ಕಳೆದ ವಾರ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಯ ಬಗ್ಗೆ ಅದ್ದೂರಿ ವ್ಯವಸ್ಥೆಗಳಿಂದ ಸ್ಟಾರ್-ಸ್ಟಡ್ಡ್ ಅತಿಥಿಗಳ ಪಟ್ಟಿಯವರೆಗೆ ಎಲ್ಲವೂ ಮುಖ್ಯಾಂಶಗಳನ್ನು ಮಾಡಿತ್ತು.. ಜುಲೈ 12, 2024 ರಂದು ಈ ಜೋಡಿಯು ಅತಿರಂಜಿತ ಭವ್ಯ ಆಚರಣೆಯಲ್ಲಿ ವಿವಾಹವಾದರು. ಎಲ್ಲಾ ವರ್ಗಗಳ ಸಾವಿರಾರು ಜನರು ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು, ಈಗ ಮದುವೆಯ ಅದ್ದೂರಿತನ ನಂತರ ದಂಪತಿ ಪಡೆದ ಅದ್ಧೂರಿ ಉಡುಗೊರೆಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಅನಂತ್ ಮತ್ತು ರಾಧಿಕ ತಮ್ಮ ಮದುವೆಯಲ್ಲಿ ಸ್ವೀಕರಿಸಿದ ಭಾರೀ ಗಿಫ್ಟ್ಗಳ ಬಗ್ಗೆ ವರದಿಗಳು ಸಖತ್ ವೈರಲ್ ಆಗಿವೆ. ಏನವು?