- Home
- Entertainment
- TV Talk
- Ninagaagi Serial: ನೀವು ಅಂದುಕೊಂಡವರು ಯಾರೂ ಅಲ್ಲ… ನಿನಗಾಗಿ ಸೀರಿಯಲ್ ನಿಜವಾದ ವಿಲನ್ ಇವರೇ ನೋಡಿ…
Ninagaagi Serial: ನೀವು ಅಂದುಕೊಂಡವರು ಯಾರೂ ಅಲ್ಲ… ನಿನಗಾಗಿ ಸೀರಿಯಲ್ ನಿಜವಾದ ವಿಲನ್ ಇವರೇ ನೋಡಿ…
ನಿನಗಾಗಿ ಧಾರಾವಾಹಿಯಲ್ಲಿ ನಿಜವಾದ ವಿಲನ್ ಯಾರು ಅನ್ನೋದೆ ವೀಕ್ಷಕರಿಗೆ ಯಕ್ಷ ಪ್ರಶ್ನೆಯಾಗಿ ಉಳಿದಿದೆ. ರಾಣಾ, ದೇವಿ, ಕಪಿಲ್ ಇವರಲ್ಲಿ ವಿಲನ್ ಯಾರು?

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ನಿನಗಾಗಿ ಧಾರಾವಾಹಿಯಲ್ಲಿ (Ninagaagi Serial) ಸದ್ಯ ಸಖತ್ ಇಂಟ್ರೆಸ್ಟಿಂಗ್ ಆದ ಎಪಿಸೋಡ್ ಗಳು ನಡೆಯುತ್ತಿವೆ. ತನ್ನ ಮನೆಗೆ ಸೇರಿದ ಜೀವ, ರಚನ, ಕೃಷ್ಣ ಮತ್ತು ಬಾಲನಿಗೆ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಿವೆ.
ಜೀವಾ ಆ ಮನೆಗೆ ಬಂದಿರೋದು ಮೊದಲೇ ರಾಣಾ, ಕಪಿಲ್ ಸೇರಿ ಮನೆಯವರಿಗೆ ಯಾರಿಗೂ ಇಷ್ಟ ಇಲ್ಲ. ಆದರೂ ಅಪ್ಪನ ಕೊನೆಯ ಆಸೆಯಂತೆ ಹಾಗೂ ರಚನಾ ಒತ್ತಾಯದ ಮೇರೆಗೆ ಜೀವಾ ಆ ಮನೆಗೆ ಕಾಲಿಟ್ಟಿದ್ದಾನೆ. ಮನೆಗೆ ಕಾಲಿಟ್ಟ ಮೇಲೆ ಒಂದಲ್ಲ ಒಂದು ಸಮಸ್ಯೆಗಳು ಕಾಡುತ್ತಿವೆ. ಅದರಲ್ಲೂ ಆಸ್ತಿಯೆಲ್ಲಾ ಕೃಷ್ಣ ಹೆಸರಲ್ಲಿದೆ ಎಂದು ಗೊತ್ತಾದಾ ಮೇಲೆ ಮಗುವನ್ನು ಸಾಯಿಸೋದಕ್ಕೂ ಪ್ರಯತ್ನಿಸಿದ್ದಾರೆ.
ಈಗಾಗಲೇ ಜೀವಾ ಮೇಲೆ ದಾಳಿಯಾಗಿದೆ, ಜೀವನನ್ನು ರಕ್ಷಿಸಲು ಬಂದು ರಚನಾ ಎರಡು ಕೈಗಳಿಗೂ ಪೆಟ್ಟಾಗಿದೆ. ಆದರೆ ತನ್ನ ಮೇಲೆ ದಾಳಿ ಮಾಡಲು ಬಂದವರು ಯಾರು ಅನ್ನೋದು ಮಾತ್ರ ಜೀವಾ ಮುಂದೆ ಗುಟ್ಟಾಗಿಯೇ ಉಳಿದಿದೆ.
ಇನ್ನೊಂದೆಡೆ ಮನೆಗೆ ಬಂದ ಮಂತ್ರವಾದಿ ಸಹ ಈ ಮನೆಯಲ್ಲಿ ದುಷ್ಟ ಶಕ್ತಿ ಇದೆ ಎನ್ನುತ್ತಾ, ನೇರವಾಗಿ ರಚನಾ ಮುಂದೆ ನಿಂತು ಈಕೆಯಲ್ಲೇ ದುಷ್ಟ ಶಕ್ತಿ ಇದೆ ಎಂದು ಹೇಳಿದೆ. ಆದರೆ ಆ ಮಂತ್ರವಾದಿಯ ವೇಷದಲ್ಲಿ ಬಂದಿರೋನು ನಿಜವಾದ ಮಂತ್ರವಾದಿ ಅಲ್ಲ ಅನ್ನೋದು ಜೀವಾ ಮತ್ತು ಬಾಲ ಮುಂದೆ ಬಯಲಾಗಿದೆ.
