Nana Patekar Birthday: ನಾನಾ ಪಾಟೇಕರ್ ಸರಳ ಜೀವನ ನೆಡೆಸಲು ಕಾರಣವೇನು ಗೊತ್ತಾ?
ವಿಭಿನ್ನ ನಟನೆಯಿಂದ ಫೇಮಸ್ ಆಗಿರುವ ನಾನಾ ಪಾಟೇಕರ್ (Nana patekar) ಅವರಿಗೆ 71 ವರ್ಷ. ಜನವರಿ 1, 1951 ರಂದು ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಮುರುದ್-ಜಂಜಿರಾದಲ್ಲಿ ಜನಿಸಿದ ಅವರು 1978 ರ ಗಮನ್ ಚಿತ್ರದ ಮೂಲಕ ತಮ್ಮ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ನಾನಾ ಅವರು 4 ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿದ್ದಾರೆ ಮತ್ತು ಅನೇಕ ಸೂಪರ್‌ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದರು. ಈ ವಯಸ್ಸಿನಲ್ಲೂ ಸಿನಿಮಾದಲ್ಲಿ ಬ್ಯುಸಿಯಾಗಿರುವ ನಾನಾ ಪಾಟೇಕರ್ ಸುಮಾರು 73 ಕೋಟಿ ಮೌಲ್ಯದ ಆಸ್ತಿಯ ಒಡೆಯ. ಅವರು ಫಾರ್ಮ್ ಹೌಸ್‌ಮನೆ, ಕಾರುಗಳು ಮತ್ತು ಇತರ ಆಸ್ತಿಗಳನ್ನು ಸಹ ಹೊಂದಿದ್ದಾರೆ. ಇಷ್ಟೆಲ್ಲ ಇದ್ದರೂ ಅವರು ತುಂಬಾ ಸರಳವಾಗಿ ಬದುಕುತ್ತಾರೆ. ನಾನಾ ಸರಳ ಜೀವನಕ್ಕೂ ಹೆಸರುವಾಸಿ. ನಾನಾ ಪಾಟೇಕರ್ ಅವರ ಜೀವನಕ್ಕೆ ಸಂಬಂಧಿಸಿದ ಕೆಲವು ವಿಷಯಗಳು ಇಲ್ಲಿವೆ.
ನಾನಾ ಪಾಟೇಕರ್ ಅವರು ಹವ್ಯಾಸದಿಂದ ಸಿನಿಮಾಗೆ ಬಂದಿಲ್ಲ, ಆದರೆ ಅವಶ್ಯಕತೆ ನನ್ನನ್ನು ನಟನನ್ನಾಗಿ ಮಾಡಿತು ಎಂದಿದ್ದಾರೆ. ಈ ಕಾರಣದಿಂದಲೇ ಅವರು ಇನ್ನೂ ಸರಳ ಜೀವನ ನಡೆಸಲು ಇಷ್ಟಪಡುತ್ತಾರೆ. ನಾನಾ ಪಾಟೇಕರ್ ಅವರು Applied Artನಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದಾರೆ.
ನಾನಾ ಪಾಟೇಕರ್ ಅವರು ಪುಣೆ ಸಮೀಪದ ಖಡಕ್ವಾಸ್ಲಾದಲ್ಲಿ 25 ಎಕರೆಗಳಷ್ಟು ವಿಸ್ತಾರವಾದ ಫಾರ್ಮ್ ಹೌಸ್ ಹೊಂದಿದ್ದಾರೆ. ನಗರದ ಗಡಿಬಿಡಿಯಿಂದ ವಿಶ್ರಮಿಸಲು ನಾನಾ ಬಯಸಿದಾಗಲೆಲ್ಲ ಇಲ್ಲಿಗೆ ಹೋಗುತ್ತಾರೆ .ನಿರ್ದೇಶಕ ಸಂಗೀತ್ ಶಿವನ್ ಅವರ 2008 ರ ಚಲನಚಿತ್ರ ಏಕ್: ದಿ ಪವರ್ ಆಫ್ ಒನ್ ಅನ್ನು ನಾನಾ ಅವರ ಫಾರ್ಮ್‌ಹೌಸ್‌ನಲ್ಲಿ ಚಿತ್ರೀಕರಿಸಲಾಗಿದೆ.
ನಾನಾ ತನ್ನ ಫಾರ್ಮ್ ಹೌಸ್ ಸುತ್ತ ಭತ್ತ, ಗೋಧಿ ಮತ್ತು ಕಾಳುಗಳನ್ನು ಬೆಳೆಯುತ್ತಾರೆ. ಈ ಫಾರ್ಮ್‌ಹೌಸ್‌ನಲ್ಲಿ 7 ಕೊಠಡಿಗಳಲ್ಲದೆ, ದೊಡ್ಡ ಹಾಲ್ ಕೂಡ ಇದೆ. ನಾನಾ ಅವರ ಆಯ್ಕೆಯಂತೆ ಸರಳ ಮರದ ಪೀಠೋಪಕರಣಗಳು ಮತ್ತು ಟೆರಾಕೋಟಾ ನೆಲವನ್ನು ಹೊಂದಿದೆ. ಫಾರ್ಮ್ ಹೌಸ್ ನ ಬೆಲೆ ಸುಮಾರು 12 ಕೋಟಿ ರೂ ಎಂದು ಹೇಳಲಾಗಿದೆ.
