- Home
- Entertainment
- Cine World
- Must-Watch Crime Thrillers: ರಾತ್ರಿ ನಿದ್ರೆಯಲ್ಲೂ ಬೆಚ್ಚಿ ಬೀಳುವಂತೆ ಮಾಡುತ್ತೆ ಈ ಬ್ಲಾಕ್ ಬಸ್ಟರ್ ಕ್ರೈಂ ಥ್ರಿಲ್ಲರ್ ಗಳು
Must-Watch Crime Thrillers: ರಾತ್ರಿ ನಿದ್ರೆಯಲ್ಲೂ ಬೆಚ್ಚಿ ಬೀಳುವಂತೆ ಮಾಡುತ್ತೆ ಈ ಬ್ಲಾಕ್ ಬಸ್ಟರ್ ಕ್ರೈಂ ಥ್ರಿಲ್ಲರ್ ಗಳು
ನಿಮಗೂ ಕ್ರೈಂ ಥ್ರಿಲ್ಲರ್ ಗಳನ್ನು ನೋಡೋದು ಅಂದ್ರೆ ಇಷ್ಟಾನಾ? ಹಾಗಿದ್ರೆ ಇಲ್ಲಿ ನೀಡಿರೋ 8 ಸಿನಿಮಾಗಳನ್ನು ಮಿಸ್ ಮಾಡದೆ ನೋಡಿ, ಇವು ನಿದ್ರೆಯಲ್ಲೂ ನಿಮ್ಮನ್ನು ಬೆಚ್ಚಿ ಬೀಳುವಂತೆ ಮಾಡುತ್ತೆ.

ಕ್ರೈಂ ಥ್ರಿಲ್ಲರ್ ಸಿನಿಮಾಗಳು (Crime Thriller)
ನೀವು ಸಿನಿಮಾ ಪ್ರಿಯರಾಗಿದ್ದು, ಅದರಲ್ಲೂ ಕ್ರೈಂ ಥ್ರಿಲ್ಲರ್ ಗಳು ಅಂದ್ರೆ ನಿಮಗೆ ತುಂಬಾನೆ ಇಷ್ಟ ಅನ್ನೋದಾದರೆ, ಓಟಿಟಿಗಳಲ್ಲಿ ಲಭ್ಯವಿರುವ ಈ 8 ಸಿನಿಮಾಗಳನ್ನು ನೀವು ನೋಡಬಹುದು. ಇವುಗಳಲ್ಲಿ ಕೆಲವು ಭಯಾನಕವಾಗಿದ್ದು, ಮತ್ತೆ ಕೆಲವು ಕುತೂಹಲಕಾರಿಯಾಗಿವೆ. ಒಟ್ಟಲ್ಲಿ ಇದೆಲ್ಲಾ ಹೇಗೆ ಸಾಧ್ಯ ಆಯ್ತು ಎಂದು ನಿಮ್ಮನ್ನು ಯೋಚನೆ ಮಾಡುವಂತೆ ಮಾಡುತ್ತೆ.
ದೃಶ್ಯಂ (Drushyam)
ಮೋಹನ್ ಲಾಲ್ ಮತ್ತು ಮೀನಾ ಅಭಿನಯದ ದೃಶ್ಯಂ ಮೊದಲ ಭಾಗ ಮತ್ತು ಎರಡನೇ ಭಾಗ ಎರಡೂ ಸಹ ಸೂಪರ್ ಹಿಟ್ ಸಿನಿಮಾಗಳು. ಒಬ್ಬ ಸಾಮಾನ್ಯ ಮಿಡಲ್ ಕ್ಲಾಸ್ ವ್ಯಕ್ತಿಯ ಜೀವನದಲ್ಲಿ ಕ್ರೈಂ ನಡೆದಾಗ, ತನ್ನ ಕುಟುಂಬವನ್ನು ರಕ್ಷಿಸಲು ಆತ ಏನೇನು ಮಾಡುತ್ತಾನೆ ಅನ್ನೋದು ಕಥೆ.
