Bollywood Chain Smokers: ಈ ಬಾಲಿವುಡ್ ಹೀರೋಯಿನ್ಸ್ ಚೈನ್ ಸ್ಮೋಕರ್ಸ್
ಹಿಂದಿ ಚಿತ್ರರಂಗದ ಅನೇಕ ಹೀರೋಯಿನ್‌ಗಳಿಗೆ ಸಿಗರೇಟ್ ಇಲ್ಲದೆ ದಿನಬೆಳಗಾಗುವುದಿಲ್ಲ, ರಾತ್ರಿಯಾಗುವುದಿಲ್ಲ. ಅಂಥ ಹೀರೋಯಿನ್‌ಗಳು ಯಾರ್ಯಾರು?
ನಟಿಯರ ನಟನೆ, ಬದುಕಿನ ರೀತಿಯನ್ನು ಅನುಕರಿಸುವ ಯುವತಿಯರು ಹೆಚ್ಚು. ಅವರೇನೆ ಮಾಡಿದರೂ, ಯಾವ ರೀತಿ ಬಟ್ಟೆ ಧರಿಸಿದರೂ ತಾನೂ ಹಾಗೇ ಮಾಡಬೇಕು ಎಂಬ ಹಂಬಲ. ಅಭಿಮಾನಿಗಳ ಮನಸ್ಥಿತಿ ಅಂಥದ್ದಾಗಿರುತ್ತದೆ. ಅಂಥ ಅಭಿಮಾನಿಗಳು ಇದ್ದಾರೆ, ತಮ್ಮ ನಡೆಯನ್ನು ಅನುಕರಿಸುತ್ತಾರೆ ಎಂಬ ಅರಿವಿದ್ದರೂ ಇವರು ಕೆಲವು ದುಶ್ಚಟಗಳನ್ನು ಬಿಡುವುದೇ ಇಲ್ಲ. 'ಧೂಮಪಾನ (Smoking) ಮಾಡುವುದು ಕಾಮನ್ !” ಎಂಬಂತೆ ಬಿಂಬಿಸಿದ್ದಾರೆ ಈ ನಟಿಶಿರೋಮಣಿಯರು. ಚಂದನದ ಬೆಡಗಿಯರಿಗೆ ಹೊಗೆ ಸಹವಾಸವೇಕೆ ಎಂದು ಯುವಕರು ಅವಲತ್ತುಕೊಳ್ಳುತ್ತಿದ್ದರೆ, ಯುವತಿಯರು ಫ್ಯಾಶನ್ (Fashion) ಎಂದು ಅವರ ಹಾವಭಾವಗಳನ್ನು ತಮ್ಮ ಬದುಕಲ್ಲೂ ಅಳವಡಿಸಲು ನೋಡುತ್ತಾರೆ. ಇಲ್ಲಿದ್ದಾರೆ ನೋಡಿ ಧೂಮಪಾನಿ ಬಿನ್ನಾಣಗಿತ್ತಿಯರು.
ರಾಣಿ ಮುಖರ್ಜಿ (Rani mukhergy)
ಈಕಗೆ ದಮ್ ಎಳೆಯದಿದ್ದರೆ ದಿನದ ಕಾರ್ಯ ಆರಂಭವಾಗುವುದೇ ಇಲ್ಲ! ರಾಣಿಯ ಪೋಷಕರು ಸಾಕಷ್ಟು ವಿರೋಧ ಒಡ್ಡಿದ್ದಾರೆ. ರಾಣಿಯೂ ಹಲವು ಬಾರಿ 'ಇನ್ನು ಸಿಗರೇಟು ಮುಟ್ಟುವುದಿಲ್ಲ!' ಎಂದಿದಾಳೆ. ಹೇಳಿದ್ದಷ್ಟೇ ಬಂತು. ಹೊಗೆ ಸೇವನೆ ಮಾತ್ರ ನಿರಂತರ!
ಕಂಗನಾ ರನೌತ್ (Kangana Ranauth)
ಈಕೆಯ ಹೆಸರು ನೆನೆದಾಗೆಲ್ಲಾ ದುಃಖಿತರಾಗಿ ಧಮ್ಮು ಹೊಡೆಯುವ ಚಿತ್ರಣ ಕಾಣುತ್ತದೆ. ಕಾರಣ, ಕಂಗನಾ ನಟಿಸಿರುವ ಫ್ಯಾಷನ್, ತನು ವೆಡ್ಸ್ ಮನು ಮತ್ತು ಗ್ಯಾಂಗ್‌ಸ್ಟರ್! ಸಮಸ್ಯೆಗೆ ಸಿಲುಕುವ ಸ್ತ್ರೀ ಪಾತ್ರಧಾರಿಯಾಗಿ, ಖಿನ್ನತೆಯಿಂದ ಧೂಮಪಾನ ವ್ಯಸನಿಯಾಗುವ ಮನೋಜ್ಞ ನಟನೆ ಆ ಸಿನಿಮಾಗಳಲ್ಲಿದೆ. ದುರಂತ ಎಂದರೆ ಕಂಗನಾ ನಿಜ ಜೀವನದಲ್ಲೂ ಸಿಗರೇಟ್ ಸಂಗಾತಿ, 'ಸಿಗರೇಟು ಸೇದುವುದು ವೈಯಕ್ತಿಕ ಹಕ್ಕು' ಎನ್ನುವಷ್ಟರ ಮಟ್ಟಿಗೆ ಹಾಳಾಗಿದ್ದಾಳೆ!
