- Home
- Entertainment
- TV Talk
- Kannada TV Serials TRP Report: ಪ್ರಸಾರ ಆಗ್ತಿದ್ದಂತೆ ಹಳೇ ಧಾರಾವಾಹಿಗಳನ್ನು ಧೂಳಿಪಟ ಮಾಡಿದ ಹೊಸ ಸೀರಿಯಲ್!
Kannada TV Serials TRP Report: ಪ್ರಸಾರ ಆಗ್ತಿದ್ದಂತೆ ಹಳೇ ಧಾರಾವಾಹಿಗಳನ್ನು ಧೂಳಿಪಟ ಮಾಡಿದ ಹೊಸ ಸೀರಿಯಲ್!
ಈ ವಾರದ ಧಾರಾವಾಹಿ ಟಿಆರ್‌ಪಿ ಹೊರಗಡೆ ಬಂದಿದ್ದು, ಹೊಚ್ಚ ಹೊಸ ಧಾರಾವಾಹಿಯೊಂದು ನಂ 1 ಸ್ಥಾನ ಪಡೆದಿದೆ. ಹಾಗಾದರೆ ಆ ಧಾರಾವಾಹಿ ಯಾವುದು? ಉಳಿದ ಧಾರಾವಾಹಿಗಳಿಗೆ ಎಷ್ಟು ಟಿಆರ್‌ಪಿ ಸಿಕ್ಕಿದೆ?

ಟಾಪ್ 10 ಧಾರಾವಾಹಿಗಳು ಯಾವುವು?
ಕನ್ನಡದಲ್ಲಿ ಈ ವಾರ ಭರ್ಜರಿ ಪೈಪೋಟಿ ಶುರುವಾಗಿದೆ. ಒಂದಕ್ಕಿಂತ ಒಂದು ಧಾರಾವಾಹಿಗಳು ಜಿದ್ದಿಗೆ ಬಿದ್ದು ಎಪಿಸೋಡ್‌ನಲ್ಲಿ ಟ್ವಿಸ್ಟ್ ಕೊಡುತ್ತಿವೆ. ಹಾಗಾದರೆ ಟಾಪ್ 10 ಸೀರಿಯಲ್‌ಗಳು ಯಾವುವು?
ಅಮೃತಧಾರೆ ಧಾರಾವಾಹಿ
ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿ ಮಗು ಸಾಯಿಸಬೇಕು ಅಂತ ಜಯದೇವ್, ಶಕುಂತಲಾ ಪ್ಲ್ಯಾನ್ ಮಾಡಿದ್ದಾರೆ. ಇನ್ನೊಂದು ಕಡೆ ಭೂಮಿ ತುಂಬು ಗರ್ಭಿಣಿ. ಈ ಬಗ್ಗೆಯೃ ಧಾರಾವಾಹಿ ಕತೆ ಪ್ರಸಾರ ಆಗ್ತಿದೆ.
ಬ್ರಹ್ಮಗಂಟು ಧಾರಾವಾಹಿ
ಬ್ರಹ್ಮಗಂಟು ಧಾರಾವಾಹಿಗೆ 6.5 TVR ಸಿಕ್ಕಿದೆ. ಅಂದಹಾಗೆ ಚಿರು ಜೊತೆಗೆ ದೀಪಾ ತನ್ನ ತವರು ಮನೆಗೆ ಬಂದಿದ್ದಾಳೆ. ಅಲ್ಲಿ ಸಂಜನಾ-ನರಸಿಂಹ ಜೋಡಿಯನ್ನು ಒಟ್ಟು ಮಾಡಲು ಒದ್ದಾಡುತ್ತಿದ್ದಾಳೆ.
ನಾ ನಿನ್ನ ಬಿಡಲಾರೆ ಧಾರಾವಾಹಿ
ನಾ ನಿನ್ನ ಬಿಡಲಾರೆ ಧಾರಾವಾಹಿಗೆ 8.3 TVR ಸಿಕ್ಕಿದೆ. ಈ ಧಾರಾವಾಹಿಯಲ್ಲಿ ಮಾಮಾ ಮಾತ್ರ ಇಡೀ ಕುಟುಂಬಕ್ಕೆ ತೊಂದರೆ ಕೊಡ್ತಿದ್ದಾಳೆ. ಇದನ್ನು ದುರ್ಗಾ ಹಾಗೂ ಶರತ್ ಹೇಗೆ ಎದುರಿಸುತ್ತಾರೆ ಎಂಬುದೇ ಕುತೂಹಲಕರ ವಿಷಯವಾಗಿದೆ.
