ಬಾಲಿವುಡ್ ನಟ ನಾನಾ ಪಾಟೇಕರ್ ಮೇಲೆ ತನುಶ್ರೀ ದತ್ತಾ ಮಾಡಿದ್ದ ಮೀಟೂ ಆರೋಪಕ್ಕೆ ಸರಿಯಾದ ಸಾಕ್ಷ್ಯಾಧಾರಗಳಿಲ್ಲದ ಕಾರಣ ಮುಂಬೈ ಪೊಲೀಸರು ಈ ಕೇಸ್ ಗೆ ಬಿ ರಿಪೋರ್ಟ್ ನೀಡಿದ್ದಾರೆ. ಇದನ್ನು ಪ್ರಶ್ನಿಸಿ ತನುಶ್ರೀ ದತ್ತಾ ಪ್ರೊಟೆಸ್ಟ್ ಪಿಟಿಶನ್ ಸಲ್ಲಿಸಿದ್ದಾರೆ. 

ಬಿಗ್‌ಬಾಸ್ ಲೊಕೇಶನ್ ಚೇಂಜ್, ಈ ಬಾರಿ ಎಲ್ಲಿ ನಡೆಯುತ್ತೆ ಶೋ?

ತನುಶ್ರೀ ದತ್ತಾ ಪರ ವಕೀಲ ನಿತಿನ್ ಸತ್ಪುಟೆ ಅಂಧೇರಿ ನ್ಯಾಯಾಲಯಕ್ಕೆ ಹಾಜರಾಗಿ ಬಿ ರಿಪೋರ್ಟ್ ಸಲ್ಲಿಸಿದ್ದನ್ನು ಪ್ರಶ್ನಿಸಿದ್ದಾರೆ. ಪ್ರೊಟೆಸ್ಟ್ ಪಿಟಿಶನ್ ಸಲ್ಲಿಸಲು ಕಾಲಾವಾಕಾಶ ಕೇಳಿದ್ದಾರೆ. ಕೋರ್ಟ್ ಕಾಲಾವಕಾಶ ನೀಡಿದೆ. ಸೆಪ್ಟೆಂಬರ್ 7 ರಂದು ಮುಂದಿನ ವಿಚಾರಣೆ ನಡೆಯಲಿದೆ. 

ಇದಪ್ಪಾ ಲಕ್ ಅಂದ್ರೆ..! ಬಾಲಿವುಡ್ ಖ್ಯಾತ ನಟನ ಜೊತೆ ಬಿಗ್‌ಬಾಸ್ ಸ್ಪರ್ಧಿ!

ಪ್ರಕರಣಕ್ಕೆ ಸಂಬಂಧಿಸಿದಂತೆ ಸರಿಯಾದ ಸಾಕ್ಷ್ಯಾಧಾರವಿಲ್ಲದೇ ಬಿ ರಿಪೋರ್ಟ್ ಸಲ್ಲಿಸಿದ್ದೇವೆ. ಮುಂದಿನ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.