- Home
- Entertainment
- Cine World
- ತಳ್ಳಬೇಡಿ ಪ್ಲೀಸ್, ಮುತ್ತಿಗೆ ಹಾಕಿದ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡ ನಟಿ ಸಾಯಿ ಪಲ್ಲವಿ
ತಳ್ಳಬೇಡಿ ಪ್ಲೀಸ್, ಮುತ್ತಿಗೆ ಹಾಕಿದ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡ ನಟಿ ಸಾಯಿ ಪಲ್ಲವಿ
ತಳ್ಳಬೇಡಿ ಪ್ಲೀಸ್, ಮುತ್ತಿಗೆ ಹಾಕಿದ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡ ನಟಿ ಸಾಯಿ ಪಲ್ಲವಿ, ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಅಭಮಾನಿಗಳು ಮುತ್ತಿಕೊಂಡಿದ್ದಾರೆ. ಭದ್ರತಾ ಸಿಬ್ಬಂದಿಗಳು ಹರಸಾಹಸ ಪಡಬೇಕಾಯಿತು.

ಆತಂಕ ಎದುರಿಸಿದ ಸಾಯಿ ಪಲ್ಲವಿ
ನಟಿ ಸಾಯಿಪಲ್ಲವಿಗೆ ದಕ್ಷಿಣ ಭಾರತದಲ್ಲಿ ಭಾರಿ ಅಭಿಮಾನಿಗಳಿದ್ದಾರೆ. ಸಿನಿಮಾ ಮಾತ್ರವಲ್ಲ, ಸಾಯಿ ಪಲ್ಲವಿ ಸಿಂಪ್ಲಿಸಿಟಿಗೆ ಹಲವರು ಮಾರು ಹೋಗಿದ್ದಾರೆ. ಸಿನಿಮಾ ಪ್ರಶಸ್ತಿ ಕಾರ್ಯಕ್ರಮಕ್ಕೆ ಆಗಮಿಸಿದ ಸಾಯಿ ಪಲ್ಲವಿ ಆತಂಕದ ಪರಿಸ್ಥಿತಿ ಎದುರಿಸಿದ್ದಾರೆ. ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಅಭಿಮಾನಿಗಳು ಸಾಯಿ ಪಲ್ಲವಿಯನ್ನು ಮುತ್ತಿಕೊಂಡಿದ್ದಾರೆ. ಇತ್ತ ಭದ್ರತಾ ಸಿಬ್ಬಂದಿಗಳು ಹರಸಾಹಸ ಪಡಬೇಕಾಯಿತು.
ಸೌತ್ ಅವಾರ್ಡ್‌ಗೆ ಬಂದಾಗ ಘಟನೆ
ಸಾಯಿ ಪಲ್ಲವಿ ಫಿಲ್ಮ್‌ಫೇರ್ ಸೌತ್ ಅವಾರ್ಡ್ ಕಾರ್ಯಕ್ರಮಕ್ಕಾಗಿ ಕೇರಳದ ಕೊಚ್ಚಿಗೆ ಆಗಮಿಸಿದ್ದಾರೆ. ಕೊಚ್ಚಿ ವಿಮಾನ ನಿಲ್ದಾಣದಿಂದ ಹೊರಗೆ ಬರುತ್ತಿದ್ದಂತೆ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು, ಫೋಟೋಗ್ರಾಫರ್ ಸೇರಿದಂತೆ ಹಲವು ಜಮಾಯಿಸಿದ್ದಾರೆ. ಅಭಿಮಾನಿಗಳು ಸಾಯಿ ಪಲ್ಲವಿ ಜೊತೆ ಫೋಟೋ ಕ್ಲಿಕ್ಕಿಸಲು ಮುಂದಾಗಿದ್ದಾರೆ. ಸಾಯಿ ಪಲ್ಲವಿ ಬಾಗಿಲಿನಿಂದ ಹೊರಬರುತ್ತಿದ್ದಂತೆ ಅಭಿಮಾನಿಗಳ ನೋಡಿ ದಂಗಾಗಿದ್ದಾರೆ.