ಅಣ್ಣಯ್ಯ ಧಾರಾವಾಹಿ
ಅಣ್ಣಯ್ಯ ಧಾರಾವಾಹಿಗೆ 8.3 TVR ಸಿಕ್ಕಿದೆ. ಸದ್ಯ ರಾಣಿ ಹಾಗೂ ಮನು ಮದುವೆ ತಯಾರಿ ಎಪಿಸೋಡ್ ಪ್ರಸಾರ ಆಗ್ತಿದೆ. ಇನ್ನು ಮನು ದಡ್ಡ ಎನ್ನೋದು ರಿವೀಲ್ ಆಗಿಲ್ಲ. ಜಿಮ್ ಸೀನ ಹಾಗೂ ರಶ್ಮಿಯನ್ನು ಬೇರೆ ಮಾಡಲು ಒಂದಿಬ್ಬರು ಪ್ರಯತ್ನಪಡುತ್ತಿದ್ದಾರೆ.
ಲಕ್ಷ್ಮೀ ನಿವಾಸ ಧಾರಾವಾಹಿ
ಲಕ್ಷ್ಮೀ ನಿವಾಸ ಧಾರಾವಾಹಿಗೆ 8.4 TVR ಸಿಕ್ಕಿದೆ. ಒಂದುಕಡೆ ಸಿದ್ದೇಗೌಡ್ರು ಜೈಲು ಸೇರಿದ್ದಾರೆ. ಇನ್ನೊಂದು ಕಡೆ ಒಂದೇ ಮನೆಯಲ್ಲಿದ್ರೂ ವಿಶ್ವ-ಜಾನು ಭೇಟಿ ಆಗಿಲ್ಲ, ಇನ್ನು ಲಕ್ಷ್ಮೀ ಹಾಗೂ ಶ್ರೀನಿವಾಸ್ ಅವರು ಮಕ್ಕಳ ಮನೆಯಿಂದ ಹೊರಗಡೆ ಬಂದಿದ್ದಾರೆ.
ಭಾಗ್ಯಲಕ್ಷ್ಮೀ ಧಾರಾವಾಹಿ
ಭಾಗ್ಯಲಕ್ಷ್ಮೀ ಧಾರಾವಾಹಿಗೆ ಈ ವಾರ 3.9 TRP ಬಂದಿದೆ. ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಪೂಜಾ ಹಾಗೂ ಕಿಶನ್ ಮದುವೆ ಬಗ್ಗೆ ಕಥೆ ಸಾಗುತ್ತಿದೆ. ಇವರ ಮದುವೆಗೆ ಸಾಕಷ್ಟು ಅಡೆತಡೆಗಳು ಬರುತ್ತಿದೆ. ತಂಗಿ ಮದುವೆ ಮಾಡಲು ಭಾಗ್ಯ ಒದ್ದಾಡುತ್ತಿದ್ದಾಳೆ.
ಕರ್ಣ ಧಾರಾವಾಹಿ
ಕಿರಣ್ ರಾಜ್, ನಮ್ರತಾ ಗೌಡ, ಭವ್ಯಾ ಗೌಡ ನಟನೆಯ ʼಕರ್ಣʼ ಧಾರಾವಾಹಿಗೆ 10.6 TRP ಸಿಕಕಿದೆ. ಈ ಧಾರಾವಾಹಿ ಪ್ರಸಾರ ಆಗಿ ಎರಡು ದಿನಕ್ಕೆ ಈ ಧಾರಾವಾಹಿಗೆ ಇಷ್ಟು ಟಿಆರ್‌ಪಿ ಬಂದಿದೆ. ನಿತ್ಯಾ, ನಿಧಿ ನಡುವೆ ಕರ್ಣನಿಗೆ ಯಾರು ಜೊತೆಯಾಗ್ತಾರೆ ಎಂದು ಕಾದು ನೋಡಬೇಕಿದೆ.
ಭಾರ್ಗವಿ ಎಲ್‌ಎಲ್‌ಬಿ
ಭಾರ್ಗವಿ ಎಲ್‌ಎಲ್‌ಬಿಗೆ 4.7 TRP ಬಂದಿದೆ. ಭಾರ್ಗವಿ ಹಾಗೂ ಅವಳ ಅಕ್ಕ ಸಂಧ್ಯಾ ನಡುವೆ ಹೋರಾಟ ನಡೆಯುತ್ತಿದೆ. ರಾಧಾ ಭಗವತಿ, ಚೈತ್ರಾ ರಾವ್ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ನಿನಗಾಗಿ ಧಾರಾವಾಹಿ
ನಿನಗಾಗಿ ಧಾರಾವಾಹಿಗೆ 4 TRP ಬಂದಿದೆ. ರಾಣಾ ಸೇರಿ ಇಡೀ ಕುಟುಂಬ ಒಂದಲ್ಲ ಒಂದು ತೊಂದರೆ ಕೊಟ್ಟು, ಜೀವ ಹಾಗೂ ಅವನ ಹೆಂಡ್ತಿ, ಮಗುವನ್ನು ಓಡಿಸಲು ನೋಡುತ್ತಿದೆ. ಈ ಬಗ್ಗೆಯೇ ಧಾರಾವಾಹಿ ಕಥೆ ಸಾಗುತ್ತಿದೆ.
