ನಾನು ಕಿರುತೆರೆಯ ವರ್ಜಿನ್ ಅಪ್ಪ ಎಂದು ಕರೆದುಕೊಂಡ ನಟ ಗೋಪಾಲಕೃಷ್ಣ ದೇಶಪಾಂಡೆ
29ನೇ ವಯಸ್ಸಿನಲ್ಲಿಯೇ ಧಾರಾವಾಹಿಯಲ್ಲಿ ತಂದೆಯ ಪಾತ್ರ ನಿರ್ವಹಿಸಿದ ಗೋಪಾಲಕೃಷ್ಣ ದೇಶಪಾಂಡೆ, ತಮ್ಮನ್ನು ಕಿರುತೆರೆಯ ವರ್ಜಿನ್ ಅಪ್ಪ ಎಂದು ಕರೆದುಕೊಳ್ಳುತ್ತಾರೆ. 'ಪುಟ್ಟ ಗೌರಿ' ಧಾರಾವಾಹಿಯಲ್ಲಿ ತಂದೆಯಾಗಿ ನಟಿಸಿದ ಅನುಭವ ಹಂಚಿಕೊಂಡಿದ್ದಾರೆ.

ಚಂದನವನದಲ್ಲಿ ತಮ್ಮ ಅಭಿನಯದಿಂದಲೇ ಗುರುತಿಸಿಕೊಂಡಿರುವ ನಟ ಗೋಪಾಲಕೃಷ್ಣ ದೇಶಪಾಂಡೆ, ತಮ್ಮನ್ನು ಕಿರುತೆರೆಯ ವರ್ಜಿನ್ ಅಪ್ಪ ಎಂದು ಕರೆದುಕೊಳ್ಳುತ್ತಾರೆ. 29ನೇ ವಯಸ್ಸಿನಲ್ಲಿಯೇ ಧಾರಾವಾಹಿಯಲ್ಲಿ ತಂದೆಯ ಪಾತ್ರವನ್ನು ನಿರ್ವಹಿಸಿದ್ದರು. ಸೀರಿಯಲ್‌ನಲ್ಲಿ 29ನೇ ವಯಸ್ಸಿನಲ್ಲಿಯೇ ಮಗಳು-ಅಳಿಯನನ್ನು ಕಂಡಿದ್ದರು.
ಗೋಪಾಲಕೃಷ್ಣ ದೇಶಪಾಂಡೆ ಶಾಖಾಹಾರಿ, 777 ಚಾರ್ಲಿ, ಸಪ್ತ ಸಾಗರದಾಜೆ ಎಲ್ಲೋ ಸೈಡ್ ಎ ಮತ್ತು ಬಿ, ಗರುಡ ಗಮನ ವೃಷಭ ವಾಹನ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾಗೂ ಮುನ್ನ ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ಪುಟ್ಟ ಗೌರಿ ಧಾರಾವಾಹಿಯಲ್ಲಿಯೂ ನಟಿಸಿದ್ದರು. ಧಾರಾವಾಹಿಯ ಕಥಾ ನಾಯಕಿ ಗೌರಿ ತಂದೆಯಾಗಿ ಗೋಪಾಲಕೃಷ್ಣ ನಟಿಸಿದ್ದರು
ಸಂದರ್ಶನವೊಂದರಲ್ಲಿ ನಾನು ಎರಡ್ಮೂರು ವರ್ಷ ಸೀರಿಯಲ್‌ನಲ್ಲಿ ನಟಿಸಿದೆ. ಆ ದಿನಗಳನ್ನು ನಾನು ತುಂಬಾ ಎಂಜಾಯ್ ಮಾಡಿದೆ. 29ನೇ ವಯುಸ್ಸಿನಲ್ಲಿಯೇ ನನಗೆ ಅಷ್ಟು ದೊಡ್ಡ ಪಾತ್ರ ಸಿಕ್ಕಿತ್ತು. ನನಗೆ ಹೆಣ್ಣು ಕೊಡುವಾಗ ಅಷ್ಟು ದೊಡ್ಡ ವ್ಯಕ್ತಿಗೆ ನಮ್ಮ ಮಗಳನ್ನು ಕೊಡಲ್ಲ ಎಂದು ಹೇಳಿದ್ದರು. ಹಾಗಾಗಿ ನಾನು ಕಿರುತೆರೆಯ ವರ್ಜಿನ್ ಅಪ್ಪ ಎಂದು ಹೇಳಿ ನಕ್ಕರು.
ಬಿಎಸ್‌ಸಿ ಅಂತಿಮ ವರ್ಷದಲ್ಲಿ ಫೇಲ್ ಆದ ನಂತರ ನೀನಾಸಂ ಸೇರಿಕೊಂಡೆ. ಅಲ್ಲಿಂದ ನನ್ನನ್ನು ಬಣ್ಣದ ಬದುಕು ಸೆಳೆದುಕೊಂಡಿತು. ನನ್ನಂಥವರಿಗೆ ಸಿನಿಮಾದಲ್ಲಿ ಅವಕಾಶ ಸಿಗಲ್ಲ ಎಂದುಕೊಂಡಿದ್ದೆ. ಲೂಸಿಯಾ, ಉಳಿದವರು ಕಂಡಂತೆ ಎರಡು ಸಿನಿಮಾಗಳು ನಾವು ಸಿನಿಮಾ ಮಾಡಬಹುದು ಎಂಬ ಭರವಸೆಯನ್ನು ಹುಟ್ಟಿಸಿತು. ಅಲ್ಲಿಂದ ನನ್ನ ಸಿನಿ ಜರ್ನಿ ಶುರುವಾಯ್ತು.
ಯಾವುದೇ ಅವಕಾಶ ಬಂದರೂ ನಾನು ರಿಜೆಕ್ಟ್ ಮಾಡಲ್ಲ. ನಿರ್ದೇಶಕರು ನೀಡಿದ ಪಾತ್ರವನ್ನು ಹೇಗೆ ನಿರ್ವಹಿಸಬೇಕು ಎಂದು ನಾನು ಸದಾ ಯೋಚಿಸುತ್ತಿರುತ್ತೇನೆ. ಸಿನಿಮಾದ ಈ ಅವಕಾಶ ಬೇಡ ಅನ್ನೋವಷ್ಟರ ಮಟ್ಟಿಗೆ ನಾನು ಬೆಳೆದಿಲ್ಲ. ಪ್ರತಿ ಚಿತ್ರದಿಂದಲೂ ನಾನು ಕಲಿಯುತ್ತೇನೆ ಎಂದು ನಟ ಗೋಪಾಲಕೃಷ್ಣ ದೇಶಪಾಂಡೆ ಹೇಳುತ್ತಾರೆ.