ಬಾಗಿಲಲ್ಲೇ ನಿಂತ ಸಾಯಿ ಪಲ್ಲವಿ
ಸಾಯಿ ಪಲ್ಲವಿ ಬಾಗಿಲ ಬಳಿಯೇ ನಿಂತಿದ್ದಾರೆ. ಇತ್ತ ಭದ್ರತಾ ಪಡೆ ಸಿಬ್ಬಂದಿಗಳು ಭಾರಿ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳ ಚದುರಿಸಲು ಪ್ರಯತ್ನಿಸಿದ್ದಾರೆ. ನಾವು ದೂರ ತಳ್ಳುವ ಬದಲು ನೀವೇ ಹಿಂದೆ ಸರಿಯಿರಿ ಎಂದು ಮನವಿ ಮಾಡಿದ್ದಾರೆ. ಆದರೂ ಅಭಿಮಾನಿಗಳು ಕೇಳಿಲ್ಲ. ಹೀಗಾಗಿ ಭದ್ರತಾ ಪಡೆಗಳು ಎಲ್ಲರನ್ನೂ ಹಿಂದೆ ಸರಿಯಲು ಖಡಕ್ ವಾರ್ನಿಂಗ್ ನೀಡಿದೆ.
ದಯವಿಟ್ಟು ತಳ್ಳಬೇಡಿ ಎಂದ ಸಾಯಿ ಪಲ್ಲವಿ
ಬಾಗಿಲಿನಿಂದ ಹೊರಬಂದ ಬೆನ್ನಲ್ಲೇ ಅಭಿಮಾನಿಗಳು ಮುತ್ತಿಕೊಳ್ಳಲು ಆಗಮಿಸಿದ್ದಾರೆ. ಈ ವೇಳೆ ದಯವಿಟ್ಟು ತಳ್ಳಬೇಡಿ. ನನ್ನ ಕಾರು ಆಗಮಿಸಿದೆ. ಜಾಗಬಿಟ್ಟರೆ ನಾನು ಕಾರು ಹತ್ತುತ್ತೇನೆ ಎಂದಿದ್ದಾರೆ. ಆದರೆ ಅಭಿಮಾನಿಗಳು ಬಿಟ್ಟಿಲ್ಲ. ಫಿಲ್ಮ್‌ಫೇರ್ ಅವಾರ್ಡ್ ಸ್ಥಳಕ್ಕೂ ಬರುವುದಾಗಿ ಸೂಚಿಸಿದ್ದಾರೆ.
ಇಲ್ಲೇ ಫೋಟೋ ತೆಗೆಯಿರಿ, ಮುಗಿ ಬೀಳಬೇಡಿ
ಯಾರೂ ನೂಕ ನುಗ್ಗಲು ಮಾಡಬೇಡಿ. ಹಿಂಬಾಲಿಸುವುದು ಬೇಡ. ಇಲ್ಲೇ ಫೋಟೋ ತೆಗೆಯಿರಿ. ಆದರೆ ಯಾರು ತಳ್ಳಾಡಬೇಡಿ ಎಂದು ಸಾಯಿ ಪಲ್ಲವಿ ಮನವಿ ಮಾಡಿದ್ದಾರೆ. ಇತ್ತ ಭದ್ರತಾ ಪಡೆಗಳು ಹರಸಾಹಸ ಮಾಡಿ ಅಭಿಮಾನಿಗಳ ಸರಿಸಿ ಸಾಯಿ ಪಲ್ಲವಿ ಕಾರು ಹತ್ತಲು ಜಾಗ ಮಾಡಿಕೊಟ್ಟಿದ್ದಾರೆ.
ಇಲ್ಲೇ ಫೋಟೋ ತೆಗೆಯಿರಿ, ಮುಗಿ ಬೀಳಬೇಡಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

