- Home
- Entertainment
- Cine World
- Must Watch Thriller Films: YouTube ನಲ್ಲಿ ನೀವು ನೋಡಲೇಬೇಕಾದ ಬೆಸ್ಟ್ ಶಾರ್ಟ್ ಫಿಲಂಗಳು… Don't Miss It
Must Watch Thriller Films: YouTube ನಲ್ಲಿ ನೀವು ನೋಡಲೇಬೇಕಾದ ಬೆಸ್ಟ್ ಶಾರ್ಟ್ ಫಿಲಂಗಳು… Don't Miss It
ಥ್ರಿಲ್ಲರ್‌ಗಳಿಂದ ಹಿಡಿದು ಫ್ಯಾಮಿಲಿ ಡ್ರಾಮಾವರೆಗೂ ನೀವು ಯೂಟ್ಯೂಬಲ್ಲಿ ಈ ಶಾರ್ಟ್ ಫಿಲಂಗಳನ್ನು ನೋಡಿದ ಮೇಲೆ ನಮಗೆ ಥ್ಯಾಂಕ್ಸ್ ಹೇಳೊದಂತೂ ಖಚಿತಾ. ಚಟ್ನಿ, ಕಹಾನಿಬಾಜ್, ನೀತಿಶಾಸ್ತ್ರ, ರೋಗನ್ ಜೋಶ್, ಕೃತಿ, ದಿ ಲಾಸ್ಟ್ ಚಾಪ್ಟರ್… ಮತ್ತೆ ಯಾವೆಲ್ಲಾ ಸಿನಿಮಾಗಳಿವೆ ನೋಡಿ…

ನೀವು ಸಿನಿಮಾ ಪ್ರಿಯರಾಗಿದ್ದರೆ, ಅದರಲ್ಲೂ ಶಾರ್ಟ್ ಫಿಲಂ (short movies) ನೋಡೋದು ಅಂದ್ರೆ ತುಂಬಾನೆ ಇಷ್ಟ ಆಗಿದ್ರೆ ಖಂಡಿತವಾಗಿಯೂ ನೀವು ಮಿಸ್ ಮಾಡದೇ ನೋಡಲೇಬೇಕಾದ ಅದು ಯೂಟ್ಯೂಬ್ ಅಲ್ಲಿ ಲಭ್ಯವಿರುವಂತಹ ಬೆಸ್ಟ್ ಸಿನಿಮಾಗಳ ಲಿಸ್ಟ್ ಇಲ್ಲಿದೆ.
ಕೃತಿ
ಶಿರಿಶ್ ಕುಂದರ್ ನಿರ್ದೇಶನದ ಕೃತಿ (Kriti)ಸಿನಿಮಾ ಸೈಕಲಾಜಿಕಲ್ ಥ್ರಿಲ್ಲರ್ ಆಗಿದ್ದು, ಮನೋಜ್ ಬಾಜಪೇಯಿ, ರಾಧಿಕಾ ಆಪ್ಟೆ ಮತ್ತು ನೇಹಾ ಶರ್ಮಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. 19 ನಿಮಿಷದ ಈ ಥ್ರಿಲ್ಲರ್ ಸಿನಿಮಾ ಮಿಸ್ ಮಾಡದೇ ನೋಡಿ.
ಖುಜ್ಲಿ
ಸೋನಮ್ ನಾಯರ್ ನಿರ್ದೇಶನ ಮಾಡಿರುವ ಜಾಕಿ ಶ್ರಾಫ್ (Jackie Shroff)ಮತ್ತು ನೀನಾ ಗುಪ್ತಾ ನಟಿಸಿರುವ ಸುಂದರವಾದ ಶಾರ್ಟ್ ಫಿಲಂ. ಮಧ್ಯವಯಸ್ಕ ವಿವಾಹಿತ ಜೋಡಿಯ ನಡುವಿನ ರೊಮ್ಯಾನ್ಸ್, ಪ್ರೀತಿ, ಈಡೇರದ ಆಸೆಗಳ ಕಥೆಯೇ ಖುಜ್ಲಿ.
ಖೀರ್
ಸೂರ್ಯ ಬಾಲಕೃಷ್ಣನ್ ನಿರ್ದೇಶನ ಮಾಡಿರುವ ಈ ಸಿನಿಮಾ ಇಬ್ಬರು ಸೀನಿಯರ್ ಸಿಟಿಜನ್ ಗಳ ನಡುವೆ ನಡೆಯುವ ಪ್ರೇಮದ ಕಥೆ. ಸಿನಿಮಾದಲ್ಲಿ ಅನುಪಮ್ ಖೇರ್ ಮತ್ತು ನತಾಶ ರಸ್ತೋಗಿ ನಟಿಸಿದ್ದಾರೆ.
