ಎಕ್ಸ್‌ಗಳ ಜೊತೆ ಇನ್ನೂ ಫ್ರೆಂಡ್‌ಶಿಪ್ ಇದೆ, ಅವರ ಪೋಷಕರನ್ನು ಭೇಟಿಯಾಗ್ತೀನಿ; ನಟಿ ರಶ್ಮಿಕಾ ಮಂದಣ್ಣ

ರಶ್ಮಿಕಾ ತನ್ನ ಮಾಜಿ ಬಾಯ್‌ಫ್ರೆಂಡ್ಸ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಈಗಲೂ ಅವರ ಜೊತೆ ಫ್ರೆಂಡ್‌ಶಿಪ್ ಇದೆ, ಅಲ್ಲದೇ ಅವರ ಪೋಷಕರ ಜೊತೆಯೂ ಸಂಪರ್ಕದಲ್ಲಿರುವುದಾಗಿ ಹೇಳಿದ್ದಾರೆ. 
 

Rashmika Mandanna reveals she is still friends with her exes and meets their partners sgk

ನಟಿ ರಶ್ಮಿಕಾ ಮಂದಣ್ಣ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸೌತ್ ಸೆನ್ಸೇಷನ್ ಸ್ಟಾರ್ ಸದ್ಯ ಬಾಲಿವುಡ್ ನಲ್ಲಿ ಸದ್ದು ಮಾಡುತ್ತಿದ್ದಾರೆ. ರಶ್ಮಿಕಾ ತನ್ನ ಮೊದಲ ಹಿಂದಿ ಸಿನಿಮಾ ರಿಲೀಸ್‌ಗೆ  ಎದುರು ನೋಡುತ್ತಿದ್ದಾರೆ. ಗುಡ್‌ಬೈ ಸಿನಿಮಾ ಮೂಲಕ ರಶ್ಮಿಕಾ ಹಿಂದಿ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಈಗಾಗಲೇ ಟ್ರೈಲರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯ ಸಿನಿಮಾಗಾಗಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ರಶ್ಮಿಕಾ ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಈವೇಳೆ ರಶ್ಮಿಕಾ ತನ್ನ ಮಾಜಿ ಬಾಯ್‌ಫ್ರೆಂಡ್ಸ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಈಗಲೂ ಅವರ ಜೊತೆ ಫ್ರೆಂಡ್‌ಶಿಪ್ ಇದೆ, ಅಲ್ಲದೇ ಅವರ ಪೋಷಕರ ಜೊತೆಯೂ ಸಂಪರ್ಕದಲ್ಲಿರುವುದಾಗಿ ಹೇಳಿದ್ದಾರೆ. 

ಸಂದರ್ಶನದಲ್ಲಿ ಮಾತನಾಡಿದ ರಶ್ಮಿಕಾ ಮಂದಣ್ಣ, 'ನಾನು ಇನ್ನೂ ನನ್ನ ಮಾಜಿ ಬಾಯ್‌ಫ್ರೆಂಡ್ಸ್ ಜೊತೆ ಸ್ನೇಹದಿಂದ ಇದ್ದೀನಿ. ಯಾವಾಗಲೂ ನಾನು ಅವರ ಕುಟುಂಬದವರನ್ನು ಭೇಟಿಯಾಗಲು ಇಷ್ಟಪಡುತ್ತೇನೆ' ಎಂದು ಹೇಳಿದರು. ಬಳಿಕ ಇದು ಒಳ್ಳೆಯ ಲಕ್ಷಣ ಅಲ್ಲ ಎನ್ನುವುದನ್ನು ಸಹ ಒಪ್ಪಿಕೊಂಡರು. 'ಆದರೆ ನಾನು ಅವರ ಜೊತೆ ಉತ್ತಮ ಸ್ನೇಹ ಸಂಬಂಧ ಹೊಂದಿದ್ದೀನಿ. ಹಾಗಾಗಿ ಅದು ಒಳ್ಳೆಯದು' ಎಂದರು.

