- Home
- Entertainment
- Sandalwood
- Suspense & Thriller Kannada Movies: ಕನ್ನಡದಲ್ಲಿ ನೀವು ನೋಡಲೇಬೇಕಾದ ಬೆಸ್ಟ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳು... Don't Miss It
Suspense & Thriller Kannada Movies: ಕನ್ನಡದಲ್ಲಿ ನೀವು ನೋಡಲೇಬೇಕಾದ ಬೆಸ್ಟ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳು... Don't Miss It
ಕನ್ನಡದಲ್ಲಿ ತುಂಬಾನೆ ಇಂಟ್ರೆಸ್ಟಿಂಗ್ ಆಗಿರುವ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳಿಗಾಗಿ ನೀವು ಹುಡುಕುತ್ತಿದ್ದರೆ, ಇಲ್ಲಿವೆ ಬೆಸ್ಟ್ ಹತ್ತು ಸಿನಿಮಾಗಳು ಮಿಸ್ ಮಾಡದೇ ನೋಡಿ.

ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ
ನೀವು ಕೂಡ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳನ್ನು ಇಷ್ಟಪಡುವವರೇ? ಹಾಗಿದ್ರೆ ಕನ್ನಡದಲ್ಲೇ ಇವೆ ನೋಡಿ, ಸೀಟಿನ ತುದಿ ಮೇಲೆ ಕುಳಿತು ನೋಡುವಂತಹ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳು. ಮಿಸ್ ಮಾಡದೇ ನೋಡಿ.
ಯೂಟರ್ನ್
ಇದು ಸೂಪರ್ ಹಿಟ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಹೊಸದಾಗಿ ಸೇರಿದ ರಿಪೋರ್ಟರ್ ಒಬ್ಬಳಿಗೆ ಫ್ಲೈ ಓವರ್ ಮೇಲೆ ನಡೆಯುವ ಆಕ್ಸಿಡೆಂಟ್ ಕೇಸ್ ಗಳ ಬಗ್ಗೆ ರಿಪೋರ್ಟ್ ಮಾಡಲು ಹೇಳಲಾಗುತ್ತದೆ. ಒಂದು ಯೂಟರ್ನ್ ಆಕೆಯ ಬಾಳಿನಲ್ಲಿ ಊಹಿಸಲಾರದ ಬದಲಾವಣೆ ತರುತ್ತದೆ. ಇದೊಂಥರ ಹಾರರ್ ಥ್ರಿಲ್ಲರ್ ಸಿನಿಮಾ ಅಂದರೂ ತಪ್ಪಿಲ್ಲ.
ಬೀರ್ ಬಲ್
2000ನೇ ಇಸವಿಯಲ್ಲಿ, ಕ್ಯಾಬ್ ಚಾಲಕನ ಕೊಲೆ ಪ್ರಕರಣದಲ್ಲಿ ಅಮಾಯಕ ಬಾರ್ ಉದ್ಯೋಗಿಯೊಬ್ಬರು ಭಾಗಿಯಾಗುತ್ತಾರೆ. ಎಂಟು ವರ್ಷಗಳ ಸುದೀರ್ಘ ಪ್ರಕರಣದ ನಂತರ, ಮಹೇಶ್ ದಾಸ್ ಎಂಬ ಚತುರ ವಕೀಲರು ಅದನ್ನು ಹೇಗೆ ಬಿಡಿಸುತ್ತಾರೆ ಅನ್ನೋದು ಕಥೆ.
ಬೆಲ್ ಬಾಟಮ್
ಪೊಲೀಸ್ ಮಗನಾದ ದಿವಾಕರನಿಗೆ ಬಾಲ್ಯದಿಂದಲೂ ಡಿಟೆಕ್ಟಿವ್ ಆಗಬೇಕೆಂಬ ಆಸೆ ಇರುತ್ತದೆ. ಕಾನ್‌ಸ್ಟೆಬಲ್ ಆದಾಗ, ಕೊನೆಗೂ ಒಂದು ದರೋಡೆ ಪ್ರಕರಣವನ್ನು ಬಿಡಿಸಲು ಡಿಟೆಕ್ಟಿವ್ ಆಗುವ ಅವಕಾಶ ಸಿಗುತ್ತದೆ. ಆದರೆ ಕೇಸ್ ಬಿಡಿಸುತ್ತಾ ಹೋದಂತೆ ಆತನಿಗೆ ಶಾಕ್ ಕಾಡುತ್ತೆ.
ಕಾಂಗರೂ
ಹೊಸದಾಗಿ ವರ್ಗಾವಣೆಗೊಂಡ ಪೊಲೀಸ್ ಅಧಿಕಾರಿ ಪೃಥ್ವಿಗೆ ಕಾಣೆಯಾದವ ಕೇಸ್ ಗಳನ್ನು ನೀಡಲಾಗುತ್ತದೆ. ಕೇಸ್ ಬಿಡಿಸುತ್ತಾ ಹೋದಂತೆ ಆತ ಅದರೊಳಗೆ ಸಿಕ್ಕಿಹಾಕಿಕೊಳ್ಳುವ ಮತ್ತು ಅವನ ಜೀವಕ್ಕೆ ಅಪಾಯ ಉಂಟಾಗುವ ಕಥೆಯನ್ನು ಇದು ಹೊಂದಿದೆ.
ರಂಗಿತರಂಗ
ಕಮರೊಟ್ಟೂ ಗ್ರಾಮದಲ್ಲಿ ಗರ್ಭಿಣಿ ಮಹಿಳೆಯರು ಕಾಣೆಯಾಗುತ್ತಿರುತ್ತಾರೆ. ಅಲ್ಲಿಗೆ ಬರುವ ಒಬ್ಬ ಕಥೆಗಾರ ಹಾಗೂ ಆತ ಪತ್ನಿಯ ಕಥೆ ಇದಾಗಿದ್ದು, ಗರ್ಭಿಣಿ ಮಹಿಳೆಯರು ಹೇಗೆ ಕಾಣೆಯಾಗುತ್ತಾರೆ ಎನ್ನುವ ಕಥೆ ಹೊಂದಿದೆ. ವಿಭಿನ್ನವಾಗಿ ಸಾಗುವ ಕತೆ ತುಂಬಾನೆ ಇಂಟ್ರೆಸ್ಟಿಂಗ್ ಆಗಿದೆ. ಮಿಸ್ ಮಾಡದೆ ನೋಡಿ.
ಅಜ್ಞಾತವಾಸಿ
ಪೊಲೀಸ್ ಅಧಿಕಾರಿಯೊಬ್ಬ ತಮ್ಮ ಊರಿನಲ್ಲಾದ ಸಾವೊಂದನ್ನು ಕೊಲೆ ಎಂದು ಹೇಗೆ ನಿರೂಪಿಸುತ್ತಾನೆ ಅನ್ನೋದು ಕಥೆ. ಪೊಲೀಸ್ ಅಧಿಕಾರಿಯೇ ಹಿಂದೆ ಮಾಡಿರುವಂತಹ ಒಂದು ಕ್ರೈಂ ತೆರೆದುಕೊಂಡು ಹೋಗುತ್ತದೆ. ಕಥೆ ನಿಧಾನವಾಗಿಯಾದರೂ ಇಂಟ್ರೆಸ್ಟಿಂಗ್ ಆಗಿ ಸಾಗುತ್ತದೆ.
ಕವಲುದಾರಿ
ಈ ಚಿತ್ರವು ದಶಕಗಳಷ್ಟು ಹಳೆಯದಾದ ಕೊಲೆ ಪ್ರಕರಣದಲ್ಲಿ ಸಿಕ್ಕಿಹಾಕಿಕೊಳ್ಳುವ ಟ್ರಾಫಿಕ್ ಪೋಲೀಸ್ ಅಧಿಕಾರಿಯ ಕಥೆಯನ್ನು ಒಳಗೊಂಡಿದೆ, ಈ ಸಿನಿಮಾವು ಒಂದು ದೊಡ್ಡ ಪಿತೂರಿಯನ್ನು ಬಯಲು ಮಾಡುವ ಕಥೆಯಾಗಿದ್ದು, ಹೇಗೆ ಸಸ್ಪೆನ್ಸ್ ರಿವೀಲ್ ಆಗುತ್ತೆ ಅನ್ನೋದನ್ನು ನೋಡಬೇಕು. ತುಂಬಾನೆ ಇಂಟ್ರೆಸ್ಟಿಂಗ್ ಆಗಿದೆ ಸಿನಿಮಾ.
ಶಾಕಾಹಾರಿ
ಕೆಲವು ಮುಗ್ಧ ಜನರ ಜೀವನಗಳು ಅನಿರೀಕ್ಷಿತ ಸಂದರ್ಭಗಳಲ್ಲಿ ಕೊಲೆಯ ನಿಗೂಢತೆಯಲ್ಲಿ ಸಿಲುಕಿಕೊಳ್ಳುತ್ತಾರೆ. ಪ್ರಮುಖ ಅಪರಾಧಿ ಒಬ್ಬ ಕ್ರೂರ ಮಾಸ್ಟರ್ ಮೈಂಡ್ ಆಗಿದ್ದು, ಅವನು ಕೊಲೆಯಾದ ದೇಹಗಳನ್ನು ಛಿದ್ರಗೊಳಿಸುವ ಮೂಲಕ ಪ್ರತಿಯೊಂದು ಸಾಕ್ಷ್ಯವನ್ನು ಮರೆಮಾಚುತ್ತಾನೆ. ಈ ಸಿನಿಮಾ ನೀವು ನೋಡಲೇಬೇಕು.
ಕೇಸ್ ಆಫ್ ಕೊಂಡಾಣ
ಕೊಂಡಾಣದಲ್ಲಿರುವ ಎಎಸ್ಐ ವಿಲ್ಸನ್ ಅವರ ಜೀವನವು ವೃತ್ತಿಪರ ಮತ್ತು ವೈಯಕ್ತಿಕ ಮಟ್ಟಗಳಲ್ಲಿ ಹಲವಾರು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಗೊಂದಲದ ನಡುವೆ, ಒಂದು ನಿಗೂಢ ಪ್ರಕರಣವು ಎಲ್ಲವನ್ನೂ ಬದಲಾಯಿಸುತ್ತದೆ! ಇದು ನೀವು ನೋಡಬಹುದಾದ ಇಂಟ್ರೆಸ್ಟಿಂಗ್ ಆಗಿರುವ ಸಸ್ಪೆನ್ಸ್ ಥ್ರಿಲ್ಲರ್ ಆಗಿದೆ.