ ರಿಲೀಸ್ ಆಗುತ್ತಿದ್ದಂತೆ ರಶ್ಮಿಕಾ ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದರು. ಆ ಬಗ್ಗೆ ರಶ್ಮಿಕಾ ಮೊದಲ ಬಾರಿಗೆ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಲಿಪ್‌ಲಾಕ್ ದೃಶ್ಯದ ಬಳಿಕ ತುಂಬಾ ನೋವು ಅನುಭವಿಸಿದ್ದೆ ಎಂದು ರಶ್ಮಿಕಾ ಹೇಳಿದ್ದಾರೆ.
'ಅದು ಒಂದು ಸೆಕೆಂಡ್ ನಲ್ಲಿ ನಡೆಯಿತು. ಆದರೆ ಅದನ್ನು ತಿಂಗಳುಗಟ್ಟಲೆ ಟ್ರೋಲ್ ಮಾಡಲಾಯಿತು. ನೋವಿನ ಅನೇಕ ಸಂಗತಿಗಳು ನಡಯಿತು. ಬೇಸರ ತರಿಸುವ ಹಲವು ಸುದ್ದಿಗಳನ್ನು ನೋಡುತ್ತಿದ್ದೆ. ಎಲ್ಲರೂ ನನ್ನ ಬಿಟ್ಟು ಹೋದಂತೆ, ನಾನು ಒಂಟಿ ಆದಂತೆ ಕನಸು ಬೀಳುತ್ತಿತ್ತು. ಅಳುತ್ತಲೆ ಮಲಗುತ್ತಿದೆ, ಕಣ್ಣೀರು ಹಾಕುತ್ತಲೇ ಏಳುತ್ತಿದ್ದೆ’ ಎಂದು ರಶ್ಮಿಕಾ ಹೇಳಿದ್ದಾರೆ.
ಎಕ್ಸ್‌ಗಳ ಜೊತೆ ಇನ್ನೂ ಫ್ರೆಂಡ್‌ಶಿಪ್ ಇದೆ, ಅವರ ಪೋಷಕರನ್ನು ಭೇಟಿಯಾಗ್ತೀನಿ; ನಟಿ ರಶ್ಮಿಕಾ ಮಂದಣ್ಣ
ಈ ಎಲ್ಲ ವಿಚಾರಗಳನ್ನು ಕುಟುಂಬದ ಜೊತೆಯೂ ಹೇಳಿಕೊಳ್ಳುತ್ತಿರಲಿಲ್ಲ. ಯಾಕೆಂದರೆ ಅವರಿಗೆ ಮಕ್ಕಳು ಯಾವಾಗಲು ಅಳುತ್ತಾ, ನೋವಿನಲ್ಲಿರುವುದನ್ನು ನೋಡಲು ಇಷ್ಟಪಡಲ್ಲ. ಹಾಗಾಗೆ ಕುಟುಂಬದವರ ಬಳಿಯೂ ಹೇಳಿಕೊಂಡಿಲ್ಲ. ಅವರಿಗೆ ಸುಮ್ಮನೆ ತೊಂದರೆ ಕೊಡಲು ಇಷ್ಟವಿರಲಿಲ್ಲ' ಎಂದು ರಶ್ಮಿಕಾ ಹೇಳಿದರು.
ಬಾಲಿವುಡ್‌ನಲ್ಲೂ ರಶ್ಮಿಕಾ ಹವಾ; ಟಾಪ್ ಹೀರೋಯಿನ್‌ಗಳನ್ನು ಸೋಲಿಸಿ ಮತ್ತೊಂದು ಸಿನಿಮಾ ವಶ
ಸಾಕಷ್ಟು ಟ್ರೋಲ್‌ಗಳನ್ನು ಎದುರಿಸಿ ರಶ್ಮಿಕಾ ಸದ್ಯ ಭಾರತದ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಹಿಂದಿಯಲ್ಲಿ ಮಿಷನ್ ಮಜ್ನು ಸಿನಿಮಾ ಮೂಲಕ ರಶ್ಮಿಕಾ ಬಾಲಿವುಡ್‌ಗೆ ಹಾರಿದರು. ಮೊದಲ ಸಿನಿಮಾ ರಿಲೀಸ್‌ಗೂ ಮೊದಲೇ ರಶ್ಮಿಕಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಗುಡ್‌ಬೈ ಸಿನಿಮಾ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಜೊತೆಗೆ ರಣಬೀರ್ ಕಪೂರ್ ಜೊತೆ ಸಿನಿಮಾ ಮಾಡುತ್ತಿದ್ದಾರೆ.