ಹಿಂದೊಮ್ಮೆ ಡ್ರೈವರ್‌ಗೆ ಸಂಬಳ ಕೊಡುವಷ್ಟೂ ಹಣ ಇರಲಿಲ್ಲವಂತೆ ಕರೀನಾ ಬಳಿ!
ನಟಿ ಕರೀನಾ ಕಪೂರ್ ಪ್ರತಿಷ್ಠಿತ ಕಪೂರ್ ಫ್ಯಾಮಿಲಿಯ ಕುಡಿ ಹಾಗೂ ಬಾಲಿವುಡ್‌ನಲ್ಲಿ ಎರಡು ದಶಕಗಳಿಂದ ತಮ್ಮ ಛಾಪು ಉಳಿಸಿಕೊಂಡಿರುವ ಯಶಸ್ವಿ ಸ್ಟಾರ್. ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿರುವ ಕರೀನಾ ಲಕ್ಷುರಿಯಸ್ ಲೈಫ್‌ಸ್ಟೈಲ್‌ಗೂ ಜನಪ್ರಿಯ. ಆದರೆ ಹಿಂದೊಮ್ಮೆ ಅವರು, ಸಹೋದರಿ ಕರಿಷ್ಮಾ ಕಪೂರ್ ಮತ್ತು ತಾಯಿ ಬಬಿತಾ ಆರ್ಥಿಕವಾಗಿ ಹೇಗೆ ಹೆಣಗಾಡಿದರು ಎಂಬುದರ ಕುರಿತು ಇತ್ತೀಚೆಗೆ ಇಂಟರ್‌ವ್ಯೂವ್‌ವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಕರೀನಾ ತಮ್ಮ ಕಷ್ಟದ ದಿನಗಳ ಬಗ್ಗೆ ಮಾಹಿತಿ ಹಂಚಿಕೊಂಡ ವಿವರ ಇಲ್ಲಿದೆ.
ಎರಡು ದಶಕಗಳಿಂದ ಬಾಲಿವುಡ್‌ನಲ್ಲಿ ಯಶಸ್ವಿ ಕೆರಿಯರ್ ಹೊಂದಿರುವ ಕರೀನಾ ಕಪೂರ್ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ.
ಪ್ರತಿಷ್ಠಿತ ಕಪೂರ್ ಫ್ಯಾಮಿಲಿಗೆ ಸೇರಿದ ಕರೀನಾ ಹಿಂದೊಮ್ಮೆ ಅರ್ಥಿಕ ಸಂಕಷ್ಟದಲ್ಲಿದ್ದರು ಎಂದು ಹೇಳಿಕೊಂಡಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಡ್ರೈವರ್‌ಗೆ ಸ್ಯಾಲರಿ ಕೊಡುವಷ್ಟು ಹಣ ಸಹ ನಮ್ಮ ಬಳಿ ಇರಲಿಲ್ಲ ಎಂದು ಕರೀನಾ ಕಪೂರ್ ಹೇಳಿಕೊಂಡಿದ್ದಾರೆ.
ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ಹಳೆಯ ಸಂದರ್ಶನದಲ್ಲಿ, ಕರೀನಾರಿಗೆ ಕಸಿನ್ ರಣಬೀರ್ ಕಪೂರ್ ಅವರಂತೆ ಲಕ್ಷುರಿಯನ್ನು ಹೊಂದಿದ ಫ್ಯಾಮಿಲಿಯಲ್ಲಿ ನೀವು ಜನಿಸಿದ್ದೀರಿ ಎಂದೆನುಸುತ್ತಿದೆಯಾ ಎಂದು ಕೇಳಲಾಯಿತು.
ಕಪೂರ್ ಕುಟುಂಬದ ಕುಡಿ. ಚಿತ್ರರಂಗದಲ್ಲಿ ಯಶಸ್ವಿ ನಟಿ. ಬಾಲಿವುಡ್ ಅಂದರೆ ಕಪೂರ್ ಫ್ಯಾಮಿಲಿ ಎನ್ನುವಷ್ಟು ಸಾಮ್ಯತೆ ಹೊಂದಿದ್ದರೂ ಕರೀನಾ ಉತ್ತರ ಮಾತ್ರ ವಿಭಿನ್ನವಾಗಿತ್ತು.
ಒಮ್ಮೆ ತಾನು ಮತ್ತು ಸಹೋದರಿ ಕರಿಷ್ಮಾ ಕಪೂರ್ ಪ್ರತಿಷ್ಠಿತ ಕುಟುಂಬದವರಾಗಿಯೂ ಐಷಾರಾಮಿಯಾಗಿ ಬೆಳೆದಿಲ್ಲ ಎಂದು ಹೇಳಿದರು.
ತನ್ನನ್ನು ಮತ್ತು ಕರಿಷ್ಮಾಳನ್ನು ಅವರ ಸಿಂಗಲ್ ಮದರ್ ಬಬಿತಾ ಕಪೂರ್ ಬೆಳೆಸಿದರು ಮತ್ತು ಸಾಮಾನ್ಯ ಜನರಂತೆ ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಬಳಸುತ್ತಿದ್ದರು ಮತ್ತು ಒಂದು ಹಂತದಲ್ಲಿ ಅವರ ಕುಟುಂಬಕ್ಕೆ ಡ್ರೈವರ್ ಹೊಂದಲು ಸಾಧ್ಯವಿರಲಿಲ್ಲ ಎಂದು ಬೆಬೊ ಹೇಳಿದ್ದಾರೆ.
ಜನರು ಕಪೂರ್ ಫ್ಯಾಮಿಲಿಯ ಬಗ್ಗೆ ಯೋಚಿಸುವಂತೆ ನಾವು ಐಷಾರಾಮಿಯಾಗಿ ಬೆಳೆದಿಲ್ಲ. ನನ್ನ ತಾಯಿ ಮತ್ತು ಸಹೋದರಿ ನನಗೆ ಉತ್ತಮ ಜೀವನವನ್ನು ನೀಡಲು ನಿಜವಾಗಿಯೂ ಹೆಣಗಾಡಿದರು. ವಿಶೇಷವಾಗಿ ನನ್ನ ತಾಯಿ ಸಿಂಗಲ್ ಪೆರೆಂಟ್ ಆಗಿದ್ದ ಕಾರಣ ನಮಗೆ ಎಲ್ಲವೂ ಲಿಮಿಟೆಡ್ ಅಗಿ ಸಿಗುತ್ತಿತ್ತು ಎಂದಿದ್ದಾರೆ ಕರೀನಾ
ಬಾಲಿವುಡ್ ಸ್ಟಾರ್‌ಗಳಾದ ಬಬಿತಾ ಮತ್ತು ರಣಧೀರ್ ಕಪೂರ್ ಇಬ್ಬರೂ 1971 ರಲ್ಲಿ ವಿವಾಹವಾದರು, ಆದರೆ ದಂಪತಿಗಳು 1988 ರಲ್ಲಿ ಬೇರ್ಪಟ್ಟರು.
ಬಾಂದ್ರಾದಲ್ಲಿ ತಮ್ಮ ಹೆಣ್ಣುಮಕ್ಕಳೊಂದಿಗೆ ವಾಸಿಸುತ್ತಿದ್ದ ಬಬಿತಾ ತನ್ನ ಹುಡುಗಿಯರಿಗೆ ಶಿಕ್ಷಣ ಮತ್ತು ಆಹಾರಕ್ಕಾಗಿ ಸಣ್ಣ ಬ್ಯುಸಿನೆಸ್‌ಗಳನ್ನು ನಡೆಸುತ್ತಿದ್ದರು.
ಕರಿಷ್ಮಾ ಕಪೂರ್ ಸಿನಿಮಾದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದಾಗ ಅರ್ಥಿಕ ಪರಿಸ್ಥಿತಿ ಸುಧಾರಿಸಿದವು. ಅವರು ಸಣ್ಣ ವಯಸ್ಸಿನಿಂದಲೇ ಕೆಲಸ ಮಾಡಲು ಶುರು ಮಾಡಿದ್ದರು.
ಕರಿಷ್ಮಾ ಎಲ್ಲರಂತೆ ಸಾರ್ವಜನಿಕ ಸಾರಿಗೆಯಲ್ಲಿ ಹೇಗೆ ಪ್ರಯಾಣಿಸಿದಳು ಎಂಬುದರ ಬಗ್ಗೆಯೂ ಅವರು ಮಾತನಾಡಿದರು.
ಲೋಲೋ ಲೋಕಲ್ ಟ್ರೈನ್‌ನಲ್ಲಿ ಕಾಲೇಜಿಗೆ ಹೋಗಿದ್ದಳು. ಆದರೆ ನಾನು ಇಲ್ಲಿ ಕಾಲೇಜಿಗೆ ಹೋಗದ ಕಾರಣ ತಪ್ಪಿಸಿಕೊಂಡೆ. ಆದರೆ ನಾನು ಎಲ್ಲರಂತೆ ಸ್ಕೂಲ್ ಬಸ್‌ನಲ್ಲಿ ಹೋಗುತ್ತಿದ್ದೆ. ನಮ್ಮಲ್ಲಿ ಒಂದು ಕಾರು ಇತ್ತು, ಆದರೆ ಡ್ರೈವರ್‌ಗೆ ಕೊಡಲು ಸಾಕಷ್ಟು ಹಣವಿರಲಿಲ್ಲ. ತಾಯಿ ನಮ್ಮನ್ನು ಈ ರೀತಿ ಬೆಳೆಸಿದ ಕಾರಣ ನಾವು ಇಂದು ನಮ್ಮಲ್ಲಿರುವ ಎಲ್ಲದಕ್ಕೂ ಬೆಲೆ ಕೊಡುತ್ತೇವೆ. ನಾವು ನೋಡಿದ ಕೆಟ್ಟ ದಿನಗಳು ನಮ್ಮನ್ನು ತುಂಬಾ ಬಲಶಾಲಿಯಾಗಿ ಹಾಗೇ ದುರ್ಬಲವಾಗಿ ಮಾಡಿವೆ. ಅನುಭವಗಳು ನನ್ನನ್ನು ತುಂಬಾ ಭಾವ ಜೀವಿಯಾಗಿಸಿದೆ,' ಎಂದು ಕರೀನಾ ತಮ್ಮ ಕಷ್ಟದ ದಿನಗಳ ಬಗ್ಗೆ ಮಾತನಾಡಿದ್ದಾರೆ.
ಈಗ, ಬಬಿತಾ ಮತ್ತು ರಣಧೀರ್ ಕಪೂರ್ ತಮ್ಮ ಹೆಣ್ಣುಮಕ್ಕಳು ಮತ್ತು ಮೊಮ್ಮಕ್ಕಳ ಸಲುವಾಗಿ ಮತ್ತೆ ಸಂಪರ್ಕದಲ್ಲಿದ್ದಾರೆ.