25 ವರ್ಷಗಳ ನಂತರ ಮತ್ತೆ ತೆರೆ ಮೇಲೆ ಕರಿಷ್ಮಾ ಗೋವಿಂದ ಜೋಡಿ!
ಗೋವಿಂದ (Govinda) ಮತ್ತು ಕರಿಷ್ಮಾ ಕಪೂರ್ (Karishma Kapoor) ಜೋಡಿಯು 90 ರ ದಶಕದಲ್ಲಿ ಅತ್ಯಂತ ಜನಪ್ರಿಯ ಜೋಡಿಗಳಲ್ಲಿ ಒಂದಾಗಿದೆ. ಅವರ ಹಲವು ಚಿತ್ರಗಳು ಒಂದರ ಹಿಂದೆ ಒಂದರಂತೆ ಸೂಪರ್‌ಹಿಟ್ ಆಗಿದ್ದವು. ಇಂದಿಗೂ ಜನರು ಈ ಜೋಡಿಯನ್ನು ನೋಡಲು ಇಷ್ಟಪಡುತ್ತಾರೆ. 90 ರ ದಶಕದ ಈ ಪ್ರಸಿದ್ಧ ದಂಪತಿಗಳು ಶೀಘ್ರದಲ್ಲೇ 'ಇಂಡಿಯಾಸ್ ಗಾಟ್ ಟ್ಯಾಲೆಂಟ್' (India's Got Talent) ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇತ್ತೀಚೆಗೆ, ಕಾರ್ಯಕ್ರಮಕ್ಕೆ ಸಂಬಂಧಿಸಿದ ಪ್ರೋಮೋ ಹೊರಬಿದ್ದಿದೆ, ಇದರಲ್ಲಿ ಗೋವಿಂದ ಮತ್ತು ಕರಿಷ್ಮಾ ಕಪೂರ್ ತಮ್ಮದೇ ಚಿತ್ರದ ಹಾಡುಗಳಿಗೆ ವೇದಿಕೆಯಲ್ಲಿ ನೃತ್ಯ ಮಾಡುತ್ತಿದ್ದಾರೆ.
'ಇಂಡಿಯಾಸ್ ಗಾಟ್ ಟ್ಯಾಲೆಂಟ್' ಪ್ರೋಮೋದಲ್ಲಿ, ಗೋವಿಂದ ಮತ್ತು ಕರಿಷ್ಮಾ ಕಪೂರ್ 'ಸೋನಾ ಕಿತ್ನಾ ಸೋನಾ ಹೈ' ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಸಮಯದಲ್ಲಿ, ಗೋವಿಂದ ಕರಿಷ್ಮಾ ಜೋಡಿಯು ಕಪ್ಪು ಬಟ್ಟೆಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಾಡು 1997 ರ 'ಹೀರೋ ನಂಬರ್ ಒನ್' ಚಿತ್ರದಾಗಿದೆ.
ಗೋವಿಂದ - ಕರಿಷ್ಮಾ ಅವರ ವಿಡಿಯೋಗೆ ಜನರು ಸಾಕಷ್ಟು ಕಮೆಂಟ್ ಮಾಡುತ್ತಿದ್ದಾರೆ. ಇದು 90 ರ ದಶಕದ ಅತ್ಯುತ್ತಮ ಜೋಡಿ. ಯಾವಾಗಲೂ ನಮ್ಮೆಲ್ಲರ ಬೆಸ್ಟ್ ಆನ್‌ಸ್ಕ್ರೀನ್ ಜೋಡಿಯಾಗಿರುತ್ತಾರೆ. ಚಿಚಿ ಮತ್ತು ಲೋಲೋ ನಮ್ಮ ಫೇವರೇಟ್ ಎಂದು ಸೋಶಿಯಲ್ ಮೀಡಿಯಾ ಯೂಸರ್ ಕಾಮೆಂಟ್ ಮಾಡಿದ್ದಾರೆ
ಕರಿಷ್ಮಾ ಕಪೂರ್ ಮತ್ತು ಗೋವಿಂದ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಇವರ ಜೋಡಿ ಕೊನೆಯದಾಗಿ 2000 ರ 'ಶಿಕಾರಿ' ಚಿತ್ರದಲ್ಲಿ ಕಾಣಿಸಿಕೊಂಡಿತ್ತು.
ಮುಕಾಬ್ಲಾ, ಪ್ರೇಮಶಕ್ತಿ, ರಾಜಬಾಬು, ದುಲಾರಾ, ಖುದ್ದಾರ್, ಕೂಲಿ ನಂ.ಒನ್, ಸಾಜನ್ ಚಲೇ ಸಸುರಲ್, ಹೀರೋ ನಂ.ಒನ್, ಹಸೀನಾ ಮಾನ್ ಜಾಯೇಗಿ ಮತ್ತು ಶಿಕಾರಿ ಈ ಜೋಡಿಯ ಪ್ರಮುಖ ಸಿನಿಮಾಗಳಾಗಿವೆ.
ಲಾಕ್‌ಡೌನ್ ಸಮಯದಲ್ಲಿ ಬಿಡುಗಡೆಯಾದ ಮೆಂಟಲ್‌ಹುಡ್ ವೆಬ್ ಸರಣಿಯಲ್ಲಿ ಕರಿಷ್ಮಾ ಕಪೂರ್ ಕಾಣಿಸಿಕೊಂಡಿದ್ದಾರೆ.ಈ ಸರಣಿಯಲ್ಲಿ ಕರಿಷ್ಮಾ ಕಪೂರ್ ಅವರ ನಟನೆಯನ್ನು ಪ್ರಶಂಸಿಸಲಾಯಿತು. ಇದಲ್ಲದೆ, ಅವರು 2021 ರಲ್ಲಿ ಸೂಪರ್ ಡ್ಯಾನ್ಸರ್ 4 ರಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ.
ಅದೇ ಸಮಯದಲ್ಲಿ, ಗೋವಿಂದ ಕೊನೆಯದಾಗಿ 2019 ರ ಚಲನಚಿತ್ರ ರಂಗೀಲಾ ರಾಜದಲ್ಲಿ ಕಾಣಿಸಿಕೊಂಡರು. ಗೋವಿಂದ ಶೀಘ್ರದಲ್ಲೇ ಶೂಟೌಟ್ ಅಟ್ ಬೈಕುಲ್ಲಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.