ಇದೆಲ್ಲಾ ನಡೆಯುತ್ತಿರುವಾಗ ಇಲ್ಲಿ ನಿಜವಾದ ವಿಲನ್ ಯಾರು ಅನ್ನೋದೆ ವೀಕ್ಷಕರ ಪಾಲಿನ ಕಗ್ಗಂಟಾಗಿದೆ. ಯಾಕಂದ್ರೆ ಒಂದು ರೀತಿಯಲ್ಲಿ ನೋಡಿದ್ರೆ ರಾಣಾ ಎಲ್ಲರ ಎದುರಲ್ಲೇ ತನ್ನ ಕೋಪ ತಾಪವನ್ನು ಪ್ರದರ್ಶಿಸುತ್ತಿದ್ದಾನೆ. ಇನ್ನೊಂದೆಡೆ ಕಪಿಲ್ ಅಣ್ಣನ ಮಾತಿನಂತೆ, ಈ ಆಸ್ತಿಯೆಲ್ಲಾ ತಮಗೆ ಆಗಬೇಕೆಂಬ ದುರಾಸೆಯಿಂದ ಸ್ವಂತ ಅಣ್ಣ ಜೀವನನ್ನು ಕೊಲ್ಲೋದಕ್ಕೂ ಹಿಂದೆ ಮುಂದೆ ಯೋಚಿಸದೆ, ನೇರವಾಗಿಯೇ ಯುದ್ಧಕ್ಕೆ ನಿಂತಂತೆ ಸಜ್ಜಾಗಿದ್ದಾನೆ.
ಇವರಿಬ್ಬರ ಮೇಲೆ ಸಂಶಯ ಇದ್ದರೂ ಇನ್ನೊಂದು ಸಂಶಯ ಇರೋದು ದೇವಿ ಮೇಲೆ. ಜೀವಾ ತಂಗಿ ದೇವಿ ಎಲ್ಲರ ಮುಂದೆ ಒಳ್ಳೆಯವಳಂತೆ ಕಾಣಿಸಿಕೊಂಡರೂ ಆಕೆ ನಿಜವಾದ ವಿಲನ್ ಆಗಿರಬಹುದು ಅನ್ನೋದು ಜನರ ಅಭಿಪ್ರಾಯವಾಗಿದೆ.
ರಚನಾ ಮೇಲೆ ದಾಳಿ ಮಾಡಿದ್ದು ಹೆಣ್ಣು, ಆಕೆಯ ಕಾಲಲ್ಲಿ ಗೆಜ್ಜೆ, ಕೈಯಲ್ಲಿ ಬಳೆ ಇರೋದನ್ನು ರಚನಾ ನೋಡಿದ್ದಳು. ಮತ್ತೊಂದೆಡೆ ಕಳ್ಳ ಮಂತ್ರವಾದಿ ಸಹ ಇದನ್ನೆಲ್ಲಾ ನಾನು ಆಕೆ ಹೇಳಿಯೇ ಮಾಡಿದ್ದು ಎಂದಿದ್ದಾನೆ. ಹಾಗಾಗಿ ಎಲ್ಲಾದಕ್ಕೂ ಕಾರಣ ಒಬ್ಬ ಹೆಣ್ಣು ಅನ್ನೋದು ಗೊತ್ತಾಗಿದೆ. ಇಲ್ಲಿ ಸಂಶಯ ಬರುವಂತಹ ಬೇರೆ ಯಾವ ಹೆಣ್ಣೂ ಕೂಡ ಇಲ್ಲ. ಹಾಗಾಗಿ ಎಲ್ಲರ ದೃಷ್ಟಿ ದೇವಿಯತ್ತ ಇದೆ.
ದೇವಿ ತುಂಬಾನೆ ಒಳ್ಳೆಯವಳಂತೆ ನಟಿಸುತ್ತಿದ್ದಾಳೆ. ಆದರೆ ಹಿಂದಿನಿಂದ ಆಕೆ ಜೀವನನ್ನು ಕೊಲ್ಲೋದಕ್ಕೆ ಹಾಗೂ ಈ ಮನೆಯಿಂದ ಓಡಿಸಿ, ಆಸ್ತಿಯಲ್ಲಿ ಪಾಲು ಆತನಿಗೆ ಸಿಗದೇ ಇರಲು ಈ ಪ್ರಯತ್ನಗಳನ್ನೆಲ್ಲಾ ಮಾಡುತ್ತಿರುವ ಸಾಧ್ಯತೆ ಇದೆ. ಯಾವುದಕ್ಕೂ ಯಾರು ನಿಜವಾದ ವಿಲನ್ ಅನ್ನೋದನ್ನು ನೋಡಲು ಸೀರಿಯಲ್ ನೋಡಲೇಬೇಕು. ಕರಿಮಣಿ ಧಾರಾವಾಹಿಯಲ್ಲಿ ಅರುಂಧತಿಯೇ ಬ್ಲ್ಯಾಕ್ ರೋಸ್ ಆದಂತೆ, ಇದರಲ್ಲೂ ದೇವಿನೇ ವಿಲನ್ ಆಗಿರಲೂಬಹೂದು.