ಮುದ್ದುಸೊಸೆ ಧಾರಾವಾಹಿ
ಮುದ್ದುಸೊಸೆ ಧಾರಾವಾಹಿಗೆ 4.2 TRP ಬಂದಿದೆ. ವೀರಭದ್ರ ಹಾಗೂ ವಿದ್ಯಾ ಮದುವೆಯಾಗಿದೆ. ಭದ್ರನ ಮನೆಯಲ್ಲಿ ವಿದ್ಯಾ ಒಂದಷ್ಟು ಸವಾಲುಗಳನ್ನು ಎದುರಿಸುತ್ತಿದ್ದಾಳೆ. ಪ್ರತಿಮಾ ಠಾಕೂರ್, ತ್ರಿವಿಕ್ರಮ್, ಮುನಿಸ್ವಾಮಿ ಅವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ನಂದಗೋಕುಲ
ನಂದಗೋಕುಲ 4.4 TRP ಬಂದಿದೆ. ನಂದಕುಮಾರ್ ಹಾಗೂ ಸೂರ್ಯಕಾಂತ್ ಸಹೋದರರ ನಡುವಿನ ದ್ವೇಷದಲ್ಲಿ ಲವ್ ಮಾಡಿಕೊಂಡ ಮಕ್ಕಳ ಕಥೆ ಏನಾಗತ್ತೆ? ಈ ಎರಡು ಕುಟುಂಬದ ನಡುವಿನ ದ್ವೇಷ ಸರಿ ಹೋಗತ್ತಾ ಎಂದು ಕಾದು ನೋಡಬೇಕಿದೆ.
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಗೆ 8.6 TVR ಸಿಕ್ಕಿದೆ. ಒಂದಷ್ಟು ಹೊಸ ವಿಷಯಗಳು ಹೊರಗಡೆ ಬರುತ್ತಿದ್ದು, ಶ್ರಾವಣಿ ಹಾಗೂ ಸುಬ್ಬು ಬದುಕು ಏನಾಗಲಿದೆ ಎಂದು ಕಾದು ನೋಡಬೇಕಿದೆ.
ಆಸೆ ಧಾರಾವಾಹಿ
ಆಸೆ ಧಾರಾವಾಹಿ 4.1 TVR ಸಿಕ್ಕಿದೆ. ಮನೋಜ್ ಹಾಗೂ ರೋಹಿಣಿಯ ಕುತಂತ್ರ ಏನು ಎನ್ನೋದು ರಿವೀಲ್ ಆಗಬೇಕು. ತನ್ನ ಸ್ವಾರ್ಥಕ್ಕೆ ರೋಹಿಣಿ ಒಂದಷ್ಟು ಸುಳ್ಳು ಹೇಳಿದ್ದಾಳೆ. ಇದೆಲ್ಲ ಬಯಲಾಗಬೇಕು.
ನಿನ್ನ ಜೊತೆ ನನ್ನ ಕಥೆ ಧಾರಾವಾಹಿ
ನಿನ್ನ ಜೊತೆ ನನ್ನ ಕಥೆ ಧಾರಾವಾಹಿಗೆ 5.8 TVR ಬಂದಿದೆ. ಒಂದು ವರ್ಷಕ್ಕೆ ಅಜಿತ್ ಹಾಗೂ ಭೂಮಿ ಕಾಂಟ್ರ್ಯಾಕ್ಟ್ ಮ್ಯಾರೇಜ್ ಮಾಡಿಕೊಂಡಿದ್ದಾರೆ. ಅಜಿತ್ ಮನೆಯವರಿಗೆ ಈ ವಿಷಯ ಗೊತ್ತಿಲ್ಲ. ಇನ್ನೊಂದು ಕಡೆ ಭೂಮಿ ತಂದೆಯನ್ನು ಕೊಂದವರು ಯಾರು ಎನ್ನೋದು ರಿವೀಲ್ ಆಗಿ, ಅವರ ತಾಯಿ ಬಿಡುಗಡೆ ಆಗಬೇಕಿದೆ.
ಯಜಮಾನ ಧಾರಾವಾಹಿ
ಯಜಮಾನ ಧಾರಾವಾಹಿ 4 TRP ಬಂದಿದೆ. ರಾಘವೇಂದ್ರ ಜೊತೆ ಝಾನ್ಸಿ ಕಾಂಟ್ರ್ಯಾಕ್ಟ್ ಮ್ಯಾರೇಜ್ ಆಗಿದ್ದಳು. ಈಗ ಒಪ್ಪಂದ ಮುಗಿದಿದೆ. ಆದರೆ ರಾಘು ಮೇಲೆ ಝಾನ್ಸಿಗೆ ಲವ್ ಆಗಿದೆ. ಹೀಗಾಗಿ ಅವಳು ರಾಘು ಮನೆಗೆ ಬಂದಿದ್ದಾಳೆ. ಆದರೆ ಅವನ ಮನೆಯವರು ಝಾನ್ಸಿಯನ್ನು ಸೊಸೆ ಅಂತ ಒಪ್ಪುತ್ತಿಲ್ಲ.