ನಾನಾ ಫಾರ್ಮ್ ಹೌಸ್ ಪ್ರತಿಯೊಂದು ಕೋಣೆಯನ್ನು ಅವರವರ ಮೂಲ ಶೈಲಿ ಹಾಗೂ ಅಗತ್ಯಕ್ಕೆ ತಕ್ಕಂತೆ ಅಲಂಕರಿಸಿದ್ದಾರೆ. ಇದಲ್ಲದೇ ಮನೆಯ ಸುತ್ತ ಹಲವು ಬಗೆಯ ಗಿಡಗಳನ್ನೂ ನೆಟ್ಟಿದ್ದಾರೆ. ಫಾರ್ಮ್‌ಹೌಸ್‌ನಲ್ಲಿ ಬಹಳಷ್ಟು ಹಸುಗಳು ಮತ್ತು ಎಮ್ಮೆಗಳನ್ನು ಸಹ ಸಾಕಲಾಗುತ್ತದೆ
ನಾನಾ ಪಾಟೇಕರ್ ಮುಂಬೈನ ಅಂಧೇರಿಯಲ್ಲಿ ಫ್ಲಾಟ್ ಹೊಂದಿದ್ದಾರೆ. ಅವರು ಇಲ್ಲಿ 750 ಚದರ ಅಡಿಗಳ 1 BHK ಫ್ಲಾಟ್‌ನಲ್ಲಿ ವಾಸಿಸುತ್ತಿದ್ದಾರೆ. 90 ರ ದಶಕದಲ್ಲಿ ಈ ಫ್ಲಾಟ್ ಅನ್ನು ಕೇವಲ 1.10 ಲಕ್ಷಕ್ಕೆ ಖರೀದಿಸಿದರು. ಆದರೆ, ಇಂದು ಈ ಫ್ಲಾಟ್‌ನ ಬೆಲೆ ಸುಮಾರು 7 ಕೋಟಿ ರೂ.
ಮಾಧ್ಯಮಗಳ ವರದಿ ಪ್ರಕಾರ ನಾನಾ ಪಾಟೇಕರ್ 81 ಲಕ್ಷ ಮೌಲ್ಯದ ಆಡಿ ಕ್ಯೂ7 ಕಾರು ಹೊಂದಿದ್ದಾರೆ. ಇದಲ್ಲದೆ, ಅವರು 10 ಲಕ್ಷ ಮೌಲ್ಯದ ಮಹೀಂದ್ರ ಸ್ಕಾರ್ಪಿಯೊ ಮತ್ತು 1.5 ಲಕ್ಷ ಮೌಲ್ಯದ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಅನ್ನು ಸಹ ಹೊಂದಿದ್ದಾರೆ.
ನಾನ ಪಾಟೇಕರ್ ಕೌಟುಂಬಿಕ ಜೀವನ
ನಾನಾ ಪಾಟೇಕರ್ ಬಗ್ಗೆ ಸಾಕಷ್ಟು ತಿಳಿದಿದೆ ಆದರೆ ಅವರ ಹೆಂಡತಿ ಮತ್ತು ಮಗನ ಬಗ್ಗೆ ತಿಳಿದಿಲ್ಲ. ನಾನಾ ಪಾಟೇಕರ್ ಅವರು ತಮ್ಮ ಪತ್ನಿ ನೀಲಕಂಠಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಅವರು ತನ್ನ ಹೆಂಡತಿಗೆ ವಿಚ್ಛೇದನವನ್ನೂ ನೀಡಿಲ್ಲ.
2018 ರಲ್ಲಿ ತನುಶ್ರೀ ದತ್ತಾ ನಾನಾ ಪಟೇಕರ್ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಎಲ್ಲರನ್ನೂ ಎಚ್ಚರಿಸಿದ್ದರು. 2008 ರಲ್ಲಿ 'ಹಾರ್ನ್ ಒಕೆ ಪ್ಲೀಸ್' ಚಿತ್ರದ ಸೆಟ್‌ಗಳಲ್ಲಿ ನಾನಾ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಹೇಳಿದರು. ಆದರೆ, ಎಲ್ಲಾ ಆರೋಪಗಳನ್ನು ನಾನಾ ನಿರಾಕರಿಸಿದ್ದಾರೆ.
ನಾನಾ ಶಾಲಾ ದಿನಗಳಲ್ಲಿ ರಂಗಭೂಮಿ ಮಾಡಲು ಪ್ರಾರಂಭಿಸಿದರು ಮತ್ತು ಕಾಲೇಜ್ ಆಫ್ ಅಪ್ಲೈಡ್ ಆರ್ಟ್ಸ್ ನಂತರ ಜಾಹೀರಾತು ಏಜೆನ್ಸಿಗೆ ಸೇರಿದರು. 'ಸ್ಮಿತಾ ಪಾಟೀಲ್ ಅವರಿಂದ ನಾನು ಚಿತ್ರರಂಗಕ್ಕೆ ಬಂದೆ. ಪುಣೆಯ ದಿನಗಳಿಂದ ಅವರು ನನಗೆ ಪರಿಷಯ. ನಾನು ಅವರಿಗೆ ಬೇಡ ಎಂದು ಹೇಳಿದ್ದರೂ ಸಹ ಅವರು ನನ್ನನ್ನು ರವಿ ಚೋಪ್ರಾ ಬಳಿ ಕರೆದೊಯ್ದರು. ಸಿನಿಮಾದ ಹೆಸರು ಆಜ್ ಕಿ ಆವಾಜ್ ಮತ್ತು ಇದರಲ್ಲಿ ನಾನು ನೆಗೆಟಿವ್ ರೇಪಿಸ್ಟ್ ಪಾತ್ರ ಮಾಡಿದ್ದೇನೆ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು.