MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • Mother's Day: ಪತ್ನಿಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟು "ಅತ್ಯಂತ ಪ್ರೀತಿಯ ಸುಂದರ ಅಮ್ಮನಿಗೆ" ಎಂದು ಬರೆದ ಸಿದ್ಧಾರ್ಥ್ ಮಲ್ಹೋತ್ರಾ!

Mother's Day: ಪತ್ನಿಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟು "ಅತ್ಯಂತ ಪ್ರೀತಿಯ ಸುಂದರ ಅಮ್ಮನಿಗೆ" ಎಂದು ಬರೆದ ಸಿದ್ಧಾರ್ಥ್ ಮಲ್ಹೋತ್ರಾ!

ಈ ಪೋಸ್ಟ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದು ಸಿದ್ಧಾರ್ಥ್ ಮಲ್ಹೋತ್ರಾ ಅವರ ಪ್ರೀತಿಯ ಉಡುಗೊರೆ. ಸಿದ್ಧಾರ್ಥ್ ತಾವೇ ಸ್ವತಃ ಚಾಕೊಲೇಟ್ ಪ್ಯಾನ್‌ಕೇಕ್ ತಯಾರಿಸಿದ್ದು, ಅದರ ಮೇಲೆ ಪೀನಟ್ ಬಟರ್ ಬಳಸಿ 'MOM' (ಅಮ್ಮ) ಎಂದು ಬರೆದಿದ್ದರು. ಇದನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

2 Min read
Author : Shriram Bhat
Published : May 11 2026, 11:14 AM IST
Share this Photo Gallery
  • FB
  • TW
  • Linkdin
  • Whatsapp
16
Image Credit : Instagram

ಬಾಲಿವುಡ್‌ನ ಕ್ಯೂಟ್ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಮತ್ತು ಕಿಯಾರಾ ಅಡ್ವಾಣಿ (Kiara Advani) ಸದಾ ತಮ್ಮ ಕೆಮಿಸ್ಟ್ರಿಯಿಂದಲೇ ಸುದ್ದಿಯಲ್ಲಿರುತ್ತಾರೆ. ಆದರೆ ಈ ಬಾರಿ ವಿಷಯ ತುಸು ವಿಶೇಷ ಮತ್ತು ಭಾವನಾತ್ಮಕವಾಗಿದೆ. ಹೌದು, ಕಿಯಾರಾ ಅಡ್ವಾಣಿ ತಮ್ಮ ಜೀವನದ ಮೊದಲ 'ಮದರ್ಸ್ ಡೇ' (ತಾಯಂದಿರ ದಿನ) ಅನ್ನು ಅತ್ಯಂತ ಅರ್ಥಪೂರ್ಣವಾಗಿ ಮತ್ತು ಪ್ರೀತಿಯಿಂದ ಆಚರಿಸಿಕೊಂಡಿದ್ದಾರೆ. ಪತ್ನಿಯ ಈ ವಿಶೇಷ ದಿನವನ್ನು ಸ್ಮರಣೀಯವಾಗಿಸಲು ಪತಿ ಸಿದ್ಧಾರ್ಥ್ ಮಲ್ಹೋತ್ರಾ ಅಡುಗೆ ಮನೆಯಲ್ಲಿ ಕೈಚಳಕ ತೋರಿಸಿದ್ದು, ಈಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸುದ್ದಿಯಾಗಿದೆ.

Add Asianetnews Kannada as a Preferred SourcegooglePreferred
26
Image Credit : Instagram

ಇನ್‌ಸ್ಟಾಗ್ರಾಮ್‌ನಲ್ಲಿ ಸುಂದರ ಕ್ಷಣಗಳನ್ನು ಹಂಚಿಕೊಂಡ ಕಿಯಾರಾ:

2025ರ ಜುಲೈನಲ್ಲಿ ಹೆಣ್ಣು ಮಗು ಸರಾಯಾ ಮಲ್ಹೋತ್ರಾಳನ್ನು ಈ ಭೂಮಿಗೆ ಸ್ವಾಗತಿಸಿದ ನಂತರ, ಕಿಯಾರಾಗೆ ಇದು ಮೊದಲ ತಾಯಂದಿರ ದಿನದ ಸಂಭ್ರಮ. ಈ ಸಂದರ್ಭದ ಸುಂದರ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಅವರು, "ನಾವು ಸಂಭ್ರಮಗಳನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತೇವೆ! ಈ ವರ್ಷ ನನಗೆ ತುಂಬಾ ವಿಶೇಷ, ಏಕೆಂದರೆ ಇದು ನನ್ನ ಮೊದಲ ಮದರ್ಸ್ ಡೇ. ನನ್ನ ಪತಿ ಸಿದ್ಧಾರ್ಥ್ ತಮ್ಮ ಅಡುಗೆ ಕೌಶಲ್ಯದ ಮೂಲಕ ನನಗೆ ಸರ್ಪ್ರೈಸ್ ನೀಡಿದರು. ಬೆಳಗಿನ ಉಪಾಹಾರಕ್ಕೆ ಸ್ವಾದಿಷ್ಟ ಚಾಕೊಲೇಟ್ ಪ್ಯಾನ್‌ಕೇಕ್, ಮಗಳು ಸರಾಯಾ ಜೊತೆಗಿನ ಮುದ್ದಾದ ಅಪ್ಪುಗೆ ಮತ್ತು ಸಾಕಷ್ಟು ಕೇಕ್ ಈ ದಿನದ ಹೈಲೈಟ್ಸ್," ಎಂದು ಬರೆದುಕೊಂಡಿದ್ದಾರೆ.

Related Articles

Related image1
ಅರಮನೆಯಲ್ಲಿ ರಾಜನಂತೆ ಇರಬೇಕಿದ್ದ ದರ್ಶನ್ ಸೆರೆಮನೆಯಲ್ಲಿ; ಪತ್ನಿ ವಿಜಯಲಕ್ಷ್ಮೀ ಪೋಸ್ಟ್‌ಗೆ ಅಪರೂಪದ ಕಾಮೆಂಟ್!
Related image2
'ಅಮ್ಮ' ಸಂಗೀತಾಗೆ ಬಿಗ್ ಗಿಫ್ಟ್ ನೀಡಿ ನೆಟ್ಟಿಗರ ಮೆಚ್ಚುಗೆ ಪಡೆದ ದಳಪತಿ ವಿಜಯ್ ಮಕ್ಕಳು!
36
Image Credit : Instagram

ಜೊತೆಗೆ ವಿಶ್ವದಾದ್ಯಂತ ಇರುವ ಎಲ್ಲಾ ತಾಯಂದಿರಿಗೂ ಶುಭ ಕೋರಿರುವ ಅವರು, "ನಿಮ್ಮ ಕುಟುಂಬಕ್ಕಾಗಿ ನೀವು ಮಾಡುವ ಪ್ರತಿಯೊಂದಕ್ಕೂ ಧನ್ಯವಾದಗಳು. ನಿಮ್ಮನ್ನು ಪ್ರತಿದಿನ ಸಂಭ್ರಮಿಸಬೇಕು. ನನ್ನ ಪುಟ್ಟ ದೇವತೆಗೆ ಧನ್ಯವಾದ, ನನ್ನನ್ನು ಅಮ್ಮನನ್ನಾಗಿ ಮಾಡಿದ್ದಕ್ಕೆ," ಎಂದು ಭಾವುಕರಾಗಿ ಬರೆದಿದ್ದಾರೆ.

46
Image Credit : Instagram

ಸಿದ್ಧಾರ್ಥ್ ಕೈಯಾರೆ ತಯಾರಿಸಿದ 'MOM' ಪ್ಯಾನ್‌ಕೇಕ್:

ಈ ಪೋಸ್ಟ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದು ಸಿದ್ಧಾರ್ಥ್ ಮಲ್ಹೋತ್ರಾ ಅವರ ಪ್ರೀತಿಯ ಉಡುಗೊರೆ. ಸಿದ್ಧಾರ್ಥ್ ತಾವೇ ಸ್ವತಃ ಚಾಕೊಲೇಟ್ ಪ್ಯಾನ್‌ಕೇಕ್ ತಯಾರಿಸಿದ್ದು, ಅದರ ಮೇಲೆ ಪೀನಟ್ ಬಟರ್ ಬಳಸಿ 'MOM' (ಅಮ್ಮ) ಎಂದು ಬರೆದಿದ್ದರು.

56
Image Credit : Instagram

ಪ್ಯಾನ್‌ಕೇಕ್ ಹಿಡಿದು ನಗುತ್ತಿರುವ ಸಿದ್ಧಾರ್ಥ್ ಫೋಟೋ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಕೇವಲ ಪ್ಯಾನ್‌ಕೇಕ್ ಮಾತ್ರವಲ್ಲದೆ, ಪರ್ಪಲ್ (ನೇರಳೆ) ಬಣ್ಣದ ಸುಂದರವಾದ ಕೇಕ್ ಕೂಡ ಅಲ್ಲಿತ್ತು. ಅದರ ಮೇಲೆ ತಾಯಿ ಮಗುವನ್ನು ಎತ್ತಿಕೊಂಡಿರುವ ಚಿತ್ರ ಮತ್ತು "ಅತ್ಯಂತ ಪ್ರೀತಿಯ ಸುಂದರ ಅಮ್ಮನಿಗೆ" ಎಂಬ ಸಂದೇಶ ಅಭಿಮಾನಿಗಳ ಮನಗೆದ್ದಿದೆ.