ಮನಿಶಾ ಕೊಯಿರಾಲ (Manisha Koirala)
ಈಕೆ ಒಂದು ಕಾಲದಲ್ಲಿ ಚೈನ್ ಸ್ಮೋಕರ್. ಮದುವೆಯ ದಿನವೇ, ಮದುವಣಗಿತ್ತಿಯ ದಿರಿಸಿನಲ್ಲೇ, ನೆರೆದ ಬಂಧುಬಳಗದ ಮುಂದೆ ಗೆಳತಿಯರೊಂದಿಗೆ ಹೊಗೆ ಬಿಟ್ಟಿದ್ದಳು. ಖುಷಿಯ ವಿಚಾರ ಎಂದರೆ, ಈಗಿನ ಮನಿಶಾ ಧೂಮಪಾನದಿಂದ ಮಾರು ದೂರ ಸರಿದಿದ್ದಾಳೆ. ಅದೂ ಕ್ಯಾನ್ಸರ್ ಅನ್ನು ಗೆದ್ದ ನಂತರ ಎಂಬ ಮಾತನ್ನು ಸೇರಿಸಲೇಬೇಕು !
ಸುಶ್ಮಿತಾ ಸೇನ್ (Sushmita Sen)
`ಬ್ಯೂಟಿ ಕ್ಲೀನ್' ಸುಶ್ಮಿತಾ ಸೇನ್ ಧೂಮಪಾನ ವ್ಯಸನಿ ಎಂದರೆ ವ್ಯಥೆಯಾಗುತ್ತದೆ. ಸೌಂದರ್ಯ ಮತ್ತು ನಟನೆ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿರುವ ಸುಶ್ಮಿತಾ ಸಾರ್ವಜನಿಕ ಸ್ಥಳಗಳಲ್ಲಿ ಯಾವ ಮುಚ್ಚುಮರೆ ಇಲ್ಲದೆ ಧಂ ಎಳೆಯುತ್ತಾಳೆ. ಆ ಬದುಕಿಗೆ ಹೊಂದಿಕೊಂಡಿದ್ದಾಳಂತೆ, ಅವಳಿಗೆ ಬೇಡ ಎಂದೆನಿಸಿದರೆ ಬಿಟ್ಟು ಬಿಡುತ್ತಾಳಂತೆ ! ಅವಳೇನೋ ಬಿಟ್ಟು ಬಿಡುತ್ತಾಳೆ. ಅವಳನ್ನು ನೋಡಿ ಕಲಿತ ಧೂಮಪಾನಿಗಳ ಕಥೆ?.
ಕೊಂಕಣಾ ಸೇನ್ ಶರ್ಮಾ (Konkana Sen Sharma)
ಈಕೆ ತನ್ನ ಮೊದಲ ಹೆರಿಗೆಯ ವೇಳೆ ಅನುಭವಿಸಿದ ಸಂಕಷ್ಟದಿಂದಾಗಿ ಸಿಗರೇಟನ್ನು ಹಚ್ಚಿದಳಂತೆ. ನಂತರದ ದಿನಗಳಲ್ಲಿ ಅದು ದುಶ್ಚಟವಾಗಿ ಪರಿಣಮಿಸಿತು. ಸದ್ಯ ಎಷ್ಟೇ ಪ್ರಯತ್ನಪಟ್ಟರೂ ಸಿಗರೇಟು ಬಿಟ್ಟಿರಲಾಗುವುದಿಲ್ಲ ಎನ್ನುತ್ತಾಳೆ ಈಕೆ.
ಪ್ರೀತಿ ಜಿಂಟಾ (Preity Zinta)
ಈಕೆ ಹೊಗೆಯೆಳೆಯುವುದು ಸಾಮಾನ್ಯ. ವೀರ್ ಝರಾ ಸೆಟ್ಟಿನಲ್ಲಿ ಈಕೆ, ರಾಣಿ ಮುಖರ್ಜಿ ಮತ್ತು ಶಾರುಖ್ ಖಾನ್ ಜೊತೆಯಾಗಿ ಕೂತು ಸ್ಮೋಕ್ ಮಾಡುತ್ತಿದ್ದುದು ಕಂಡವರಿದ್ದಾರೆ. ಐಪಿಎಲ್ ಟೀಮ್ ಓನರ್ ಆಗಿರುವ ಈಕೆ ತನ್ನ ತಂಡ ಸೋತಾಗಲೆಲ್ಲ ಇನ್ನಷ್ಟು ಸೇದುತ್ತಾಳೆ.
ಅಮಿಷಾ ಪಟೇಲ್ (Amisha Patel)
ಸ್ಮೋಕಿಂಗ್ ಮತ್ತು ಡ್ರಿಂಕಿಂಗ್ ಎರಡೂ ಅಮಿಷಾ ಪಟೇಲ್‌ಗೆ ಅತಿ ಸಾಮಾನ್ಯ ಸಂಗತಿ, ದೊಡ್ಡ ಬಾಲಿವುಡ್ ಪಾರ್ಟಿಗಳಲ್ಲಿ ಈಕೆ ಎರಡರಲ್ಲೂ ತೊಡಗಿಕೊಂಡಿರುವುದನ್ನು ನೋಡಬಹುದಾಗಿದೆ. ಇತ್ತಚೆಗೆ ಇದರಿಂದ ಸ್ವಲ್ಪ ಹೊರಬರಲು ಯತ್ನಿಸುತ್ತಿದ್ದಾಳೆ ಎಂಬ ಸುದ್ದಿಯಿದೆ.