ಬಾಲಿವುಡ್‌ನಲ್ಲೂ ರಶ್ಮಿಕಾ ಹವಾ; ಟಾಪ್‌ ಹೀರೋಯಿನ್‌ಗಳನ್ನು ಸೋಲಿಸಿ ಮತ್ತೊಂದು ಸಿನಿಮಾ ವಶ

ನಟಿ ರಶ್ಮಿಕಾ ಮಂದಣ್ಣ ಈ ಹಿಂದೆ ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಬಳಿಕ ಬ್ರೇಕ್ ಅಪ್ ಆದ ವಿಚಾರ ಎಲ್ಲರಿಗೂ ಗೊತ್ತಿದೆ. ರಶ್ಮಿಕಾ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಈ ಸಿನಿಮಾ ಬಳಿಕ ರಶ್ಮಿಕಾ ಮತ್ತು ರಕ್ಷಿತ್ ಶೆಟ್ಟಿ ಜೊತೆ ಡೇಟಿಂಗ್ ಮಾಡುತ್ತಿದ್ದರು.  ಇಬ್ಬರೂ ಜುಲೈ 2017 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಆದರೆ ಕೆಲವೇ ತಿಂಗಳಲ್ಲಿ ನಿಶ್ಚಿತಾರ್ಥ ಮುರಿದು ಮುರಿದುಕೊಂಡು ತೆಲುಗಿಗೆ ಹಾರಿದರು.  ಗೀತಾ ಗೋವಿಂದಂ ಸಿನಿಮಾ ಮೂಲಕ ರಶ್ಮಿಕಾ ತೆಲುಗು ಚಿತ್ರರಂಗದಲ್ಲಿ ಮಿಂಚಿದರು. ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಮೂಲಕ ಸ್ಟಾರ್ ನಟಿಯಾಗಿ ಹೊರಹೊಮ್ಮಿದರು.  

ಬಳಿಕ ರಶ್ಮಿಕಾ ಹೆಸರು ತೆಲುಗು ಸ್ಟಾರ್ ವಿಜಯ್ ದಿವೇರಕೊಂಡ ಜೊತೆ ಕೇಳಿಬಂದಿತ್ತು. ಇಬ್ಬರ ಡೇಟಿಂಗ್ ವದಂತಿ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ. ತುಂಬಾ ಕ್ಯೂಟ್ ಆಗಿತ್ತು. ವಿಜಯ್ ಮತ್ತು ನಾನು ಅನೇಕ ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡಿದ್ದೇವೆ. ವೃತ್ತಿ ಜೀವನದ ಪ್ರಾರಂಭದಲ್ಲಿ ನಾವಿಬ್ಬರು ಒಟ್ಟಿಗೆ ಕೆಲಸ ಮಾಡಿದ್ದೇವೆ. ಚಿತ್ರರಂಗ ಹೇಗಿದೆ ಅಂತ ತಿಳಿಯದೇ ಇದ್ದಾಗ ನಾವು ಒಟ್ಟಿಗೆ ಕೆಲಸ ಮಾಡಿದ್ದೇವೆ. ನಾವು ಫ್ರೆಂಡ್ಸ್ ಆಗಿದ್ದೀವಿ' ಎಂದು ಹೇಳಿದರು. 

ದೇವರಕೊಂಡ ಮತ್ತು ರಶ್ಮಿಕಾ ಸಂಬಂಧದ ಬಗ್ಗೆ ಕರಣ್‌ ಜೋಹರ್‌ ಏನು ಹೇಳಿದ್ದಾರೆ ನೋಡಿ

ರಶ್ಮಿಕಾ ಸದ್ಯ ಗುಡ್‌ಗೈ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಜೊತೆ ನಟಿಸುತ್ತಿದ್ದಾರೆ. ಅಮಿತಾಭ್ ಮತ್ತು ನೀನಾ ಗುಪ್ತಾ ಮಗಳಾಗಿ ರಶ್ಮಿಕಾ ನಟಿಸಿದ್ದಾರೆ. ರಶ್ಮಿಕಾ ಮೊದಲ ಸಿನಿಮಾ ಹೇಗಿರಲಿದೆ ಎಂದು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.   

Latest Videos
Follow Us:
Download App:
  • android
  • ios