MLA About Kangana Ranauts cheeks: ರಸ್ತೆಗಳನ್ನು ಕಂಗನಾ ಕೆನ್ನೆಗೆ ಹೋಲಿಸಿದ ಕಾಂಗ್ರೆಸ್ MLA

  • ರಸ್ತೆಗಳನ್ನು ಕಂಗನಾ ರಣಾವತ್ ಕೆನ್ನೆಗೆ ಹೋಲಿಸಿದ ಕಾಂಗ್ರೆಸ್ ಶಾಸಕ
  • ನಟಿಯ ಕೆನ್ನೆಗಿಂತ ನಯವಾಸ ರೋಡ್ ಮಾಡ್ತೀನಿ ಎಂದ ಎಂಎಲ್‌ಎ
Jharkhand Congress MLA vows to make roads smoother than Kangana Ranauts cheeks dpl

ಇತ್ತೀಚೆಗೆ ಎಡವಟ್ಟು ಹೇಳಿಕೆಗಳನ್ನು ಕೊಡುತ್ತಿರುವ ಸಚಿವ, ಶಾಸಕರ ಸಂಖ್ಯೆ ಹೆಚ್ಚಾಗಿದೆ. ನಟಿಯದ ದೇಹ, ಮುಖ, ಸೌಂದರ್ಯವನ್ನು ಹೋಲಿಸಿ ಕಮೆಂಟ್ ಮಾಡುವ, ಸಾರ್ವಜನಿಕವಾಗಿಯೇ ಹೇಳಿಕೆಗಳನ್ನು ನೀಡುವ ಘಟನೆಗಳು ನಡೆಯುತ್ತಲೇ ಇವೆ. ಮುಖ್ಯವಾಗಿ ರಾಜಕೀಯವಾಗಿ ನಡೆಯುವ ಸಭೆ, ಬೃಹತ್ ಸಮಾವೇಶಗಳಲ್ಲಿಯೂ ಇಂತಹ ಘಟನೆ ನಡೆಯುತ್ತಿದೆ. ಇದೀಗ ಕಾಂಗ್ರೆಸ್ ಶಾಸಕರೊಬ್ಬರು ರಸ್ತೆಗಳನ್ನು ಕಂಗನಾ ರಣಾವತ್ ಅವರ ಕೆನ್ನೆಗಳಿಗೆ ಹೋಲಿಸಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಜಾರ್ಖಂಡ್‌ನ ಕಾಂಗ್ರೆಸ್ ಶಾಸಕರೊಬ್ಬರು(Congress MLA) ಇದೀಗ ತಮ್ಮ ಕ್ಷೇತ್ರದಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್(Kangana Ranaut) ಅವರ ಕೆನ್ನೆಗಿಂತ ನಯವಾದ ರಸ್ತೆಗಳನ್ನು ನಿರ್ಮಿಸುವುದಾಗಿ ಭರವಸೆ ನೀಡಿದ್ದಾರೆ. ಜಮ್ತಾರಾ ಶಾಸಕ ಇರ್ಫಾನ್ ಅನ್ಸಾರಿ ಅವರೇ ರೆಕಾರ್ಡ್ ಮಾಡಿರುವ ವಿಡಿಯೋದಲ್ಲಿ, ಇಂತಹ ನಯವಾದ ರಸ್ತೆಗಳನ್ನು(Road) ಬುಡಕಟ್ಟು ಸಮುದಾಯದ ಮಕ್ಕಳು ಮತ್ತು ರಾಜ್ಯದ ಯುವಕರು ಬಳಸುತ್ತಾರೆ ಎಂದು ಕಾಂಗ್ರೆಸ್ ನಾಯಕ ಹೇಳುತ್ತಿರುವುದು ಕೇಳಿಬರುತ್ತಿದೆ. 14 ವಿಶ್ವ ದರ್ಜೆಯ ರಸ್ತೆಗಳ ನಿರ್ಮಾಣ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಅವರು ಹೇಳಿದರು.

ರಸ್ತೆಗಳನ್ನು ನಟಿ ಹೇಮಾ ಮಾಲಿನಿ ಕೆನ್ನೆಗೆ ಹೋಲಿಸಿದ ಮಹಾರಾಷ್ಟ್ರ ಸಚಿವ

ವೈದ್ಯರೂ ಆಗಿರುವ ಶಾಸಕರು ವಿವಾದಾತ್ಮಕ ಹೇಳಿಕೆ ನೀಡುವುದು ಹೊಸದಲ್ಲ. ಮಾಸ್ಕ್‌ಗಳನ್ನು ದೀರ್ಘಕಾಲ ಬಳಸಬಾರದು ಎಂದು ಅವರು ಇತ್ತೀಚೆಗೆ ಹೇಳಿದ್ದರು. ಮಾಸ್ಕ್‌ಗಳನ್ನು ಹೆಚ್ಚು ಕಾಲ ಧರಿಸಬಾರದು. ನಾನು ಎಂಬಿಬಿಎಸ್ ವೈದ್ಯರಾಗಿ ದೀರ್ಘಕಾಲ ಮಾಸ್ಕ್ ಬಳಸಬಾರದು ಎಂದು ಹೇಳುತ್ತಿದ್ದೇನೆ. ಜನಸಂದಣಿಯಲ್ಲಿ ಒಬ್ಬರು ಮುಖವಾಡವನ್ನು ಧರಿಸಬೇಕು. ಈ ಮೂರನೇ ತರಂಗ ಕೋವಿಡ್ -19 ಸಮಯದಲ್ಲಿ ಭಯಪಡುವ ಅಗತ್ಯವಿಲ್ಲ. ಲಕ್ಷಣಗಳು ಐದು-ಆರು ದಿನಗಳಲ್ಲಿ ಗುಣಮುಖರಾಗುತ್ತಾರೆ ಎಂದು ಕಾರ್ಯಕ್ರಮವೊಂದರಲ್ಲಿ ಮಾಸ್ಕ್ ಧರಿಸದ ಬಗ್ಗೆ ಕೇಳಿದಾಗ ಅವರು ಸ್ಪಷ್ಟನೆ ಕೊಟ್ಟಿದ್ದರು.

ಇದೇ ರೀತಿ ಇತ್ತೀಚೆಗೆ ಇನ್ನೊಂದು ಘಟನೆ ನಡೆದಿತ್ತು. ಮಹಾರಾಷ್ಟ್ರದ ಸಚಿವ ಮತ್ತು ಶಿವಸೇನೆ ನಾಯಕ ಗುಲಾಬ್ರಾವ್ ಪಾಟೀಲ್ ಅವರು ಇತ್ತೀಚೆಗೆ ತಮ್ಮ ವಿಧಾನಸಭಾ ಕ್ಷೇತ್ರವಾದ ಜಲಗಾಂವ್ ಜಿಲ್ಲೆಯ ರಸ್ತೆಗಳ ಸುಗಮತೆಯನ್ನು ನಟಿ-ರಾಜಕಾರಣಿ ಹೇಮಾ ಮಾಲಿನಿ ಅವರ ಕೆನ್ನೆಗೆ ಹೋಲಿಸಿದ ನಂತರ ಗಲಾಟೆ ಮಾಡಿದ್ದರು. ಬಳಿಕ ಈ ಹೇಳಿಕೆಗೆ ಸಚಿವರು ಕ್ಷಮೆಯಾಚಿಸಿದರು. ನಂತರ, ಸೇನಾ ಸಂಸದರು ಇಂತಹ ಹೋಲಿಕೆಗಳು ಹಿರಿಯ ನಟಿಗೆ ಗೌರವವನ್ನು ಸೂಚಿಸುವ ಉದ್ದೇಶವನ್ನು ಹೊಂದಿದ್ದವು. ಈ ಹಿಂದೆಯೂ ಸಂಭವಿಸಿದ್ದವು ಎಂದು ಹೇಳಿದರು. ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಯಾದವ್ ಅವರು ಇದೇ ಉದಾಹರಣೆಯನ್ನು ನೀಡಿದ್ದಾರೆ ಎಂದು ಅವರು ಹೇಳಿದರು.

 ಮಹಾರಾಷ್ಟ್ರದ ನೀರು ಸರಬರಾಜು ಮತ್ತು ನೈರ್ಮಲ್ಯ ಖಾತೆ ಸಚಿವ ಗುಲಾಬ್‌ ರಾವ್ ರಘುನಾಥ್ ಪಾಟೀಲ್ (Gulabrao Raghunath Patil) ಅವರು ತಮ್ಮ ಜಲಗಾಂವ್ (Jalgaon) ಗ್ರಾಮಾಂತರ ಕ್ಷೇತ್ರದ ರಸ್ತೆಗಳನ್ನು ನಟಿ, ರಾಜಕಾರಣಿ ಹೇಮಾ ಮಾಲಿನಿ (Hema Malini) ಅವರ ಕೆನ್ನೆಗೆ ಹೋಲಿಸಿ ವಿವಾದ ಹುಟ್ಟು ಹಾಕಿದ್ದಾರೆ. ಇವರ ಈ ಹೋಲಿಕೆಗೆ ರಾಜ್ಯ ಮಹಿಳಾ ಆಯೋಗವು ತೀವ್ರ ವಿರೋಧ ವ್ಯಕ್ತಪಡಿಸಿದ ನಂತರ ಅವರು ಕ್ಷಮೆಯಾಚಿಸಿದ್ದಾರೆ. ಉತ್ತರ ಮಹಾರಾಷ್ಟ್ರದಲ್ಲಿರುವ ತಮ್ಮ ಜಿಲ್ಲೆಯಲ್ಲಿ ನಡೆದ ಬೋದ್ವಾಡ್ ನಗರ ಪಂಚಾಯತ್‌ (Bodwad Nagar Panchayat) ಗೆ ಸಂಬಂಧಿಸಿದ ಚುನಾವಣಾ ಸಭೆಯಲ್ಲಿ ಮಾತನಾಡಿದ ಶಿವಸೇನೆಯ ಹಿರಿಯ ನಾಯಕರೂ ಆಗಿರುವ ಸಚಿವ ಗುಲಾಬ್‌ ರಾವ್ ರಘುನಾಥ್ ಪಾಟೀಲ್ ಈ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

Latest Videos
Follow Us:
Download App:
  • android
  • ios