ಮಾರೀಚಿ (Marichi)
ಈ ಸಿನಿಮಾ ವ್ಯವಸ್ಥಿತ ಕೊಲೆಗಳ ಸರಣಿಯಾಗಿ ಸಂಕೀರ್ಣವಾಗಿ ತೆರೆದುಕೊಳ್ಳುತ್ತದೆ, ಪ್ರತಿಯೊಂದೂ ಕೊಲೆಯೂ ವೈದ್ಯರನ್ನು ಗುರಿಯಾಗಿಸಿಕೊಂಡು ನಡೆಯುತ್ತದೆ. ಈ ಹೇಯ ಕೃತ್ಯಗಳನ್ನು ಮನೋರೋಗಿ ಕೊಲೆಗಾರನೊಬ್ಬ ಮಾಡುತ್ತಿರುತ್ತಾನೆ. , ಅವನು ಒಂದು ಕೊಲೆ ಮಾಡುವಾಗ ಮುಂದಿನ ಕೊಲೆಯ ಹಿಂಟ್ ಬಿಟ್ಟಿರುತ್ತಾನೆ. ಕೊನೆಗೆ ಹೇಗೆ ಆ ಸೀರಿಯಲ್ ಕಿಲ್ಲರ್ ಸಿಕ್ಕಿ ಬೀಳುತ್ತಾನೆ ಅನ್ನೋದು ಕಥೆ.
ಕಿಷ್ಕಿಂದ ಕಾಂಡಂ (Kishkinda Kandam)
ಅಜಯ್ ನ ಎರಡನೇ ಹೆಂಡತಿ ಅಪರ್ಣ, ಅವನ ಮೊದಲ ಮದುವೆ ಮತ್ತು ಬಹಳ ದಿನಗಳಿಂದ ಕಳೆದುಹೋದ ಮಗನ ಬಗ್ಗೆ ರಹಸ್ಯಗಳನ್ನು ಅವನ ಕುಟುಂಬದ ಹಳೆ ಮನೆಗೆ ಹೋದಾಗ ಕಂಡುಕೊಳ್ಳುತ್ತಾರೆ. ಸತ್ಯಕ್ಕಾಗಿ ಅವರ ಹುಡುಕಾಟವು ಅವನ ತಂದೆಯ ಕ್ಷೀಣಿಸುತ್ತಿರುವ ನೆನಪಿನಿಂದ ಜಟಿಲಗೊಳ್ಳುತ್ತದೆ.
ಮಹಾರಾಜ (Maharaja)
ಬಾರ್ಬರ್ ಒಬ್ಬ ತನ್ನ ಮನೆಯಲ್ಲಾದ ಕಳ್ಳತನದ ಬಗ್ಗೆ ಪೊಲೀಸ್ ಗೆ ಕಂಪ್ಲೇಟ್ ಕೊಡುತ್ತಾನೆ. ಮನೆಯಲ್ಲಿದ್ದ ಡಸ್ಟ್ ಬಿನ್ ಕಾಣೆಯಾಗಿದೆ ಎಂದೇ ಹೇಳುತ್ತಾನೆ. ಆ ಮೂಲಕ ಆತ ಯಾವ ವಿಷಯವನ್ನು ಹೊರಗೆಳೆಯಲು ಪ್ರಯತ್ನಿಸುತ್ತಾನೆ ಅನ್ನೋದೆ ಕಥೆ.
ತುಡರುಮ್ (Thudarum)
ಇದು ಟ್ಯಾಕ್ಸಿ ಡ್ರೈವರ್ ಒಬ್ಬನ ಕಥೆ. ಈಗಾಗಲೇ ಮಗ ಇರುವ ಮಹಿಳೆಯನ್ನು ಮದುವೆಯಾಗಿರುವ ಷಣ್ಮುಗ, ಒಂದು ದಿನ ಮಗ ಈತನ ಫೇವರಿಟ್ ಅಂಬಾಸೀಡರ್ ಕಾರನ್ನು ತೆಗೆದುಕೊಂಡು ಹೋಗಿ ಗುದ್ದಿದಾಗ, ಆತನ ಕಪಾಳಕ್ಕೆ ಹೊಡೆಯುತ್ತಾನೆ. ಆದಾದ ನಂತರ ಕಾಲೇಜಿಗೆ ಹೋದ ಮಗನ ಸುದ್ದಿಯೇ ಇರೋದಿಲ್ಲ. ಪೊಲೀಸ್ ಸ್ಟೇಷನ್ ನಲ್ಲಿರುವ ಕಾರನ್ನು ಪಡೆಯಲು ಹೋಗುವ ಷಣ್ಮುಗನ ಬದುಕು ಅಲ್ಲಿಂದ ಹೇಗೆ ಬದಲಾಗುತ್ತೆ ಅನ್ನೋದು ಕಥೆ.
ರೇಖಾ ಚಿತ್ರಂ (Rekhachithram)
ಜೂಜಾಟ ಹಗರಣದ ನಂತರ ಅಮಾನತುಗೊಂಡ ಪೊಲೀಸ್ ಅಧಿಕಾರಿ ವಿವೇಕ್ ಗೋಪಿನಾಥ್ ಮತ್ತೆ ಕೆಲಸಕ್ಕೆ ಸೇರಿಕೊಂಡಿರುತ್ತಾರೆ. ಅಲ್ಲದೇ 40 ವರ್ಷಗಳ ಹಿಂದಿನ ಕೊಲೆ ಪ್ರಕರಣವನ್ನು ಪರಿಹರಿಸುವ ಕೆಲಸವನ್ನು ವಹಿಸಿಕೊಂಡಿರುವ ಅವರು, ದೀರ್ಘಕಾಲದಿಂದ ಬಗೆಹರಿಯದ ರಹಸ್ಯವನ್ನು ಭೇದಿಸುವ ಮೂಲಕ ಸಾವಿಗೆ ನ್ಯಾಯ ಕೊಡಿಸುತ್ತಾರೆ.
ಅಂಜಾಮ್ ಪಾದಿರಾ (Anjam Padheera)
ಅನ್ವರ್ ಒಬ್ಬ ಸಲಹಾ ಅಪರಾಧಶಾಸ್ತ್ರಜ್ಞರಾಗಿದ್ದು, ಅವರು ಕೇರಳ ಪೊಲೀಸರಿಗೆ ಆಗಾಗ ಸಹಾಯ ಮಾಡುತ್ತಾರೆ. ಒಂದಾದ ನಂತರ ಒಂದು ಸೀರಿಯಲ್ ಹತ್ಯೆಗಳು ನಡೆದಾಗ, ಅದನ್ನು ಹೇಗೆ ಅನ್ವರ್ ಬಿಡಿಸುತ್ತಾನೆ ಅನ್ನೋದು ಚಿತ್ರ ಕಥೆ.
ರಾಕ್ಷಸನ್ (Ratsasan)
ಚಲನಚಿತ್ರ ನಿರ್ಮಾಪಕನಾಗುವ ಕನಸನ್ನು ಕೈಬಿಟ್ಟು ಅರುಣ್ ತನ್ನ ತಂದೆಯ ಮರಣದ ನಂತರ, ಪೊಲೀಸ್ ಅಧಿಕಾರಿಯ ಕೆಲಸವನ್ನು ಕೈಗೆತ್ತಿಕೊಳ್ಳುತ್ತಾನೆ. ನಂತರ ಶಾಲಾ ಹುಡುಗಿಯರನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡುವ ಸೈಕಲಾಜಿಕಲ್ ಕಿಲ್ಲರ್ ಹುಡುಕಾಟದಲ್ಲಿ ತೊಡಗುವಾಗ, ರಹಸ್ಯ ಬಗೆ ಹರಿಯುತ್ತಾ ಸಾಗುತ್ತದೆ.