ಇಂಟ್. ಕೆಫೆ -ನೈಟ್
ಅಧಿರಾಜ್ ಬೋಸ್ ನಿರ್ದೇಶನದ ಚಿತ್ರದಲ್ಲಿ ನಾಸಿರುದ್ಧೀನ್ ಶಾ ಮತ್ತು ಶೆರ್ನಾಜ್ ಪಟೇಲ್ ನಟಿಸಿರುವ ಮಾಜಿ ಪ್ರೇಮಿಗಳು 30 ವರ್ಷಗಳ ನಂತರ ಭೇಟಿಯಾಗುವ ಕಥೆ.
ಕಹಾನಿಬಾಝ್
ಇದು ನೋಡಲೇಬೇಕಾದ ಒಂದು ಥ್ರಿಲ್ಲರ್ ಶಾರ್ಟ್ ಮೂವಿ ಆಗಿದೆ. ಸಂದೀಪ್ ಪಿ ವರ್ಮಾ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಆಶಿಶ್ ವಿದ್ಯಾರ್ಥಿ ಟ್ಯಾಕ್ಸಿ ಡ್ರೈವರ್ ಆಗಿ ನಟಿಸಿದ್ದಾರೆ. ಶಿರಡಿಯಿಂದ ಜರ್ನಿ ಮಾಡುವ ವಿವಾಹಿತ ಜೋಡಿಗಳ ನಡುವೆ ಏನೇನು ನಡೆಯುತ್ತೆ ಅನ್ನೋದು ಕಥೆ.
ನೀತಿ ಶಾಸ್ತ್ರ
ಕಪಿಲ್ ವರ್ಮಾ ನಿರ್ದೇಶನದ ತಾಪ್ಸಿ ಪನ್ನು ನಟಿಸಿರುವ ಚಿತ್ರ ಇದು. ಇದು ಸೆಲ್ಫ್ ಡಿಫೆನ್ಸ್ ಟ್ರೈನರ್ (self defence trainer)ನ ಕಥೆಯಾಗಿದ್ದು, 20 ನಿಮಿಷಗಳ ಈ ಕಥೆ ತುಂಬಾನೆ ಸುಂದರವಾಗಿ ಮೂಡಿ ಬಂದಿದೆ.
ದಿ ಲಾಸ್ಟ್ ಚಾಪ್ಟರ್
ರಾಜ್ ಸಿಂಗ್ ಚೌದರಿ ನಿರ್ದೇಶನ ಮಾಡಿರುವ ಸಿನಿಮಾ. ಕೆಕೆ ಮೆನನ್ ಖ್ಯಾತ ಬರಹಗಾರನಾಗಿ ಕಾಣಿಸಿಕೊಂಡಿದ್ದಾರೆ ಈ ಸಿನಿಮಾದಲ್ಲಿ. ರಿಯಾಲಿಟಿ ಮತ್ತು ಗೌರವದ ನಡುವಿನ ಅಂತರದ ಕುರಿತಾದ ಸಿನಿಮಾ ಇದಾಗಿದೆ.
ರೋಗನ್ ಜೋಶ್
ಸಂಜೀವ್ ವಿಗ್ ನಿರ್ದೇಶನ ಮಾಡಿರುವ ರೋಗನ್ ಜೋಶ್ ಸಿನಿಮಾದಲ್ಲಿ ನಾಸಿರುದ್ಧೀನ್ ಶಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ತನ್ನ 65 ನೇ ಹುಟ್ಟುಹಬ್ಬವನ್ನು ಆಚರಿಸಲು ಔತಣಕೂಟವನ್ನು ಸಿದ್ಧಪಡಿಸುತ್ತಿರುವ ವ್ಯಕ್ತಿಯ ಸಂಭಾಷಣೆ ಕೊನೆಗೆ ಹಾರ್ಟ್ ಬ್ರೇಕ್ ನಲ್ಲಿ ಕೊನೆಯಾಗುತ್ತೆ, ಇದು ಮುಂಬೈ ಉಗ್ರರ ದಾಳಿಗೆ ಸಂಬಂಧಿಸಿದ ಸಿನಿಮಾ. 17 ನಿಮಿಷಗಳ ಕಿರುಚಿತ್ರ ನೀವು ನೋಡಲೇಬೇಕು.