ಅಲ್ಲು, ಯಶ್ ಫೋಟೋ ಶೇರ್ ಮಾಡಿ Bollywoodನಿಂದ ದೂರವಿರಿ ಎಂದ ಕಂಗನಾ!
ಕಂಗನಾ ರಣಾವತ್ (Kangana Ranaut) ತಮ್ಮ ಹೇಳಿಕೆಯಿಂದ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಈ ಬಾರಿ ಸೌತ್ ಸಿನಿಮಾಗಳನ್ನು ಹಾಗೂ ಅಲ್ಲಿನ ಸೂಪರ್ ಸ್ಟಾರ್ಸ್ ಅನ್ನು ಕಂಗನಾ ಟಾರ್ಗೆಟ್ ಮಾಡಿದ್ದಾರೆ. ದಕ್ಷಿಣದ ಸ್ಟಾರ್‌ಗಳ ಬಗ್ಗೆ ಜನರಿಗೆ ಏಕೆ ಇಷ್ಟೊಂದು ಕ್ರೇಜ್ ಇದೆ ಎಂಬುದಕ್ಕೆ ಅವರು ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ನಾಲ್ಕು ಕಾರಣಗಳನ್ನು ಬರೆದಿದ್ದಾರೆ. ಅಷ್ಟಕ್ಕೂ ಕನ್ನಡ ರಾಕಿಂಗ್ ಸ್ಟಾರ್ ಯಶ್ ಹಾಗೂ ಟಾಲಿವುಡ್‌ನ ಸ್ಟೈಲ್ ಐಕಾನ್ ಅಲ್ಲು ಅರ್ಜುನ್ ಫೋಟೋ ಶೋರ್ ಮಾಡ್ಕೊಂಡು ಬಾಲಿವುಡ್‌ನಿಂದ ದೂರುವಿರಿ ಎಂದಿದ್ದಾಕೆ ಬಾಲಿವುಡ್ ಕ್ವೀನ್?
ದಕ್ಷಿಣದ ಚಲನಚಿತ್ರಗಳ ಯಶಸ್ಸಿನ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ವೆಬ್‌ಸೈಟ್‌ನ ಸ್ಟೋರಿಯೊಂದನ್ನು ಕಂಗನಾ ಹಂಚಿಕೊಂಡಿದ್ದಾರೆ. ಈ ಲೇಖನವನ್ನು ಪುಷ್ಪ 2 ಮತ್ತು ಕೆಜಿಎಫ್ 2 ಸಿನಿಮಾಗಳದ್ದು.
ದಕ್ಷಿಣದ ಸೂಪರ್‌ಸ್ಟಾರ್‌ಗಳು ಮತ್ತು ಅಲ್ಲಿನ ಸಿನಿಮಾಗಳ ವಿಷಯದ ಬಗ್ಗೆ ಕಂಗನಾ ರಣಾವತ್ ತಮ್ಮ ಅಭಿಪ್ರಾಯವನ್ನು ನೀಡಿದ್ದಾರೆ. ಸೌತ್ ಕಂಟೆಂಟ್ ಮತ್ತು ಸೂಪರ್‌ಸ್ಟಾರ್‌ಗಳ (South Indian Super Stars) ಬಗ್ಗೆ ಜನರಿಗೆ ಕ್ರೇಜ್ ಇರುವುದಕ್ಕೆ ಕಾರಣಗಳನ್ನುನೀಡಿದ್ದಾರೆ.
ಮೊದಲನೆಯದಾಗಿ, ಅವರು ತಮ್ಮ ಭಾರತೀಯ ಸಂಸ್ಕೃತಿಯ ಬೇರುಗಳೊಂದಿಗೆ ಸಂಪರ್ಕ ಹೊಂದಿದ್ದಾರೆ. ಎರಡನೆಯದಾಗಿ, ಅವರು ತಮ್ಮ ಕುಟುಂಬ ಮತ್ತು ಸಂಬಂಧಗಳ ಬಗ್ಗೆ ಪಾಶ್ಚಿಮಾತ್ಯರನ್ನು ಫಾಲೋ ಮಾಡೋಲ್ಲ. ಕುಟುಂಬಕ್ಕೆ ಬದ್ಧರಾಗಿದ್ದಾರೆ. ಮೂರನೆಯದು, ಅವರ ಉತ್ಸಾಹ ಮತ್ತು ಕೆಲಸದ ರೀತಿ ಬಹಳ ವಿಶಿಷ್ಟವಾಗಿದೆ. ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕೊನೆಯಲ್ಲಿ, ಬಾಲಿವುಡ್ ಅವರನ್ನು ಭ್ರಷ್ಟಗೊಳಿಸಲು ಬಿಡಬಾರದು, ಎಂದು ಅವರು ದಕ್ಷಿಣದ ಸ್ಟಾರ್ಸ್‌ಗೆ ಕಂಗನಾ ಸಲಹೆ ನೀಡಿದ್ದಾರೆ.
ಈ ಸಲಹೆಗಳ ಜೊತೆ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿರುವ ದಕ್ಷಿಣದ ಎರಡು ದೊಡ್ಡ ಸಿನಿಮಾಗಳ ಮುಂದುವರಿದ ಭಾಗವನ್ನು ಉಲ್ಲೇಖಿಸಿದ್ದಾರೆ. ಅಲ್ಲು ಅರ್ಜುನ್ ಅವರ ಪುಷ್ಪ 2 ಮತ್ತು ಯಶ್ ಅವರ ಚಿತ್ರ ಕೆಜಿಎಫ್ 2ರ ಪೋಟೋಗಳ ಕೋಲಾಜ್ ಅನ್ನು ಶೇರ್ ಮಾಡಿದ್ದಾರೆ. ಈ ಎರಡೂ ಚಿತ್ರಗಳ ಮೊದಲ ಭಾಗ ಹಿಂದಿ ಪ್ರದೇಶದಲ್ಲಿ ಸಾಕಷ್ಟು ಗಳಿಕೆ ಮಾಡಿದೆ.
ಕಂಗನಾ ರಣಾವತ್ ತನ್ನ ಮೊದಲ ನಿರ್ಮಾಣದ ಚಿತ್ರ ಟಿಕು ವೆಡ್ಸ್ ಶೇರು ಕೊನೆಯ ಶೆಡ್ಯೂಲ್‌ನ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದರು. ಟಿಕು ವೆಡ್ಸ್ ಶೇರು ಕೊನೆಯ ಶೆಡ್ಯೂಲ್‌ನ ಶೂಟಿಂಗ್ ಪ್ರಾರಂಭವಾಗಿದೆ ಎಂದು ಈ ಫೋಟೋವನ್ನು ಹಂಚಿಕೊಂಡ ಅವರು ಬರೆದಿದ್ದಾರೆ.
ಈ ಸಿನಿಮಾವನ್ನು ಕಂಗನಾ ರಣಾವತ್ ಅವರ ನಿರ್ಮಾಣ ಸಂಸ್ಥೆ ಮಣಿಕರ್ಣಿಕಾ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ. ಸಿನಿಮಾದಲ್ಲಿ ನವಾಜುದ್ದೀನ್ ಸಿದ್ದಿಕಿ ಮತ್ತು ಅವನೀತ್ ಕೌರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಾಯಿ ಕಬೀರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕಬೀರ್ ಈ ಹಿಂದೆ ಕಂಗನಾ ಅಭಿನಯದ ರಿವಾಲ್ವರ್ ರಾಣಿ ಚಿತ್ರವನ್ನು ನಿರ್ದೇಶಿಸಿದ್ದರು.