66
Image Credit : Instagram

ಇನ್ನು ಪುಟ್ಟ ಕಂದಮ್ಮ ಸರಾಯಾ ಧರಿಸಿದ್ದ ಪಿಂಕ್ ಬಣ್ಣದ ಬಟ್ಟೆಯ ಮೇಲಿನ ಬರಹ ಎಲ್ಲರನ್ನೂ ನಗಿಸುವಂತಿತ್ತು. "ಇದು ನನ್ನ ಅಮ್ಮನ ಮೊದಲ ತಾಯಂದಿರ ದಿನ! (ಪಿ.ಎಸ್: ನಾನೇ ಆಕೆಯ ಉಡುಗೊರೆ)" ಎಂಬ ಸಾಲುಗಳು ಸಖತ್ ವೈರಲ್ ಆಗಿವೆ.

ವೃತ್ತಿಜೀವನದ ಅಪ್‌ಡೇಟ್:

ಸಿನಿಮಾ ವಿಷಯಕ್ಕೆ ಬಂದರೆ, ಕಿಯಾರಾ ಅಡ್ವಾಣಿ ಸದ್ಯದಲ್ಲೇ ಸ್ಯಾಂಡಲ್‌ವುಡ್ ಕಿಂಗ್ ರಾಕಿಂಗ್ ಸ್ಟಾರ್ ಯಶ್ ಜೊತೆ ಬಹುನಿರೀಕ್ಷಿತ 'ಟಾಕ್ಸಿಕ್' (Toxic: A Fairytale for Grown-Ups) ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇದು ಕನ್ನಡಿಗರಿಗೂ ಅತೀವ ಕುತೂಹಲ ಮೂಡಿಸಿದೆ. ಇತ್ತ ಸಿದ್ಧಾರ್ಥ್ ಮಲ್ಹೋತ್ರಾ ಅವರು ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರೊಂದಿಗೆ 'ವ್ವನ್' (Vvan) ಎಂಬ ಥ್ರಿಲ್ಲರ್ ಚಿತ್ರದ ಸಿದ್ಧತೆಯಲ್ಲಿದ್ದಾರೆ.

ಒಟ್ಟಿನಲ್ಲಿ, ಈ ತಾರಾ ಜೋಡಿಯ ವೈಯಕ್ತಿಕ ಜೀವನದ ಈ ಸಂಭ್ರಮ ಬಾಲಿವುಡ್ ಪ್ರೇಮಿಗಳ ಮುಖದಲ್ಲಿ ಮಂದಹಾಸ ಮೂಡಿಸಿರುವುದಂತೂ ಸುಳ್ಳಲ್ಲ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಕಿಯಾರಾ ಅಡ್ವಾಣಿ
ಬಾಲಿವುಡ್
ಮನರಂಜನಾ ಸುದ್ದಿ

Latest Videos
Recommended Stories
Recommended image1
ಸೊಸೆ ಐಶ್ವರ್ಯಾ ರೈ ಜೊತೆ ಯಾಕೆ ಸ್ಟ್ರಿಕ್ಟ್ ಆಗ್ಬೇಕು? ಅವರಮ್ಮ ಆ ಕೆಲಸ ಮುಗಿಸಿದ್ದಾರೆ: ಜಯಾ ಬಚ್ಚನ್
Recommended image2
ಸುಮ್ನೆ ಸೂಪರ್‌ಸ್ಟಾರ್‌ ಅಂತಾರೆ, ಎಲ್ಲಾ PR ಆಟ: ಯುವ ನಟಿಯರ ವಿರುದ್ಧ ಅಮೀಶಾ ಪಟೇಲ್ ಕಿಡಿ
Recommended image3
15 ವರ್ಷಗಳ ಬಳಿಕ ಪೌರಾಣಿಕ ಸಿನಿಮಾ: ಅಜ್ಜ, ಚಿಕ್ಕಪ್ಪ ಮಾಡದ ಪಾತ್ರದಲ್ಲಿ ಜೂ.ಎನ್‌ಟಿಆರ್!
Related Stories
Recommended image1
ಅರಮನೆಯಲ್ಲಿ ರಾಜನಂತೆ ಇರಬೇಕಿದ್ದ ದರ್ಶನ್ ಸೆರೆಮನೆಯಲ್ಲಿ; ಪತ್ನಿ ವಿಜಯಲಕ್ಷ್ಮೀ ಪೋಸ್ಟ್‌ಗೆ ಅಪರೂಪದ ಕಾಮೆಂಟ್!
Recommended image2
'ಅಮ್ಮ' ಸಂಗೀತಾಗೆ ಬಿಗ್ ಗಿಫ್ಟ್ ನೀಡಿ ನೆಟ್ಟಿಗರ ಮೆಚ್ಚುಗೆ ಪಡೆದ ದಳಪತಿ ವಿಜಯ್ ಮಕ್ಕಳು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved